ಹೌದಾ.. ಎದೆಹಾಲು ಕುಡಿದರೆ ಸಿಕ್ಸ್ ಪ್ಯಾಕ್​ ಬರುತ್ತಾ!

| Updated By: ಸಾಧು ಶ್ರೀನಾಥ್​

Updated on: Sep 07, 2020 | 5:59 PM

ಶಿಶುವಿನ ಉತ್ತಮ ಬೆಳವಣಿಗೆಗಾಗಿ ತಾಯಿಯ ಎದೆಹಾಲು ಅತ್ಯಾವಶ್ಯಕ ಎಂದು ವೈದ್ಯರು ಹಾಗೂ ಆರೋಗ್ಯ ತಜ್ಞರು ಕಾಲಕಾಲ ಹೇಳುತ್ತಲೇ ಬಂದಿದ್ದಾರೆ. ನವಜಾತ ಶಿಶುಗಳಿಗೆ ತಾಯಿಯ ಎದೆಹಾಲು ಉತ್ತಮ ಪೋಷಣೆ ನೀಡುತ್ತದೆ ಎಂದು ಹಲವಾರು ಸಂಶೋಧನೆಗಳು ಸಾಬೀತು ಮಾಡಿದೆ. ಆದರೆ ಈಗ, ಇದೇ ಎದೆಹಾಲಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆಯಂತೆ. ಅದು ಮಕ್ಕಳಿಗಾಗಿ ಅಲ್ಲ, ಬದಲಿಗೆ ನಮ್ಮ ಪೈಲ್ವಾನ್​ರಿಗೆ ಮತ್ತು ಜಿಮ್​ಗೆ ಹೋಗೋ ಯುವಕರಿಗೆ.. ಹೌದು, ದೇಹದಾರ್ಢ್ಯ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವವರಿಗೆ ಮಾಂಸಖಂಡ ವೃದ್ಧಿಸಲು ತಾಯಿಯ ಎದೆಹಾಲು ತುಂಬಾನೇ ಸಹಕಾರಿ ಎಂದು ಕೆಲ […]

ಹೌದಾ.. ಎದೆಹಾಲು ಕುಡಿದರೆ ಸಿಕ್ಸ್ ಪ್ಯಾಕ್​ ಬರುತ್ತಾ!
Follow us on

ಶಿಶುವಿನ ಉತ್ತಮ ಬೆಳವಣಿಗೆಗಾಗಿ ತಾಯಿಯ ಎದೆಹಾಲು ಅತ್ಯಾವಶ್ಯಕ ಎಂದು ವೈದ್ಯರು ಹಾಗೂ ಆರೋಗ್ಯ ತಜ್ಞರು ಕಾಲಕಾಲ ಹೇಳುತ್ತಲೇ ಬಂದಿದ್ದಾರೆ. ನವಜಾತ ಶಿಶುಗಳಿಗೆ ತಾಯಿಯ ಎದೆಹಾಲು ಉತ್ತಮ ಪೋಷಣೆ ನೀಡುತ್ತದೆ ಎಂದು ಹಲವಾರು ಸಂಶೋಧನೆಗಳು ಸಾಬೀತು ಮಾಡಿದೆ. ಆದರೆ ಈಗ, ಇದೇ ಎದೆಹಾಲಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆಯಂತೆ. ಅದು ಮಕ್ಕಳಿಗಾಗಿ ಅಲ್ಲ, ಬದಲಿಗೆ ನಮ್ಮ ಪೈಲ್ವಾನ್​ರಿಗೆ ಮತ್ತು ಜಿಮ್​ಗೆ ಹೋಗೋ ಯುವಕರಿಗೆ..

ಹೌದು, ದೇಹದಾರ್ಢ್ಯ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವವರಿಗೆ ಮಾಂಸಖಂಡ ವೃದ್ಧಿಸಲು ತಾಯಿಯ ಎದೆಹಾಲು ತುಂಬಾನೇ ಸಹಕಾರಿ ಎಂದು ಕೆಲ ವರದಿಗಳು ಹೇಳುತ್ತಿವೆ. ಇದರ ಬೆನ್ನಲ್ಲೇ ಈಗ ಎದೆಹಾಲಿಗೆ ಎಲ್ಲಿಲ್ಲದ ಡಿಮ್ಯಾಂಡ್​ ಹುಟ್ಟಿಕೊಂಡಿದೆ.

ಎದೆಹಾಲಿನಿಂದ ವಯಸ್ಕರಿಗೆ ಲಾಭವಿದ್ಯಾ?
ಶಿಶುವಿನ ಬೆಳವಣಿಗೆಗೆ ತಾಯಿಯ ಎದೆಹಾಲು ಅತಿ ಮುಖ್ಯ. ಇದಕ್ಕೆ ಕಾರಣ ಅದರಲ್ಲಿರುವ ಪೌಷ್ಟಿಕಾಂಶತೆ. ಅಂತೆಯೇ, ಇದು ವಯಸ್ಕರಿಗೂ ಲಾಭದಾಯಕವಾಗಿದೆ ಅನ್ನೋ ಮಾತು ಕೇಳಿಬಂದಿದೆ. ಆದರೆ, ಕೆಲವು ತಜ್ಞರು ಹೇಳುವ ಪ್ರಕಾರ ವಯಸ್ಕರರಿಗೆ ಎದೆಹಾಲಿನಿಂದ ಅಷ್ಟು ಪೌಷ್ಟಿಕಾಂಶತೆ ಮತ್ತು ಆರೋಗ್ಯ ಲಾಭ ಸಿಗುವುದಿಲ್ಲ.

ಆದರೆ, ಕೆಲವು ಸಂಶೋಧನಕಾರರ ಪ್ರಕಾರ ತಾಯಿಯ ಎದೆಹಾಲು ದೊಡ್ಡವರ ಸಂಧಿವಾತ, ತೀವ್ರತರ ಕಾಯಿಲೆ ಮತ್ತು ಆಟಿಸಂ ನರರೋಗ ಚಿಕಿತ್ಸೆಗೆ ಸಾಕಷ್ಟು ಪರಿಣಾಮಕಾರಿ ಎಂದು ಹೇಳಲಾಗಿದೆ. ಇದನ್ನು ಹೊರತುಪಡಿಸಿ, ಆರೋಗ್ಯದ ಹಿತದೃಷ್ಟಿಯಿಂದ ಬೇರೆ ಯಾವ ಲಾಭಗಳಿಲ್ಲ ಎಂದು ತಿಳಿಸಿದ್ದಾರೆ.