ಇಲ್ಲಿರುವ ಭಿಕ್ಷುಕನನ್ನು ಒಮ್ಮೆ ನೋಡಿ. ಆತ ಭಿಕ್ಷೆ ದಿನಾಲು ಭಿಕ್ಷೆ ಎತ್ತುತ್ತಿರುವುದು ತನಗಾಗಿ ಅಥವಾ ಆತನ ಮೇಲೆ ಅವಲಂಬಿತರಾಗಿರಬಹುದಾದ ಕುಟುಂಬದ ಸದಸ್ಯರಿಗೆ ಅಂತ ನೀವಂದುಕೊಳ್ಳುವುದಾದರೆ, ನಿಮ್ಮ ಊಹೆ ತಪ್ಪು. ನಿಮಗೆ ಆಶ್ಚರ್ಯವಾಗಬಹುದು, ತಮಿಳುನಾಡಿದ ಮದುರೈನಲ್ಲಿ ವಾಸಿಸುವ ಈತ ತಾನು ಭಿಕ್ಷೆ ಮೂಲಕ ಸಂಗ್ರಹಿಸಿದ ರೂ. 90,000 ಸಾವಿರಗಳ ಮೊತ್ತವನ್ನು, ಹತ್ತತ್ತು ಸಾವಿರಗಳ ಕಂತುಗಳ ಮೂಲಕ ತಮಿಳು ನಾಡು ಮುಖ್ಯಮಂತ್ರಿಗಳ ಕೊವಿಡ್ ಪರಿಹಾರ ನಿಧಿಗೆ ದೇಣಿಗೆ ರೂಪದಲ್ಲಿ ನೀಡಿದ್ದಾನೆ. ಕೊನೆಯ ರೂ.10,000ಗಳ ಕಂತನ್ನು ಆತ ಸೋಮವಾರದಂದು, ಮದುರೈ ಜಿಲ್ಲಾಧಿಕಾರಿಗಳಿಗೆ ಅರ್ಪಿಸಿದ.
ತಾನು ಕೂಡಿಸಿದ ಹಣವನ್ನು ಹೀಗೆ ಸಮಾಜಮುಖಿ ಕೆಲಸಗಳಿಗೆ ಪಾಂಡಿಯನ್ ನೀಡುತ್ತಿರುವುದು ಇದೇ ಮೊದಲೇನಲ್ಲ. ಇದಕ್ಕೂ ಮುನ್ನ ಶಾಲೆಯೊಂದರ ಪೀಠೋಪಕರಣಗಳಿಗೆ ಮತ್ತು ಅಲ್ಲಿ ಓದುವ ಮಕ್ಕಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಆತ ಸಾವಿರಾರು ರೂಪಾಯಿಗಳನ್ನು ದೇಣಿಗೆಯಾಗಿ ನೀಡಿದ್ದ.
ಪಾಂಡಿಯನ್ನೊಂದಿಗೆ ನಾವು ಬದುಕುತ್ತಿರುವುದು ಖಂಡಿತವಾಗಿಯೂ ಎದೆಸೆಟೆಸಿಕೊಂಡು ಹೇಳುವ ವಿಷಯವೇ, ಆತನ ಗುಣ ನಮ್ಮಲಿಲ್ಲದ ಹೊರತಾಗಿಯೂ………