ಮಂಡ್ಯ: ಬೇರೆ ಬೇರೆ ರಾಜ್ಯದ ಚುನಾವಣೆಗಳಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತ್ತು. ಎಲ್ಲಾ ಕಡೆ ನೋಡೋಕೆ ಸಾಮನ್ಯವಾಗಿ ಸಿಕ್ಕಿದ್ದು ಅಭಿವೃದ್ಧಿ. ಬಿಜೆಪಿ ಇರುವ ಎಲ್ಲಾ ರಾಜ್ಯಗಳಲ್ಲಿ ಅಭಿವೃದ್ಧಿ ಆಗಿದೆ. ಅದೇ ಥರಾ ಕರ್ನಾಟಕದಲ್ಲೂ ಹಿಂದೆಂದೂ ಆಗದ ಅಭಿವೃದ್ಧಿ ಕೆಲಸ ಐದು ವರ್ಷದಲ್ಲಿ ಆಗಿದೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ (Tejasvi Surya) ಹೇಳಿದರು. ರೈಲು, ಹೈವೇ ಸೇರಿದಂತೆ ಅನೇಕ ಕೆಲಸಗಳು ಕಾಂಗ್ರೆಸ್ ಕಾಲದಲ್ಲಿ ಆಗದಿರುವ ಕಾರ್ಯಗಳು ನರೇಂದ್ರ ಮೋದಿ ಸರ್ಕಾರದಲ್ಲಿ ಆಗಿದೆ. ಮಂಡ್ಯದಿಂದಲೇ ವಂದೇ ಭಾರತ್ ಟ್ರೇನ್ ಹೋಗ್ತಾ ಇದೆ. ಇದನ್ನು ಮಾಡಿ ಕೊಟ್ಟಿದ್ದು ನರೇಂದ್ರ ಮೋದಿ. ದಶಪಥ ಹೈವೇ ಕೂಡ ನರೇಂದ್ರ ಮೋದಿ, ಸಿಎಂ ಬೊಮ್ಮಾಯಿ ಕೊಟ್ಟಿದ್ದು. ಒಂದು ಗಂಟೆಯ ಸಮಯ ಈಗ ಕೇವಲ ಅರ್ಧ ತಾಸಿನಲ್ಲೇ ಹೋಗಬಹುದು. ಮೈಸೂರು, ಮಂಡ್ಯ ಯುವಕರು ಬೆಂಗಳೂರಿಗೆ ಕೆಲಸ ಮಾಡೋಕೆ ಬರ್ತಾರೆ. ಯಾಕೆಂದ್ರೆ ಇಲ್ಲಿರುವವರು ಫ್ಯಾಕ್ಟರಿಗಳನ್ನು ತೆಗೆಸಿರಲಿಲ್ಲ,
ಅದೇ ಯಡಿಯೂರಪ್ಪನವರು ಹಾಗೂ ಬೊಮ್ಮಾಯಿಯವರು ಇಲ್ಲಿನ ಶುಗರ್ ಫ್ಯಾಕ್ಟರಿಗಳಿಗೆ ಹಣ ಕೊಟ್ಟು ಒಪನ್ ಮಾಡಿಸಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: Anant Nag: ಇಂದು ಸಂಜೆ ಬಿಜೆಪಿ ಸೇರಲಿದ್ದಾರೆ ಹಿರಿಯ ನಟ ಅನಂತ್ ನಾಗ್
ಇನ್ನು ನಾನು ಉತ್ತರ ಪ್ರದೇಶಕ್ಕೆ ಹೋದಾಗ ಒಂದು ಘಟನೆ ನಡೆಯಿತು. ಅಜ್ಜಿಯೊಬ್ಬರ ಮನೆಯಲ್ಲಿ ಬೆಕ್ಕು ಮರಿ ಹಾಕಿತ್ತು. ಆ ಬೆಕ್ಕಿನ ಮರಿಗಳು ಆಗ ಮಾತಾಡೋಕೆ ಶುರುಮಾಡಿದ್ದು, ಕಾಂಗ್ರೆಸ್ ಅಧಿಕಾರರಕ್ಕೆ ಬರುತ್ತೆ ಅಂತ ಹೇಳ್ತಾ ಇದ್ವಂತೆ. ಆ ಅಜ್ಜಿ ಕೂಡ ಎಲ್ಲರಿಗೂ ಹೇಳಿದ್ಳಂತೆ. ಈ ಸುದ್ದಿ ಡೆಲ್ಲಿಗೂ ಮುಟ್ಟಿತಂತೆ. ಏನಿದು ಇಡೀ ದೇಶದಲ್ಲಿ ನಾವು ಸೋಲ್ತಾ ಇದೀವಿ ಆದರೆ ಬೆಕ್ಕುಗಳು ಅದ್ಹೇಗೆ ಕಾಂಗ್ರೆಸ್ ಬರುತ್ತೆ ಅಂತ ನೋಡೋಕೆ ಹೋದ್ರಂತೆ. ಆಗ ರಾಹುಲ್ ಗಾಂಧಿಯವರು ಕೂಡ ಎಂಟು ಜನರ ಸ್ಪೆಷಲ್ ಪ್ಲೇನ್ ಮಾಡಿ ಕಳ್ಸಿದ್ರಂತೆ. ಆಗ ಹೋಗಿ ನೋಡಿದ್ರೆ ಬೆಕ್ಕುಗಳು ಬಿಜೆಪಿ ಅಧಿಕಾರಕ್ಕೆ ಬರುತ್ತೆ ಅಂದ್ವಂತೆ.
ಇದನ್ನೂ ಓದಿ: Karnataka News Live Updates: ಯಡಿಯೂರಪ್ಪ ವ್ಯಕ್ತಿತ್ವ ದೊಡ್ಡದು; ಯುಟಿ ಖಾದರ್
ಏನಜ್ಜಿ ಏನಾಯ್ತು ಬೆಕ್ಕಿನ ಮರಿಗೆ ಎಂದು ಕಾಂಗ್ರೆಸ್ನವರು ಅಜ್ಜಿಗೆ ರೇಗಿಸಿದ್ರಂತೆ. ಆಗ ಅಜ್ಜೆ ಹೇಳಿದಳಂತೆ, ಆಗ ಅವು ಕಣ್ಣು ತೆಗೆದಿರಲಿಲ್ಲ. ಈಗ ಕಣ್ಣು ತೆಗೆದಿದಾವೆ ಅದಕ್ಕೆ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಅಂತ ಹೇಳ್ತಾ ಇದಾವೆ ಅಂದ್ಳಂತೆ. ಅದೇ ಥರಾ ಮಂಡ್ಯದಲ್ಲಿ ಜನ ಕಣ್ಣು ತೆರೆದಿದ್ದಾರೆ. ಈಗ ಏನೇ ಇದ್ರೂ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಎಂದು ಬೆಕ್ಕಿನ ಕಥೆಯೊಂದು ಹೇಳುವ ಮೂಲಕ ಕಾಂಗ್ರೆಸ್ಗೆ ಟಾಂಗ್ ನೀಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:05 pm, Wed, 22 February 23