Jawaharlal Nehru Death Anniversary 2021: ಪಂಡಿತ್ ಜವಹರ ​ಲಾಲ್​ ನೆಹರು ಅವರ ಬಾಲ್ಯ, ಶಿಕ್ಷಣ ಮತ್ತು ಬರೆದ ಪುಸ್ತಕಗಳು

Jawaharlal Nehru: 1947 ರಿಂದ 1964 ಮೇ 27ರ ವರೆಗೆ ಅವರು ಕೊನೆಯುಸಿರೆಳೆಯುವವರೆಗೂ ಭಾರತದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ. ಇಂದು ಅವರ 57ನೇ ಪುಣ್ಯ ತಿಥಿ. ಭಾರತದ ಸ್ವಾತಂತ್ರ್ಯ ಕ್ಕಾಗಿ ಹೋರಾಡಿದ ಮಹಾನ್ ವ್ಯಕ್ತಿಯನ್ನು ಇಂದು ನಾವು ಸ್ಮರಿಸಲೇ ಬೇಕು.

Jawaharlal Nehru Death Anniversary 2021: ಪಂಡಿತ್ ಜವಹರ ​ಲಾಲ್​ ನೆಹರು ಅವರ ಬಾಲ್ಯ, ಶಿಕ್ಷಣ ಮತ್ತು ಬರೆದ ಪುಸ್ತಕಗಳು
ಪಂಡಿತ್ ಜವಹರ ​ಲಾಲ್​ ನೆಹರು
Follow us
shruti hegde
|

Updated on:May 27, 2021 | 10:28 AM

ಮಹಾತ್ಮಾ ಗಾಂಧೀಜಿಯವರ ಮಾರ್ಗದರ್ಶನದ ಅಡಿಯಲ್ಲಿ ಭಾರತೀಯ ಸ್ವಾತಂತ್ರ್ಯ ಚಳುವಳಿಯಲ್ಲಿ ಶ್ರೇಷ್ಠ ವ್ಯಕ್ತಿಯಾಗಿ ಹೊರಹೊಮ್ಮಿದವರು ಪಂಡಿತ್​ ಜವಹರ ​ಲಾಲ್​ ನೆಹರು​. 1947 ರಿಂದ 1964 ಮೇ 27ರ ವರೆಗೆ ಅವರು ಕೊನೆಯುಸಿರೆಳೆಯುವವರೆಗೂ ಭಾರತದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ. ಇಂದು ಅವರ 57ನೇ ಪುಣ್ಯ ತಿಥಿ. ಭಾರತದ ಸ್ವಾತಂತ್ರ್ಯ ಕ್ಕಾಗಿ ಹೋರಾಡಿದ ಮಹಾನ್ ವ್ಯಕ್ತಿಯನ್ನು ಇಂದು ನಾವು ಸ್ಮರಿಸಲೇ ಬೇಕು.

1919 ರಲ್ಲಿ ನಡೆದ ಹೋಮ್ ರೂಲ್ ಲೀಗ್​ನ ಕಾರ್ಯದರ್ಶಿಯಾಗಿ ನೇಮಕಗೊಂಡ ನೆಹರು ಅವರು ಮೊದಲ ಬಾರಿಗೆ ಗಾಂಧೀಜಿ ಅವರನ್ನು ಭೇಟಿಯಾದದ್ದು.‌ ಇಲ್ಲಿಂದ ಅವರ ಚಳುವಳಿಗಳು, ಹೋರಾಟಗಳು ಪ್ರಾರಂಭವಾಯಿತು. ಮಹಾತ್ಮಾ ಗಾಂಧೀಜಿಯವರ ತತ್ವಕ್ಕೆ ಸ್ಪೂರ್ತಿಯಾಗಿ, ಅವರ ಮಾರ್ಗದರ್ಶನ ಅಡಿಯಲ್ಲಿ ಸಾಗಿದರು.

ಜನನ ಮತ್ತು ಹಿನ್ನೆಲೆ ಪಂಡಿತ್ ಜವಹರ ಲಾಲ್ ನೆಹರು ಅವರು 1889 ನವೆಂಬರ್ 14ರಂದು ಅಲಹಾಬಾದ್​ನಲ್ಲಿ ಜನಿಸಿದರು. ಕಾಶ್ಮೀರಿ ಸಮುದಾಯಕ್ಕೆ ಸೇರಿದ ವಕೀಲರು ಹಾಗೂ 1919 ರಿಂದ 1928 ರವರೆಗೆ ರಾಷ್ಟ್ರೀಯ ಕಾಂಗ್ರೆಸ್ ನ ಅಧ್ಯಕ್ಷರಾಗಿ ಸೇವೆ ಅಲ್ಲಿಸಿದ ಮೋತಿಲಾಲ್ ನೆಹರು ಅವರ ತಂದೆ. ಲಾಹೋರಿನಲ್ಲಿ ವಾಸವಿದ್ದ ಕಾಶ್ಮೀರಿ ಕುಟುಂಬದಿಂದ ಬಂದ ಸ್ವರೂಪ್ರಣಿ ಥುಸು ಅವರ ತಾಯಿ. ಮೋತಿಲಾಲರಿಗೆ ಎರಡನೇ ಪತ್ನಿ. ಮೋತಿಲಾಲ್ ದಂಪತಿಗೆ ಒಟ್ಟು ಮೂರು ಮಕ್ಕಳು. ಅವರಲ್ಲಿ ಜವಹರ ಲಾಲ್ ನೆಹರು ಮೊದಲಿಗರು.

ಮೂಲತಹ ಶ್ರೀಮಂತ ಕುಟುಂಬದಿಂದ ಬಂದಿದ್ದರಿಂದ ಮನೆಗೆ ಶಿಕ್ಷಕರು ಬಂದು ಪಾಠ ಕಲಿಸಿ ಹೋಗುತ್ತಿದ್ದರು. ತಮ್ಮ ಮನೆಯಲ್ಲಿಯೇ ಖಾಸಗೀ ಶಿಕ್ಷಕರಿಂದಿಗೆ ತಮ್ಮ ವಿದ್ಯಾಭ್ಯಾಸ ಮುಗಿಸಿದರು. ಸರಿಸುಮಾರು 17 ವರ್ಷವಿರುವಾಗ ಉನ್ನತವ್ಯಾಸಂಗಕ್ಕಾಗಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯಕ್ಕೆ ತೆರಳಿದರು. ತಾವು ವಿದ್ಯಾರ್ಥಿಯಾಗಿದ್ದಾಗಲೇ ಬ್ರಿಟೀಷರ ದಬ್ಬಾಳಿಕೆಗೆ ನರಳುತ್ತಿದ್ದವರನ್ನು ನೋಡಿ ಹೋರಾಟದ ಕುರಿತು ಆಸಕ್ತಿ ಬೆಳೆಸಿಕೊಂಡಿದ್ದರು. ವಿಶ್ವ ವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮುಗಿಸಿ 1912 ರಲ್ಲಿ ಭಾರತಕ್ಕೆ ಬಂದಿಳಿದವರೇ ರಾಜಕೀಯ ರಂಗಕ್ಕೆ ಇಳಿದರು.

ಸ್ವಾತಂತ್ರ್ಯಕ್ಕಾಗಿ ಹೋರಾಟ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿ ಭಾರತಕ್ಕೆ ಹಿಂದಿರುಗಿದ ಕೆಲವೇ ಕೆಲವು ತಿಂಗಳುಗಳಲ್ಲಿ ಪಾಟ್ನಾದಲ್ಲಿ ನಡೆಯುತ್ತಿದ್ದ ರಾಷ್ಟ್ರೀಯ ಕಾಂಗ್ರೆಸ್​ನ ವಾರ್ಷಿಕ ಅಧಿವೇಶದಲ್ಲಿ ಪಾಲ್ಗೊಂಡರು. ಆ ಸಂದರ್ಭದಲ್ಲಿ ಕಾಂಗ್ರೆಸ್​ ಮಧ್ಯಮವರ್ಗ ಮತ್ತು ಇಂಗ್ಲಿಷ್​ ತಿಳುವಳಿಕೆಯೊಂದಿಗೆ ಉನ್ನತ ವ್ಯವಹಾರ ನಡೆಯುತ್ತಿದ್ದರಿಂದ ಅದನ್ನು ನೋಡಿದ ನೆಹರೂ ಅವರಿಗೆ ಮುಜುಗರ ಉಂಟಾಯಿತು. ಗಾಂಧೀಜಿಯವರ ನೇತೃತ್ವದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿದ್ದ ಭಾರತೀಯ ನಾಗರಿಕ ಹಕ್ಕುಗಳ ಚಳುವಳಿಯ ಕುರಿತಾಗಿ ಬೆಂಬಲಿಕರಾಗಿ ಪಕ್ಷಕ್ಕೆ ಕೆಲಸ ಮಾಡಲು ಒಪ್ಪಿದರು. ಈ ಬಳಿಕ ತಾರಮ್ಯದ ವಿರುದ್ಧ ಪ್ರಚಾರ ಕೈಗೊಂಡರು. ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಹೋರಾಟ ನಡೆಸಿದ ಹೋರಾಟಗಾರರಲ್ಲಿ ಇವರೂ ಪ್ರಮುಖರು. ಇವರ 57ನೇ ಪುಣ್ಯ ತಿಥಿಯಂದು ನಾವು ನೆಹರು ಅವರನ್ನು ಸ್ಮರಿಸಲೇ ಬೇಕು.

ಪುಸ್ತಕಗಳು ಪಂಡಿತ್​ ಜವಹರ್ ಲಾಲ್​ ನೆಹರೂ ಅವರಿಗೆ ಪುಸ್ತಕದ ಕುರಿತು ಬಾರೀ ಒಲವಿತ್ತು. ಅನೇಕ ಪುಸ್ತಕಗಳನ್ನೂ ಸಹ ಬರೆದಿದ್ದಾರೆ. ಅವುಗಳಲ್ಲಿ, ಡಿಸ್ಕವರಿ ಆಫ್​ ಇಂಡಿಯಾ, ಗ್ಲಿಮ್ಪ್ಸ್​ ಆಫ್​ ವರ್ಲ್ಡ್​ ಹಿಸ್ಟರಿ, ಟುವಾರ್ಡ್​ ಫ್ರೀಡಂ ಹೆಚ್ಚು ಜನಪ್ರಿಯ ಪುಸ್ತಕಗಳು. ತನ್ನ ಮಗಳು ಇಂದಿರಾ ಗಾಂಧಿಯವರಿಗೆ ಬರೆದ ಪತ್ರಗಳನ್ನೆಲ್ಲಾ ಸಂಗ್ರಹಿಸಿ ಒಂದು ಪುಸ್ತಕ ಸಿದ್ಧಪಡಿಸಿದ್ದಾರೆ. ಒಟ್ಟು 30 ಪತ್ರಗಳನ್ನು ಒಳಗೊಂಡಂತೆ ಪುಸ್ತಕ ರೂಪಿಸಲಾಗಿದೆ. ‘ಲೆಟರ್ಸ್​ ಫ್ರಮ್​ ಎ ಫಾದರ್​ ಟು ಹಿಸ್​ ಡಾಟರ್​’ ಎಂಬ ಹೆಸರಿನ ಪುಸ್ತಕದ ರೂಪದಲ್ಲಿ ಪ್ರಕಟಗೊಂಡಿದೆ. ತಾವು ಪ್ರಧಾನಿ ಹುದ್ದೆ ಪಡೆಯುವುದಕ್ಕೂ ಮೊದಲು ಅವರು ಪತ್ರಿಕೋದ್ಯಮಿಯಾಗಿ ಕೆಲಸ ನಿರ್ವಹಿಸಿದ್ದರು. ಹಾಗೂ ನ್ಯಾಷನಲ್​ ಹೆರಾಲ್ಡ್​ ಪತ್ರಿಕೆಯ ಸಂಪಾದಕರಾಗಿಯೂ ಕೆಲಸ ನಿರ್ವಹಿಸಿದ್ದರು.

ಇದನ್ನೂ ಓದಿ: 56 ಕುವೆಂಪು ಪುಸ್ತಕಗಳು ಇ-ಬುಕ್ ರೂಪದಲ್ಲಿ ಲಭ್ಯ

Published On - 10:23 am, Thu, 27 May 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್