ವೈಎಸ್ಆರ್ ಕಾಂಗ್ರೆಸ್ ಪಕ್ಷದ ಗೌರವಾಧ್ಯಕ್ಷ ಸ್ಥಾನ ತೊರೆದ ವಿಜಯಮ್ಮ

| Updated By: ರಶ್ಮಿ ಕಲ್ಲಕಟ್ಟ

Updated on: Jul 08, 2022 | 8:49 PM

ತೆಲಂಗಾಣ ಜನತೆಗಾಗಿ ವೈಎಸ್ ರಾಜಶೇಖರ್ ರೆಡ್ಡಿ ಅವರ ಕನಸುಗಳನ್ನು ನನಸು ಮಾಡಲು ತೆಲಂಗಾಣದಲ್ಲಿ ಏಕಾಂಗಿ ಹೋರಾಟ ನಡೆಸುತ್ತಿರುವ ನನ್ನ ಮಗಳು ವೈಎಸ್ ಶರ್ಮಿಳಾ ಅವರೊಂದಿಗೆ ನಾನು ನಿಂತಿದ್ದೇನೆ ಎಂಬ ಬಗ್ಗೆ ಸಾಕಷ್ಟು ಊಹಾಪೋಹಗಳು, ವದಂತಿಗಳು...

ವೈಎಸ್ಆರ್ ಕಾಂಗ್ರೆಸ್ ಪಕ್ಷದ ಗೌರವಾಧ್ಯಕ್ಷ ಸ್ಥಾನ ತೊರೆದ ವಿಜಯಮ್ಮ
ವಿಜಯಮ್ಮ
Follow us on

ಹೈದರಾಬಾದ್: ಆಂಧ್ರಪ್ರದೇಶದ ಆಡಳಿತಾರೂಢ ವೈಎಸ್ಆರ್ ಕಾಂಗ್ರೆಸ್ ಪಕ್ಷದ (YSR Congress Party)  ಮೆಗಾ ಮೀಟಿಂಗ್​​ನ  ಮೊದಲ ದಿನವೇ ವಿಜಯಮ್ಮ ಎಂದೇ ಜನಪ್ರಿಯರಾಗಿರುವ  ವೈಎಸ್ ವಿಜಯಲಕ್ಷ್ಮಿ(YS Vijayalakshmi)  ಗೌರವಾಧ್ಯಕ್ಷ ಸ್ಥಾನ ತೊರೆಯುವುದಾಗಿ ಘೋಷಿಸಿದ್ದಾರೆ. ತಮ್ಮ ಮಗಳು ವೈಎಸ್ ಶರ್ಮಿಳಾ ತೆಲಂಗಾಣದಲ್ಲಿ ನಡೆಸುತ್ತಿರುವ ರಾಜಕೀಯ ಪ್ರಚಾರದಲ್ಲಿ ತಾವು ಭಾಗಿಯಾಗಲಿದ್ದೇನೆ ಎಂದು ವಿಜಯಮ್ಮ ಹೇಳಿದ್ದಾರೆ. ಐದು ವರ್ಷಗಳ ನಂತರ ಗುಂಟೂರಿನಲ್ಲಿ ತಮ್ಮ  ಮಗ, ಪಕ್ಷದ ಅಧ್ಯಕ್ಷ ಮತ್ತು ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ (YS Jagan Mohan Reddy) ಅವರ ನೇತೃತ್ವದಲ್ಲಿ ಗುರುವಾರ ನಡೆದ ವೈಎಸ್ಆರ್​​ಸಿಪಿ ಸಭೆಯಲ್ಲಿ  ಭಾಷಣ ಮಾಡಿ  ಮುಗಿಸುವ ವೇಳೆ ವಿಜಯಮ್ಮ ಈ ಘೋಷಣೆ ಮಾಡಿದ್ದಾರೆ.

“ತೆಲಂಗಾಣ ಜನತೆಗಾಗಿ ವೈಎಸ್ ರಾಜಶೇಖರ್ ರೆಡ್ಡಿ ಅವರ ಕನಸುಗಳನ್ನು ನನಸು ಮಾಡಲು ತೆಲಂಗಾಣದಲ್ಲಿ ಏಕಾಂಗಿ ಹೋರಾಟ ನಡೆಸುತ್ತಿರುವ ನನ್ನ ಮಗಳು ವೈಎಸ್ ಶರ್ಮಿಳಾ ಅವರೊಂದಿಗೆ ನಾನು ನಿಂತಿದ್ದೇನೆ ಎಂಬ ಬಗ್ಗೆ ಸಾಕಷ್ಟು ಊಹಾಪೋಹಗಳು, ವದಂತಿಗಳು ಮತ್ತು ಅನಗತ್ಯ ವಿವಾದಗಳು ಕೇಳಿ ಬಂದಿತ್ತು.  ಹಾಗಾಗಿ ನಾನು ಕುಟುಂಬದೊಳಗಿನ ಭಿನ್ನಾಭಿಪ್ರಾಯಗಳ ಬಗ್ಗೆ ಅನಗತ್ಯ ವಿವಾದವನ್ನು ಕೊನೆಗೊಳಿಸಲು ಈ ನಿರ್ಧಾರ ಕೈಗೊಂಡಿದ್ದೇನೆ ಅವರು ಹೇಳಿದರು.

“ವೈ.ಎಸ್. ಜಗನ್ ಮತ್ತೊಮ್ಮೆ ಇಲ್ಲಿ ಮುಖ್ಯಮಂತ್ರಿಯಾಗಿ ಮರು ಆಯ್ಕೆಯಾಗುತ್ತಾರೆ ಎಂಬ ವಿಶ್ವಾಸ ನನಗಿದೆ. ನನ್ನ ಮಗನ ಕಷ್ಟದ ಸಮಯದಲ್ಲಿ ನಾನು ಜೊತೆಗಿದ್ದೆ. ಈಗ ಅವರು ಒಳ್ಳೆಯ ಸಮಯಗಳು. ನನ್ನ ಮಗಳ ಜೊತೆ ನಿಲ್ಲದಿದ್ದರೆ ನಾನು ತಪ್ಪಿತಸ್ಥಳೆಂಬ ಭಾವನೆ ಬರುತ್ತದೆ. ನನ್ನ ಆತ್ಮಸಾಕ್ಷಿಯ ಕರೆಗೆ  ಓಗೊಟ್ಟು  ನಾನು ನನ್ನ ಗೌರವಾಧ್ಯಕ್ಷ ಸ್ಥಾನವನ್ನು ತ್ಯಜಿಸುತ್ತಿದ್ದೇನೆ, ನಾನು ನನ್ನ ಮಗನಿಗೆ ತಾಯಿಯಾಗಿ ಮತ್ತು ಆಂಧ್ರಪ್ರದೇಶದ ಜನರೊಂದಿಗೆ ಇರುತ್ತೇನೆ ಎಂದು ವಿಜಯಮ್ಮ ಹೇಳಿದರು. ನೀರು ಹಂಚಿಕೆ ವಿವಾದ ಸೇರಿದಂತೆ ವಿಭಜನೆಯ ವಿಷಯಗಳಲ್ಲಿ ಆಯಾ ರಾಜ್ಯಗಳ ಜನರ ಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡು ಎರಡು ಪಕ್ಷಗಳು ವಿಭಿನ್ನ ನಿಲುವುಗಳನ್ನು ಹೊಂದಿವೆ ಎಂದು ನನಗೆ ತಿಳಿದಿದೆ. ಹಾಗಾಗಿ ನಾನು  ಎರಡೂ ಪಕ್ಷಗಳ ಜತೆ ಮುಂದುವರಿಯುವುದು ಸರಿಯಲ್ಲ.

ಎರಡು ಪಕ್ಷಗಳು ಮೊದಲಿನಿಂದಲೂ ಅಂತರ ಕಾಯ್ದುಕೊಂಡಿವೆ. ತೆಲಂಗಾಣದಲ್ಲಿ ರಾಜಕೀಯ ಪಕ್ಷವನ್ನು ಪ್ರಾರಂಭಿಸುವ ಇಂಗಿತವನ್ನು ಘೋಷಿಸಿದ ನಂತರ ವೈಎಸ್ ಶರ್ಮಿಳಾ ತಮ್ಮ ವೈಎಸ್‌ಆರ್ ತೆಲಂಗಾಣ ಪಕ್ಷವನ್ನು ಪ್ರಾರಂಭಿಸುವ ಮೊದಲು ವೈಎಸ್‌ಆರ್‌ಸಿಪಿ ಪಕ್ಷಕ್ಕೂ ವೈಎಸ್ ಜಗನ್ ರೆಡ್ಡಿಗೂ ಅದರೊಂದಿಗೆ  ಯಾವುದೇ ಸಂಬಂಧವಿಲ್ಲ ಎಂದು ಹೇಳಿಕೆ ನೀಡಿತ್ತು. 2014 ರಲ್ಲಿ ಆಂಧ್ರಪ್ರದೇಶದಿಂದ ತೆಲಂಗಾಣವನ್ನು ಬೇರ್ಪಡಿಸಲಾಯಿತು.