ಈ ವೆಬ್ ಸಿರೀಸ್​ಗಳಲ್ಲಿದೆಯಂತೆ ಅಡಲ್ಟ್ ಕಂಟೆಂಟ್! Adult contents on OTT platforms, web series

|

Updated on: Nov 12, 2020 | 8:37 PM

ಓಟಿಟಿ ಪ್ಲಾಟ್ಫಾರ್ಮ್ ಮತ್ತು ಡಿಜಿಟಲ್ ಸುದ್ದಿತಾಣಗಳಿಗೆ ಸರ್ಕಾರ ಲಗಾಮು ಹಾಕಿದೆ. ಇದರ ಬೆನ್ನಲ್ಲೇ ಓಟಿಟಿಯಲ್ಲಿ ಪ್ರಸಾರವಾಗುತ್ತಿದ್ದ ವೆಬ್ ಸಿರೀಸ್​ಗಳಲ್ಲಿ ಯಾವು ಹೆಚ್ಚು ಅಡಲ್ಟ್ ಕಂಟೆಂಟುಗಳನ್ನು ಹೊಂದಿದ್ದವು ಎನ್ನುವುದನ್ನು ನಮ್ಮ ಟಿವಿ9 ಡಿಜಿಟಲ್ ನಿಮ್ಮೆದುರು ಬಿಚ್ಚಿಡಲಿದೆ. ಮುಂಬರುವ ದಿನಗಳಲ್ಲಿ ಅಡಲ್ಟ್ ಕಂಟೆಂಟ್​ವುಳ್ಳ ವೆಬ್ ಸಿರೀಸ್​ಗಳಿಗೆ ಕಡಿವಾಣ ಬೀಳಲಿದೆ ಎಂದೇ ಹೇಳಲಾಗುತ್ತಿದೆ. ಗಂಧಿ ಬಾತ್ ಏಕ್ತಾ ಕಪೂರ್ ಒಡೆತನದ ಆಲ್ಟ್ ಬಾಲಾಜಿ ಪ್ಲಾಟ್ಫಾರ್ಮ್, ಅಡಲ್ಟ್ ಕಂಟೆಂಡ್ ಕೇಂದ್ರವಾಗಿರಿಸಿಕೊಂಡು ವೆಬ್ ಸಿರೀಸ್​ಗಳನ್ನು ನಿರ್ಮಿಸಿ ಬಿಡುಗಡೆ ಮಾಡಿದೆ. ಈ ಸಂಸ್ಥೆಯ ‘ಗಂಧಿ ಬಾತ್’ […]

ಈ ವೆಬ್ ಸಿರೀಸ್​ಗಳಲ್ಲಿದೆಯಂತೆ ಅಡಲ್ಟ್ ಕಂಟೆಂಟ್! Adult contents on OTT platforms, web series
Follow us on

ಓಟಿಟಿ ಪ್ಲಾಟ್ಫಾರ್ಮ್ ಮತ್ತು ಡಿಜಿಟಲ್ ಸುದ್ದಿತಾಣಗಳಿಗೆ ಸರ್ಕಾರ ಲಗಾಮು ಹಾಕಿದೆ. ಇದರ ಬೆನ್ನಲ್ಲೇ ಓಟಿಟಿಯಲ್ಲಿ ಪ್ರಸಾರವಾಗುತ್ತಿದ್ದ ವೆಬ್ ಸಿರೀಸ್​ಗಳಲ್ಲಿ ಯಾವು ಹೆಚ್ಚು ಅಡಲ್ಟ್ ಕಂಟೆಂಟುಗಳನ್ನು ಹೊಂದಿದ್ದವು ಎನ್ನುವುದನ್ನು ನಮ್ಮ ಟಿವಿ9 ಡಿಜಿಟಲ್ ನಿಮ್ಮೆದುರು ಬಿಚ್ಚಿಡಲಿದೆ. ಮುಂಬರುವ ದಿನಗಳಲ್ಲಿ ಅಡಲ್ಟ್ ಕಂಟೆಂಟ್​ವುಳ್ಳ ವೆಬ್ ಸಿರೀಸ್​ಗಳಿಗೆ ಕಡಿವಾಣ ಬೀಳಲಿದೆ ಎಂದೇ ಹೇಳಲಾಗುತ್ತಿದೆ.

ಗಂಧಿ ಬಾತ್

ಏಕ್ತಾ ಕಪೂರ್ ಒಡೆತನದ ಆಲ್ಟ್ ಬಾಲಾಜಿ ಪ್ಲಾಟ್ಫಾರ್ಮ್, ಅಡಲ್ಟ್ ಕಂಟೆಂಡ್ ಕೇಂದ್ರವಾಗಿರಿಸಿಕೊಂಡು ವೆಬ್ ಸಿರೀಸ್​ಗಳನ್ನು ನಿರ್ಮಿಸಿ ಬಿಡುಗಡೆ ಮಾಡಿದೆ. ಈ ಸಂಸ್ಥೆಯ ‘ಗಂಧಿ ಬಾತ್’ ಅತ್ಯಂತ ಜನಪ್ರಿಯ ವೆಬ್ ಸಿರೀಸ್​ಗಳಲ್ಲೊಂದು. ಜಿ5ನಲ್ಲೂ ಲಭ್ಯವಿರುವ ಈ ಸಿರೀಸ್​ನ 5 ಸರಣಿಗಳು ಇದುವರೆಗೆ ಪ್ರಸಾರವಾಗಿವೆ. ರಾಗಿಣಿ ಎಂಎಂಎಸ್ ರಿಟರ್ನ್ಸ್, ದೇವ್ ಡಿಡಿ ಮುಂತಾದ ಸರಣಿಗಳನ್ನು ಸಹ ಬಾಲಾಜಿ ಪ್ಲಾಟ್ಫಾರ್ಮ್ ನಿರ್ಮಿಸಿದ್ದು ಅವುಗಳಲ್ಲೂ ಹೇರಳವಾದ ಅಡಲ್ಟ್ ಕಂಟೆಂಟ್ ಇದೆ.

ಸೇಕ್ರೆಡ್ ಗೇಮ್ಸ್

ಭಾರತದಲ್ಲಿ ಓಟಿಟಿಗೆ ಅದ್ಭುತವಾದ ವೇದಿಕೆ ಸೃಷ್ಟಿಸಿದ ಹಿರಿಮೆ ಈ ವೆಬ್ ಸಿರೀಸ್​ನದ್ದು. ನೆಟ್​ಫ್ಲಿಕ್ಸ್ ನಿರ್ಮಿಸಿದ ಈ ಸರಣಿಯಲ್ಲಿ ಬಾಲಿವುಡ್​ನ ಖ್ಯಾತ ನಟರಾದ ಸೈಫ್ ಅಲಿ ಖಾನ್, ನವಾಜುದ್ದೀನ್ ಸಿದ್ದಿಕಿ, ರಾಧಿಕಾ ಆಪ್ಟೆ ಮುಂತಾದವರು ಕಾಣಿಸಿಕೊಂಡಿದ್ದಾರೆ.

ಸೆಕ್ರೆಡ್ ಗೇಮ್ಸ್ ಎರಡು ಕಂತುಗಳಲ್ಲಿ ಪ್ರಸಾರವಾಗಿದ್ದು ಮೂರನೇ ಭಾಗದ ಬಿಡುಗಡೆಗೆಯನ್ನು ಲಕ್ಷಾಂತರ ಜನ ಕಾತುರದಿಂದ ಎದುರು ನೋಡುತ್ತಿದ್ದಾರೆ.

ಪೋಲಿಸರಿಂದ ಸಮನ್ಸ್!

ವೆಬ್ ಸಿರೀಸ್​ಗಳಲ್ಲಿ ಅಡಲ್ಟ್ ಕಂಟೆಂಟುಗಳ ಮೂಲಕ ಅಶ್ಲೀಲತೆಯನ್ನು ಪ್ರದರ್ಶಿಸಿರುವ ಆಲ್ಟ್ ಬಾಲಾಜಿ, ಪ್ರೈಮ್ ಫ್ಲಿಕ್ಸ್, ಉಲ್ಲು, ಚಿಕೂಫ್ಲಿಕ್ಸ್, ನಿಯೋಫ್ಲಿಕ್ಸ್ ಮುಂತಾದ ಓಟಿಟಿ ತಾಣಗಳಿಗೆ ನವೆಂಬರ್ 10 ರಂದು ಮಹಾರಾಷ್ಟ್ರ ಪೋಲಿಸ್ ಸಮನ್ಸ್ ಜಾರಿಗೊಳಿಸಿತ್ತು.

ಅಡಲ್ಟ್ ಕಂಟೆಂಟ್ ಅಡಕವಾಗಿರುವ ಮತ್ತೂ ಕೆಲವು ವೆಬ್ ಸಿರೀಸ್​ಗಳೆಂದರೆ ದೇವ್ ಡಿಡಿ, ಸ್ಪಾಟ್ಲೈಟ್, ಮಾಯಾ, ಟ್ವಿಸ್ಟೆಡ್, ಲವ್ ಅಸ್, ರೇನ್ ಇತ್ಯಾದಿ. ಈ ಸರಣಿಗಳಿಗೆ ಲಾಕ್ಡೌನ್ ಸಮಯದಲ್ಲಿ ವೀಕ್ಷಕರ ಸಂಖ್ಯೆ ಹೆಚ್ಚಳವಾಗಿತ್ತು ಎನ್ನುವುದು ಗಮನಾರ್ಹ.