ಕೊರೊನಾ ಪರೀಕ್ಷೆಗೆ ಬಂತು Smart Steth, ಕಾಫಿನಾಡು ಯುವಕನ ಆದರ್ಶ ಕೊಡುಗೆ!

|

Updated on: Apr 29, 2020 | 4:47 PM

ಚಿಕ್ಕಮಗಳೂರು: ಕಾಫಿ ನಾಡಿನ ಯುವಕ ವೈದ್ಯಕೀಯ ಲೋಕದಲ್ಲಿ ನೂತನ ಆವಿಷ್ಕಾರಕ್ಕೆ ನಾಂದಿ ಹಾಡಿದ್ದಾರೆ. ಕೊರೊನಾ ಸೋಂಕಿತರ ಪರೀಕ್ಷೆಯನ್ನು ಇನ್ನಷ್ಟು ಸುಲಭ ಮಾಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಯುವಕ ಆದರ್ಶ್ ಸ್ಮಾರ್ಟ್ ಸ್ಟೆತಸ್ಕೋಪ್ ಆವಿಷ್ಕಾರ ಮಾಡಿದ್ದಾರೆ. ಸ್ಮಾರ್ಟ್ ಸ್ಟೆತಸ್ಕೋಪ್​ನಿಂದ ವೈದ್ಯರು ಕುಳಿತಲ್ಲಿಯೇ ಎಲ್ಲೋ ಇರುವ ರೋಗಿಗಳ ಪರೀಕ್ಷೆ ಮಾಡಬಹುದು. ಮೊಬೈಲ್, ಲ್ಯಾಪ್ಟಾಪ್ ಮೂಲಕ ರೋಗಿಗಳ ಹೃದಯಬಡಿತ, ಉಸಿರಾಟ ಶಬ್ಧವನ್ನ ಸುಲಭವಾಗಿ ಗ್ರಹಿಸಬಹುದಾಗಿದೆ. ಸ್ಮಾರ್ಟ್ ಸ್ಟೆತಾಸ್ಕೋಪ್ನ ಬ್ಲೂಟೂತ್ ಸಹಾಯದಿಂದ ಕುಳಿತಲ್ಲೇ ತಪಾಸಣೆ ಮಾಡಲು ಸಹಾಯಕವಾಗಿದೆ. ಬಾಂಬೆಯ ಭಾರತೀಯ ತಂತ್ರಜ್ಞಾನ […]

ಕೊರೊನಾ ಪರೀಕ್ಷೆಗೆ ಬಂತು Smart Steth, ಕಾಫಿನಾಡು ಯುವಕನ ಆದರ್ಶ ಕೊಡುಗೆ!
Follow us on

ಚಿಕ್ಕಮಗಳೂರು: ಕಾಫಿ ನಾಡಿನ ಯುವಕ ವೈದ್ಯಕೀಯ ಲೋಕದಲ್ಲಿ ನೂತನ ಆವಿಷ್ಕಾರಕ್ಕೆ ನಾಂದಿ ಹಾಡಿದ್ದಾರೆ.
ಕೊರೊನಾ ಸೋಂಕಿತರ ಪರೀಕ್ಷೆಯನ್ನು ಇನ್ನಷ್ಟು ಸುಲಭ ಮಾಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಯುವಕ ಆದರ್ಶ್ ಸ್ಮಾರ್ಟ್ ಸ್ಟೆತಸ್ಕೋಪ್ ಆವಿಷ್ಕಾರ ಮಾಡಿದ್ದಾರೆ.

ಸ್ಮಾರ್ಟ್ ಸ್ಟೆತಸ್ಕೋಪ್​ನಿಂದ ವೈದ್ಯರು ಕುಳಿತಲ್ಲಿಯೇ ಎಲ್ಲೋ ಇರುವ ರೋಗಿಗಳ ಪರೀಕ್ಷೆ ಮಾಡಬಹುದು. ಮೊಬೈಲ್, ಲ್ಯಾಪ್ಟಾಪ್ ಮೂಲಕ ರೋಗಿಗಳ ಹೃದಯಬಡಿತ, ಉಸಿರಾಟ ಶಬ್ಧವನ್ನ ಸುಲಭವಾಗಿ ಗ್ರಹಿಸಬಹುದಾಗಿದೆ. ಸ್ಮಾರ್ಟ್ ಸ್ಟೆತಾಸ್ಕೋಪ್ನ ಬ್ಲೂಟೂತ್ ಸಹಾಯದಿಂದ ಕುಳಿತಲ್ಲೇ ತಪಾಸಣೆ ಮಾಡಲು ಸಹಾಯಕವಾಗಿದೆ.

ಬಾಂಬೆಯ ಭಾರತೀಯ ತಂತ್ರಜ್ಞಾನ ಸಂಸ್ಥೆಯಲ್ಲಿ 2015 ರಿಂದ ಲ್ಯಾಬ್‌ ರಿಸರ್ಚರ್‌ ಆಗಿರುವ ಆದರ್ಶ್‌, ಡಾ.ರವಿ, ಡಾ.ಪಿಂಟೋ, ತಪಸ್ವಿ, ರೂಪೇಶ್‌ ಎಂಬುವವರ ಜೊತೆ ತಂಡ ಕಟ್ಟಿಕೊಂಡು ಸ್ಮಾರ್ಟ್‌ ಸ್ಟೆತಸ್ಕೋಪ್‌ ಅನ್ವೇಷಿಸಿದ್ದಾರೆ. ವೈದ್ಯಕೀಯ ಲೋಕಕ್ಕೆ ಹೊಸ ಕೊಡುಗೆ ನೀಡಿದ್ದಾರೆ.

Published On - 3:21 pm, Wed, 29 April 20