ಈ ವೆಬ್ ಸಿರೀಸ್ಗಳಲ್ಲಿದೆಯಂತೆ ಅಡಲ್ಟ್ ಕಂಟೆಂಟ್! Adult contents on OTT platforms, web series
ಓಟಿಟಿ ಪ್ಲಾಟ್ಫಾರ್ಮ್ ಮತ್ತು ಡಿಜಿಟಲ್ ಸುದ್ದಿತಾಣಗಳಿಗೆ ಸರ್ಕಾರ ಲಗಾಮು ಹಾಕಿದೆ. ಇದರ ಬೆನ್ನಲ್ಲೇ ಓಟಿಟಿಯಲ್ಲಿ ಪ್ರಸಾರವಾಗುತ್ತಿದ್ದ ವೆಬ್ ಸಿರೀಸ್ಗಳಲ್ಲಿ ಯಾವು ಹೆಚ್ಚು ಅಡಲ್ಟ್ ಕಂಟೆಂಟುಗಳನ್ನು ಹೊಂದಿದ್ದವು ಎನ್ನುವುದನ್ನು ನಮ್ಮ ಟಿವಿ9 ಡಿಜಿಟಲ್ ನಿಮ್ಮೆದುರು ಬಿಚ್ಚಿಡಲಿದೆ. ಮುಂಬರುವ ದಿನಗಳಲ್ಲಿ ಅಡಲ್ಟ್ ಕಂಟೆಂಟ್ವುಳ್ಳ ವೆಬ್ ಸಿರೀಸ್ಗಳಿಗೆ ಕಡಿವಾಣ ಬೀಳಲಿದೆ ಎಂದೇ ಹೇಳಲಾಗುತ್ತಿದೆ. ಗಂಧಿ ಬಾತ್ ಏಕ್ತಾ ಕಪೂರ್ ಒಡೆತನದ ಆಲ್ಟ್ ಬಾಲಾಜಿ ಪ್ಲಾಟ್ಫಾರ್ಮ್, ಅಡಲ್ಟ್ ಕಂಟೆಂಡ್ ಕೇಂದ್ರವಾಗಿರಿಸಿಕೊಂಡು ವೆಬ್ ಸಿರೀಸ್ಗಳನ್ನು ನಿರ್ಮಿಸಿ ಬಿಡುಗಡೆ ಮಾಡಿದೆ. ಈ ಸಂಸ್ಥೆಯ ‘ಗಂಧಿ ಬಾತ್’ […]
ಓಟಿಟಿ ಪ್ಲಾಟ್ಫಾರ್ಮ್ ಮತ್ತು ಡಿಜಿಟಲ್ ಸುದ್ದಿತಾಣಗಳಿಗೆ ಸರ್ಕಾರ ಲಗಾಮು ಹಾಕಿದೆ. ಇದರ ಬೆನ್ನಲ್ಲೇ ಓಟಿಟಿಯಲ್ಲಿ ಪ್ರಸಾರವಾಗುತ್ತಿದ್ದ ವೆಬ್ ಸಿರೀಸ್ಗಳಲ್ಲಿ ಯಾವು ಹೆಚ್ಚು ಅಡಲ್ಟ್ ಕಂಟೆಂಟುಗಳನ್ನು ಹೊಂದಿದ್ದವು ಎನ್ನುವುದನ್ನು ನಮ್ಮ ಟಿವಿ9 ಡಿಜಿಟಲ್ ನಿಮ್ಮೆದುರು ಬಿಚ್ಚಿಡಲಿದೆ. ಮುಂಬರುವ ದಿನಗಳಲ್ಲಿ ಅಡಲ್ಟ್ ಕಂಟೆಂಟ್ವುಳ್ಳ ವೆಬ್ ಸಿರೀಸ್ಗಳಿಗೆ ಕಡಿವಾಣ ಬೀಳಲಿದೆ ಎಂದೇ ಹೇಳಲಾಗುತ್ತಿದೆ.
ಗಂಧಿ ಬಾತ್
ಏಕ್ತಾ ಕಪೂರ್ ಒಡೆತನದ ಆಲ್ಟ್ ಬಾಲಾಜಿ ಪ್ಲಾಟ್ಫಾರ್ಮ್, ಅಡಲ್ಟ್ ಕಂಟೆಂಡ್ ಕೇಂದ್ರವಾಗಿರಿಸಿಕೊಂಡು ವೆಬ್ ಸಿರೀಸ್ಗಳನ್ನು ನಿರ್ಮಿಸಿ ಬಿಡುಗಡೆ ಮಾಡಿದೆ. ಈ ಸಂಸ್ಥೆಯ ‘ಗಂಧಿ ಬಾತ್’ ಅತ್ಯಂತ ಜನಪ್ರಿಯ ವೆಬ್ ಸಿರೀಸ್ಗಳಲ್ಲೊಂದು. ಜಿ5ನಲ್ಲೂ ಲಭ್ಯವಿರುವ ಈ ಸಿರೀಸ್ನ 5 ಸರಣಿಗಳು ಇದುವರೆಗೆ ಪ್ರಸಾರವಾಗಿವೆ. ರಾಗಿಣಿ ಎಂಎಂಎಸ್ ರಿಟರ್ನ್ಸ್, ದೇವ್ ಡಿಡಿ ಮುಂತಾದ ಸರಣಿಗಳನ್ನು ಸಹ ಬಾಲಾಜಿ ಪ್ಲಾಟ್ಫಾರ್ಮ್ ನಿರ್ಮಿಸಿದ್ದು ಅವುಗಳಲ್ಲೂ ಹೇರಳವಾದ ಅಡಲ್ಟ್ ಕಂಟೆಂಟ್ ಇದೆ.
ಸೇಕ್ರೆಡ್ ಗೇಮ್ಸ್
ಭಾರತದಲ್ಲಿ ಓಟಿಟಿಗೆ ಅದ್ಭುತವಾದ ವೇದಿಕೆ ಸೃಷ್ಟಿಸಿದ ಹಿರಿಮೆ ಈ ವೆಬ್ ಸಿರೀಸ್ನದ್ದು. ನೆಟ್ಫ್ಲಿಕ್ಸ್ ನಿರ್ಮಿಸಿದ ಈ ಸರಣಿಯಲ್ಲಿ ಬಾಲಿವುಡ್ನ ಖ್ಯಾತ ನಟರಾದ ಸೈಫ್ ಅಲಿ ಖಾನ್, ನವಾಜುದ್ದೀನ್ ಸಿದ್ದಿಕಿ, ರಾಧಿಕಾ ಆಪ್ಟೆ ಮುಂತಾದವರು ಕಾಣಿಸಿಕೊಂಡಿದ್ದಾರೆ.
ಸೆಕ್ರೆಡ್ ಗೇಮ್ಸ್ ಎರಡು ಕಂತುಗಳಲ್ಲಿ ಪ್ರಸಾರವಾಗಿದ್ದು ಮೂರನೇ ಭಾಗದ ಬಿಡುಗಡೆಗೆಯನ್ನು ಲಕ್ಷಾಂತರ ಜನ ಕಾತುರದಿಂದ ಎದುರು ನೋಡುತ್ತಿದ್ದಾರೆ.
ಪೋಲಿಸರಿಂದ ಸಮನ್ಸ್!
ವೆಬ್ ಸಿರೀಸ್ಗಳಲ್ಲಿ ಅಡಲ್ಟ್ ಕಂಟೆಂಟುಗಳ ಮೂಲಕ ಅಶ್ಲೀಲತೆಯನ್ನು ಪ್ರದರ್ಶಿಸಿರುವ ಆಲ್ಟ್ ಬಾಲಾಜಿ, ಪ್ರೈಮ್ ಫ್ಲಿಕ್ಸ್, ಉಲ್ಲು, ಚಿಕೂಫ್ಲಿಕ್ಸ್, ನಿಯೋಫ್ಲಿಕ್ಸ್ ಮುಂತಾದ ಓಟಿಟಿ ತಾಣಗಳಿಗೆ ನವೆಂಬರ್ 10 ರಂದು ಮಹಾರಾಷ್ಟ್ರ ಪೋಲಿಸ್ ಸಮನ್ಸ್ ಜಾರಿಗೊಳಿಸಿತ್ತು.
ಅಡಲ್ಟ್ ಕಂಟೆಂಟ್ ಅಡಕವಾಗಿರುವ ಮತ್ತೂ ಕೆಲವು ವೆಬ್ ಸಿರೀಸ್ಗಳೆಂದರೆ ದೇವ್ ಡಿಡಿ, ಸ್ಪಾಟ್ಲೈಟ್, ಮಾಯಾ, ಟ್ವಿಸ್ಟೆಡ್, ಐ ಲವ್ ಅಸ್, ರೇನ್ ಇತ್ಯಾದಿ. ಈ ಸರಣಿಗಳಿಗೆ ಲಾಕ್ಡೌನ್ ಸಮಯದಲ್ಲಿ ವೀಕ್ಷಕರ ಸಂಖ್ಯೆ ಹೆಚ್ಚಳವಾಗಿತ್ತು ಎನ್ನುವುದು ಗಮನಾರ್ಹ.