ಬೆಂಗಳೂರು, ಸೆ.28: ಬಿಜೆಪಿ ಸಂಸದ ಎಸ್.ಮುನಿಸ್ವಾಮಿ (S.Muniswamy) ಮತ್ತು ಬಂಗಾರಪೇಟೆ ಕಾಂಗ್ರೆಸ್ ಶಾಸಕ ಎಸ್.ಎನ್.ನಾರಾಯಣಸ್ವಾಮಿ (S.N.Narayanaswamy) ನಡುವೆ ಜಟಾಪಟಿಗೆ ಸಂಬಂಧಿಸಿದಂತೆ ‘ ಕೋಲಾರ(Kolar) ಕಾನೂನು ಸುವ್ಯವಸ್ಥೆ ಬಗ್ಗೆ ನಾನು ಜಿಲ್ಲಾ ಉಸ್ತುವಾರಿ ಸಚಿವರಿಗೆ ಪ್ರಶ್ನಿಸಿದ್ದು, ರೈತರ ಅಹವಾಲು ಕೇಳಿ ಎಂದು ಸಚಿವರಿಗೆ ಮನವಿ ಮಾಡಿದೆ. ನಿಮ್ಮ ಪಕ್ಷದಲ್ಲೂ ಭೂಗಳ್ಳರು ಇದ್ದು, ಸರ್ಕಾರಿ ಜಮೀನನ್ನು ತೆರವುಗೊಳಿಸಿ ಜನರಿಗೆ ನ್ಯಾಯ ಕೊಡಬೇಕು ಅಂದರೆ, ನಿಮ್ಮ ಪಕ್ಕದಲ್ಲಿರುವ ಭೂಗಳ್ಳರ ವಿರುದ್ಧ ಕ್ರಮ ಕೈಗೊಳ್ಳಿ, ನಾರಾಯಣಸ್ವಾಮಿ ನನ್ನ ಲೋಫರ್ ಎಂದು ಪದ ಬಳಕೆ ಮಾಡಿದರು. ನಾನು ಅದಕ್ಕೆ ವಾಪಸ್ಸು ತಿರುಗಿದೆನೇ ಹೊರತು, ಅವರಿಗೆ ಕೆಟ್ಟ ಪದ ಬಳಕೆ ಮಾಡಿಲ್ಲ ಎಂದು ಕೋಲಾರ ಸಂಸದ ಎಸ್. ಮುನಿಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.
‘ಈ ವೇಳೆ ಎಸ್ಪಿ ಸೇರಿ ಪೊಲೀಸರು ನನ್ನನ್ನು ಬಲವಂತವಾಗಿ ಹೊರಗೆ ಕಳುಹಿಸಿದ್ರು, ಎಸ್ಪಿ ಅವರು ನಾರಾಯಣಸ್ವಾಮಿ ಕಾಂಗ್ರೆಸ್ ಏಜೆಂಟ್ ಅಂತೆ. ನನ್ನನ್ನು ತಬ್ಬಿದ್ದು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದಂತೆ. ನಾನು ಅವಾಚ್ಯ ಶಬ್ದಗಳು ಬಳಸಿದ್ರೆ, ನನ್ನ ವಿರುದ್ದವೂ ಕ್ರಮ ತಗೊಳ್ಳಲಿ. ನಾನು ಯಾರಿಗೂ ಯಾವುದೇ ನಿಂದನೆ ಮಾಡಿಲ್ಲ. ಕಾಂಗ್ರೆಸ್ ಸರ್ಕಾರ ಇದೆ ಎಂದು ದೌರ್ಜನ್ಯ ನಡೆಯುತ್ತಿದೆ. ಜಿಲ್ಲಾ ಉಸ್ತುವಾರಿ, ಸಿಎಂ ಸೆಕ್ಯುರಿಟಿ, ಶಾಸಕ ನಾರಾಯಣಸ್ವಾಮಿ ವಿರುದ್ಧ ಕ್ರಮ ತಗೆದುಕೊಳ್ಳಬೇಕು. ನಾನೊಬ್ಬ ದಲಿತ ಸಂಸದನಾಗಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ:ರಾಜಭವನ ತಲುಪಿದ ಕೋಲಾರ ಬಿಜೆಪಿ ಸಂಸದ ಮುನಿಸ್ವಾಮಿ-ಕಾಂಗ್ರೆಸ್ ಶಾಸಕ ನಾರಾಯಣಸ್ವಾಮಿ ಜಟಾಪಟಿ
ಇನ್ನು ಇದೇ ವೇಳೆ ಅವರದ್ದೇ ಪಕ್ಷದಲ್ಲಿರುವ ಶಾಸಕರು ನೂರಾರು ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಇದಕ್ಕೆ ನನ್ನ ಬಳಿ ದಾಖಲೆಗಳು ಇವೆ. ಶಾಸಕ ನಾರಾಯಣ ಸ್ವಾಮಿ ಅಕ್ರಮವಾಗಿ ಸರ್ಕಾರಿ ಭೂಮಿಗೆ ಬೇಲಿ ಹಾಕಿದ್ದಾರೆ. ಡಿ.ಕೆ. ರವಿ ಇದ್ದಾಗ ಎಲ್ಲಾ ಸರ್ಕಾರದ ಭೂಮಿಗೆ ಬೇಲಿ ಹಾಕಿದ್ದರು. ಡಿ.ಕೆ. ರವಿ ಸಾವಿಗೆ ನಾರಾಯಣ ಸ್ವಾಮಿ ಕೂಡ ಕಾರಣ ಎನ್ನುವ ಮಾತಿದೆ.
ಗೋಮಾಳ ಭೂಮಿ, ಸರ್ಕಾರಿ ಕ್ವಾರೆ ಎಲ್ಲದಕ್ಕೂ ನಾರಾಯಣ ಸ್ವಾಮಿ ಬೇಲಿ ಹಾಕಿದ್ದಾರೆ. ಇನ್ನು ಕೋಲಾರ ಕ್ಲಾರ್ಕ್ ಟವರ್ ದ್ವಾರದಲ್ಲಿ ಕತ್ತಿ ಹಾಕಿದ ವಿಚಾರ ‘ ಈದ್ ಮಿಲಾದ್ ಎಂದು ಕತ್ತಿಗಳ ದ್ವಾರ ಮಾಡಿದ್ದಾರೆ. ಇದನ್ನು ಪ್ರಶ್ನೆ ಮಾಡಿದ್ರೆ ನಗರ ಸಭೆಯವರು ಅನುಮತಿ ಕೊಟ್ಟಿದ್ದಾರೆ ಎಂದು ಪೊಲೀಸರು ಹೇಳುತ್ತಾರೆ.
‘ನಾವು ಅಲ್ಲಿ ಗಣೇಶ ಹಬ್ಬಕ್ಕೆ ತ್ರಿಶೂಲ ಹಾಕ್ತೀವಿ ಅಂದಾಗ ಅದಕ್ಕೆ ಅವಕಾಶ ಕೊಟ್ಟಿಲ್ಲ. ಇದು ಎಷ್ಟರ ಮಟ್ಟಿಗೆ ಸರಿ?. ಕೋಲಾರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಜಿಲ್ಲೆಯಲ್ಲಿ ವೇಶ್ಯಾವಾಟಿಕೆ , ಒಟ್ಟು 16 ಕೊಲೆಗಳು ಆಗಿವೆ. ನಿನ್ನೆ(ಸೆ.27) 2 ಕೊಲೆಗಳು ಆಗಿವೆ. ಎಸ್ಪಿ ಕಾಂಗ್ರೆಸ್ ಏಜೆಂಟ್ ಆಗಿದ್ದಾರೆ. ಸಂಸದ ಆದ ಮೇಲೆ ಆದ ಅಭಿವೃದ್ಧಿ ಕಾರ್ಯಕ್ರಮಗಳ ಹೆಸರು ಹೇಳಿ ಎಂಬ ಪ್ರಶ್ನೆಗೆ ತಡಬಡಾಯಿಸಿದ ಮುನಿಸ್ವಾಮಿ, ಅಭಿವೃದ್ಧಿ ಕಾಮಗಾರಿಗಳ ಹೆಸರು ಹೇಳದೇ ಮತ್ತೊಂದು ಸುದ್ದಿಗೋಷ್ಟಿ ಕರೆದು ಮಾತಾಡ್ತೇನೆ ಎಂದು ಜಾರಿಕೊಂಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ