ಭೂಮಿಯತ್ತ ನುಗ್ಗಿ ಬರುತ್ತಿದೆ ಬಸ್​ ಗಾತ್ರದ ಕ್ಷುದ್ರ ಗ್ರಹ.. SW 2020 ನಾಳೆ ಗೋಚರ

|

Updated on: Sep 23, 2020 | 7:26 PM

ಬಸ್​ ಗಾತ್ರದ ಕ್ಷುದ್ರ ಗ್ರಹವೊಂದು ಭೂಮಿಯತ್ತ ನುಗ್ಗಿ ಬರುತ್ತಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ NASA ಮಾಹಿತಿ ನೀಡಿದೆ. ಭೂಮಿಯಿಂದ ಕೇವಲ 22 ಸಾವಿರ ಕಿ.ಮೀ ದೂರದಲ್ಲಿ ಹಾದು ಹೋಗಲಿರುವ ಈ ಕ್ಷುದ್ರಗ್ರಹವು ಆಕಾಶದಲ್ಲಿ ನಾಳೆ ಗೋಚರವಾಗಲಿದೆ ಎಂದು NASA ತಿಳಿಸಿದೆ. ಅಂದ ಹಾಗೆ, NASA ಈ ಕ್ಷುದ್ರಗ್ರಹಕ್ಕೆ SW 2020 ಎಂಬ ಹೆಸರಿಟ್ಟಿದೆ. ಜೊತೆಗೆ, ಇದರ ಗಾತ್ರ ಸುಮಾರು 15ರಿಂದ 30 ಅಡಿಯಷ್ಟು ಇದೆ ಎಂದು ಅಂದಾಜು ಮಾಡಿದೆ. ಖಗೋಳ ತಜ್ಞರ ಪ್ರಕಾರ ಈ ಕ್ಷುದ್ರಗ್ರಹವು […]

ಭೂಮಿಯತ್ತ ನುಗ್ಗಿ ಬರುತ್ತಿದೆ ಬಸ್​ ಗಾತ್ರದ ಕ್ಷುದ್ರ ಗ್ರಹ.. SW 2020 ನಾಳೆ ಗೋಚರ
Follow us on

ಬಸ್​ ಗಾತ್ರದ ಕ್ಷುದ್ರ ಗ್ರಹವೊಂದು ಭೂಮಿಯತ್ತ ನುಗ್ಗಿ ಬರುತ್ತಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ NASA ಮಾಹಿತಿ ನೀಡಿದೆ. ಭೂಮಿಯಿಂದ ಕೇವಲ 22 ಸಾವಿರ ಕಿ.ಮೀ ದೂರದಲ್ಲಿ ಹಾದು ಹೋಗಲಿರುವ ಈ ಕ್ಷುದ್ರಗ್ರಹವು ಆಕಾಶದಲ್ಲಿ ನಾಳೆ ಗೋಚರವಾಗಲಿದೆ ಎಂದು NASA ತಿಳಿಸಿದೆ.
ಅಂದ ಹಾಗೆ, NASA ಈ ಕ್ಷುದ್ರಗ್ರಹಕ್ಕೆ SW 2020 ಎಂಬ ಹೆಸರಿಟ್ಟಿದೆ. ಜೊತೆಗೆ, ಇದರ ಗಾತ್ರ ಸುಮಾರು 15ರಿಂದ 30 ಅಡಿಯಷ್ಟು ಇದೆ ಎಂದು ಅಂದಾಜು ಮಾಡಿದೆ. ಖಗೋಳ ತಜ್ಞರ ಪ್ರಕಾರ ಈ ಕ್ಷುದ್ರಗ್ರಹವು ಮಾನವನು ಹಾರಿಸಿರುವ ಹಲವಾರು ಭೂಸ್ಥಾಯಿ ಉಪಗ್ರಹಗಳಿಗಿಂತಲೂ (ಜಿಯೋ ಸ್ಟೇಷನರಿ ಉಪಗ್ರಹ) ಕಡಿಮೆ ಅಂತರದಲ್ಲಿ ಭೂಮಿಗೆ ಹಾದುಹೋಗಲಿದೆಯಂತೆ.

SW 2020 ಕ್ಷುದ್ರಗ್ರಹವನ್ನು NASA ವಿಜ್ಞಾನಿಗಳು ಸೆಪ್ಟಂಬರ್ 18ರಂದು ಮೊದಲ ಬಾರಿಗೆ ಪತ್ತೆಹಚ್ಚಿದ್ದರು. ಈ ಕ್ಷುದ್ರಗ್ರಹವು ಆಗ್ನೇಯ ಪೆಸಿಫಿಕ್​ ಮಹಾಸಾಗರದ ಮೇಲೆ ಅಂತಾರಾಷ್ಟ್ರೀಯ ಕಾಲಮಾನದ ಪ್ರಕಾರ (IST) ಸಂಜೆ 4:42ಕ್ಕೆ ಗೋಚರವಾಗಲಿದೆ ಎಂದು ಖಗೋಳ ತಜ್ಞರು ಅಂದಾಜಿಸಿದ್ದಾರೆ.

ಇದಲ್ಲದೆ, SW 2020 ಒಮ್ಮೆ ಭೂಮಿಯನ್ನು ಹಾದು ಹೋದರೆ ಪುನಃ 2041ರಲ್ಲೇ ಮರುಕಳಿಸುವುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.