ಮಂಡ್ಯ, ಡಿ.25: ಲೋಕಸಭಾ ಚುನಾವಣೆ(Lok Sabha Elections)ಗೆ ಅಭ್ಯರ್ಥಿ ಆಗುತ್ತೇನೆ ಎನ್ನುವ ಗುಟ್ಟನ್ನ ಸಂಸದೆ ಸುಮಲತಾ(Sumalatha) ಬಿಟ್ಟು ಕೊಟ್ಟಂತಿದೆ.ಈಗಾಗಲೇ ಬಿಜೆಪಿಗೆ ತಮ್ಮ ಬೆಂಬಲ ಸಂಪೂರ್ಣ ಇದೆ ಎಂದು ಸುಮಲತಾ ಘೋಷಣೆ ಮಾಡಿದ್ದರು. ಮೊದಲೇ ಜೆಡಿಎಸ್ ಹಾಗೂ ಸಂಸದೆ ಸುಮಲತಾ ನಡುವೆ ಟೀಕಾಪ್ರಹಾರ ನಡೀತಿದೆ. ಈ ಮದ್ಯೆ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡಿದೆ. ಹೇಳಿ ಕೇಳಿ ಮೊದಲೇ ಮಂಡ್ಯ ಜಿಲ್ಲೆಯು ಜೆಡಿಎಸ್ನ ಭದ್ರಕೋಟೆ. ಶತಾಯ ಗತಾಯ ಇಲ್ಲಿ ಜೆಡಿಎಸ್ ತನ್ನ ಅಭ್ಯರ್ಥಿಯನ್ನೇ ಕಣಕ್ಕಿಳಿಸಿ ಗೆಲ್ಲಿಸಿಕೊಂಡು ತನ್ನ ಹಿಡಿತ ಸಾಧಿಸಲು ಹೊರಟಿದ್ದು, ಬಿಜೆಪಿಯಿಂದ ಸುಮಲತಾಗೆ ಟಿಕೆಟ್ ನೀಡುವುದು ಅನುಮಾನವಾಗಿದೆ. ಈ ನಡುವೆ ಬಿಜೆಪಿ ಬಿಜೆಪಿ ಜೆಡಿಎಸ್ ಮೈತ್ರಿ ಬಗ್ಗೆನೂ ಕೂಡ ಸುಮಲತಾ ಏನು ಹೇಳುತ್ತಿಲ್ಲ.
ಇನ್ನು ಈ ಕುರಿತು ಯಾವಾಗ ಕೇಳಿದರೂ ಮಂಡ್ಯ ಜನ ನನ್ನನ್ನ ಗೆಲ್ಲಿಸಿದ್ದಾರೆ. ಸ್ವಾಭಿಮಾನಕ್ಕೆ ಬೆಲೆ ಕೊಟ್ಟಿದ್ದಾರೆ. ನಾನು ಮಂಡ್ಯ ಬಿಟ್ಟು ಎಲ್ಲೂ ಹೋಗಲ್ಲ. ನಾನು ಸ್ಪರ್ಧೆ ಮಾಡೋದಾದರೆ ಮಂಡ್ಯದಿಂದಲೇ ಎಂದು ಸಂಸದೆ ಸುಮಲತಾ ಹೇಳುತ್ತಾನೆ ಇದ್ದಾರೆ. ಆದ್ರೆ, ಈವರೆಗೂ ಯಾವ ಪಕ್ಷದಿಂದ ಸ್ಪರ್ಧೆ ಮಾಡುತ್ತೇನೆ ಎಂದು ಮಾತ್ರ ಹೇಳಿಲ್ಲ. ಈ ಮಧ್ಯೆ ಮೊನ್ನೆ ಕಾಟೇರ ಚಿತ್ರದ ಹಾಡು ಬಿಡುಗಡೆ ಸಂದರ್ಭ ನಟ ದರ್ಶನ್ ಕೂಡ ಸಂಸದೆ ಸುಮಲತಾಗೆ ಜಿಲ್ಲೆಯ ಜನ ಆಶೀರ್ವಾದ ಮಾಡಿ ಎಂದು ಮನವಿ ಮಾಡೋ ಮೂಲಕ ಮತ್ತೆ ಸುಮಲತಾ ಸ್ಪರ್ಧೆ ಮಾಡುತ್ತಾರೆ ಎನ್ನುವುದನ್ನ ಪರೋಕ್ಷವಾಗಿ ಹೇಳಿದ್ದಾರೆ.
ಇದೆಲ್ಲವನ್ನೂ ನೋಡಿದರೆ ಮತ್ತೆ ಮಂಡ್ಯ ಲೋಕಸಭಾ ಅಖಾಡದಲ್ಲಿ ಸುಮಲತಾ ಸ್ಪರ್ಧೆ ಫಿಕ್ಸ್ ಎನ್ನುವುದು ಖಾತ್ರಿಯಾಗಿದೆ. ಇಷ್ಟಲ್ಲದೆ ಸುಮಲತಾ ಕಾಂಗ್ರೆಸ್ಗೆ ಬರುವುದು ಕಾಂಗ್ರೆಸ್ಸಿಗರಿಗೆ ಇಷ್ಟ ಇಲ್ಲ, ಒಟ್ಟಾರೆ ಸುಮಲತಾ ಬಿಜೆಪಿಯಿಂದ ಅಭ್ಯರ್ಥಿ ಆಗ್ತಾರಾ?, ಕಾಂಗ್ರೆಸ್ನಿಂದ ನಿಲ್ತಾರಾ? ಅಥವಾ ಕಳೆದ ಭಾರಿಯಂತೆ ಸ್ವತಂತ್ರ ಅಭ್ಯರ್ಥಿ ಆಗಿ ಅಕಾಡಕ್ಕೆ ಇಳಿತಾರಾ? ಕಾದು ನೋಡಬೇಕಿದೆ. ಅದೇನೇ ಆಗಲಿ ಸಂಸದೆ ಸುಮಲತಾ ಮಾತ್ರ ಮಂಡ್ಯದಿಂದಲೇ ಸ್ಪರ್ಧೆ ಮಾಡುತ್ತಾರೆ ಎನ್ನುವುದು ಖಚಿತವಾದಂತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:26 pm, Mon, 25 December 23