ಜೀವನದುದ್ದಕ್ಕೂ ಕಾಡುವ ಕಾಯಿಲೆ.. ಆಲಸ್ಯವೇ ಇದರ ಆಹಾರ; ಜವಾಬ್ದಾರಿಯೇ ಇದಕ್ಕೆ ಪರಿಹಾರ

ಕೇವಲ ಕೊರೊನಾ ಮಾತ್ರವಲ್ಲ; ಈಗ ಹೇಳಹೊರಟಿರುವ ಕಾಯಿಲೆಯ ಬಗ್ಗೆಯೂ ಎಚ್ಚರ ಇರಲೇಬೇಕು.. ಇದು ಜೀವನಪೂರ್ತಿ ಇದ್ದು ಪ್ರತಿ ಕ್ಷಣ ಆಸೆ ಆಕಾಂಕ್ಷೆಗಳನ್ನು ಕೊಂದು, ಕೊನೆಗೆ ಬದುಕನ್ನೇ ಕಸಿದುಬಿಡುತ್ತದೆ. ಇದರ ಬಗ್ಗೆ ನಿರ್ಲಕ್ಷ್ಯ ತೋರಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಆಲಸ್ಯವೇ ಇದಕ್ಕೆ ಆಹಾರ. ಜವಾಬ್ದಾರಿಯೇ ಇದಕ್ಕೆ ಪರಿಹಾರ. ಎಚ್ಚರ ತಪ್ಪಿದ್ರೆ ಬೆನ್ನುಬಿಡದೆ ಕಾಡುವುದರಲ್ಲಿ ಅನುಮಾನವೇ ಇಲ್ಲ. ಅಂತಹದೊಂದು ಅಪಾಯಕಾರಿ ಕಾಯಿಲೆ ಎಂದರೆ ಅದು ಡಯಾಬಿಟಿಸ್. ಹೌದು, ಕಾಯಿಲೆ ಬಂದರೆ ಕೆಲವೇ ದಿನಗಳವರೆಗೆ ಇದ್ದು ಹೋಗಬೇಕು. ಆದರೆ ಇದು ಹಾಗಲ್ಲ. […]

ಜೀವನದುದ್ದಕ್ಕೂ ಕಾಡುವ ಕಾಯಿಲೆ.. ಆಲಸ್ಯವೇ ಇದರ ಆಹಾರ; ಜವಾಬ್ದಾರಿಯೇ ಇದಕ್ಕೆ ಪರಿಹಾರ
Follow us
ಸಾಧು ಶ್ರೀನಾಥ್​
|

Updated on: Nov 13, 2020 | 1:22 PM

ಕೇವಲ ಕೊರೊನಾ ಮಾತ್ರವಲ್ಲ; ಈಗ ಹೇಳಹೊರಟಿರುವ ಕಾಯಿಲೆಯ ಬಗ್ಗೆಯೂ ಎಚ್ಚರ ಇರಲೇಬೇಕು.. ಇದು ಜೀವನಪೂರ್ತಿ ಇದ್ದು ಪ್ರತಿ ಕ್ಷಣ ಆಸೆ ಆಕಾಂಕ್ಷೆಗಳನ್ನು ಕೊಂದು, ಕೊನೆಗೆ ಬದುಕನ್ನೇ ಕಸಿದುಬಿಡುತ್ತದೆ. ಇದರ ಬಗ್ಗೆ ನಿರ್ಲಕ್ಷ್ಯ ತೋರಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಆಲಸ್ಯವೇ ಇದಕ್ಕೆ ಆಹಾರ. ಜವಾಬ್ದಾರಿಯೇ ಇದಕ್ಕೆ ಪರಿಹಾರ. ಎಚ್ಚರ ತಪ್ಪಿದ್ರೆ ಬೆನ್ನುಬಿಡದೆ ಕಾಡುವುದರಲ್ಲಿ ಅನುಮಾನವೇ ಇಲ್ಲ. ಅಂತಹದೊಂದು ಅಪಾಯಕಾರಿ ಕಾಯಿಲೆ ಎಂದರೆ ಅದು ಡಯಾಬಿಟಿಸ್.

ಹೌದು, ಕಾಯಿಲೆ ಬಂದರೆ ಕೆಲವೇ ದಿನಗಳವರೆಗೆ ಇದ್ದು ಹೋಗಬೇಕು. ಆದರೆ ಇದು ಹಾಗಲ್ಲ. ಒಮ್ಮೆ ಶರೀರದ ಒಳಗೆ ಹೊಕ್ಕರೆ ಸಾಯುವರೆಗೂ ನರಳಾಟವನ್ನು ಪಡಬೇಕು. ಜೀವನದುದ್ದಕ್ಕೂ ಜಿಗುಪ್ಸೆ ಹುಟ್ಟಿಸುವ ಕಾಯಿಲೆಗಳಲ್ಲಿ ಮಧುಮೇಹವು ಒಂದಾಗಿದೆ. ಪ್ರಸ್ತುತ ವಿಶ್ವದೆಲ್ಲೆಡೆ ಮಧುಮೇಹಿಗಳ ಸಂಖ್ಯೆಯು ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. 30 ವರ್ಷ ದಾಟುತ್ತಿದ್ದಂತೆ ಇದು ಸಾಂಕ್ರಾಮಿಕ ರೋಗದಂತೆ ಆವರಿಸಿಕೊಳ್ಳುತ್ತದೆ. ಇದರ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಅಂತಾರಾಷ್ಟ್ರೀಯ ಮಧುಮೇಹ ಒಕ್ಕೂಟ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ ಸಹಯೋಗದಲ್ಲಿ 1991 ರಿಂದ ಪ್ರತಿ ನವೆಂಬರ್ 14 ರಂದು ವಿಶ್ವ ಮಧುಮೇಹ ದಿನವೆಂದು ಆಚರಿಸಲಾಗುತ್ತದೆ.

ಮಧುಮೇಹ ಜನನ ತಾಳುವುದೇ ಅವಶ್ಯಕತೆಗೂ ಮೀರಿ ತಿನ್ನುವುದರಿಂದ.. ಡಯಾಬಿಟಿಸ್ ನಿಯಂತ್ರಿಸಲು ಇಂತಹದ್ದೇ ಆಹಾರವನ್ನು ತೆಗೆದುಕೊಳ್ಳಬೇಕೆನ್ನುವ ಅವಶ್ಯಕತೆಯಿಲ್ಲ. ಉತ್ತರ ಕರ್ನಾಟಕದ ಹಾಗೆ ರಾಗಿ ಮುದ್ದೆ, ಚಪಾತಿ, ರೋಟಿಗಳನ್ನು ತಿನ್ನುವ ಅನಿವಾರ್ಯತೆಯೂ ಇಲ್ಲ. ಸೇವಿಸುವ ಆಹಾರಗಳಲ್ಲಿ ಮಾರ್ಪಾಡು ಮಾಡುವ ಅಗತ್ಯವಿರುವುದಿಲ್ಲ. ಆದರೆ ಮಧುಮೇಹ ಜನನ ತಾಳುವುದೇ ಅವಶ್ಯಕತೆಗೂ ಮೀರಿ ತಿನ್ನುವುದರಿಂದ. ಆಹಾರದ ಸೇವನೆಯ ಮೇಲೆ ನಿಯಂತ್ರಿತ ತಪ್ಪಿದಾಗ ಕೊನೆಯವರೆಗೂ ವ್ಯಥೆಪಡಬೇಕಾಗುವುದು. ಇದನ್ನ ಹೇಳ್ತಾಯಿರೋದು ನಾವಲ್ಲ. ಸ್ವತಃ ಡಯಾಬಿಟಿಸ್ ತಜ್ಞ ಡಾ.ಪ್ರವೀಣ್ ಕುಮಾರ್ ದೇವರು ವಿವರಿಸಿದ್ದಾರೆ.

ಸಾಮಾನ್ಯವಾಗಿ ಮಧುಮೇಹ ವಯಸ್ಕರಲ್ಲಿ ಬರುವ ಕಾಯಿಲೆಯಾಗಿದ್ದು, ಪ್ರಸ್ತುತ ಪಾಶ್ಚಿಮಾತ್ಯದಿಂದ 6 ವರ್ಷದ ಮಗುವಿಂದ ಹಿಡಿದು ವೃದ್ಧರವರೆಗೂ ಕಾಣಿಸುತ್ತಿದೆ. ವಯಸ್ಕರಲ್ಲಿ ಬರುವ ಕಾಯಿಲೆಗೆ ಟೈಪ್ 2 ಎಂತಲೂ, ಮಕ್ಕಳಲ್ಲಿ ಕಂಡುಬರುವ ಮಧುಮೇಹಕ್ಕೆ ಟೈಪ್ 1 ಎಂತಲೂ ಕರೆಯಲಾಗುತ್ತದೆ. ಆದರೆ ಇತ್ತೀಚೆಗೆ 12 ರಿಂದ 14 ವರ್ಷದ ಮಕ್ಕಳಲ್ಲೂ ಟೈಪ್ 2 ಡಯಾಬಿಟಿಸ್ ಕಾಣಿಸುವುದು ಸದ್ಯಕ್ಕೆ ಅಘಾತಕಾರಿ ವಿಷಯ ಎಂದು ತಜ್ಞರು ತಿಳಿಸಿದರು.

ಡಯಾಬಿಟಿಸ್‌ಗೆ ಪ್ರಮುಖ ಕಾರಣ ಇಲ್ಲಿದೆ: ಗ್ರಾಮೀಣ ಜನರಿಗೆ ಹೋಲಿಸಿದರೆ ನಗರ ವಾಸಿಗಳಿಗೆ ಮಧುಮೇಹ ಕಾಣಿಸಿಕೊಳ್ಳುತ್ತದೆ. ದೇಹವನ್ನು ದಂಡಿಸಿ ಕೆಲಸ ಮಾಡಲು ನಗರಗಳಲ್ಲಿ ಅವಕಾಶಗಳು ಕಡಿಮೆ. ಕಂಪ್ಯೂಟರ್ ಮುಂದೆ ಕುಳಿತು ಮಾಡುವ ಕೆಲಸದ ಒತ್ತಡದಿಂದ ನಗರದ ಜನರು ಬೇಗ ಕಾಯಿಲೆಗಳಿಗೆ ಒಳಗಾಗುತ್ತಾರೆ. ಇನ್ನು ತಂದೆ-ತಾಯಿಯಂತಹ ಕುಟುಂಬದ ಸದಸ್ಯರಿಗೆ ಈ ಮಧುಮೇಹ ಇದ್ದರೆ ಇತರರಿಗೂ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಆಹಾರದಲ್ಲಿ ನಿಯಂತ್ರಣದ ಸಮಸ್ಯೆಯೆ ಈ ಕಾಯಿಲೆಗೆ ಮುಖ್ಯ ಕಾರಣ. ಒತ್ತಡದಿಂದ ಹೊರಬರಲು ಸ್ನೇಹಿತರೊಂದಿಗೆ ಅಥವಾ ಕುಟುಂಬದವರೊಂದಿಗೆ ಬೆರೆಯುವುದು ಕಾಯಿಲೆಗೆ ಔಷಧಿ ಇದ್ದಂತೆ ಎಂದರು.

ಡಯಾಬಿಟಿಸ್ ಹೇಗೆ ಬರುತ್ತದೆ? ಮನುಷ್ಯರ ಹೊಟ್ಟೆಯಲ್ಲಿರುವ ಪ್ಯಾಂಕ್ರಿಯಾಸ್ ಗ್ರಂಥಿಯು ಉತ್ಪತ್ತಿ ಮಾಡುವ ಇನ್ಸುಲಿನ್ ಎಂಬ ಹಾರ್ಮೋನ್ ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತದೆ. ಮನುಷ್ಯ ಆಹಾರ ಸೇವಿಸಿದಾಗ, ಇನ್ನೊಂದು ರೂಪದ ಗ್ಲೂಕೋಸ್ ಉತ್ಪತ್ತಿಯಾಗಿ ರಕ್ತದೊಡನೆ ಬೆರೆಯುತ್ತದೆ. ಇನ್ಸುಲಿನ್ ಮುಖಾಂತರ ದೇಹದ ಜೀವಕೋಶಗಳನ್ನು ಗ್ಲೂಕೋಸ್ ತಲುಪುತ್ತದೆ. ದೇಹದಲ್ಲಿ ಗ್ಲೂಕೋಸ್ ಪ್ರಮಾಣ ನಿಯಂತ್ರಣ ವ್ಯವಸ್ಥೆಯಲ್ಲಿ ಏರುಪೇರಾದಾಗ ಕಾಣಿಸುವ ಕಾಯಿಲೆಯೇ ಮಧುಮೇಹ.

ಆಹಾರ ಪದ್ದತಿ ಹೇಗಿರಬೇಕು? ಪೌಷ್ಟಿಕಾಂಶ ಆಹಾರವನ್ನು ತ್ಯಜಿಸಿ ಬಾಯಿಗೆ ರುಚಿ ಸಿಗುವ ಜಂಕ್ ಫುಡ್‌ಗಳತ್ತ ಮುಖ ಮಾಡಿರುವ ಆಧುನಿಕ ಜನತೆಗೆ ಈ ಮಧುಮೇಹ ಸುಲಭವಾಗಿ ಆವರಿಸಿಕೊಳ್ಳುತ್ತದೆ. ದಿನನಿತ್ಯದ ಕಾರ್ಬೋಹೈಡ್ರೇಟ್ ಪ್ರಮಾಣವನ್ನು ಕಡಿಮೆಗೊಳಿಸಿ ನಿಧಾನವಾಗಿ ಜೀರ್ಣವಾಗುವ ಆಹಾರವನ್ನು ತೆಗೆದುಕೊಳ್ಳುವುದು ಒಳ್ಳೆಯ ಅಭ್ಯಾಸ. ಬೆಳಿಗ್ಗೆ ಕಾಲಿ ಹೊಟ್ಟೆಯಲ್ಲಿ ಮತ್ತು ದಿನಕ್ಕೆ ಕನಿಷ್ಟ 3 ರಿಂದ 4 ಲೀಟರ್ ನೀರನ್ನು ಕುಡಿಯುವ ಅಭ್ಯಾಸವನ್ನು ರೂಢಿಸಿಕೊಳ್ಳುವುದು ಹೆಚ್ಚು ಸೂಕ್ತ. ಮದ್ಯಪಾನವನ್ನು ಮತ್ತು ಧೂಮಪಾನವನ್ನು ಸೇವಿಸುವುದರಿಂದ ಸುಲಭವಾಗಿ ಮಧುಮೇಹ ದೇಹವನ್ನು ಆವರಿಸಿಕೊಳ್ಳುತ್ತದೆ ಎಂದು ಸ್ಪಷ್ಟಪಡಿಸಿದರು.

ವ್ಯಾಯಾಮ ಅಥವಾ ಯೋಗದಿಂದ ಡಯಾಬಿಟಿಸ್ ತಡೆಗಟ್ಟಬಹುದು. ಹೇಗೆ? ಸರ್ವ ಕಾಯಿಲೆಗೆ ವ್ಯಾಯಾಮವೇ ಮದ್ದು. ದಿನಕ್ಕೆ ಕನಿಷ್ಟ 30 ರಂತೆ ವಾರಕ್ಕೆ 150 ನಿಮಿಷಗಳ ಕಾಲ ವ್ಯಾಯಾಮ ಮಾಡುವ ಮೂಲಕ ಆರೋಗ್ಯದ ಸಮತೋಲವನ್ನು ಕಾಪಾಡಬಹುದು. ದಿನದಿನತ್ಯದ ಚಟುವಟಿಕೆಯಲ್ಲಿ ಯೋಗಕ್ಕಾಗಿ ಸಮಯವನ್ನು ಮೀಸಲಿಟ್ಟರೆ ಜೀವನ ಪೂರ್ತಿ ಮಧುಮೇಹದಿಂದ ದೂರವಿರಬಹುದು. ಅತಿಯಾದ ತೂಕವನ್ನು ಕಡಿಮೆಗೊಳಿಸಲು ಇರುವ ಸೂಕ್ತ ಮಾರ್ಗ ವ್ಯಾಯಾಮ. ಪ್ರತಿದಿನ ಬೆಳಿಗ್ಗೆ ಕಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡುವ ಮೂಲಕ ಕೊಲೆಸ್ಟ್ರಾಲ್ ಕರಗಿಸಬಹುದು. ತೂಕದ ಹೆಚ್ಚಳದಿಂದ ನಾನಾ ಕಾಯಿಲೆಗಳು ಉದ್ಭವಿಸುತ್ತದೆ. ಹಾಗಾಗಿ ತೂಕದ ಮೇಲೆ ನಿಯಂತ್ರಣವಿದ್ದರೆ ಕಡಿಮೆ ಸಮಯದಲ್ಲಿ ಇದರಿಂದ ಹೊರಬರಬಹುದು ಎಂದರು.

ಈ ಲಕ್ಷಣಗಳು ಕಂಡುಬಂದರೆ ನಿರ್ಲಕ್ಷ್ಯ ಬೇಡ: ಮಧುಮೇಹ ಇರುವ ಹಲವರಿಗೆ ಇದರ ಲಕ್ಷಣಗಳು ಕಾಣಿಸುವುದಿಲ್ಲ. ಅತಿಯಾದ ಬಾಯಾರಿಕೆ, ವಿಪರೀತ ಮೂತ್ರವಿಸರ್ಜನೆ, ತಕ್ಷಣ ದೇಹದ ತೂಕ ಕಡಿಮೆಯಾಗುವುದು, ಹೆಚ್ಚು ಹಸಿವು, ಬೆವರು, ಸುಸ್ತು, ದೃಷ್ಟಿ ಮಂಜಾಗುವುದು, ಗಾಯ ಬೇಗ ವಾಸಿಯಾಗದೆ ಇರುವುದು, ಚರ್ಮ ಗಡಸಾಗುವುದು ಡಯಾಬಿಟಿಸ್ ನ ಪ್ರಮುಖ ಲಕ್ಷಣಗಳಾಗಿವೆ ಎಂದರು.

ಕೊರೊನಾ ವೇಳೆಯಲ್ಲಿ ಡಯಾಬಿಟಿಸ್: ಡಯಾಬಿಟಿಸ್ ನಿಂದ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುವಲ್ಲಿ ಯಾವುದೇ ಮೂಲ ಆಧಾರಗಳಿಲ್ಲ. ಆದರೆ ಸಾಮಾನ್ಯವಾಗಿ ಕೊರೊನಾ ಪೀಡಿತರಲ್ಲಿ ಡಯಾಬಿಟಿಸ್ ಕಾಣಿಸುತ್ತದೆ. ಬಹಳಷ್ಟು ಜನರಿಗೆ ಕೊರೊನಾ ಪರೀಕ್ಷೆ ನಡೆಸಿದ ನಂತರ ಮಧುಮೇಹವಿರುವುದು ತಿಳಿಯುತ್ತದೆ ಎಂದು ವೈದ್ಯರು ಸ್ಪಷ್ಟಪಡಿಸಿದರು. ಹಾಗಾಗಿ ಮಧುಮೇಹಿಗಳು 3 ತಿಂಗಳಿಗೊಮ್ಮೆ ವೈದ್ಯರೊಂದಿಗೆ ಪರೀಕ್ಷಿಸಿಕೊಳ್ಳಬೇಕು. ನಿರ್ಲಕ್ಷತನದಿಂದ ಕಿಡ್ನಿಗೆ ತೊಂದರೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ ಎಂಬ ಎಚ್ಚರಿಕೆಯನ್ನು ಕೂಡ ನೀಡಿದರು.

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ