ಶಾಸಕ, ಪರಿಷತ್ ಸದಸ್ಯರಾಗದಿದ್ದರೂ ಸಚಿವರಾದ ಎನ್ಎಸ್ ಬೋಸರಾಜು ಯಾರು? ಇವರ ಬಗ್ಗೆ ಒಂದಿಷ್ಟು ತಿಳಿದುಕೊಳ್ಳಿ

|

Updated on: May 27, 2023 | 1:28 PM

ವಿಧಾನಸಭೆ ಹಾಗೂ ಪರಿಷತ್‌ ಸದಸ್ಯರಲ್ಲದ ಎನ್‌.ಎಸ್‌. ಬೋಸರಾಜು ಅವರು ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಹಾಗಾದ್ರೆ, ಯಾರು ಈ ಬೋಸರಾಜು? ಅವರ ರಾಜಕೀಯ ಹಾದಿ ಬಗ್ಗೆ ಇಂದಿಷ್ಟು ಮಾಹಿತಿ ತಿಳಿದುಕೊಳ್ಳಿ.

ಶಾಸಕ, ಪರಿಷತ್ ಸದಸ್ಯರಾಗದಿದ್ದರೂ ಸಚಿವರಾದ ಎನ್ಎಸ್ ಬೋಸರಾಜು ಯಾರು? ಇವರ ಬಗ್ಗೆ ಒಂದಿಷ್ಟು ತಿಳಿದುಕೊಳ್ಳಿ
ಎನ್ಎಸ್ ಬೋಸರಾಜು
Follow us on

ಬೆಂಗಳೂರು: ಅಚ್ಚರಿ ಎಂಬಂತೆ ಸಿದ್ಧರಾಮಯ್ಯ ಸಂಪುಟದಲ್ಲಿ ಮಾಜಿ ಶಾಸಕ ಎನ್.ಎಸ್.ಬೋಸರಾಜು(ns boseraju) ಸಚಿವರಾಗಿರುವುದು ಅಚ್ಚರಿಗೆ ಕಾರಣವಾಗಿದೆ. ಇಂದು (ಮೇ 27) ರಾಜ್ಯಭವನದ ಗಾಜಿನ ಮನೆಯಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಶಾಸಕರು ಅಲ್ಲ, ವಿಧಾನಪರಿಷತ್ ಸದಸ್ಯರೂ ಅಲ್ಲದ ಬೋಸರಾಜು ಅವರು ಅವರು ಸಚಿವರಾಗಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ. ರಾಯಚೂರು ನಗರ ಕ್ಷೇತ್ರದ ಟಿಕೆಟ್​ ಬಿಟ್ಟುಕೊಟ್ಟಿದ್ದರಿಂದ ಅವರಿಗೆ ಹೈಕಮಾಂಡ್​ ಕೊಟ್ಟ ಮಾತಿನಂತೆ ಸಚಿವ ಸ್ಥಾನ ನೀಡಿದೆ. ಇನ್ನು ಅಚ್ಚರಿ ಎಂಬಮಂತೆ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿರುವ ಬೋಸರಾಜು ಯಾರು? ಅವರು ನಡೆದು ಬಂದ ರಾಜಕೀಯ ಹಾದಿ ಇಲ್ಲಿದೆ ನೋಡಿ.

ಇದನ್ನೂ ಓದಿ: ಶಾಸಕರು ಅಲ್ಲ, ಎಂಎಲ್​ಸಿಯೂ ಅಲ್ಲ ಆದರೂ ಬೋಸರಾಜ್​ಗೆ ಸಚಿವ ಸ್ಥಾನ ಸಿಕ್ಕಿದ್ದೇಗೆ? ಇಲ್ಲಿದೆ ಅಸಲಿ ಕಾರಣ

ಮೂಲತಃ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಮೊಗಲೂರು ಗ್ರಾಮದವರಾದ ಎನ್.ಎಸ್. ಬೋಸರಾಜ್, ಕೃಷಿಕ ಕುಟುಂಬದಲ್ಲಿ ಜನಿಸಿದರು. ಮದ್ರಾಸ್‌ನಲ್ಲಿ ಡಿಪ್ಲೊಮಾ ಇನ್ ಆಟೋಮೊಬೈಲ್ ಎಂಜಿನಿಯರಿಂಗ್‌ ಮುಗಿಸಿದ್ದು, ಓದುತ್ತಿರುವಾಗಲೇ ನಾಯಕತ್ವ ಗುಣ ಹೊಂದಿ ಚುನಾವಣೆಗೆ ಸ್ಪರ್ಧಿಸಬೇಕು ಎಂಬ ಆಸಕ್ತಿ ಹೊಂದಿದ್ದರು.

1969ರಲ್ಲಿ ಡಿಪ್ಲೊಮಾ ಪದವಿ ಪೂರ್ಣಗೊಳಿಸಿದ ಬೋಸರಾಜ್ ಅವರು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿ ಜೀನೂರು ಕ್ಯಾಂಪ್‌ನಲ್ಲಿ ತಮ್ಮ ಕೃಷಿ ಚಟುವಟಿಕೆಗಳನ್ನು ಆರಂಭಿಸಿದರು. ಕೃಷಿಯಲ್ಲಿ ಹೈನುಗಾರಿಕೆ, ಕೋಳಿ ಸಾಕಾಣಿಕೆಯನ್ನು ಬೃಹತ್ ಪ್ರಮಾಣದ ಉದ್ಯಮವಾಗಿಸುವ ಜೊತೆಗೆ ಎನ್.ಎಸ್.ಬೋಸರಾಜ್ ಅವರು ರಾಜಕೀಯ ಪ್ರವೇಶ ಮಾಡಿದರು.

ಕಲ್ಯಾಣ ಕರ್ನಾಟಕದ ರಾಯಚೂರಿನ ಬೋಸರಾಜು ಆ ಭಾಗದಲ್ಲಿ ತಮ್ಮದೇ ಆದ ಹಿಡಿತ ಹೊಂದಿದ್ದಾರೆ. ಎನ್ ಎಸ್ ಬೋಸರಾಜು ಎಐಸಿಸಿ ಕಾರ್ಯದರ್ಶಿ, ತೆಲಂಗಾಣ ಕಾಂಗ್ರೆಸ್ ಉಸ್ತುವಾರಿ. ಮಾಜಿ ಎಂಎಲ್ಸಿಯಾಗಿದ್ದರು. ಜಾತಿವಾರು ರಾಜು ಕ್ಷತ್ರಿಯಾರಾಗಿದ್ದಾರೆ. ಡಿಪ್ಲೊಮೊ ಇನ್ ಆಟೋಮೊಬೈಲ್ ಎಂಜಿನಿಯರಿಂಗ್ ಶಿಕ್ಷಣ ಪಡೆದಿದ್ದಾರೆ. ರಾಜಚೂರಿನ ಮಾನ್ವಿ ಕ್ಷೇತ್ರದಿಂದ 1999, 2004 ರಲ್ಲಿ ಶಾಸಕರಾಗಿ ಈ ಹಿಂದೆ ಆಯ್ಕೆಯಾಗಿದ್ದರು. ಹಿಂದೆ ಎಸ್‌.ಎಂ. ಕೃಷ್ಣ ಕಾಲದಿಂದಲೂ ಪಕ್ಷದಲ್ಲಿ ನಾನಾ ಜವಾಬ್ದಾರಿ ನಿಭಾಯಿಸುತ್ತಾ ಬಂದಿದ್ದಾರೆ. ಒಂದು ಅವಧಿಗೆ ಎಂಎಲ್ಸಿ ಆಗಿದ್ದ ಅವರು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಹೈದರಾಬಾದ್‌ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸ್ಥಾನ ಸೇರಿದಂತೆ ಇತರೆ ಜವಾಬ್ದಾರಿ ನಿರ್ವಹಿಸಿದ್ದಾರೆ. ಎಐಸಿಸಿ ಕಾರ್ಯದರ್ಶಿಯೂ ಆಗಿರುವ ಅವರು ತೆಲಂಗಾಣ ರಾಜ್ಯ ಉಸ್ತುವಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಬೋಸರಾಜು ನಡೆದು ಬಂದ ರಾಜಕೀಯ ಹಾದಿ

  • 1972 -76- ಯುವ ಕಾಂಗ್ರೆಸ್ ನಿಂದ ರಾಜಕೀಯ ಆರಂಭ.
  • 1976-80 ತಾಲೂಕ ಕಾಂಗ್ರೆಸ್ ಅಧ್ಯಕ್ಷ.
  • 1980-1991 ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ.
  • 1991- 2002 ರವರೆಗೆ ಅವಿಭಜಿತ ಕೊಪ್ಪಳ ರಾಯಚೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ.
  • 2009-2017 ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ (ಆಡಳಿತ).
  • 2017-18 ಕೆಪಿಸಿಸಿ ಉಪಾಧಗಯಕ್ಷ.
  • 2018 ರಿಂದ ಎಐಸಿಸಿ ಕಾರ್ಯದರ್ಶಿ.
  •  1999, 2004 ರಲ್ಲಿ ರಾಯಚೂರು ಜಿಲ್ಲೆಯ ಮಾನ್ವಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ.
  • ಎಂಎಲ್ಸಿಯಾಗಿ 2014 ರಲ್ಲಿ ಆಯ್ಕೆ.
  • ತುಂಗಭದ್ರಾ ಕಾಡಾ ಅಧ್ಯಕ್ಷ, ಹೈ.ಕ.ಅಭಿವೃದ್ಧಿ ಮಂಡಳಿ ಅಧ್ಯಕ್ಷ, ಸಿಎಂ ರಾಜಕೀಯ ಕಾರ್ಯದರ್ಶಿ ಆಗಿ ಸೇವೆಯ ಅನುಭವ ಹೊಂದಿದ್ದಾರೆ.

Published On - 1:23 pm, Sat, 27 May 23