ಕೋಳಿ-ನವಿಲುಗಳ ಭಯಂಕರ ಕಾಳಗ ನೋಡಿದ ಜನರಿಗೆ ಶಾಕ್ ಮೇಲೆ ಶಾಕ್‌‌!

ಉಡುಪಿ: ಟಗರು ಪೈಟ್ ನೋಡಿರ್ತಿರಾ.. ಬುಲ್ ಪೈಟ್ ಕೂಡಾ ನೋಡಿರ್ತೀರಿ…ಕೋಳಿ ಕಾಳಗವನ್ನೂ ನೋಡೇ ಇರ್ತಿರಾ…. ಆದರೆ ವಯ್ಯಾರಕ್ಕೆ ಹೆಸರಾದ ನವಿಲಿನ ಕಾಳಗ ನೋಡಿದೀರಾ? ಕೇಳಿದೀರಾ? ಉಡುಪಿಯಲ್ಲಿ ಇಂಥ ಒಂದು ವಿಚಿತ್ರ ಕುಕ್ಕುಟ ಫೈಟ್ ಅಚ್ಚರಿ ಆದ್ರೂ ನಿಜವಾಗಿಯೂ ನಡೆದಿದೆ. ಹೌದು ಸ್ವತಃ ನವಿಲೇ ಫೈಟ್‌ಗೆ ಇಳಿದಿದೆ. ಅದೂ ತನ್ನ ಸರಿಸಮಾನರ ಜೊತೆಗಲ್ಲ, ಬದಲು ಕೋಳಿ‌ ಜೊತೆ ಕಾಳಗ ಮಾಡಿದೆ. ಈ ನವಿಲು ಮತ್ತು ಕೋಳಿಗಳ ಪೈಟ್‌ ದೃಶ್ಯ ನೋಡಿದ್ರೆ ತಲೆ ಗಟ್ಟಿ ಇದೆ ಅಂತ ಬಂಡೆ ಜೊತೆಗೆ […]

ಕೋಳಿ-ನವಿಲುಗಳ ಭಯಂಕರ ಕಾಳಗ ನೋಡಿದ ಜನರಿಗೆ ಶಾಕ್ ಮೇಲೆ ಶಾಕ್‌‌!
Follow us
Guru
| Updated By:

Updated on:Jul 24, 2020 | 3:37 PM

ಉಡುಪಿ: ಟಗರು ಪೈಟ್ ನೋಡಿರ್ತಿರಾ.. ಬುಲ್ ಪೈಟ್ ಕೂಡಾ ನೋಡಿರ್ತೀರಿ…ಕೋಳಿ ಕಾಳಗವನ್ನೂ ನೋಡೇ ಇರ್ತಿರಾ…. ಆದರೆ ವಯ್ಯಾರಕ್ಕೆ ಹೆಸರಾದ ನವಿಲಿನ ಕಾಳಗ ನೋಡಿದೀರಾ? ಕೇಳಿದೀರಾ? ಉಡುಪಿಯಲ್ಲಿ ಇಂಥ ಒಂದು ವಿಚಿತ್ರ ಕುಕ್ಕುಟ ಫೈಟ್ ಅಚ್ಚರಿ ಆದ್ರೂ ನಿಜವಾಗಿಯೂ ನಡೆದಿದೆ.

ಹೌದು ಸ್ವತಃ ನವಿಲೇ ಫೈಟ್‌ಗೆ ಇಳಿದಿದೆ. ಅದೂ ತನ್ನ ಸರಿಸಮಾನರ ಜೊತೆಗಲ್ಲ, ಬದಲು ಕೋಳಿ‌ ಜೊತೆ ಕಾಳಗ ಮಾಡಿದೆ. ಈ ನವಿಲು ಮತ್ತು ಕೋಳಿಗಳ ಪೈಟ್‌ ದೃಶ್ಯ ನೋಡಿದ್ರೆ ತಲೆ ಗಟ್ಟಿ ಇದೆ ಅಂತ ಬಂಡೆ ಜೊತೆಗೆ ಗುದ್ದಾಟ ಮಾಡಬಾರದು ಅಂತಾರಲ್ಲಾ ಹಾಗಾಗಿದೆ ಕೋಳಿ ಕಥೆ. ಇನ್ನೊಂದು ‌ಹುಂಜದ ಜೊತೆಗೆ ಕಾಲು ಕೆರೆದು‌ ಕಾದಾಡೊ ಬದಲು ನವಿಲಿನ ಜೊತೆಗೆ ಪೈಟ್ ಮಾಡುತ್ತಿದೆ.

ಕೋಳಿ-ನವಿಲುಗಳ ಶಕ್ತಿ ಪ್ರದರ್ಶನ ಗುಂಪು ಕಟ್ಟಿಕೊಂಡು‌ ಹೆಣ್ಣು ಕೋಳಿಗೆ‌ ಗಿರಕಿ ಹೊಡೆದುಕೊಂಡು ಸುತ್ತಾಡುತ್ತಿದ್ದ ಹುಂಜಕ್ಕೂ ಬೋರ್ ಆಗಿರಬೇಕು. ಡೀಫರೆಂಟಾಗಿರಲಿ ಅಂತಾ ಹುಂಜದ ಜೊತೆಗೆ ಪೈಟ್ ಮಾಡೊದು ಬಿಟ್ಟು ತನ್ನ ಶಕ್ತಿ ಪ್ರದರ್ಶನ ಮಾಡೋಕೆ ನವಿಲಿನ ಜೊತೆಗೆ ಪೈಟ್ ಶುರು ಮಾಡಿಕೊಂಡಿದೆ. ಮಳೆ ಬಂದ್ರೆ ಗರಿಬಿಚ್ಚಿ ಕುಣಿದು ಹೆಣ್ಣು ನವಿಲುನ್ನು ರಮೀಸುವುದ್ರಲ್ಲಿ ಎಕ್ಸಪರ್ಟ್‌ ಆಗಿರುವ ಮಯೂರ ಕೂಡಾ, ನರ್ತನ ಸೇವೆ ಬಿಟ್ಟು ಕುಕ್ಕುಟದ ಜೊತೆಗೆ ‌ಕಾದಾಟಕ್ಕಿಳಿದಿದೆ.

ಕಾಳಗ ನೋಡಿ ಉಡುಪಿ ಜನರೇ ನಿಬ್ಬೆರಗು ಕೋಳಿ ಜಗಳ ನೋಡಿದ್ದ, ಜನರಿಗೆ ಈ ನವಿಲು-ಕೋಳಿಯ ಜಗಳ ಅಚ್ಚರಿ ಮತ್ತು ಪುಕ್ಕಟೆ ಮನರಂಜನೆ ನೀಡಿದೆ. ಇದನ್ನ ಕೆಲವರು ತಮ್ಮ ಕ್ಯಾಮೆರಾದಲ್ಲಿ ಸೆರೆ ಕೂಡಾ ಹಿಡಿದಿದ್ದಾರೆ. ನವಿಲು-ಕೋಳಿ ಕಾಳಗ ನೋಡುತ್ತಿದ್ದ ಕೆಲವರು ತನಗಿಂತ ಬಲಿಷ್ಠ ಗಾತ್ರದ ನವಿಲಿನ ಜೊತೆಗೆ ಕಾದಾಡಿದ ಹುಂಜನಿಗೆ ಶಬಾಷ್‌ ಹೇಳಿದ್ರೆ, ಕೆಲವರು ಹುಂಜವನ್ನು ಮಣಿಸಲು ನವಿಲಿಗೆ ಪರಾಕ್‌ ಹೇಳಿದ್ದಾರೆ. ಕುತೂಹಲಕಾರಿಯಂದ್ರೆ ಹೆಣ್ಣುಕೋಳಿ ಅಂದ್ರೆ ಹೆಂಟೆ ಮಾತ್ರ ಹುಂಜನಿಗೆ ಪ್ರೊತ್ಸಾಹ ನೀಡುತ್ತಿದ್ದದ್ದು ನೋಡುವಂತಿತ್ತು.-ಹರೀಶ್ ಪಾಲೆಚ್ಚಾರ್

Published On - 8:20 pm, Wed, 22 July 20