ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramiah) ಸಂಪುಟಕ್ಕೆ ಸೇರುವ 24 ಸಚಿವರ ಪಟ್ಟಿ ಅಂತಿಮಗೊಂಡಿದೆ. ನೂತನ ಸಚಿವರ ಪಟ್ಟಿ ಮುಖ್ಯಮಂತ್ರಿಗಳ ಕಚೇರಿಯಿಂದ ರಾಜಭವನಕ್ಕೆ ತಲುಪಿದೆ. ಪಟ್ಟಿಯಲ್ಲಿ ಹೆಸರಿದ್ದಂತಹ ಶಾಸಕರು ನಾಳೆ (ಮೇ.27) ರಂದು ರಾಜಭವನದ ಗಾಜಿನಮನೆಯಲ್ಲಿ ಬೆಳಿಗ್ಗೆ 11:30 ನಿಮಿಷಕ್ಕೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಹಲವು ಆಕಾಂಕ್ಷಿಗಳ ಒತ್ತಡ ಹಾಗೂ ಬೆಂಬಲಿಗರಿಗೆ ಅವಕಾಶ ಕೊಡಿಸುವ ನಾಯಕರ ಪ್ರಯತ್ನದಿಂದಾಗಿ ಕಳೆದ ಎರಡು ದಿನಗಳಿಂದ ಹೊಸ ಸಚಿವರ ಯಾದಿ ಅಂತಿಮಗೊಳಿಸುವ ಕಸರತ್ತು ನಡೆಯಿತು. ಜತೆಗೆ ಪೂರ್ಣ ಪ್ರಮಾಣದ ಸಂಪುಟ ಅಸ್ತಿತ್ವಕ್ಕೆ ಬಂದು ಸರಕಾರ ಆರಂಭದಲ್ಲೇ ಜಬರ್‌ದಸ್ತ್ ಟೇಕಾಫ್ ಆಗಿದೆ ಎಂದು ಸಂದೇಶ ನೀಡಲು ಎಲ್ಲ 24 ಸ್ಥಾನಗಳನ್ನೂ ಭರ್ತಿ ಮಾಡಲು ಹೈಕಮಾಂಡ್ ಸೂಚಿಸಿದೆ.
ಸಿದ್ದರಾಮಯ್ಯ ಸಂಪುಟದಲ್ಲಿ ಜಾತಿವಾರು ಬಲಾಬಲ ವಿವರ
ಒಕ್ಕಲಿಗ 4, ಲಿಂಗಾಯತ 6, ಬ್ರಾಹ್ಮಣ 1, ಪರಿಶಿಷ್ಟ ಪಂಗಡ 2, ಕುರುಬ 1, ಈಡಿಗ 1, ಜೈನ್ 1, ಮರಾಠ 1, ಮುಸ್ಲಿಂ 1
ಮೊಗೇರ 1, ಬೋವಿ 1, ಪರಿಶಿಷ್ಟ ಜಾತಿ (ಆದಿ ಕರ್ನಾಟಕ) 1, ರಾಜು ಸಮುದಾಯ 1, ನಾಮಧಾರಿ ರೆಡ್ಡಿ 1 ಸಮುದಾಯಕ್ಕೆ ಸಚಿವ ಸ್ಥಾನ ಒಲಿದಿದೆ.
ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:35 pm, Fri, 26 May 23