ದೀಪಾವಳಿ ವೇಳೆ ಗೂಬೆ ಪೂಜೆ: ಲಕ್ಷ್ಮೀ ವಾಹನ ಎಂದು ತಿಳಿದಿದ್ದೂ ಕೊಲ್ತಾರೆ.. ಏಕೆ ಇಂತಹ ದುಷ್ಕೃತ್ಯ?
ಉತ್ತರಾಖಂಡ: ದೀಪಾವಳಿಯಲ್ಲಿ ಲಕ್ಷ್ಮೀ ದೇವಿಯ ವಾಹನವಾದ ಗೂಬೆಯನ್ನು ಪೂಜಿಸುವುದು ಹಬ್ಬದ ವೀಶೇಷತೆಗಳಲ್ಲೊಂದು. ಅದರಲ್ಲಿಯೂ ಭಾರತದಲ್ಲಿ ಲಕ್ಷ್ಮೀಯ ವಾಹನವನ್ನು ಪೂಜಿಸುವುದು ಸಾಂಪ್ರದಾಯಿಕವಾಗಿ ಬಂದ ಪದ್ಧತಿಯಾಗಿದೆ. ಭಾರತದಲ್ಲಿ ಪೂಜಿಸಲ್ಪಡುವ 24 ಕ್ಕಿಂತಲೂ ಅಧಿಕ ಜಾತಿಯ ಗೂಬೆಗಳು ಉತ್ತರಾಖಂಡದ ಕಾಡುಗಳಲ್ಲಿ ವಾಸಿಸುತ್ತಿವೆ. ದುರಾದೃಷ್ಟವಶಾತ್, ಬೇಟೆಗಾರಿಕೆಯಲ್ಲಿ ಈ ಪಕ್ಷಿಗಳನ್ನು ಗುರಿಯಾಗಿಸಿಕೊಳ್ಳುತ್ತಿರುವುದು ವಿಪರ್ಯಾಸ. ದೀಪಾವಳಿ ಹಬ್ಬ ಬರುತ್ತಿದ್ದಂತೆ, ಗೂಬೆಗಳಿಗೆ ಪ್ರಾಣ ಭೀತಿ ಉಂಟಾಗುತ್ತಿದೆ. ಗೂಬೆಯನ್ನು, ಲಕ್ಮಿ ದೇವತೆಗಾಗಿ ಬಲಿ ಕೊಡುವುದರ ಮೂಲಕ, ಸಂಪತ್ತು ಸಮೃದ್ಧಿಗೊಳ್ಳುತ್ತವೆ ಎಂಬ ಮೂಢನಂಬಿಕೆಗೆ ಮೊರೆ ಹೋಗಿ, ಗೂಬೆಗಳ ಮೂಳೆಗಳು, ಉಗುರುಗಳು […]
ಉತ್ತರಾಖಂಡ: ದೀಪಾವಳಿಯಲ್ಲಿ ಲಕ್ಷ್ಮೀ ದೇವಿಯ ವಾಹನವಾದ ಗೂಬೆಯನ್ನು ಪೂಜಿಸುವುದು ಹಬ್ಬದ ವೀಶೇಷತೆಗಳಲ್ಲೊಂದು. ಅದರಲ್ಲಿಯೂ ಭಾರತದಲ್ಲಿ ಲಕ್ಷ್ಮೀಯ ವಾಹನವನ್ನು ಪೂಜಿಸುವುದು ಸಾಂಪ್ರದಾಯಿಕವಾಗಿ ಬಂದ ಪದ್ಧತಿಯಾಗಿದೆ. ಭಾರತದಲ್ಲಿ ಪೂಜಿಸಲ್ಪಡುವ 24 ಕ್ಕಿಂತಲೂ ಅಧಿಕ ಜಾತಿಯ ಗೂಬೆಗಳು ಉತ್ತರಾಖಂಡದ ಕಾಡುಗಳಲ್ಲಿ ವಾಸಿಸುತ್ತಿವೆ. ದುರಾದೃಷ್ಟವಶಾತ್, ಬೇಟೆಗಾರಿಕೆಯಲ್ಲಿ ಈ ಪಕ್ಷಿಗಳನ್ನು ಗುರಿಯಾಗಿಸಿಕೊಳ್ಳುತ್ತಿರುವುದು ವಿಪರ್ಯಾಸ.
ದೀಪಾವಳಿ ಹಬ್ಬ ಬರುತ್ತಿದ್ದಂತೆ, ಗೂಬೆಗಳಿಗೆ ಪ್ರಾಣ ಭೀತಿ ಉಂಟಾಗುತ್ತಿದೆ. ಗೂಬೆಯನ್ನು, ಲಕ್ಮಿ ದೇವತೆಗಾಗಿ ಬಲಿ ಕೊಡುವುದರ ಮೂಲಕ, ಸಂಪತ್ತು ಸಮೃದ್ಧಿಗೊಳ್ಳುತ್ತವೆ ಎಂಬ ಮೂಢನಂಬಿಕೆಗೆ ಮೊರೆ ಹೋಗಿ, ಗೂಬೆಗಳ ಮೂಳೆಗಳು, ಉಗುರುಗಳು ಮತ್ತು ಗರಿಗಳನ್ನು ಸಂಗ್ರಹಿಸುತ್ತಿದ್ದಾರೆ. ಮತ್ತು ಬೇಟೆಗಾರರು ಅಕ್ರಮವಾಗಿ ಅವುಗಳನ್ನೆಲ್ಲ ಮಾರಾಟ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ದೀಪಾವಳಿಯ ರಾತ್ರಿ ಬೇಟೆಗಾರರು, ಮಾಂತ್ರಿಕರು ಇಂತಹ ಆಚರಣೆಗಳನ್ನು ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಉತ್ತರಾಖಂಡದ ಅರಣ್ಯ ಇಲಾಖೆ ಅನುಮಾನಾಸ್ಪದ ಚಟುವಟಿಕೆಯನ್ನು ಪತ್ತೆ ಹಚ್ಚಲು ಕಾಡುಗಳಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಕಳ್ಳ ಬೇಟೆಗಾರರನ್ನು ಸೆರೆಹಿಡಿಯಲು ಮುನ್ನಚ್ಚರಿಕೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದೆ. ಉತ್ತರಾಖಂಡ ಅರಣ್ಯದಲ್ಲಿ ವಾಸಿಸುತ್ತಿರುವ, ವನ್ಯಜೀವಿಗಳನ್ನು ಬೇಟೆಯಾಡುವುದರ ಕುರಿತಾಗಿ, ಸಂರಕ್ಷಣಾವಾದಿಗಳು 10 ವರ್ಷಗಳಿಂದ ತಮ್ಮ ಹೋರಾಟ/ವಾದವನ್ನು ಮಂಡಿಸುತ್ತಲೇ ಬಂದಿದ್ದಾರೆ. ಆದರೆ ಯಾವುದೇ ಕ್ರಮಗಳಾಗಲೀ, ಈ ರೀತಿಯ ದುಷ್ಕೃತ್ಯಗಳಿಗೆ ಕಡಿವಾಣವಾಗಲೀ ಬಿದ್ದಿಲ್ಲ. 2019 ರಲ್ಲಿ ರಾಜ್ಯದಲ್ಲಿ 47 ಬೇಟೆಯಾಡುವ ಪ್ರಕರಣಗಳು ಸೇರಿದಂತೆ ಒಟ್ಟು 138 ವನ್ಯಜೀವಿ ಅಪರಾಧ ಘಟನೆಗಳು ದಾಖಲಾಗಿವೆ. ಈ ವರ್ಷ, ಅಕ್ಟೋಬರ್ 31ರವರೆಗೆ 88 ವನ್ಯಜೀವಿ ಅಪರಾಧ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 37 ಪ್ರಕರಣಗಳು ಬೇಟೆಗೆ ಸಂಬಂಧಿಸಿವೆ. ಆದರೆ ಗೂಬೆಯ ಶಿಕಾರಿಗೆ ಯಾವುದೇ ಪ್ರಕರಣಗಳು ದಾಖಲಾಗಿಲ್ಲ ಎಂಬುವುದು ವಿಪರ್ಯಾಸ.
ಉತ್ತರಾಖಂಡದ ಹಲ್ಡ್ವಾನಿ ಶ್ರೇಣಿಯ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು, “ಗೂಬೆಗಳನ್ನು ಬೇಟೆಯಾಡುವ ಬಗ್ಗೆ ಯಾವುದೇ ನಿರ್ದಿಷ್ಟ ನೋಂದಾಯಿತ ಪ್ರಕರಣಗಳು ಇಲ್ಲದಿರಬಹುದು, ಆದರೆ ಬೇಟೆಯಾಡುವ ಸಾಧ್ಯತೆಗಳು ದೀಪಾವಳಿಯ ಸಮಯದಲ್ಲಿ ಖಂಡಿತವಾಗಿಯೂ ಹೆಚ್ಚಾಗುತ್ತವೆ” ಎಂದು ಹೇಳಿದ್ದಾರೆ.
ಮೂಢನಂಬಿಕೆಗಳಿಗೆ ಜನರು ಆಸ್ಪದ ಕೊಡುವುದನ್ನು ನಿಲ್ಲಿಸಬೇಕು. ಯಾವುದೇ ಪ್ರಾಣಿಯನ್ನು ಹತ್ಯೆಗೈಯ್ಯುವ ಮೂಲಕ ದೇವರಿಗೆ ಇಷ್ಟಾರ್ಥ ಪೂರೈಸಿದಂತೆ ಎಂದು ಜನರು ಏಕೆ ನಂಬುತ್ತಿದ್ದಾರೆ? ನಮ್ಮಂತೆಯೇ ಜೀವಿಗಳಿಗೆ ಜೀವವಿದೆ. ಅವರನ್ನು ಅವರ ಪಾಡಿಗೆ ಬದುಕಲು ಬಿಟ್ಟುಬಿಡಬೇಕು ಎಂದು tv9 ಡಿಜಿಟಲ್ ಬಯಸುತ್ತದೆ.
Published On - 1:20 pm, Sat, 14 November 20