AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೃತ ರೋಗಿಯ ಮೊಬೈಲ್ ಕದ್ದ ನರ್ಸ್​; ಬಂಧಿಸಿ ವಿಚಾರಿಸಿದಾಗ ಹೊರಬಿತ್ತು ಮತ್ತೊಂದು ಸತ್ಯ

ಮೊಬೈಲ್​​ನ್ನು ತಾನೇ ಕದ್ದು, ಅದನ್ನು ಸ್ನೇಹಿತೆಗೆ ಕೊಟ್ಟಿದ್ದೇನೆ ಎಂದಿದ್ದಳು. ಪೊಲೀಸರು ತನಿಖೆ ನಡೆಸಿದ ಬಳಿಕ ಫೋನ್​​ನ್ನು ಸಲ್ಮಾನ್​ ಅಹ್ಮದ್​ ಎಂಬಾತ ಬಳಕೆ ಮಾಡುತ್ತಿರುವುದು ತಿಳಿದು ಬಂತು.

ಮೃತ ರೋಗಿಯ ಮೊಬೈಲ್ ಕದ್ದ ನರ್ಸ್​; ಬಂಧಿಸಿ ವಿಚಾರಿಸಿದಾಗ ಹೊರಬಿತ್ತು ಮತ್ತೊಂದು ಸತ್ಯ
ಹುಡುಗಿ ಮೊಬೈಲ್​ ವೈರಲ್​ ಮಾಡಿದ ವಿಚಾರ: ತಡರಾತ್ರಿ ಪೊಲೀಸರ ಭಯದಿಂದ ಮನೆಯಲ್ಲಿ ಯುವಕ ನೇಣಿಗೆ ಶರಣು
Lakshmi Hegde
|

Updated on: May 26, 2021 | 11:46 PM

Share

ಡೆಹ್ರಾಡೂನ್​: ಕೊವಿಡ್​ 19 ಸೋಂಕಿನಿಂದ ಮೃತಪಟ್ಟ ರೋಗಿಯ ಮೊಬೈಲ್​​ನ್ನು ಆತ ದಾಖಲಾಗಿದ್ದ ಆಸ್ಪತ್ರೆಯ ನರ್ಸ್ ಕದ್ದು, ಅರೆಸ್ಟ್​ ಆದ ಘಟನೆ ಉತ್ತರಾಖಂಡ್​​ನ ಡೆಹ್ರಾಡೂನ್​ನಲ್ಲಿ ನಡೆದಿದೆ. ಮೇ 18ರಂದು ಅಮನ್​ದೀಪ್​ ಗಿಲ್​​ ಎಂಬುವರು ಪೊಲೀಸರಿಗೆ ದೂರು ನೀಡಿದ್ದರು. ನನ್ನ ತಂದೆ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಮೃತಪಟ್ಟಿದ್ದಾರೆ. ಆದರೆ ಅವರ ಮೊಬೈಲ್ ಕಳವಾಗಿದೆ ಎಂದು ಹೇಳಿದ್ದರು. ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆಸ್ಪತ್ರೆಗೆ ಭೇಟಿಕೊಟ್ಟ ಸಂದರ್ಭದಲ್ಲಿ ನರ್ಸ್​ ಒಪ್ಪಿಕೊಂಡಿದ್ದಳು.

ಮೊಬೈಲ್​​ನ್ನು ತಾನೇ ಕದ್ದು, ಅದನ್ನು ಸ್ನೇಹಿತೆಗೆ ಕೊಟ್ಟಿದ್ದೇನೆ ಎಂದಿದ್ದಳು. ಪೊಲೀಸರು ತನಿಖೆ ನಡೆಸಿದ ಬಳಿಕ ಫೋನ್​​ನ್ನು ಸಲ್ಮಾನ್​ ಅಹ್ಮದ್​ ಎಂಬಾತ ಬಳಕೆ ಮಾಡುತ್ತಿರುವುದು ತಿಳಿದು ಬಂತು. ಆತನನ್ನು ಹಿಡಿದು ವಿಚಾರಿಸಿದಾಗ ನನಗೆ ಈ ಮೊಬೈಲ್​​ನ್ನು ರುಕೈಯಾ ಎಂಬುವಳಿಂದ ತೆಗೆದುಕೊಂಡಿದ್ದಾಗಿ ಹೇಳಿದ್ದ. ಅಲ್ಲಿಗೆ ನರ್ಸ್​ ರುಕೈಯಾ ಮೊಬೈಲ್​ ಕದ್ದು ತನ್ನ ಗೆಳೆಯ ಸಲ್ಮಾನ್​ಗೆ ಕೊಟ್ಟಿದ್ದು ಸಾಬೀತಾಗಿತ್ತು.

ಆದರೆ ರುಕೈಯಾ ವಿಚಾರಣೆಯ ನಂತರ ಮತ್ತೊಂದು ಸತ್ಯವೂ ಹೊರಬಂತು. ಬರೀ ಮೃತ ರೋಗಿಗಳ ಮೊಬೈಲ್​ ಅಷ್ಟೇ ಅಲ್ಲ, ಈ ಖಾಸಗಿ ಆಸ್ಪತ್ರೆಯಿಂದ ರೆಮ್​ಡಿಸಿವಿರ್​ ಸೇರಿ ಹಲವು ಔಷಧಿಗಳನ್ನೂ ಕದ್ದು ಸಾಗಿಸಿದ್ದೇನೆ. ಆದರೂ ಯಾರೂ ಏನೂ ಹೇಳಲಿಲ್ಲ ಎಂದು ಆಕೆ ಹೇಳಿಕೊಂಡಿದ್ದಾಳೆ. ಇನ್ನು ಈ ಆಸ್ಪತ್ರೆಯಿಂದ ನಮಗೆ ಯಾವುದೇ ದೂರು ಬರಲಿಲ್ಲ ಎಂದು ರಾಜ್​ಪುರ್ ಠಾಣೆಯ ಪೊಲೀಸ್ ಅಧಿಕಾರಿ ರಾಕೇಶ್​ ಶಾ ಕೂಡ ತಿಳಿಸಿದ್ದಾರೆ. ಸದ್ಯಕ್ಕೆ ಈ ನರ್ಸ್​​ನ್ನು ಕೆಲಸದಿಂದ ತೆಗೆದುಹಾಕಲಾಗಿದೆ.

ಇದನ್ನೂ ಓದಿ: ಸ್ಟಿರಾಯ್ಡ್​​​ ನೀಡುತ್ತಿರುವುದರಿಂದ ಬ್ಲ್ಯಾಕ್​​ ಫಂಗಸ್ ಹೆಚ್ಚಳ: ಆರೋಗ್ಯ ಸಚಿವ ಡಾ. ಸುಧಾಕರ್

Follow Us
ಹೊಸ ರಾಜಕೀಯ ಪಕ್ಷದ ಬಗ್ಗೆ ವಿವರ ಹಂಚಿಕೊಂಡ ನಟ ಚೇತನ್ ಅಹಿಂಸ
ಹೊಸ ರಾಜಕೀಯ ಪಕ್ಷದ ಬಗ್ಗೆ ವಿವರ ಹಂಚಿಕೊಂಡ ನಟ ಚೇತನ್ ಅಹಿಂಸ
ಆರ್​ಎಸ್​ಎಸ್​ನವರು ಪುಕ್ಕಲರು, ಧೈರ್ಯವೇ ಇಲ್ಲ ಎಂದ ಹರಿಪ್ರಸಾದ್!
ಆರ್​ಎಸ್​ಎಸ್​ನವರು ಪುಕ್ಕಲರು, ಧೈರ್ಯವೇ ಇಲ್ಲ ಎಂದ ಹರಿಪ್ರಸಾದ್!
ಇನ್ಮುಂದೆ ನನ್ನನ್ನು ಕೊನೆಯ ಭಾಷಣಕಾರನನ್ನಾಗಿ ಮಾಡಬೇಡಿ ಎಂದ ಸಿದ್ದರಾಮಯ್ಯ
ಇನ್ಮುಂದೆ ನನ್ನನ್ನು ಕೊನೆಯ ಭಾಷಣಕಾರನನ್ನಾಗಿ ಮಾಡಬೇಡಿ ಎಂದ ಸಿದ್ದರಾಮಯ್ಯ
ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಚೈನ್, ಮೂಗುತಿಗೆ ಕತ್ತರಿ
ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಚೈನ್, ಮೂಗುತಿಗೆ ಕತ್ತರಿ
ಅಖಂಡ ಶ್ರೀನಿವಾಸಮೂರ್ತಿ ಘರ್ ವಾಪ್ಸಿ: ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ?
ಅಖಂಡ ಶ್ರೀನಿವಾಸಮೂರ್ತಿ ಘರ್ ವಾಪ್ಸಿ: ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ?
ಹರಿಪ್ರಸಾದ್​​​ಗೆ ಖರ್ಗೆ ಕೊಟ್ಟ ಸಲಹೆಗಳೇನು?
ಹರಿಪ್ರಸಾದ್​​​ಗೆ ಖರ್ಗೆ ಕೊಟ್ಟ ಸಲಹೆಗಳೇನು?
ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?
ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್​​​ಗೆ ಪಟ್ಟಾಭಿಷೇಕ
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್​​​ಗೆ ಪಟ್ಟಾಭಿಷೇಕ
ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೇ ಮಾಡ್ತೀವಿ:ಅಶೋಕ್
ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೇ ಮಾಡ್ತೀವಿ:ಅಶೋಕ್
ಹುಲಿಗೆಮ್ಮ ದೇವಾಲಯದ ಹುಂಡಿ ಎಣಿಕೆ: 1 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ!
ಹುಲಿಗೆಮ್ಮ ದೇವಾಲಯದ ಹುಂಡಿ ಎಣಿಕೆ: 1 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ!