Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಮ್ಲಜನಕ ಸಿಗದೆ ಮೃತಪಟ್ಟ ತಾಯಿಯ ನೆನಪಿಗಾಗಿ ಆಟೋದಲ್ಲಿ ಆಕ್ಸಿಜನ್ ಪೂರೈಸುತ್ತಿರುವ ಯುವತಿ..; ಚೆನ್ನೈನಲ್ಲಿ ಫೇಮಸ್​ ಆಯ್ತು ‘ಆಕ್ಸಿಜನ್ ಆಟೋ’

ಚೆನ್ನೈನಲ್ಲಿ ಸೀತಾದೇವಿ ಎಂಬುವರ ತಾಯಿಯೂ ಸಹ ಕೊವಿಡ್​ 19ನಿಂದ ಬಳಲಿ, ಆಕ್ಸಿಜನ್​ ಸಿಗದೆ ಮೇ 1ರಂದು ಮೃತಪಟ್ಟಿದ್ದಾರೆ. ಇವರ ಹೆಸರು ವಿಜಯಾ, ಏಪ್ರಿಲ್​ 30ರಂದು ಸಂಜೆ 8ಗಂಟೆ ಹೊತ್ತಿಗೆ ಚೆನ್ನೈನ ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು.

ಆಮ್ಲಜನಕ ಸಿಗದೆ ಮೃತಪಟ್ಟ ತಾಯಿಯ ನೆನಪಿಗಾಗಿ ಆಟೋದಲ್ಲಿ ಆಕ್ಸಿಜನ್ ಪೂರೈಸುತ್ತಿರುವ ಯುವತಿ..; ಚೆನ್ನೈನಲ್ಲಿ ಫೇಮಸ್​ ಆಯ್ತು ‘ಆಕ್ಸಿಜನ್ ಆಟೋ’
ಆಕ್ಸಿಜನ್​ ಆಟೋ ಶುರು ಮಾಡಿರುವ ಯುವತಿ
Follow us
Lakshmi Hegde
|

Updated on: May 26, 2021 | 10:35 PM

ಕೊವಿಡ್​ 19 ಎರಡನೇ ಅಲೆ ಸಿಕ್ಕಾಪಟೆ ಜಾಸ್ತಿಯಾಗುತ್ತಿದೆ. ಕೊರೊನಾ ಸೋಂಕು ಉಲ್ಬಣಗೊಂಡ ಬೆನ್ನಲ್ಲೇ ದೇಶದಲ್ಲಿ ಆಕ್ಸಿಜನ್ ಅಭಾವ ತೀವ್ರವಾಗಿ ಕಾಡುತ್ತಿದೆ. ಅನೇಕ ರೋಗಿಗಳು ಸಕಾಲಕ್ಕೆ ಆಕ್ಸಿಜನ್ ಸಿಗದೆ ಮೃತಪಟ್ಟಿದ್ದಾರೆ. ಈ ಪರಿಸ್ಥಿತಿ ತಮಿಳುನಾಡಿನಲ್ಲೂ ಹೊರತಲ್ಲ.

ಹಾಗೇ, ಚೆನ್ನೈನಲ್ಲಿ ಸೀತಾದೇವಿ ಎಂಬುವರ ತಾಯಿಯೂ ಸಹ ಕೊವಿಡ್​ 19ನಿಂದ ಬಳಲಿ, ಆಕ್ಸಿಜನ್​ ಸಿಗದೆ ಮೇ 1ರಂದು ಮೃತಪಟ್ಟಿದ್ದಾರೆ. ಇವರ ಹೆಸರು ವಿಜಯಾ, ಏಪ್ರಿಲ್​ 30ರಂದು ಸಂಜೆ 8ಗಂಟೆ ಹೊತ್ತಿಗೆ ಚೆನ್ನೈನ ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಇತ್ತ ವಿಜಯಾ ಅವರ ಆಕ್ಸಿಜನ್​ ಮಟ್ಟ ಕುಸಿಯುತ್ತಿದ್ದರೂ, ಆಸ್ಪತ್ರೆಯಲ್ಲಿ ಬೆಡ್​ ಸಿಗಲಿಲ್ಲ. ಸುಮಾರು 1 ತಾಸು ಸೀತಾ ದೇವಿ ತನ್ನ ತಾಯಿಯನ್ನು ದಾಖಲಿಸಲೆಂದು ಕಾದಿದ್ದಾರೆ. ನಾರ್ಮಲ್ ಬೆಡ್​ ಸಿಕ್ಕಿತಾದರೂ ಆಕ್ಸಿಜನ್​ ಬೆಡ್​ ಸಿಗಲೇ ಇಲ್ಲ. 12 ತಾಸು ಕಾದರೂ ಆಮ್ಲಜನಕ ಸಿಗಲಿಲ್ಲ. ಇದರ ಪರಿಣಾಮ ವಿಜಯಾ ಮೃತಪಟ್ಟರು.

ತನ್ನ ತಾಯಿ ಆಕ್ಸಿಜನ್​ ಸಿಗದೆ ಮೃತಪಟ್ಟಿದ್ದಾರೆ. ಅದೇ ಪರಿಸ್ಥಿತಿ ಇನ್ನೊಬ್ಬರಿಗೆ ಉಂಟಾಗಬಾರದು. ತನ್ನ ಕೈಲಾದ ಮಟ್ಟಿಗೆ ಸಹಾಯ ಮಾಡಬೇಕು ಎಂದು ನಿರ್ಧರಿಸಿದ ಸೀತಾ ದೇವಿ, ಒಂದು ಎನ್​ಜಿಒ ಸ್ಥಾಪಿಸಿದ್ದಾರೆ. ಅದರ ಮೂಲಕ ಆಟೋದಲ್ಲಿ ಆಕ್ಸಿಜನ್ ಸೇವೆ ನೀಡುತ್ತಿದ್ದಾರೆ. ಇವರ ಆಕ್ಸಿಜನ್ ಆಟೋ ರಾಜೀವ್ ಗಾಂಧಿ ಸರ್ಕಾರಿ ಜನರಲ್ ಆಸ್ಪತ್ರೆ ಎದುರಲ್ಲೇ ಪಾರ್ಕ್ ಆಗಿರುತ್ತದೆ. ಮೇ 5ರಿಂದಲೇ ಇವರು ಆಮ್ಲಜನಕ ಸೇವೆ ಪ್ರಾರಂಭವಾಗಿದ್ದು, ಸೀತಾ ದೇವಿಯವರಿಗೆ ಶರತ್​ ಕುಮಾತ್​ ಮತ್ತು ಮೋಹನ್​ರಾಜ್​ ಎಂಬುವರೂ ಸಹಾಯ ಮಾಡುತ್ತಿದ್ದಾರೆ. ಪ್ರತಿದಿನವೂ ತನ್ನ ಆಟೋದಿಂದ ಕನಿಷ್ಠ 20 ಜನರು ಆಮ್ಲಜನಕ ಸೇವೆ ಪಡೆಯುತ್ತಿದ್ದಾರೆ. ಇದರಲ್ಲಿ ನನಗೆ ಸಂತೋಷ ಇದೆ ಎನ್ನುತ್ತಾರೆ ಸೀತಾ ದೇವಿ. ಇವರ ಸೇವೆಯನ್ನು ಗುರುತಿಸಿ ಗ್ರೇಟರ್​ ಚೆನ್ನೈ ಕಾರ್ಪೋರೇಶನ್​ ಮೇ 25ರಂದು ಸೀತಾ ದೇವಿ ಸೇರಿ ಒಟ್ಟು 250 ಜನರಿಗೆ ಕೊವಿಡ್​ ಬ್ರಿಗೇಡ್​ ಬ್ಯಾಂಡ್ ನೀಡಿದೆ. ಲಾಕ್​ಡೌನ್​ ಸಮಯದಲ್ಲೂ ನಗರದ ಯಾವುದೇ ಭಾಗಕ್ಕೆ ತೆರಳಲು ಅನುಮತಿ ನೀಡಿದೆ.

ಇದನ್ನೂ ಓದಿ: ಬಾಬಾ ರಾಮ್​ದೇವ್​ ವಿರುದ್ಧ ಐಎಂಎಯಿಂದ 1000 ಕೋಟಿ ರೂ.ಮಾನನಷ್ಟ ಮೊಕದ್ದಮೆ; ಪ್ರಧಾನಿ ನರೇಂದ್ರ ಮೋದಿಗೆ ಪತ್ರ

ರಾಜಸ್ಥಾನದ ರಾಜ್ಯಪಾಲ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಬೆಂಕಿ
ರಾಜಸ್ಥಾನದ ರಾಜ್ಯಪಾಲ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಬೆಂಕಿ
‘ಕೆಡಿ’ ಸಿನಿಮಾದ ನಿಜವಾದ ‘ಹೀರೋ’ ಅನ್ನು ಕೊಂಡಾಡಿದ ಧ್ರುವ ಸರ್ಜಾ
‘ಕೆಡಿ’ ಸಿನಿಮಾದ ನಿಜವಾದ ‘ಹೀರೋ’ ಅನ್ನು ಕೊಂಡಾಡಿದ ಧ್ರುವ ಸರ್ಜಾ
ಹೊಸ ಚೆಂಡಿನಲ್ಲಿ ನಾನೇ ಬೆಸ್ಟ್; ರೋಹಿತ್​ಗೆ ಸಿರಾಜ್ ತಿರುಗೇಟು
ಹೊಸ ಚೆಂಡಿನಲ್ಲಿ ನಾನೇ ಬೆಸ್ಟ್; ರೋಹಿತ್​ಗೆ ಸಿರಾಜ್ ತಿರುಗೇಟು
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್
ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್
ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಯತ್ನಾಳ್ ಒಬ್ಬ ಒಳ್ಳೆಯ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ: ತಂಗಡಿಗಿ
ಯತ್ನಾಳ್ ಒಬ್ಬ ಒಳ್ಳೆಯ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ: ತಂಗಡಿಗಿ
ವಿಶ್ವದ ಶೇಕಡಾ 60 ರಷ್ಟು ಖನಿಜಗಳು ನಮ್ಮ ದೇಶದಲ್ಲಿವೆ
ವಿಶ್ವದ ಶೇಕಡಾ 60 ರಷ್ಟು ಖನಿಜಗಳು ನಮ್ಮ ದೇಶದಲ್ಲಿವೆ
ಪಕ್ಷದ ಸಂದೇಶ ಮತ್ತು ಸೂಚನೆಗಷ್ಟೇ ನಾವು ಸೀಮಿತವಾಗಿರಬೇಕು: ಸೋಮಣ್ಣ
ಪಕ್ಷದ ಸಂದೇಶ ಮತ್ತು ಸೂಚನೆಗಷ್ಟೇ ನಾವು ಸೀಮಿತವಾಗಿರಬೇಕು: ಸೋಮಣ್ಣ