Sign In

By signing in or creating an account, you agree with Associated Broadcasting Company's Terms & Conditions and Privacy Policy.

56 ಕುವೆಂಪು ಪುಸ್ತಕಗಳು ಇ-ಬುಕ್ ರೂಪದಲ್ಲಿ ಲಭ್ಯ

ಕುವೆಂಪು ಅವರ ಮಗಳು, ಲೇಖಕಿ ತಾರಿಣಿ ಚಿದಾನಂದ, ಕುವೆಂಪು ವಿವಿ ವಿಶ್ರಾಂತ ಕುಲಪತಿ ಡಾ. ಚಿದಾನಂದ ಗೌಡ ಮತ್ತು ಹಿರಿಯ ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ಸಮ್ಮುಖದಲ್ಲಿ ರಾಷ್ಟ್ರಕವಿಯ ಜನ್ಮದಿನದಂದು ವರ್ಚುವಲ್ ವೇದಿಕೆಯಲ್ಲಿ ಕುವೆಂಪುರವರ ಪುಸ್ತಕಗಳ ಇ ಬುಕ್ ಆವೃತ್ತಿ ಬಿಡುಗಡೆಯಾದವು.

56 ಕುವೆಂಪು ಪುಸ್ತಕಗಳು ಇ-ಬುಕ್ ರೂಪದಲ್ಲಿ ಲಭ್ಯ
ಕುವೆಂಪು
Follow us
ರಾಜೇಶ್ ದುಗ್ಗುಮನೆ
|

Updated on: Dec 29, 2020 | 9:43 PM

ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಅಂಗವಾಗಿ ಅವರು ಬರೆದ 56 ಪುಸ್ತಕಗಳು ಇ-ಬುಕ್ ರೂಪದಲ್ಲಿ ಬಿಡುಗಡೆಯಾಗಿವೆ. ಇತ್ತೀಚೆಗೆ ಇ-ಬುಕ್​ಗಳಿಗೆ ಬೇಡಿಕೆ ಹೆಚ್ಚುತ್ತಿರುವ ನಿಟ್ಟಿನಲ್ಲಿ ಈ ಕಾರ್ಯ ಮಾಡಲಾಗಿದೆ.

ಕುವೆಂಪು ಅವರ ಮಗಳು, ಲೇಖಕಿ ತಾರಿಣಿ ಚಿದಾನಂದ, ಕುವೆಂಪು ವಿವಿ ವಿಶ್ರಾಂತ ಕುಲಪತಿ ಡಾ. ಚಿದಾನಂದ ಗೌಡ ಮತ್ತು ಹಿರಿಯ ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ಸಮ್ಮುಖದಲ್ಲಿ ರಾಷ್ಟ್ರಕವಿಯ ಜನ್ಮದಿನದಂದು ವರ್ಚುವಲ್ ವೇದಿಕೆಯಲ್ಲಿ ಕುವೆಂಪುರವರ ಪುಸ್ತಕಗಳ ಇ ಬುಕ್ ಆವೃತ್ತಿ ಬಿಡುಗಡೆಯಾದವು.

1947 ರಲ್ಲಿ ಸ್ವಾತಂತ್ರ್ಯ ಸಿಕ್ಕ ದಿನ ಜವಹರಲಾಲ್ ನೆಹರೂ ಭಾಷಣ ಕೇಳಲೆಂದೇ ಕುವೆಂಪುರವರು ರೇಡಿಯೋ ತಂದಿದ್ದರು.  ರೇಡಿಯೋದಲ್ಲಿ ಪ್ರಸಾರವಾಗುವ ಹಾಡುಗಳನ್ನು ಮನೆಯ ಎಲ್ಲರೂ ಕೇಳಬೇಕೆಂದು ಬಯಸುತ್ತಿದ್ದರು. ಈಗೇನಾದರೂ ಕುವೆಂಪುರವರು ಬದುಕಿದ್ದರು ಬಹಳ ಸಂತೋಷಪಡುತ್ತಿದ್ದರು ಎಂದು ತಾರಿಣಿ ಚಿದಾನಂದ ಅವರು ತಮ್ಮ ತಂದೆಯ ವಿಜ್ಞಾನದ ಮೇಲಿನ ಪ್ರೀತಿಯನ್ನು ಹಂಚಿಕೊಂಡರು.

ಕನ್ನಡದಲ್ಲಿ ಸಾಹಿತ್ಯದ ಸಮೃದ್ಧ ಅಡುಗೆಯಿದೆ. ಆದರೆ ಬಡಿಸುವವರಿಲ್ಲ ಎಂಬ ಮಾತಿತ್ತು. ಇದನ್ನು ದೂರವಾಗಿಸಿದ ಹಿರಿಮೆ ಮೈ ಲಾಂಗ್ ಗೆ ಸಲ್ಲುತ್ತದೆ. ತಂತ್ರಜ್ಞಾನದ ಮೂಲಕ ಹೊಸ ತಲೆಮಾರಿಗೆ ಕನ್ನಡ, ಕುವೆಂಪುರನ್ನು ತಲುಪಿಸುವ ಕೆಲಸ ಶ್ಲಾಘನೀಯ ಎಂದು ಡಾ. ಚಿದಾನಂದ ಗೌಡ ಅವರು ಹೇಳಿದರು. ಕುವೆಂಪು ಎಂದಿಗೂ ಹೊಸ ತಲೆಮಾರನ್ನುದ್ದೇಶಿಸಿಯೇ ಮಾತನಾಡುತ್ತಿದ್ದರು. ಬರೆಯುತ್ತಿದ್ದರು‌. ನಮ್ಮನ್ನು ಯಾವತ್ತಿಗೂ ನಿಯಂತ್ರಿಸುವ ಧರ್ಮ ಮತ್ತು ರಾಜಕೀಯ ಜನಸಾಮಾನ್ಯರ ಪರವಾಗಿರಬೇಕು. ನೇಗಿಲಯೋಗಿ ಕೇವಲ ಪರಿಕಲ್ಪನೆಯಲ್ಲ. ಅದೊಂದು ಯೋಚನೆ, ತತ್ವವಾಗಬೇಕು. ಜವಹರಲಾಲ್ ನೆಹರು ಪ್ರಧಾನಿಯಾಗಿದ್ದಾಗಲೇ ರೈತ ಗಾಂಧಿ, ನೆಹರುವಿಗೆ ಕಡಿಮೆಯಿಲ್ಲ ಎಂದು ಬರೆದ ಕುವೆಂಪು ತತ್ವಗಳು ಈ ಹೊತ್ತಲ್ಲಿ ಹೆಚ್ಚು ಪ್ರಸ್ತುತ ಎಂದು ಹಿರಿಯ ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಹೇಳಿದರು.

ಮಲೆಗಳಲ್ಲಿ‌ ಮದುಮಗಳು, ಕಾನೂರು ಸುಬ್ಬಮ್ಮ ಹೆಗ್ಗಡತಿ, ಶ್ರೀರಾಮಾಯಣ ದರ್ಶನಂ, ನೆನಪಿನ ದೋಣಿ, ವಿಚಾರ ಕ್ರಾಂತಿ ಮುಂತಾದ ಕೃತಿಗಳೂ ಸೇರಿ ಕುವೆಂಪುರವರ 56 ಪುಸ್ತಕಗಳು ಇ-ಬುಕ್ ರೂಪದಲ್ಲಿ ಹೊರಬಂದಿವೆ. ಮೈಲಾಂಗ್ ಆ್ಯಪ್​ನಲ್ಲಿ ಇ ಬುಕ್​ಗಳನ್ನು ಖರೀದಿಸಬಹುದಾಗಿದೆ.

ರಾಷ್ಟ್ರಕವಿ ಕುವೆಂಪುರವರ ಸಮಗ್ರ ಸಾಹಿತ್ಯ ಪುಸ್ತಕಗಳ ಸರಣಿ, ಡಿಜಿಟಲ್ ಆವೃತ್ತಿ ಲೋಕಾರ್ಪಣೆ