ಕೋಟಿ ಕೋಟಿ ಹಣ ಪಡೆದು ತಮ್ಮ ಅಭ್ಯರ್ಥಿಯನ್ನೇ ಸೋಲಿಸಿದ್ರಾ ಮುಖಂಡರು? ಆಡಿಯೋ ವೈರಲ್

ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಬಿಜೆಪಿ ಸೋಲಿಸಲು ಸ್ವಪಕ್ಷೀಯರಿಂದಲೇ ಹುನ್ನಾರ? ಕೋಟಿ ಕೋಟಿ ಹಣ ಪಡೆದು ತಮ್ಮ ಅಭ್ಯರ್ಥಿಯನ್ನೇ ಸೋಲಿಸಿದ್ರಾ ಮುಖಂಡರು? ಕೋಟಿ ಕೋಟಿ ಡೀಲ್​ ಆಡಿಯೋ ವೈರಲ್ ವೈರಲ್ ಆಗಿದೆ.

ಕೋಟಿ ಕೋಟಿ ಹಣ ಪಡೆದು ತಮ್ಮ ಅಭ್ಯರ್ಥಿಯನ್ನೇ ಸೋಲಿಸಿದ್ರಾ ಮುಖಂಡರು? ಆಡಿಯೋ ವೈರಲ್
Follow us
|

Updated on:Jun 21, 2023 | 11:50 AM

ಬೆಂಗಳೂರು: ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ (Karnataka Assembly Elections 2023) ಬಿಜೆಪಿ ಹೀನಾಯವಾಗಿ ಸೋಲುಕಂಡಿದೆ. ಈ ಮಟ್ಟಿಗೆ ಬಿಜೆಪಿಗೆ(BJP) ಸೋಲಾಗುತ್ತೆ ಎಂದು ಯಾರು ಊಹಿಸಿರಲಿಲ್ಲ. ಈ ಸೋಲಿನಿಂದ ಬಿಜೆಪಿ ಇನ್ನೂ ಆಚೆ ಬಂದಿಲ್ಲ. ಎಡವಿದೆಲ್ಲಿ ಎನ್ನುವ ಮೂಲ ಹುಡುಕುತ್ತಿದ್ದಾರೆ. ಮತ್ತೊಂದೆಡೆ ಹೊಂದಾಣಿಕೆ ರಾಜಕಾರಣವೇ ಸೋಲಿಗೆ ಕಾರಣ ಎಂದು ಸ್ವಪಕ್ಷದ ನಾಯಕರೇ ಆರೋಪಿಸುತ್ತಿದ್ದಾರೆ. ಇದರ ಮಧ್ಯೆ ಆಡಿಯೋವೊಂದು ವೈರಲ್ ಆಗಿದ್ದು, ಕಾಂಗ್ರೆಸ್- ಬಿಜೆಪಿ ಸೋಲಿಸಲು ಸ್ವಪಕ್ಷೀಯರಿಂದಲೇ ಹುನ್ನಾರ ನಡೆದಿದ್ಯಾ? ಕೋಟಿ ಕೋಟಿ ಹಣ ಪಡೆದು ತಮ್ಮ ಅಭ್ಯರ್ಥಿಯನ್ನೇ ಸೋಲಿಸಿದ್ರಾ ಮುಖಂಡರು? ಬಿಜೆಪಿ ಅಭ್ಯರ್ಥಿ, ಮಾಜಿ ಸಚಿವ ಕೆಸಿ ನಾರಾಯಣಗೌಡ (KC Narayana Gowda), ಕಾಂಗ್ರೆಸ್ ಅಭ್ಯರ್ಥಿ ದೇವರಾಜು ಸೋಲಿಗೆ ಆಪ್ತರಿಂದಲೇ ಪ್ಲಾನ್ ಮಾಡಲಾಗಿತ್ತಾ? ಎನ್ನುವ ಚರ್ಚೆಗಳು ಶುರುವಾಗಿವೆ. ಇದಕ್ಕೆ ಪುಷ್ಠಿ ನಿಡುವಂತೆ ಆಡಿಯೋವೊಂದು ವೈರಲ್​ ಆಗಿದ್ದು, ಜಿಲ್ಲೆಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.

ಇದನ್ನೂ ಓದಿ: ಯಡಿಯೂರಪ್ಪ ಬಳಿಕ ಅಧಿಕಾರಕ್ಕೆ ಬಂದವರು ಮಾಡಿದ್ದೇನು? ಅವರಿಂದ ಅಧಿಕಾರ ಪಡೆದ ಅತಿರಥರು ಮಾಡಿದ್ದೇನು?: ಬೊಮ್ಮಾಯಿ ವಿರುದ್ಧ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ

ಹೌದು…ಚುನಾವಣೆ ಬಳಿಕ ಕೆಆರ್ ಪೇಟೆ ಕ್ಷೇತ್ರದಲ್ಲಿ ಆಡಿಯೋ ವೈರಲ್ ಆಗಿದೆ. ಚುನಾವಣೆ ವೇಳೆ ಕಾಂಗ್ರೆಸ್ ತೊರೆದು ಜೆಡಿಎಸ್‌ ಸೇರಿದ್ದ ಮನ್‌ಮುಲ್ ನಿರ್ದೇಶಕ ಡಾಲು ರವಿ ಸಂಭಾಷಣೆ ಎನ್ನಲಾದ ಆಡಿಯೋದಲ್ಲಿ ಸ್ನೇಹಿತನ ಜೊತೆ ಮುಖಂಡರಿಗೆ ಕೋಟಿ ಕೋಟಿ ರೂ. ಹಣ ನೀಡಿ ಬುಕ್ ಮಾಡಿದ್ದ ಬಗ್ಗೆ ಮಾತನಾಡಿದ್ದಾರೆ. ಇದೀಗ ಈ ಆಡಿಯೋ ವೈರಲ್ ಆಗುತ್ತಿದೆ.

ಕಾಂಗ್ರೆಸ್ ಆಕಾಂಕ್ಷಿಗಳಿಗೆ ಹಣ ನೀಡಿ ಬುಕ್ ಮಾಡಿದ್ದಾಗಿ ಆಡಿಯೋನಲ್ಲಿ ಮಾತನಾಡಿದ್ದಾರೆ. ವಿಜಯ್ ರಾಮೇಗೌಡಗೆ ಒಂದು ಕೋಟಿ ರೂ ಹಾಗೂ ಬಂಕ್ ಸುರೇಶ್‌ಗೆ ಒಂದು ಕೋಟಿ ಹಣ ನೀಡಿ ಬುಕ್ ಮಾಡಲಾಗಿದೆ. ಇನ್ನು ಪ್ರಕಾಶ್‌ಗೆ 70 ಲಕ್ಷ ರೂ, ನಾಗೇಂದ್ರಗೆ 40 ಲಕ್ಷ ರೂ. ಕೃಷ್ಣಮೂರ್ತಿಗೆ 30-35 ಲಕ್ಷ ರೂ. ನೀಡಿರುವ ಬಗ್ಗೆ ಆಡಿಯೋನಲ್ಲಿದೆ. ಅಷ್ಟೇ ಅಲ್ಲದೇ ಕೋಡಮಾರನಹಳ್ಳಿ ದೇವರಾಜುಗೆ 26 ಲಕ್ಷ ರೂ. ಹೀಗೆ ಸುಮಾರು ಜನ ಲೀಡರ್‌ಗೆ ದುಡ್ಡು ಹೋಗಿದೆ ಎಂದು ಮಾತನಾಡಿರುವ ರವಿ ಅವರ ಆಡಿಯೋ ವೈರಲ್ ಆಗಿದೆ. ಈ ವೇಳೆ ಕೆ.ಸಿ ನಾರಾಯಣಗೌಡರ ಆಪ್ತ ದಯಾಗೆ 3 ಕೋಟಿ ರೂ. ಕೊಟ್ಟಿದ್ದು ನಿಜ ನಾ ಎಂದು ಸ್ನೇಹಿತ ಪ್ರಶ್ನಿಸಿರುವುದು ಸಹ ಆಡಿಯೋನಲ್ಲಿದೆ.

ಮಾಜಿ ಸಚಿವ ಕೆಸಿ ನಾರಾಯಣಗೌಡ ಆಪ್ತ ಸಹಾಯಕ ದಯಾನಂದಗೂ ಹಣ ಕೊಟ್ಟಿರುವ ಬಗ್ಗೆ ಇಬ್ಬರ ಮಾತನಾಡಿದ್ದಾರೆ. ಆದರೆ ಅರ್ಧಕ್ಕೆ ಎಡಿಟ್ ಮಾಡಿದ ಆಡಿಯೋ ಮಾತ್ರ ಬಿಡುಗಡೆ ಮಾಡಲಾಗಿದ್ದು, ಇದೀಗ ಈ ಆಡಿಯೋ ಕ್ಷೇತ್ರದಾದ್ಯಂತ ಚರ್ಚೆಗೆ ಗ್ರಾಸವಾಗಿದೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 11:49 am, Wed, 21 June 23

ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ