ಸಿದ್ದರಾಮಯ್ಯ, ಕುಮಾರಸ್ವಾಮಿ ಆಪ್ತ ಸಹಾಯಕರು ಮತ್ತು ದೇವೇಗೌಡರ ಗನ್ ಮ್ಯಾನ್ ಫೋನ್ ಕದ್ದಾಲಿಕೆ ಮಾಡಲಾಗಿದೆ: ಕಾಂಗ್ರೆಸ್ ಗಂಭೀರ ಆರೋಪ

| Updated By: guruganesh bhat

Updated on: Jul 20, 2021 | 8:01 PM

Pegasus Spyware: ಇದೇ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಈ ಪ್ರಕರಣದ ಕುರಿತು ಸುಪ್ರೀಂಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆಯಾಗಬೇಕು. ಟೆಲಿಫೋನ್ ಟ್ಯಾಪಿಂಗ್​ನಿಂದ ರಾಮಕೃಷ್ಣ ಹೆಗ್ಡೆ ಸರಕಾರ ಬಿದ್ದಿತ್ತು. ಅಂದಿನ ಕುಮಾರಸ್ವಾಮಿ ಸರ್ಕಾರದಲ್ಲಿ ನಡೆದಿದೆ ಎನ್ನಲಾದ ಟ್ಯಾಪಿಂಗ್ ಬಗ್ಗೆ ತನಿಖೆ ನಡೆಯಬೇಕಿದೆ ಎಂದು ಆಗ್ರಹಿಸಿದರು.

ಸಿದ್ದರಾಮಯ್ಯ, ಕುಮಾರಸ್ವಾಮಿ ಆಪ್ತ ಸಹಾಯಕರು ಮತ್ತು ದೇವೇಗೌಡರ ಗನ್ ಮ್ಯಾನ್ ಫೋನ್ ಕದ್ದಾಲಿಕೆ ಮಾಡಲಾಗಿದೆ: ಕಾಂಗ್ರೆಸ್ ಗಂಭೀರ ಆರೋಪ
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ಇಸ್ರೇಲ್​ನ ಪೆಗಾಸಸ್ ತಂತ್ರಾಂಶದ ಮೂಲಕ ಗೂಡಚರ್ಯೆ (Pegasus Spyware)  ನಡೆಸಿದ ಆರೋಪ ಇದೀಗ ಕರ್ನಾಟಕ ರಾಜಕಾರಣದ ಅಂಗಳಕ್ಕೂ ಬಂದುನಿಂತಿದೆ. ದೆಹಲಿಯ ಎಐಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ, ನನ್ನ ಬಳಿ ಯಾವುದೇ ಮೊಬೈಲ್ ಇಲ್ಲ. ನನ್ನ ಆಪ್ತ ಸಹಾಯಕ ವೆಂಕಟೇಶ್ ಮೊಬೈಲ್ ಬಳಸುತ್ತೇನೆ. ಆತನ ಮೊಬೈಲ್ ಹ್ಯಾಕ್ ಮಾಡುತ್ತಿದ್ದಾರೆ. ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಆಪ್ತ ಸಹಾಯಕನ ಮತ್ತು ದೇವೇಗೌಡರ ಗನ್ ಮ್ಯಾನ್ ಮೊಬೈಲ್ ಹ್ಯಾಕ್ ಮಾಡಲಾಗುತ್ತಿದೆ. ಗೂಡಚರ್ಯೆ ಮೂಲಕ ಸರಕಾರ ಬೀಳಿಸುವ ತಂತ್ರ ಮಾಡಲಾಗಿದೆ. ಈ ಬಗ್ಗೆ ಉನ್ನತಮಟ್ಟದ ತನಿಖೆ ನಡೆಯಬೇಕು. ಈ ರೀತಿಯ ಕೊಳಕು ರಾಜಕೀಯ ಮಾಡಬಾರದು ಎಂದು ಆರೋಪಿಸಿದರು.

2018ರ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದಿತ್ತು. ಬಿಜೆಪಿ 104, ಕಾಂಗ್ರೆಸ್​ 86, ಜೆಡಿಎಸ್​ಗೆ 36 ಸ್ಥಾನ ಬಂದಿತ್ತು. ರಾಜ್ಯಪಾಲರು ಸರ್ಕಾರ ರಚಿಸಲು ಯಡಿಯೂರಪ್ಪಗೆ ಆಹ್ವಾನ ನೀಡಲಾಗಿತ್ತು. ಆದರೆ ಯಡಿಯೂರಪ್ಪ ಬಹುಮತ ಸಾಬೀತುಪಡಿಸಲಾಗಲಿಲ್ಲ. ಬಳಿಕ ಕಾಂಗ್ರೆಸ್​, ಜೆಡಿಎಸ್​ ಸಮ್ಮಿಶ್ರ ಸರ್ಕಾರ ರಚನೆಯಾಯಿತು. ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿ ಸಿಎಂ ಆಗಿದ್ದರು. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಜೆಡಿಎಸ್​ಗೆ ಬೆಂಬಲ ನೀಡಿದ್ದೆವು. ಇದಕ್ಕೆ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಕೈಜೋಡಿಸಿತು. 2019ರ ಜುಲೈನಲ್ಲಿ 17 ಶಾಸಕರು ರಾಜೀನಾಮೆ ನೀಡಿದರು. ಯಾರೂ ಸ್ವಯಂಪ್ರೇರಿತರಾಗಿ ರಾಜೀನಾಮೆ ನೀಡಿರಲಿಲ್ಲ. ಆ ಶಾಸಕರು ಕುಮಾರಸ್ವಾಮಿ ಸರ್ಕಾರ ಪತನಗೊಳಿಸಿ ಬಿಜೆಪಿ ಸೇರಿದರು. ಇದಕ್ಕೆ ಬಿಜೆಪಿಯೇ ಕಾರಣ ಎಂದು ಆರೋಪಿಸಿದರು.

ಇದೇ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಈ ಪ್ರಕರಣದ ಕುರಿತು ಸುಪ್ರೀಂಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆಯಾಗಬೇಕು. ಟೆಲಿಫೋನ್ ಟ್ಯಾಪಿಂಗ್​ನಿಂದ ರಾಮಕೃಷ್ಣ ಹೆಗ್ಡೆ ಸರಕಾರ ಬಿದ್ದಿತ್ತು. ಅಂದಿನ ಕುಮಾರಸ್ವಾಮಿ ಸರ್ಕಾರದಲ್ಲಿ ನಡೆದಿದೆ ಎನ್ನಲಾದ ಟ್ಯಾಪಿಂಗ್ ಬಗ್ಗೆ ತನಿಖೆ ನಡೆಯಬೇಕಿದೆ ಎಂದು ಆಗ್ರಹಿಸಿದರು.

ಸರ್ಕಾರ ಪತನಗೊಳಿಸಲೆಂದೇ ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತರ ಫೋನ್ ಕದ್ದಾಲಿಕೆ ಮಾಡಲಾಗಿದೆ. ಜತೆಗೆ ಮಾಜಿ ಪ್ರಧಾನಿ ದೇವೇಗೌಡರ ಫೋನ್ ಕದ್ದಾಲಿಸಿದ್ದಾರೆ. ದೇಶದಲ್ಲಿ ಈಗ ಯಾರೂ ಸುರಕ್ಷಿತವಾಗಿಲ್ಲ. ದೇಶದಲ್ಲಿ ಈಗ ಯಾರಿಗೂ ವೈಯಕ್ತಿಕ ಬದುಕೇ ಇಲ್ಲ. ಅಡುಗೆ ಮನೆಗೂ ಬರ್ತಾರೆ, ಬೆಡ್​ ರೂಮ್​ಗೂ ಬರುತ್ತಾರೆ. ಕದ್ದಾಲಿಕೆ ಕುರಿತು ಗುರುವಾರ ದೇಶಾದ್ಯಂತ ಕಾಂಗ್ರೆಸ್​ ಪ್ರತಿಭಟನೆ ನಡೆಸಲಿದೆ ಕಾಂಗ್ರೆಸ್ ನಾಯಕ ವೇಣುಗೋಪಾಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇದನ್ನೂ ಓದಿ:Explainer: ಏನಿದು ಪೆಗಾಸಸ್ ಗೂಢಚರ್ಯೆ ತಂತ್ರಾಂಶ? ಇದು ಹೇಗೆ ಕಾರ್ಯನಿರ್ವಹಿಸುತ್ತದೆ? 

ಕರ್ನಾಟಕ ರಾಜಕಾರಣದಲ್ಲೂ ಪೆಗಾಸಸ್ ನೆರಳು; ಕಾಂಗ್ರೆಸ್ ; ಜೆಡಿಎಸ್ ಮೈತ್ರಿ ಸರ್ಕಾರ ಕೆಡವಲು ಸಿದ್ದರಾಮಯ್ಯ, ಡಾ ಪರಮೇಶ್ವರ್ ಫೋನ್ ಕದ್ದಾಲಿಕೆ ಆರೋಪ

(Siddaramaiah and Kumaraswamy secretaries were Pegasus target Accused Congress)

Published On - 7:58 pm, Tue, 20 July 21