ನೆರೆಪೀಡಿತ ತೆಲಂಗಾಣ ರಾಜ್ಯಕ್ಕೆ ಎಮ್​ಇಐಎಲ್ ಸಂಸ್ಥೆಯಿಂದ ರೂ. 10 ಕೋಟಿ ನೆರವು

|

Updated on: Oct 19, 2020 | 8:41 PM

ಇತ್ತೀಚಿನ ವರ್ಷಗಳಲ್ಲ್ಲಿ ಕಂಡರಿಯದ ಭಾರಿ ಮಳೆ ಮತ್ತು ಪ್ರವಾಹದಿಂದ ತೆಲಂಗಾಣ ರಾಜ್ಯ ತತ್ತರಿಸಿಹೋಗಿದ್ದು ಲಕ್ಷಾಂತರ ಜನ ಮನೆಗಳನ್ನು ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಅವರಿಗೆ ಪುನರ್​ವಸತಿ ಒದಗಿಸುವುದರ ಜೊತೆ ಇತರ ಪರಿಹಾರ ಕಾರ್ಯಗಳಲ್ಲಿ ತೆಲಂಗಾಣ ಸರ್ಕಾರ ಸಮರೋಪಾದಿಯಲ್ಲಿ ತೊಡಗಿದೆ. ಏತನ್ಮಧ್ಯೆ, ರಾಜ್ಯದ ಮುಖ್ಯಮಂತ್ರಿ ಕೆ ಚಂದ್ರಶೇಖರ್ ಸಂತ್ರಸ್ತರಿಗೆ ನೆರವಾಗುವಂತೆ ಸಾರ್ವಜನಿಕರು, ಉದ್ಯಮಿಗಳು ಮತ್ತು ಕಾರ್ಪೊರೇಟ್​ಗಳಿಗೆ ಮಾಡಿರುವ ಮನವಿಗೆ ಕೂಡಲೇ ಸ್ಪಂದಿಸಿರುವ ಮೆಘಾ ಇಂಜಿನಿಯರಿಂಗ್ ಮತ್ತು ಇನ್​ಫ್ರಾಸ್ಟ್ರಕ್ಚರ್ಸ್ ಸಂಸ್ಥೆಯು (Megha Engineering and Infrastructures Limited) ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ರೂ. […]

ನೆರೆಪೀಡಿತ ತೆಲಂಗಾಣ ರಾಜ್ಯಕ್ಕೆ ಎಮ್​ಇಐಎಲ್ ಸಂಸ್ಥೆಯಿಂದ ರೂ. 10 ಕೋಟಿ ನೆರವು
Follow us on

ಇತ್ತೀಚಿನ ವರ್ಷಗಳಲ್ಲ್ಲಿ ಕಂಡರಿಯದ ಭಾರಿ ಮಳೆ ಮತ್ತು ಪ್ರವಾಹದಿಂದ ತೆಲಂಗಾಣ ರಾಜ್ಯ ತತ್ತರಿಸಿಹೋಗಿದ್ದು ಲಕ್ಷಾಂತರ ಜನ ಮನೆಗಳನ್ನು ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಅವರಿಗೆ ಪುನರ್​ವಸತಿ ಒದಗಿಸುವುದರ ಜೊತೆ ಇತರ ಪರಿಹಾರ ಕಾರ್ಯಗಳಲ್ಲಿ ತೆಲಂಗಾಣ ಸರ್ಕಾರ ಸಮರೋಪಾದಿಯಲ್ಲಿ ತೊಡಗಿದೆ.

ಏತನ್ಮಧ್ಯೆ, ರಾಜ್ಯದ ಮುಖ್ಯಮಂತ್ರಿ ಕೆ ಚಂದ್ರಶೇಖರ್ ಸಂತ್ರಸ್ತರಿಗೆ ನೆರವಾಗುವಂತೆ ಸಾರ್ವಜನಿಕರು, ಉದ್ಯಮಿಗಳು ಮತ್ತು ಕಾರ್ಪೊರೇಟ್​ಗಳಿಗೆ ಮಾಡಿರುವ ಮನವಿಗೆ ಕೂಡಲೇ ಸ್ಪಂದಿಸಿರುವ ಮೆಘಾ ಇಂಜಿನಿಯರಿಂಗ್ ಮತ್ತು ಇನ್​ಫ್ರಾಸ್ಟ್ರಕ್ಚರ್ಸ್ ಸಂಸ್ಥೆಯು (Megha Engineering and Infrastructures Limited) ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ರೂ. 10 ಕೋಟಿಗಳ ದೇಣಿಗೆ ನೀಡಿದೆ.

ತೆಲಂಗಾಣದ ರಾಜಧಾನಿ ಮತ್ತು ಭಾರತದ ಪ್ರಮುಖ ನಗರಗಳಲ್ಲೊಂದಾಗಿರುವ ಹೈದರಾಬಾದ್ ಸಹ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಕಂಗಾಲಾಗಿದ್ದು ಅನೇಕ ಮನೆಗಳು ಕುಸಿದು ಜನ ಬೀದಿಗೆ ಬಿದ್ದಿದ್ದಾರೆ.

‘‘ಹೈದರಾಬಾದನಲ್ಲಿ ಸುರಿಯುತ್ತಿರುವ ಐತಿಹಾಸಿಕ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ ಮತ್ತು ಸಾವಿರಾರು ಜನ ತಮ್ಮ ತಲೆ ಮೇಲಿನ ಸೂರುಗಳನ್ನು ಕಳೆದುಕೊಂಡಿದ್ದಾರೆ. ಒಂದು ಜವಾಬ್ದಾರಿಯುತ ಕಾರ್ಪೊರೇಟ್ ಅಗಿ ನಗರದಲ್ಲಿ ತೊಂದರೆಯಲ್ಲಿ ಸಿಲುಕಿರುವವರಿಗೆ ನೆರವಾಗುವ ಮೂಲಕ ಸರ್ಕಾರದ ಪರಿಹಾರ ಕೆಲಸಗಳಲ್ಲಿ ಕೈಜೋಡಿಸಲು ನಮಗೆ ಹೆಮ್ಮೆಯೆನಿಸುತ್ತಿದೆ,’’ ಎಂದು ಎಮ್ಇಐಎಲ್ ಸಂಸ್ಥೆಯು ಹೇಳಿಕೆಯೊಂದರಲ್ಲಿ ತಿಳಿಸಿದೆ.