ದೆಹಲಿ: ರಾಜ್ಯ ಸರ್ಕಾರ ಕೊಟ್ಟಿರುವ ವಾಗ್ದಾನದಂತೆ ಜುಲೈ 1ರಿಂದ ಅನ್ನಭಾಗ್ಯ ಯೋಜನೆಯಡಿ 10 ಕೆ.ಜಿ. ಅಕ್ಕಿ ಕೊಡಬೇಕು. ಗಡುವು ಹತ್ತಿರವಾಗುತ್ತಿದ್ದರೂ ಹೇಳಿದ ಸಮಯಕ್ಕೆ ಕೊಡುತ್ತಾರೆ ಎನ್ನುವ ಯಾವುದೇ ಗ್ಯಾರಂಟಿ ಕಾಣುತ್ತಿಲ್ಲ. ಆದರೆ ಇದೇ ಅಕ್ಕಿ ವಿಚಾರಕ್ಕೆ ರಾಜ್ಯ ಮತ್ತು ಕೇಂದ್ರ ನಡುವೆ ವಾಗ್ಯುದ್ಧಕ್ಕೂ ಕಾರಣವಾಗಿದೆ. ಇಂದು ದೆಹಲಿಗೆ ಹೋಗಿರುವ ಸಿಎಂ ಸಿದ್ಧರಾಮಯ್ಯ (Siddaramaiah) ಕೃಷ್ಣಮೆನನ್ ಮಾರ್ಗದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಸಿದ್ದರಾಮಯ್ಯ ಸಿಎಂ ಆದ ನಂತರ ಮೊದಲ ಬಾರಿಗೆ ಅಮಿತ್ ಶಾ ಅವರನ್ನು ಭೇಟಿ ಆಗಿದ್ದಾರೆ.
ಉಭಯ ನಾಯಕರು ಸಾಕಷ್ಟು ವಿಚಾರಗಳ ಕುರಿತು ಚರ್ಚೆ ಮಾಡಿದ್ದಾರೆ. ಜೊತೆಗೆ ಸಿದ್ದರಾಮಯ್ಯ ಕುರಿತು ಅಮಿತ್ ಶಾ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ಚುನಾವಣೆಯಲ್ಲಿ ನಿರೀಕ್ಷೆ ಮೀರಿ ಗೆಲುವು ಸಾಧಿಸಿದ್ದೀರಾ. ಗುಡ್ ಲಕ್ ಎಂದು ಮೆಚ್ಚಗೆ ಸೂಚಿಸಿದ್ದಾರೆ.
ಅಮಿತ್ ಶಾ ಅವರನ್ನು ಭೇಟಿಗೂ ಮುಂಚೆ ಮಾತನಾಡಿದ ಸಿಎಂ ಸಿದ್ಧರಾಮಯ್ಯ ಕರ್ನಾಟಕಕ್ಕೆ ಹೆಚ್ಚುವರಿ ಅಕ್ಕಿ ಪೂರೈಸಲು ಕೇಂದ್ರ ನಿರಾಕರಿಸುತ್ತಿದೆ. ಕೇಂದ್ರದ ಬಿಜೆಪಿ ಸರ್ಕಾರ ಡರ್ಟಿ ಪಾಲಿಟಿಕ್ಸ್ ಮಾಡುತ್ತಿದೆ. ರಾಜ್ಯಕ್ಕೆ ಅಕ್ಕಿ ನೀಡುವ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ. ಜುಲೈ 1ಕ್ಕೆ ಅಕ್ಕಿ ನೀಡುವ ಪ್ರಕ್ರಿಯೆ ಆರಂಭಿಸಲು ನಿರ್ಧರಿಸಿದ್ದೇವೆ. ಈಗಾಗಲೇ ತೆಲಂಗಾಣ, ಪಂಜಾಬ್ ಸೇರಿ ಎಲ್ಲಾ ಕಡೆ ಕೇಳಿದ್ದೇವೆ ಎಂದು ಹೇಳಿದ್ದಾರೆ.
Chief Minister Shri @siddaramaiah today cordially met with @HMOIndia Shri @AmitShah and held discussions in New Delhi today. pic.twitter.com/6V1b3A4Wdx
— CM of Karnataka (@CMofKarnataka) June 21, 2023
ಇದನ್ನೂ ಓದಿ: ಭೇಟಿಗೆ ಅವಕಾಶ ನೀಡುತ್ತಿಲ್ಲ; ಕೇಂದ್ರ ಸಚಿವ ಪಿಯೂಷ್ ಗೋಯಲ್ ವಿರುದ್ಧ ಮುನಿಯಪ್ಪ ಆರೋಪ
ಆಂಧ್ರಪದೇಶದಿಂದ ಅಕ್ಕಿ ಖರೀದಿಸಿದರೆ 1 ಕೆಜಿಗೆ 42 ರೂ. ಆಗುತ್ತೆ. 1 ಲಕ್ಷ ಮೆಟ್ರಿಕ್ ಟನ್ ಅಕ್ಕಿ 1 ತಿಂಗಳು ಕೊಡಲು ಮಾತ್ರ ಸಾಧ್ಯವಿದೆ. ಕೇವಲ 1 ತಿಂಗಳು ನೀಡುವುದಾಗಿ ಛತ್ತೀಸ್ಗಢ ಸರ್ಕಾರ ಹೇಳಿದೆ. ತೆಲಂಗಾಣ ಕೇವಲ ಗೋಧಿ ಕೊಡಲು ಮಾತ್ರ ಸಾಧ್ಯವೆಂದು ಹೇಳಿದೆ. ರಾಜ್ಯದಲ್ಲಿ ಬಹಳ ಅಕ್ಕಿ ಸಿಗಲ್ಲ, ಓಪನ್ ಮಾರ್ಕೆಟ್ಗೆ ಹೋಗಬೇಕು. ಟೆಂಡರ್ ಕರೆಯಬೇಕು, ಹೀಗೆಲ್ಲ ಆದರೆ ಇನ್ನೂ 2 ತಿಂಗಳು ಆಗುತ್ತೆ ಎಂದು ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:48 pm, Wed, 21 June 23