ಕೊರೊನಾ ನಿಯಂತ್ರಣ ಗುಟ್ಟು ರಟ್ಟು! ರಟ್ಟಿನ ಬಾಕ್ಸ್ ಒಳಗೆ ನಡೆದಿದೆ ಆಫೀಸ್​ ಕೆಲಸ

ನಮ್ಮ ಕೆಲಸ, ನಮ್ಮ ಆಫೀಸು ಅನ್ನೋ ಕಾನ್ಸೆಪ್ಟ್ ಕೂಡಾ ಕೊರೊನಾ ಮಹಾಮಾರಿ ಬಂದ ಬಳಿಕ ಬದಲಾಗಿ ಹೋಗಿದೆ. ಅದು ಇನ್ನೂ ಚಿಕ್ಕದಾಗಿ ನನ್ನದಷ್ಟೇ ಆಫೀಸ್ ಅನ್ನುವ ಕಾನ್ಸೆಪ್ಟ್ ಗೆ ಬಂದು ನಿಂತಿದೆ. ಹೌದು ನಾನು ಕೆಲಸ ಮಾಡುವ ಜಾಗವಷ್ಟೇ ನನ್ನದು ಎನ್ನುತ್ತಾ ಜನ ಆಪೀಸಲ್ಲೂ ಸಾಮಾಜಿಕ ಅಂತರ ಕಾದುಕೊಳ್ಳುವ ಪ್ರಯತ್ನ ಮಾಡ್ತಾನೇ ಇರ್ತಾರೆ. ಅದಕ್ಕಾಗಿ ಕೆಲವೊಂದು ಪರ್ಯಾಯ ವ್ಯವಸ್ಥೆಗಳು ಕೂಡಾ ಮಾರುಕಟ್ಟೆಯಲ್ಲಿವೆ. ಜನ ತಮ್ಮ ಆಫೀಸಿಗೆ ಮತ್ತೆ ಬರೋಕೆೆ ಶುರು ಮಾಡಿದ್ದಾರೆ. ಆದ್ರೆ, ಹೆಚ್ಚಿನ ಆಫೀಸಿನಲ್ಲಿ ಪ್ರತಿ […]

ಕೊರೊನಾ ನಿಯಂತ್ರಣ ಗುಟ್ಟು ರಟ್ಟು! ರಟ್ಟಿನ ಬಾಕ್ಸ್ ಒಳಗೆ ನಡೆದಿದೆ ಆಫೀಸ್​ ಕೆಲಸ

Updated on: Jun 11, 2020 | 7:00 PM

ನಮ್ಮ ಕೆಲಸ, ನಮ್ಮ ಆಫೀಸು ಅನ್ನೋ ಕಾನ್ಸೆಪ್ಟ್ ಕೂಡಾ ಕೊರೊನಾ ಮಹಾಮಾರಿ ಬಂದ ಬಳಿಕ ಬದಲಾಗಿ ಹೋಗಿದೆ. ಅದು ಇನ್ನೂ ಚಿಕ್ಕದಾಗಿ ನನ್ನದಷ್ಟೇ ಆಫೀಸ್ ಅನ್ನುವ ಕಾನ್ಸೆಪ್ಟ್ ಗೆ ಬಂದು ನಿಂತಿದೆ. ಹೌದು ನಾನು ಕೆಲಸ ಮಾಡುವ ಜಾಗವಷ್ಟೇ ನನ್ನದು ಎನ್ನುತ್ತಾ ಜನ ಆಪೀಸಲ್ಲೂ ಸಾಮಾಜಿಕ ಅಂತರ ಕಾದುಕೊಳ್ಳುವ ಪ್ರಯತ್ನ ಮಾಡ್ತಾನೇ ಇರ್ತಾರೆ. ಅದಕ್ಕಾಗಿ ಕೆಲವೊಂದು ಪರ್ಯಾಯ ವ್ಯವಸ್ಥೆಗಳು ಕೂಡಾ ಮಾರುಕಟ್ಟೆಯಲ್ಲಿವೆ.

ಜನ ತಮ್ಮ ಆಫೀಸಿಗೆ ಮತ್ತೆ ಬರೋಕೆೆ ಶುರು ಮಾಡಿದ್ದಾರೆ. ಆದ್ರೆ, ಹೆಚ್ಚಿನ ಆಫೀಸಿನಲ್ಲಿ ಪ್ರತಿ ಟೇಬಲಿಗೂ ಒಂದೊಂದು ಪುಟ್ಟ ಕಂಪಾರ್ಟ್ಮೆಂಟ್ ಬಂದಿರುತ್ತೆ. ಅದು ಅಲ್ಲಿ ಇಲ್ಲಿ ಎತ್ತಿ ಇರಿಸಿಕೊಳ್ಳಬಹುದಾದ ರಟ್ಟಿನ ಕಂಪಾರ್ಟ್ಮೆಂಟ್. ಅದರ ಒಳಗೆ ಶೋಕೇಸ್​​ ಗೊಂಬೆಗಳ ಥರ ಕೂತು ಕಂಪ್ಯೂಟರ್ ವರ್ಕ್ ಮಾಡಬೇಕು. ಅದಷ್ಟು ಪುಟ್ಟ ಏರಿಯಾ ಬಿಟ್ರೆ ಬೇರೆ ಪ್ರಪಂಚವಿಲ್ಲ. ಹೀಗೆ ಕೊರೊನೋತ್ತರ ದಿನಗಳಲ್ಲಿ ಕೆಲಸ ಸಾಗುತ್ತೆ. ಅದರಲ್ಲೇನೂ ತಪ್ಪಿಲ್ಲ ಸಾಮಾಜಿಕ ಅಂತರ ಮಾತ್ರ ಇಲ್ಲಿ ಬಹಳ ಮುಖ್ಯ..

ಲಾಕ್ ಡೌನ್ ಕಳೆದ ಮೇಲಿನ ಚಿತ್ರ ವಿಚಿತ್ರ ಕತೆಗಳಲ್ಲಿ ಇದೂ ಒಂದು..! ಲಾಕ್ ಡೌನ್ ಕಳೆದು ಕಚೇರಿ ಕೆಲಸಕ್ಕೆ ಹೋಗುವ ಬ್ರಿಟನ್ ಜನಗಳಿಗೆ ಕಾರ್ಡ್ ಬೋರ್ಡ್ ಬಾಕ್ಸ್ ಒಳಗೆ ಕುಳಿತು ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಈ ಕ್ರಮ ಅಲ್ಲಿ ಬಳಕೆಯಲ್ಲಿದೆ. ಲಾಕ್‌ಡೌನ್ ನಂತರ ವ್ಯವಹಾರಗಳನ್ನು ಮತ್ತೆ ಶುರು ಮಾಡಲು ಸಹಾಯ ಮಾಡುವ ಮರುಬಳಕೆಯ ಈ ಕಾರ್ಡ್ ಬೋರ್ಡಿನ ಬಾಕ್ಸ್ ಗಳನ್ನು ಬ್ರಿಟಿಷ್ ಕಂಪನಿಯೊಂದು ತಯಾರಿಸುತ್ತಿದೆ. ಈಗೀಗ ಅದು ಹೆಚ್ಚಿನ ಬೇಡಿಕೆ ಕೂಡಾ ಪಡೆಯುತ್ತಿದೆ
-ರಾಜೇಶ್ ಶೆಟ್ಟಿ

Published On - 6:59 pm, Thu, 11 June 20