Covid Warriors: ಹಸಿದವರ ಹೊಟ್ಟೆ ತಣ್ಣಗಿರಿಸಲು ನನ್ನದೊಂದು ಸಣ್ಣ ಪ್ರಯತ್ನ ಎನ್ನುತ್ತಾರೆ ಹರ್ಷಿತ್​

Coronavirus Warrior | Harshith | ಬೀದಿಗಳಲ್ಲಿ ತರಕಾರಿ ಅಂಗಡಿ ಅಥವಾ ಹಣ್ಣುಗಳ ಅಂಗಡಿ ಇಟ್ಟುಕೊಂಡವರಿಗೆ ವ್ಯಾಪಾರ ಆಗುತ್ತಿರಲಿಲ್ಲ. ಆ ದಿನ ದುಡಿದರೆ ಅವರಿಗೆ ಆ ದಿನ ಹಸಿವು ನೀಗುತ್ತದೆ. ನಮಗೆಲ್ಲಾ ಮನೆಗೆ ಬಂದರೆ ಊಟ ಸಿಗುತ್ತದೆ ಆದರೆ ಅವರಿಗೆ ವ್ಯಾಪಾರವಾದರೆ ಮಾತ್ರ ಅ ದಿನದ ಹಸಿವು ನೀಗುವುದು. ಇದನ್ನು ಗಮನಿಸಿದ ನನಗೆ ಉಚಿತವಾಗಿ ಊಟವನ್ನು ವಿತರಿಸಬೇಕು ಎಂದು ಮೊದಲು ಅನಿಸಿದ್ದು..

Covid Warriors: ಹಸಿದವರ ಹೊಟ್ಟೆ ತಣ್ಣಗಿರಿಸಲು ನನ್ನದೊಂದು ಸಣ್ಣ ಪ್ರಯತ್ನ ಎನ್ನುತ್ತಾರೆ ಹರ್ಷಿತ್​
ಹರ್ಷಿತ್

Updated on: May 26, 2021 | 3:51 PM

ಬಡತನ ಎಂಬುದು ಜನರನ್ನು ಕಿತ್ತು ತಿನ್ನುತ್ತಿದೆ. ಒಂದು ಹೊತ್ತು ಊಟಕ್ಕೆ ಕಷ್ಟಪಡುತ್ತಿರುವ ಜನರನ್ನು ನೋಡಿದರೆ ಕರುಳು ಕಿತ್ತು ಬರುತ್ತಿದೆ. ಹಸಿದು ನಾವು ಮನೆಗೆ ಬಂದಾಗ ಹಿಡಿ ಅನ್ನವನ್ನೋ ಅಥವಾ ಎದುರಿಗೆ ಸಿಕ್ಕ ಬ್ರೆಡ್​ ಜಾಮ್​ ಅನ್ನೋ ತಿಂದು ಹಸಿವು ನೀಗಿಸಿಕೊಳ್ಳುತ್ತೇವೆ. ಆದರೆ ಫುಟ್​ಪಾತ್​ಗಳಲ್ಲಿ ಸಣ್ಣ ಗೂಡಂಗಡಿಗಳನ್ನು ಇಟ್ಟುಕೊಂಡು ಬದುಕುತ್ತಿರುವರಿಗೆ ಅಂದಿನ ದುಡ್ಡು ಅಂದಿಗೆ ಸರಿ. ಒಂದು ದಿನ ವ್ಯಾಪಾರವಿಲ್ಲದಿದ್ದರೆ ತುತ್ತು ಅನ್ನಕ್ಕೆ ಕಷ್ಟಪಡಬೇಕು. ಅಂತವರನ್ನು ನೋಡಿದಾಕ್ಷಣ ಹೃದಯ ಭಾರ ಎನಿಸತೊಡಗಿತು. ಇದೇ ನನ್ನ ಈ ಸೇವೆಗೆ ಸ್ಪೂರ್ತಿಯಾದದ್ದು ಎಂದು ಕೊವಿಡ್​ ನಿರ್ವಹಣೆಯಲ್ಲಿ ತೊಡಗಿಕೊಂಡು, ಕಳೆದ ಒಂದು ವರ್ಷಕ್ಕಿಂತಲೂ ಮೊದಲಿನಿಂದ ಬಡವರ ಬಂಧುವಾಗಿ, ಜನರ ಕಷ್ಟಕಾಲದಲ್ಲಿ ಸಹಾಯಕರಾಗಿ ಹಾಗೂ ಕೊರೊನಾ ಮಹಾಮಾರಿಯಿಂದ ನಲುಗಿರುವ ಜನರ ಬಾಳಿಗೆ ಬೆಳಕಾಗಿ ನಿಂತ ಹರ್ಷಿತ್​ ಅವರು ಟಿವಿ9 ಕನ್ನಡ ಡಿಜಿಟಲ್​ ಜತೆ ಮಾತು ಪ್ರಾರಂಭಿಸಿದರು..

ಬೀದಿಗಳಲ್ಲಿ ತರಕಾರಿ ಅಂಗಡಿ ಅಥವಾ ಹಣ್ಣುಗಳ ಅಂಗಡಿ ಇಟ್ಟುಕೊಂಡವರಿಗೆ ವ್ಯಾಪಾರ ಆಗುತ್ತಿರಲಿಲ್ಲ. ಆ ದಿನ ದುಡಿದರೆ ಅವರಿಗೆ ಅಂದಿನ  ಹಸಿವು ನೀಗುತ್ತದೆ. ನಮಗೆಲ್ಲಾ ಮನೆಗೆ ಬಂದರೆ ಊಟ ಸಿಗುತ್ತದೆ. ಆದರೆ ಅವರಿಗೆ ವ್ಯಾಪಾರವಾದರೆ ಮಾತ್ರ ಆ ದಿನ ಹೊಟ್ಟೆ ತಣ್ಣಗಿರುತ್ತದೆ. ಇದನ್ನೆಲ್ಲ ಕಣ್ಣಾರೆ ಕಂಡಾಗ ನನಗೆ ಉಚಿತವಾಗಿ ಊಟವನ್ನು ವಿತರಿಸಬೇಕು ಎಂದು ಮೊದಲು ಅನಿಸಿದ್ದು.

ಹರ್ಷಿತ್ ಅವರು ಸಮಾಜ ಸೇವೆಯಲ್ಲಿ ತೊಡಗಿರುವ ದೃಶ್ಯ

ನಾನು ಮೂಲತಃ ಬೆಂಗಳೂರಿನವನೇ. ಸಿವಿಲ್ ಇಂಜಿನೀಯರ್​ ಓದಿ, ಬಿಲ್ಡಿಂಗ್​ ಕಾಂಟ್ರೆಕ್ಟ್​ದಾರ ಹಾಗೂ ರಿಯಲ್​ ಎಸ್ಟೇಟ್​ ಆಗಿ ಕೂಡಾ ಕೆಲಸ ನಿರ್ವಹಿಸುತ್ತಿದ್ದೇನೆ. ಸಮಾಜ ಸೇವೆಯಲ್ಲಿ ತೊಡಗಿಕೊಳ್ಳಬೇಕು ಎಂಬ ಆಸೆ ಇತ್ತು. ಜನರಿಗೆ ನೆರವಾಗಬೇಕು ಎಂಬ ಗುರಿ ಹೊತ್ತ ನಾನು ಬಡತನ ಎಲ್ಲೆಲ್ಲಿದೆ ಎಂಬುದನ್ನು ಗುರುತಿಸಿದೆ.
ಶುರುವಲ್ಲಿ ಅಮ್ಮ ದಿನಕ್ಕೆ 100 ಜನರಿಗಾಗುವಷ್ಟು ಊಟವನ್ನು ತಯಾರಿಸಿ ಕೊಡುತ್ತಿದ್ದಳು. ಅಮ್ಮನಿಗೂ ವಯಸ್ಸಾಗಿದೆ. ಅವರ ಈ ಸೇವೆಯನ್ನು ನೋಡಿ ನನಗೇ ಖುಷಿ ಅನಿಸುತ್ತಿದ್ದರೂ, ಅಮ್ಮನಿಗೆ ಕಷ್ಟವಾಗುತ್ತದೆಯೇನೋ ಎಂಬ ಭಾವ. ದಿನ ಕಳೆದಂತೆ ಆಹಾರ ವಿತರಿಸುವ ಪ್ಯಾಕೇಟ್​ಗಳು ಏರಿಕೆಯತ್ತ ಸಾಗಿದವು. ದಿನಕ್ಕೆ 200-300 ಜನರಿಗಾಗುವಷ್ಟು ಊಟ ತಯಾರಿಸಬೇಕಿತ್ತು. ಇದಕ್ಕೆ ಬೆಂಬಲವಾಗಿ ನನ್ನ ಸ್ನೇಹಿತರು ಕೈಜೋಡಿಸುತ್ತಾ ಬಂದಿದ್ದಾರೆ.

ನಮ್ಮದು ಒಟ್ಟು 12 ಜನರ ತಂಡ. ಊಟ ತಯಾರಿಸುವುದರ ಜತೆಗೆ ಪ್ಯಾಕೇಟ್​ ಮಾಡಿ ವಿತರಿಸುವವರೆಗೂ ನಮ್ಮ ತಂಡ ಕೆಲಸ ನಿರ್ವಹಿಸುತ್ತದೆ.  ಕಳೆದ ವರ್ಷದಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ಜನರಿಗೆ ನಮ್ಮ ತಂಡ ಊಟ ವಿತರಿಸಿದೆ . ಆಗ ಪ್ರಾರಂಭಿಸಿದ ಸೇವೆಯನ್ನು ಇಲ್ಲಿಯವರೆಗೂ ಕೈಬಿಟ್ಟಿಲ್ಲ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ಎನ್ನುತ್ತಾರೆ ಹರ್ಷಿತ್.

ಕೊರೊನಾ ಮಹಾಮಾರಿ ಎಲ್ಲರ ಜೀವನಕ್ಕೆ ದೊಡ್ಡ ಹೊಡೆತವನ್ನೇ ನೀಡಿದೆ. ಅದೆಷ್ಟೋ ಜನರು ಉದ್ಯೋಗ ಕಳೆದುಕೊಂಡರು. ಹಸಿವಿನಿಂದ ಬಳಲುತ್ತಿದ್ದರು. ಜನರಿಗೆ ರೇಷನ್​ ಸಿಗುತ್ತಿರಲಿಲ್ಲ. ಹಣ ಸಿಗದೇ ಆಸ್ಪತ್ರೆಗೆ ಹೋಗಲು ಒದ್ದಾಡುತ್ತಿದ್ದರು. ಈ ಸಂದರ್ಭದಲ್ಲಿ ಜನರಿಗೆ ಹಣ ನೀಡುವತ್ತ, ವಾಹನ ವ್ಯವಸ್ಥೆ ಕಲ್ಪಿಸುವತ್ತ ನನ್ನ ಸೇವೆಯನ್ನು ನಿರಂತರವಾಗಿ ಮುಂದುವರೆಸಿಕೊಂಡು ಬಂದೆ. ಜನರ ಕಷ್ಟಕ್ಕೆ ಸ್ಪಂದಿಸಬೇಕು ಎಂಬುದೊಂದೇ ನನ್ನ ಉದ್ದೇಶ. ಮನೆಯಲ್ಲಿ ನಾನು, ನನ್ನ ಅಮ್ಮ-ಅಪ್ಪ ಇದ್ದೇವೆ. ಅವರು ಕೂಡ ನನಗೆ ಬೆಂಬಲಿಗರಾಗಿ ನಿಂತಿದ್ದಾರೆ.

ನಾವು ಬದುಕುವುದರ ಜೊತೆಗೆ ಸುತ್ತಮುತ್ತಲಿರುವವರ ಏಳಿಗೆಯನ್ನೂ ಬಯಸುತ್ತಾ ನೆಮ್ಮದಿಯ ಜೀವನ ನಡೆಸೋಣ ಎಂಬುದಕ್ಕೆ ಇವರೇ ಸಾಕ್ಷಿ. ಕೊರೊನಾ ಸೋಂಕಿನ ಆರ್ಭಟದಿಂದಾದ ಜನರ ತೊಂದರೆಗೆ ಅದೆಷ್ಟೋ ಜನರು ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಅಂತವರಲ್ಲಿ ಹರ್ಶಿತ್​ ಕೂಡಾ ಒಬ್ಬರು. ಕೊರೊನಾ ಆರ್ಭಟ ಜೋರಾಗುತ್ತಿದ್ದಂತೆಯೇ ಬಡವರು ನಲುಗಿ ಹೋದರು. ಅದೆಷ್ಟೋ ಜನರು ಹಸಿವಿನಿಂದ ಬಳಲುತ್ತಿದ್ದಾರೆ. ಆರ್ಥಿಕ ಕಷ್ಟ ಒಂದುಕಡೆ ಆದರೆ ಸೋಂಕಿನ ಹರಡುವಿಕೆಯ ಭಯ ಇನ್ನೊಂದು ಕಡೆ.  ಈ ಸಂಕಷ್ಟದ ಹೊತ್ತಲ್ಲಿ ತಮ್ಮ ಕೈಲಾದ ಸೇವೆಗಳನ್ನು  ಸಲ್ಲಿಸುತ್ತಿರುವ ಜೀವಗಳಿಗೆ ನಮ್ಮದೊಂದು ಸಲಾಂ.

ಹೆಸರು: ಹರ್ಷಿತ್​ (ಬೆಂಗಳೂರು)
ದೂರವಾಣಿ ಸಂಖ್ಯೆ: 9880027279

ಇದನ್ನೂ ಓದಿ: 

Corona Warriors : ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ ; ಮಸಣದಲ್ಲಿ ಗಂಡ ಹೆಣ ಬೇಯಿಸುತ್ತಿದ್ದರೆ ಹೆಂಡತಿ ಒಲೆಮೇಲೆ ಕಣ್ಣೀರು ಕುದಿಸಬೇಕೆ?

Corona Warriors : ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ ; ನಾವೆಲ್ಲಾ ಕೋವಿಡ್ ‘ವರಿಯರ್ಸ್’ ಅವರೆಲ್ಲಾ ‘ವಾರಿಯರ್ಸ್’

Published On - 3:31 pm, Wed, 26 May 21