ಕ್ಯಾಮರಾನ್ನೇ ದುರುಗುಟ್ಟಿಕೊಂಡು ನೋಡ್ತಾನೆ ಅಷ್ಟೇ.. ಸಿಂಪ್​ ಸಿಂಪ್ಲೀ 20 ಲಕ್ಷ ವ್ಯೂಸ್ ಕ್ರಾಸ್ ಆಯ್ತು!

|

Updated on: Oct 21, 2020 | 3:06 PM

ವಿಯೆಟ್ನಾಂ: ಸೋಶಿಯಲ್ ಮೀಡಿಯಾ ಸೆನ್ಸೇಷನ್ ಆಗ್ಬೇಕು ಅಂದ್ರೆ ಬಹಳ ಕಷ್ಟಪಡಬೇಕು ಅಂತಾ ಅಂದು ಕೊಂಡ್ರೆ ಅದು ತಪ್ಪು. ಯಾಕಂದ್ರೆ ಇಲ್ಲೊಬ್ಬ ವ್ಯಕ್ತಿ ಈ ಮಾತನ್ನಾ ಸುಳ್ಳು ಮಾಡಿದ್ದಾನೆ. ಸುಮ್ಮನೆ ಏನೂ ಮಾಡದೇ ಕೇವಲ ಕ್ಯಾಮರಾವನ್ನೇ ದಿಟ್ಟಿಸಿ 20 ಮಿಲಿಯನ್ ವೀಕ್ಷಣೆಯನ್ನು ಪಡೆದಿದ್ದಾರೆ. ಅವನ ಮುಸುಡಿಗೆ.. ಸಿಂಪ್​ ಸಿಂಪ್ಲೀ 2 ಮಿಲಿಯನ್​ ವ್ಯೂಸ್ ಕ್ರಾಸ್ ಆಯಿತು.. ಹೌದು ಇದು ನಿಜ. ನಿಜ ಸುದ್ದಿ ಇದ್ದರೂ ಜನ ವಿಡಿಯೋ ನೋಡೋದು ಕಷ್ಟ. ಅಂಥಾದ್ರಲ್ಲಿ ಆತ ಏನೂ ಮಾಡದೆ ಕ್ಯಾಮರಾವನ್ನೇ ನೋಡೋ […]

ಕ್ಯಾಮರಾನ್ನೇ ದುರುಗುಟ್ಟಿಕೊಂಡು ನೋಡ್ತಾನೆ ಅಷ್ಟೇ.. ಸಿಂಪ್​ ಸಿಂಪ್ಲೀ 20 ಲಕ್ಷ ವ್ಯೂಸ್ ಕ್ರಾಸ್ ಆಯ್ತು!
Follow us on

ವಿಯೆಟ್ನಾಂ: ಸೋಶಿಯಲ್ ಮೀಡಿಯಾ ಸೆನ್ಸೇಷನ್ ಆಗ್ಬೇಕು ಅಂದ್ರೆ ಬಹಳ ಕಷ್ಟಪಡಬೇಕು ಅಂತಾ ಅಂದು ಕೊಂಡ್ರೆ ಅದು ತಪ್ಪು. ಯಾಕಂದ್ರೆ ಇಲ್ಲೊಬ್ಬ ವ್ಯಕ್ತಿ ಈ ಮಾತನ್ನಾ ಸುಳ್ಳು ಮಾಡಿದ್ದಾನೆ. ಸುಮ್ಮನೆ ಏನೂ ಮಾಡದೇ ಕೇವಲ ಕ್ಯಾಮರಾವನ್ನೇ ದಿಟ್ಟಿಸಿ 20 ಮಿಲಿಯನ್ ವೀಕ್ಷಣೆಯನ್ನು ಪಡೆದಿದ್ದಾರೆ.

ಅವನ ಮುಸುಡಿಗೆ.. ಸಿಂಪ್​ ಸಿಂಪ್ಲೀ 2 ಮಿಲಿಯನ್​ ವ್ಯೂಸ್ ಕ್ರಾಸ್ ಆಯಿತು..
ಹೌದು ಇದು ನಿಜ. ನಿಜ ಸುದ್ದಿ ಇದ್ದರೂ ಜನ ವಿಡಿಯೋ ನೋಡೋದು ಕಷ್ಟ. ಅಂಥಾದ್ರಲ್ಲಿ ಆತ ಏನೂ ಮಾಡದೆ ಕ್ಯಾಮರಾವನ್ನೇ ನೋಡೋ ವಿಡಿಯೋ ಹಾಕಿದ್ರೆ ಯಾರ್ ಸ್ವಾಮಿ ನೋಡ್ತಾರೆ ಅಂತಾ ಅನಿಸ್ಬಹುದು. ಆದರೆ ಇದು ನಿಜವಾಗಿಬಿಟ್ಟಿದೆ. ಹನ್ಹ್ ಟ್ರಾನ್ ಟಾನ್ ಎಂಬ ವಿಯೆಟ್ನಾಂ ವ್ಯಕ್ತಿಯೊಬ್ಬರು ಬ್ಯಾಕ್​ ಗ್ರೌಂಡ್ ಹಾಡುಗಳ ಜೊತೆ ಕ್ಯಾಮಾರಾದೊಳಗೆ ಇಣುಕುವ ವಿಡಿಯೋಗಳನ್ನು ಟಿಕ್ ಟಾಕ್​ನಲ್ಲಿ ಹಂಚಿಕೊಂಡಿದ್ದು, ಇವರ ಒಂದು ವಿಡಿಯೋ 20.8 ಮಿಲಿಯನ್ (2.08 ಕೋಟಿ) ವೀಕ್ಷಣೆಗಳನ್ನು ಹೊಂದಿದೆ.

ಈ ಮೊದಲು, ಇದೇ ರೀತಿ ಇಂಡೋನೇಷ್ಯಾದ ಮುಹಮ್ಮದ್ ದಿದಿತ್ ಎಂಬ ವ್ಯಕ್ತಿಯು ಎರಡು ಗಂಟೆಗಳ ಕಾಲ ಏನೂ ಮಾಡದೆ ಕುಳಿತಿದ್ದ ವೀಡಿಯೊವನ್ನು ಹಂಚಿಕೊಂಡಿದ್ದ. 2 ಗಂಟೆಗಳ ಕಾಲ ಏನೂ ಮಾಡದೆ ಇರುವುದು (2 JAM nggak ngapa-ngapain–ಇಂಗ್ಲೀಷ್ ಅನುವಾದ 2 hours of doing nothing) ಎಂಬ ಶೀರ್ಷಿಕೆಯಡಿ ಫೋಸ್ಟ್ ಮಾಡಿದ್ದ.. ಆ ವಿಡಿಯೋ ಒಂದೇ ತಿಂಗಳಲ್ಲಿ ಸಿಂಪ್​ ಸಿಂಪ್ಲೀ 2 ಮಿಲಿಯನ್​ ವ್ಯೂಸ್​ ಕ್ರಾಸ್ ಮಾಡಿಬಿಟ್ಟಿತು. ನೀವೂ ಒಂದು ಕೈ ನೋಡಿ.. ಏನಾರಾ ಮಾಡಿ..

Published On - 3:03 pm, Wed, 21 October 20