TikTok ಇಲ್ಲ ಅಂತಾ ಅಪ್ಪಿತಪ್ಪಿ ಈ ಌಪ್​ ಡೌನ್​ಲೋಡ್​ ಮಾಡಬೇಡಿ, ಹುಷಾರು!

| Updated By: ಆಯೇಷಾ ಬಾನು

Updated on: Nov 23, 2020 | 11:52 AM

ಮುಂಬೈ: ಗಾಲ್ವಾನ್​ ಕಣಿವೆಯಲ್ಲಿ ಅಟ್ಟಹಾಸ ಮೆರೆದ ಚೀನಾಕ್ಕೆ ತಕ್ಕ ಶಾಸ್ತಿ ಮಾಡಲು ಭಾರತ ಮುಂದಾಗಿತ್ತು. ಪ್ರಬಲ ವೈರಿಯನ್ನ ಮಣಿಸಲು ಚೀನಾ ಮೂಲದ ಌಪ್​ಗಳನ್ನು ಬ್ಯಾನ್​ ಮಾಡಿ ಭಾರತ ಡಿಜಿಟಲ್​ ಸರ್ಜಿಕಲ್​ ಸ್ಟ್ರೈಕ್​ ಮೂಲಕ ಚೀನಾಕ್ಕೆ ಪೆಟ್ಟು ನೀಡಿತ್ತು. ಈ ಮಧ್ಯೆ ಬಹಳ ಜನ ಇಷ್ಟ ಪಡುತ್ತಿದ್ದ TikTok ಌಪ್​ ಕೂಡ ಬ್ಯಾನ್​ ಆಯ್ತು. ಈ ವಿಚಾರವಾಗಿ ಹಲವರು ದುಃಖ ಪಟ್ಟಿದ್ದು ಇದೆ. ಇದನ್ನೇ ಬಂಡವಾಳವಾಗಿಟ್ಟುಕೊಂಡು ಖದೀಮರ ತಂಡವೊಂದು TikTok Pro ಎಂಬ ಪರ್ಯಾಯ ಌಪ್ ನೀಡುವ ಆಮಿಷವೊಡ್ಡಿದೆ. […]

TikTok ಇಲ್ಲ ಅಂತಾ ಅಪ್ಪಿತಪ್ಪಿ ಈ ಌಪ್​ ಡೌನ್​ಲೋಡ್​ ಮಾಡಬೇಡಿ, ಹುಷಾರು!
Follow us on

ಮುಂಬೈ: ಗಾಲ್ವಾನ್​ ಕಣಿವೆಯಲ್ಲಿ ಅಟ್ಟಹಾಸ ಮೆರೆದ ಚೀನಾಕ್ಕೆ ತಕ್ಕ ಶಾಸ್ತಿ ಮಾಡಲು ಭಾರತ ಮುಂದಾಗಿತ್ತು. ಪ್ರಬಲ ವೈರಿಯನ್ನ ಮಣಿಸಲು ಚೀನಾ ಮೂಲದ ಌಪ್​ಗಳನ್ನು ಬ್ಯಾನ್​ ಮಾಡಿ ಭಾರತ ಡಿಜಿಟಲ್​ ಸರ್ಜಿಕಲ್​ ಸ್ಟ್ರೈಕ್​ ಮೂಲಕ ಚೀನಾಕ್ಕೆ ಪೆಟ್ಟು ನೀಡಿತ್ತು.

ಈ ಮಧ್ಯೆ ಬಹಳ ಜನ ಇಷ್ಟ ಪಡುತ್ತಿದ್ದ TikTok ಌಪ್​ ಕೂಡ ಬ್ಯಾನ್​ ಆಯ್ತು. ಈ ವಿಚಾರವಾಗಿ ಹಲವರು ದುಃಖ ಪಟ್ಟಿದ್ದು ಇದೆ. ಇದನ್ನೇ ಬಂಡವಾಳವಾಗಿಟ್ಟುಕೊಂಡು ಖದೀಮರ ತಂಡವೊಂದು TikTok Pro ಎಂಬ ಪರ್ಯಾಯ ಌಪ್ ನೀಡುವ ಆಮಿಷವೊಡ್ಡಿದೆ. ಅದರ ಮುಖೇನ ಜನರ ಮೊಬೈಲ್​ನಲ್ಲಿರುವ ವೈಯಕ್ತಿಕ ಮತ್ತು ಬ್ಯಾಂಕ್​ ಖಾತೆಗಳ ಬಗ್ಗೆ ಇರುವ ಮಾಹಿತಿಯನ್ನ ಕನ್ನ ಹಾಕಲು ಮುಂದಾಗಿದೆ. ಈ ಮಾಹಿತಿಯನ್ನ ಮಹಾರಾಷ್ಟ್ರ ಪೊಲೀಸರ ಸೈಬರ್​ ಸೆಲ್​ ವಿಭಾಗ ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದೆ.

ವೈಯಕ್ತಿಕ ಮಾಹಿತಿಗೆ ಕನ್ನ!
ಜನರ ಸೋಷಿಯಲ್ ಮೀಡಿಯಾ ಖಾತೆಗಳಿಗೆ ಮೆಸೇಜ್​ ಕಳಿಸುತ್ತಿರುವ ಈ ಹ್ಯಾಕರ್ಸ್​ ತಂಡವು ಈ ಖತರ್​ನಾಕ್​ ಌಪ್​ನ ಡೌನ್​ಲೋಡ್​ ಮಾಡಿಕೊಳ್ಳುವ ಲಿಂಕ್​ ಸಹ ನೀಡುತ್ತಾರೆ. ನಂತರ ಫೋನ್​ನಲ್ಲಿರುವ ಕ್ಯಾಮರಾ, ಮೈಕ್​ಮತ್ತು ಗ್ಯಾಲರಿ ಬಳಸಿಕೊಳ್ಳಲು ಅನುಮತಿ ಕೇಳುತ್ತದೆ. ಆಮೇಲೆ ಫೋನ್​ನಲ್ಲಿರುವ ವೈಯಕ್ತಿಕ ಮಾಹಿತಿಯನ್ನು ಕದಿಯುತ್ತಾರೆ ಎಂದು ತಿಳಿದುಬಂದಿದೆ.

ಹಾಗಾಗಿ, ಸಿನಿಮಾ ಹಾಡುಗಳಿಗೆ ಕುಣಿಯುವ ಚೆಲುವೆಯರನ್ನ ನೋಡೋಕೆ ಆಗ್ತಿಲ್ಲ ಅಂತಿರುವ ಯುವಕರೇ ಹಾಗೂ ಪಡ್ಡೆ ಹುಡುಗರ ನಿದ್ದೆಗೆಡಿಸೋಕೆ ಅವಕಾಶ ಸಿಗ್ತಿಲ್ಲ ಅಂತಾ ಬೇಜಾರ್​ ಮಾಡಿಕೊಂಡಿರುವ ಯುವತಿಯರೇ ಗಮನವಿಟ್ಟು ಕೇಳಿ. TikTok ಮತ್ತೆ ಬಂತೂ ಅಂತಾ ಬೀಗಬೇಡಿ. ನಿಮ್ಮ ಎಚ್ಚರಿಕೆಯಲ್ಲಿ ನೀವಿರಿ.

Published On - 6:55 pm, Thu, 9 July 20