ಒಂದೇ ಫ್ರೇಮ್​ನಲ್ಲಿ ರಾಷ್ಟ್ರ ಪ್ರಾಣಿ-ರಾಷ್ಟ್ರ ಪಕ್ಷಿ! ಈ ಫೋಟೋಗೆ ಸಿಕ್ತು ಪ್ರಥಮ ಬಹುಮಾನ

| Updated By: ಸಾಧು ಶ್ರೀನಾಥ್​

Updated on: Oct 13, 2020 | 2:07 PM

ಮೈಸೂರು: 66ನೇ ವನ್ಯ ಜೀವಿ ಸಪ್ತಾಹದ ಅಂಗವಾಗಿ ನಾಗರಹೊಳೆ ಅರಣ್ಯ ಇಲಾಖೆ ವತಿಯಿಂದ ಆಯೋಜನೆ ಮಾಡಲಾಗಿದ್ದ ಛಾಯಾಗ್ರಹಣ ಸ್ಪರ್ಧೆಯ ಬಹುಮಾನವನ್ನು ಅರಣ್ಯ ಇಲಾಖೆ ಘೋಷಣೆ ಮಾಡಿದೆ. ಅದರಲ್ಲಿ ಅನಿಲ್ ಅಂತರಸಂತೆ ಎಂಬುವವರ ಕ್ಯಾಮರಾಕ್ಕೆ ಸೆರೆ ಸಿಕ್ಕಿದ್ದ ಹುಲಿ ಹಾಗೂ ನವಿಲು ಒಂದೆ ಫ್ರೇಮ್​ನಲ್ಲಿದ್ದ ಫೋಟೋಗೆ ಪ್ರಥಮ ಬಹುಮಾನ ಸಿಕ್ಕಿದೆ. ವನ್ಯ ಜೀವಿ ಸಪ್ತಾಹ ಅಂಗವಾಗಿ ಛಾಯಾಗ್ರಹಣ, ರಸಪ್ರಶ್ನೆ, ಘೋಷವಾಕ್ಯ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿತ್ತು. ಸ್ಪರ್ಧೆಯಲ್ಲಿ ದೇಶದ ಮೂಲೆ ಮೂಲೆಗಳಿಂದ ಸಾಕಷ್ಟು ಸ್ಪರ್ಧಿಗಳು ಬಂದು ಭಾಗವಹಿಸಿದ್ದರು. ಅದರಲ್ಲಿ ಮೈಸೂರು […]

ಒಂದೇ ಫ್ರೇಮ್​ನಲ್ಲಿ ರಾಷ್ಟ್ರ ಪ್ರಾಣಿ-ರಾಷ್ಟ್ರ ಪಕ್ಷಿ! ಈ ಫೋಟೋಗೆ ಸಿಕ್ತು ಪ್ರಥಮ ಬಹುಮಾನ
Follow us on

ಮೈಸೂರು: 66ನೇ ವನ್ಯ ಜೀವಿ ಸಪ್ತಾಹದ ಅಂಗವಾಗಿ ನಾಗರಹೊಳೆ ಅರಣ್ಯ ಇಲಾಖೆ ವತಿಯಿಂದ ಆಯೋಜನೆ ಮಾಡಲಾಗಿದ್ದ ಛಾಯಾಗ್ರಹಣ ಸ್ಪರ್ಧೆಯ ಬಹುಮಾನವನ್ನು ಅರಣ್ಯ ಇಲಾಖೆ ಘೋಷಣೆ ಮಾಡಿದೆ.

ಅದರಲ್ಲಿ ಅನಿಲ್ ಅಂತರಸಂತೆ ಎಂಬುವವರ ಕ್ಯಾಮರಾಕ್ಕೆ ಸೆರೆ ಸಿಕ್ಕಿದ್ದ ಹುಲಿ ಹಾಗೂ ನವಿಲು ಒಂದೆ ಫ್ರೇಮ್​ನಲ್ಲಿದ್ದ ಫೋಟೋಗೆ ಪ್ರಥಮ ಬಹುಮಾನ ಸಿಕ್ಕಿದೆ. ವನ್ಯ ಜೀವಿ ಸಪ್ತಾಹ ಅಂಗವಾಗಿ ಛಾಯಾಗ್ರಹಣ, ರಸಪ್ರಶ್ನೆ, ಘೋಷವಾಕ್ಯ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿತ್ತು.

ಸ್ಪರ್ಧೆಯಲ್ಲಿ ದೇಶದ ಮೂಲೆ ಮೂಲೆಗಳಿಂದ ಸಾಕಷ್ಟು ಸ್ಪರ್ಧಿಗಳು ಬಂದು ಭಾಗವಹಿಸಿದ್ದರು. ಅದರಲ್ಲಿ ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಅಂತರಸಂತೆಯ ಯುವ ಛಾಯಾಗ್ರಹಕ ಸೆರೆ ಹಿಡಿದಿರುವ ಹುಲಿ ಹಾಗೂ ನವಿಲು ಇರುವ ಚಿತ್ರಕ್ಕೆ ಪ್ರಥಮ ಬಹುಮಾನ ಸಿಕ್ಕಿರುವುದು ವಿಶೇಷವಾಗಿದೆ.

ಇನ್ನು ದ್ವಿತೀಯ ಸ್ಥಾನವನ್ನು ಶ್ರೇಯಸ್ ದೇವನೂರು, ಅಕ್ಷಯ ಭಾರದ್ವಾಜ್ ಹಾಗೂ ಅಮಲ್ ಜಾರ್ಜ್ ಅವರ ಚಿತ್ರಗಳು ಪಡೆದುಕೊಂಡಿವೆ. ಮೂರನೇ ಸ್ಥಾನವನ್ನು ಅರವಿಂದ್ ಕಾರ್ತಿಕ್, ಹರ್ಷ ಹಾಗೂ ಶೇಷಾದ್ರಿ ಎನ್ನುವವರು ಪಡೆದುಕೊಂಡಿದ್ದಾರೆ. ಸಂರಕ್ಷಣ ವಿಭಾಗದಲ್ಲಿ ಆನೆಗಳು ನಗರ ಪ್ರದೇಶಕ್ಕೆ ಬಂದಿದ್ದ ಚಿತ್ರಕ್ಕೆ ಮಧುಸೂದನ್ ಅವರಿಗೆ ಪ್ರಶಸ್ತಿ ಲಭಿಸಿದೆ. ಸದ್ಯ ಅರಣ್ಯ ಇಲಾಖೆ ಪ್ರಶಸ್ತಿಯನ್ನು ತನ್ನ ವೆಬ್ ಸೈಟ್​ನಲ್ಲಿ ಪ್ರಕಟಿಸಿದೆ.