Republic Day 2023 Holiday; ಗಮನಿಸಿ, ಈ ದಿನ ಷೇರು ವಹಿವಾಟು ನಡೆಯಲ್ಲ

|

Updated on: Jan 24, 2023 | 6:45 PM

ದೇಶದ 74ನೇ ಗಣರಾಜ್ಯೋತ್ಸವ ಪ್ರಯುಕ್ತ ಜನವರಿ 26ರಂದು ದೇಶೀಯ ಷೇರು ಮಾರುಕಟ್ಟೆಗಳು ಕಾರ್ಯನಿರ್ವಹಿಸುವುದಿಲ್ಲ. ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ ಮತ್ತು ಬಾಂಬೇ ಸ್ಟಾಕ್​ ಎಕ್ಸ್​ಚೇಂಜ್ (BSE) ಕೂಡ ರಜೆ ಇರಲಿವೆ.

Republic Day 2023 Holiday; ಗಮನಿಸಿ, ಈ ದಿನ ಷೇರು ವಹಿವಾಟು ನಡೆಯಲ್ಲ
ಬಿಎಸ್​ಇ (ಸಾಂದರ್ಭಿಕ ಚಿತ್ರ)
Follow us on

ಮುಂಬೈ: ದೇಶದ 74ನೇ ಗಣರಾಜ್ಯೋತ್ಸವ (Republic Day) ಪ್ರಯುಕ್ತ ಜನವರಿ 26ರಂದು ದೇಶೀಯ ಷೇರು ಮಾರುಕಟ್ಟೆಗಳು (Indian Stock Market) ಕಾರ್ಯನಿರ್ವಹಿಸುವುದಿಲ್ಲ. ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ (NSE) ಮತ್ತು ಬಾಂಬೇ ಸ್ಟಾಕ್​ ಎಕ್ಸ್​ಚೇಂಜ್ (BSE) ಕೂಡ ರಜೆ ಇರಲಿವೆ. ಬಿಎಸ್​ಇ ಕ್ಯಾಲೆಂಡರ್​​ನ ಟ್ರೇಡಿಂಗ್ ರಜಾ ದಿನಗಳ ಪಟ್ಟಿಯಲ್ಲಿ ಜನವರಿ 26 ಕೂಡ ಸೇರಿದೆ. ಈ ಪಟ್ಟಿಯಲ್ಲಿ ವಾರಾಂತ್ಯದ ದಿನಗಳನ್ನು ಸೇರಿಸಿರುವುದಿಲ್ಲ. ಯಾಕೆಂದರೆ ದೇಶದ ಷೇರು ಮಾರುಕಟ್ಟೆಗಳು ಸಾಮಾನ್ಯವಾಗಿ ಸೋಮವಾರದಿಂದ ಶುಕ್ರವಾರದ ವರೆಗೆ ಮಾತ್ರ ಕಾರ್ಯನಿರ್ವಹಿಸುತ್ತವೆ. ಬೆಳಗ್ಗೆ 9.30ರಿಂದ ಸಂಜೆ 3.30ರ ವರೆಗೆ ಟ್ರೇಡಿಂಗ್ ನಡೆಯುತ್ತದೆ. ಮಹಾ ಶಿವರಾತ್ರಿ, ಈದ್ ಉಲ್ ಫಿತ್ರ್, ಮುಹರಂ ಹಾಗೂ ದೀಪಾವಳಿ, ಲಕ್ಷ್ಮೀ ಪೂಜೆ ಈ ವರ್ಷ ವಾರಾಂತ್ಯ ಬರುವುದರಿಂದ ಇವುಗಳನ್ನು ರಜಾ ಪಟ್ಟಿಯಲ್ಲಿ ಸೇರಿಸಲಾಗಿಲ್ಲ.

ಪ್ರತಿ ವರ್ಷ ಗಣರಾಜ್ಯೋತ್ಸವದಂದು ಷೇರು ಮಾರುಕಟ್ಟೆಗಳು ರಜೆ ಇರುತ್ತವೆ. ಭಾರತದ ಸಂವಿಧಾನವು ಅಸ್ತಿತ್ವಕ್ಕೆ ಬಂದ ದಿನವಾದ್ದರಿಂದ ಅಂದು ಸರ್ಕಾರವು ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತದೆ. ಗಣರಾಜ್ಯೋತ್ಸವರ ಪರೇಡ್ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯುತ್ತವೆ. ದೇಶದಾದ್ಯಂತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಕಾರಣ ಷೇರುಪೇಟೆಗಳಿಗೂ ರಜೆ ಇರುತ್ತದೆ. ಹೀಗಾಗಿ ಹೂಡಿಕೆದಾರರು ಅದಕ್ಕೆ ತಕ್ಕಂತೆ ತಮ್ಮ ವಹಿವಾಟುಗಳ ಯೋಜನೆ ಸಿದ್ಧಪಡಿಸಿಕೊಳ್ಳುವುದು ಉತ್ತಮ.

ಅಲ್ಪ ಚೇತರಿಕೆಯೊಂದಿಗೆ ವಹಿವಾಟು ಮುಗಿಸಿದ ಷೇರುಪೇಟೆ

ಮಂಗಳವಾರದ ವಹಿವಾಟಿನ ಅಂತ್ಯದ ವೇಳೆಗೆ ಬಿಎಸ್​ಇ ಸೆನ್ಸೆಕ್ಸ್ ಮತ್ತು ಎನ್​ಎಸ್​ಇ ನಿಫ್ಟಿ ಅಲ್ಪ ಚೇತರಿಕೆಯೊಂದಿಗೆ ವಹಿವಾಟು ಮುಗಿಸಿವೆ. ಬಿಎಸ್​ಇ 37.08 ಅಂಶ ಚೇತರಿಸಿ 60,978.75 ಅಂಶದೊಂದಿಗೆ ವಹಿವಾಟು ನಡೆಸಿತು. ಎನ್​ಎಸ್​ಇ ನಿಫ್ಟಿ 29 ಅಂಶ ಚೇತರಿಸಿ 18,118.30 ರಲ್ಲಿ ವಹಿವಾಟು ಮುಗಿಸಿತು. ಟಾಟಾ ಮೋಟರ್ಸ್ ಷೇರು ಮೌಲ್ಯ ಶೇ 3.26 ವೃದ್ಧಿ ದಾಖಲಿಸಿತು. ಮಾರುತಿ ಸುಜುಕಿ ಷೇರುಗಳು 3.23ರ ವೃದ್ಧಿ ದಾಖಲಿಸಿದವು. ತ್ರೈಮಾಸಿಕ ಲಾಭದಲ್ಲಿ ಗಣನೀಯ ಹೆಚ್ಚಳ ಕಂಡುಬಂದ ಬೆನ್ನಲ್ಲೇ ಕಂಪನಿಯ ಷೇರು ಮೌಲ್ಯದಲ್ಲಿ ಜಿಗಿತ ಕಾಣಿಸಿತು.

ಎಚ್​ಸಿಎಲ್ ಟೆಕ್, ಎಚ್​ಡಿಎಫ್​ಸಿ ಟ್ವಿನ್ಸ್, ಏಷ್ಯನ್ ಪೈಂಟ್ಸ್, ಇಂಡಸ್​​​ಇಂಡ್ ಬ್ಯಾಂಕ್, ಟಿಸಿಎಸ್ ಹಾಗೂ ಐಟಿಸಿ ಷೇರು ಮೌಲ್ಯದಲ್ಲಿಯೂ ವೃದ್ಧಿ ಕಾಣಿಸಿತು. ಆ್ಯಕ್ಸಿಸ್ ಬ್ಯಾಂಕ್, ಎಲ್​ ಆ್ಯಂಡ್ ಟಿ, ರಿಲಯನ್ಸ್ ಇಂಡಸ್ಟ್ರೀಸ್, ಎಸ್​ಬಿಐ, ಕೋಟಕ್ ಬ್ಯಾಂಕ್, ಟಾಟಾ ಸ್ಟೀಲ್ ಹಾಗೂ ಪವರ್ ಗ್ರಿಡ್ ಷೇರುಗಳು ಕುಸಿತ ದಾಖಲಿಸಿವೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ