Karnataka Cabinet expansion: ಪಕ್ಷೇತರವಾಗಿ ರಾಜಕೀಯಕ್ಕೆ ಎಂಟ್ರಿ; ಮೂರನೇ ಬಾರಿಗೆ ಶಿವರಾಜ ತಂಗಡಗಿಗೆ ಮಂತ್ರಿ ಭಾಗ್ಯ

|

Updated on: May 27, 2023 | 1:19 PM

ಶಿವರಾಜ ತಂಗಡಗಿ(Shivaraj Tangadagi)ಗೆ ಇದೀಗ ಮತ್ತೆ ಮಂತ್ರಿ ಪದವಿ ಒಲಿದಿದ್ದು, ಇಂದು (ಮೇ.27) ಪ್ರಮಾಣ ವಚನ ಸ್ವೀಕರಿಸಿದರು. ಗೆದ್ದಾಗೊಮ್ಮೆ ಮಂತ್ರಿಯಾಗುವ ಅದೃಷ್ಟ ಹೊಂದಿರುವ ಶಿವರಾಜ ತಂಗಡಗಿಯವರ ಹುಟ್ಟು, ಶಿಕ್ಷಣ, ರಾಜಕೀಯ ಜೀವನ ಕುರಿತು ಮಾಹಿತಿ ಇಲ್ಲಿದೆ.

Karnataka Cabinet expansion: ಪಕ್ಷೇತರವಾಗಿ ರಾಜಕೀಯಕ್ಕೆ ಎಂಟ್ರಿ; ಮೂರನೇ ಬಾರಿಗೆ ಶಿವರಾಜ ತಂಗಡಗಿಗೆ ಮಂತ್ರಿ ಭಾಗ್ಯ
ಶಿವರಾಜ್​ ತಂಗಡಗಿ
Follow us on

ಕೊಪ್ಪಳ: ಶಿವರಾಜ ತಂಗಡಗಿ(Shivaraj Tangadagi)ಗೆ ಇದೀಗ ಮತ್ತೆ ಮಂತ್ರಿ ಪದವಿ ಒಲಿದಿದ್ದು, ಇಂದು (ಮೇ.27) ಪ್ರಮಾಣ ವಚನ ಸ್ವೀಕರಿಸಿದರು. ಗೆದ್ದಾಗೊಮ್ಮೆ ಮಂತ್ರಿಯಾಗುವ ಅದೃಷ್ಟ ಹೊಂದಿರುವ ಶಿವರಾಜ ತಂಗಡಗಿ. 1971 ರಲ್ಲಿ ಬಾಗಲಕೋಟೆ ಜಿಲ್ಲೆಯ ಇಳಕಲ್‌ನಲ್ಲಿ ಸಂಗಪ್ಪ ತಂಗಡಗಿ ಹಾಗೂ ಹುಲಿಗೆಮ್ಮ ದಂಪತಿಗಳ ಮಗನಾಗಿ ಜನಿಸಿದರು. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಳಕಲ್‌ನಲ್ಲಿ ವ್ಯಾಸಂಗ ಮಾಡಿದ ಇವರು, ಪಿಯುಸಿ ಬಾಗಲಕೋಟೆಯ ಬಸವೇಶ್ವರ ವಿಜ್ಞಾನ ಕಾಲೇಜಿನಲ್ಲಿ ಹಾಗೂ ಪದವಿ ಶಿಕ್ಷಣ ಇಳಕಲ್‌ನ ಎಸ್‌ವಿಎಂ ಕಾಲೇಜಿನಲ್ಲಿ ಮುಗಿಸಿದರು. ಬಳಿಕ ಪತ್ನಿ ವಿದ್ಯಾ ತಂಗಡಗಿ ಅವರನ್ನ ಮದುವೆಯಾದರು. ಇವರಿಗೆ ಶಶಾಂಕ್, ಕಿರಣ್‌ಕುಮಾರ್ ಎಂಬಿಬ್ಬರು ಗಂಡು ಮಕ್ಕಳಿದ್ದು, ಮತ್ತು ತನುಷಾ ಎಂಬ ಮಗಳಿದ್ದಾಳೆ.

ರಾಜಕೀಯ ಜೀವನ ಪ್ರಾರಂಭ

ಪ್ರಪ್ರಥಮ ಬಾರಿಗೆ ಇಳಕಲ್ ಪುರಸಭೆಗೆ 30 ನೇ ವಾರ್ಡ್ ಸದಸ್ಯರಾಗಿ ಕಾಂಗ್ರೆಸ್‌ನಿಂದ ಮೊದಲ ಬಾರಿಗೆ 2001 ರಲ್ಲಿ ಆಯ್ಕೆಯಾದರು. ನಂತರ ಬಿಜೆಪಿ ಸೇರ್ಪಡೆಯಾಗಿ ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹಾಗೂ ಉಪಾಧ್ಯಕ್ಷರಾಗಿ ಪಕ್ಷ ಸಂಘಟನೆ ಮಾಡಿದರು. ಇದಾದ ಬಳಿಕ 2008 ರಲ್ಲಿ ಕೊಪ್ಪಳದ ಕನಕಗಿರಿ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಿ ಶಾಸಕನಾದರು. ಮೊದಲ ಬಾರಿಗೆ ಶಾಸಕನಾಗಿ ಆಯ್ಕೆಯಾದರು.

ಇದನ್ನೂ ಓದಿ:RV Deshpande: 16 ನೇ ಕರ್ನಾಟಕ ವಿಧಾನ ಸಭೆಯ ಹಂಗಾಮಿ ಸ್ಪೀಕರ್ ಆಗಿ ಆರ್ ವಿ ದೇಶಪಾಂಡೆ ಪ್ರಮಾಣ ವಚನ ಸ್ವೀಕಾರ

ಮೊದಲ ಚುನಾವಣೆಯಲ್ಲಿ ಗೆದ್ದ ಬಾರಿಯೇ ಸಚಿವ ಸ್ಥಾನ

ಇನ್ನು ಶಿವರಾಜ ತಂಗಡಗಿಯವರು ಪಕ್ಷೇತರರಾಗಿ ಗೆದ್ದ ಬಳಿಕ ಬಿಜೆಪಿ ಸರಕಾರಕ್ಕೆ ಬೆಂಬಲ‌ ನೀಡಿ ಮಂತ್ರಿ ಕೂಡ ಆದರು. ಹೌದು ಗೆದ್ದ ಮೊದಲ ಬಾರಿಗೆ ಎಪಿಎಂಸಿ, ಸಕ್ಕರೆ, ಸಣ್ಣ ಕೈಗಾರಿಕೆ ಸಚಿವನಾಗಿ ಕಾರ್ಯನಿರ್ವಹಿಸಿದರು. ಮತ್ತೆ 2013 ರಲ್ಲಿ ಎರಡನೇ ಬಾರಿಗೆ ಕಾಂಗ್ರೆಸ್​ನಿಂದ ಶಾಸಕನಾಗಿ ಆಯ್ಕೆಯಾಗಿದ್ದ ಶಿವರಾಜ ತಂಗಡಗಿ, ಈ ವೇಳೆ ಸಿದ್ದರಾಮಯ್ಯ ಸಂಪುಟದಲ್ಲಿ ಸಣ್ಣ ನೀರಾವರಿ ಇಲಾಖೆ ಸಚಿವನಾಗಿ ಕೆಲಸ ಮಾಡಿದರು. ಇದಾದ ಬಳಿಕ ಇದೀಗ ಮೂರನೇ ಬಾರಿಗೆ ಶಾಸಕನಾಗಿ ಆಯ್ಕೆಯಾಗಿರುವ ಇವರು, ಗೆದ್ದ ಮೂರನೇ ಬಾರಿಯೂ ಸಚಿವನಾಗುತ್ತಿರುವ ಏಕೈಕ ಶಾಸಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗೆದ್ದಾಗೊಮ್ಮೆ ತಂಗಡಗಿ ಮಂತ್ರಿ ಆಗ್ತಾರೆ ಎನ್ನುವ ಮಾತಿಗೆ ಮತ್ತೇ ಪುಷ್ಟಿ ಸಿಕ್ಕಂತಾಗಿದೆ. ಇಂದು ಸಚಿವನಾಗಿ ಪ್ರಮಾಣವಚನ ಸ್ವೀಕರಿಸಿದರು.

ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:26 pm, Sat, 27 May 23