ದೇವರ ಸ್ತೋತ್ರವನ್ನು ಪಠಿಸಿದ್ರೆ ಆಗುವ ಅನುಕೂಲವೇನು?

|

Updated on: Apr 21, 2021 | 6:36 AM

ಕೆಲವರು ದೈವ ಸಾನಿಧ್ಯವನ್ನು ಕಂಡುಕೊಳ್ಳಲು ಸದಾ ಭಗವಂತನ ಸ್ಮರಣೆ ಮಾಡ್ತಿರ್ತಾರೆ. ಮತ್ತೆ ಕೆಲವರು ದೇವರ ಸ್ತೋತ್ರಗಳನ್ನು ಹೇಳುತ್ತಾ ಜೀವನದಲ್ಲಿ ಸಾರ್ಥಕತೆಯನ್ನು ಪಡೆದುಕೊಳ್ತಾರೆ. ಮನುಷ್ಯ ಜನ್ಮ ಸಾರ್ಥಕವಾಗಬೇಕಾದರೆ ದೇವರುಗಳ ಸ್ತ್ರೋತ್ರ ಪಠಿಸುವುದು ಸರಳ ಉಪಾಯ ಅಂತಾ ಶಾಸ್ತ್ರಗಳಲ್ಲಿ ಉಲ್ಲೇಖವಿದೆ.

ದೇವರ ಸ್ತೋತ್ರವನ್ನು ಪಠಿಸಿದ್ರೆ ಆಗುವ ಅನುಕೂಲವೇನು?
ಸಾಂದರ್ಭಿಕ ಚಿತ್ರ
Follow us on

ಮಹಾಮಾರಿ ಕೊರೊನಾ ಜನರನ್ನು ಹಿಂಡಿ ಹಿಪ್ಪೆ ಮಾಡಿದೆ. ಕೊರೊನಾ ಭಯಕ್ಕೆ ಜನ ನಲುಗಿದ್ದಾರೆ. ಕಳೆದ ವರ್ಷ ಕೊರೊನಾಗೆ ತುತ್ತಾಗಿ ಅದರ ವಿರುದ್ಧ ಹೋರಾಡಿ ಜೀವ ಉಳಿಸಿಕೊಂಡಿದ್ದ ಕೆಲವರು ಮೃತ್ಯುಂಜಯ ಮಂತ್ರ ಪಠಣೆ ಆತ್ಮಕ್ಕೆ ಧೈರ್ಯ ನೀಡುತ್ತೆ ಎಂಬ ಅಭಿಪ್ರಾಯವನ್ನು ಹಂಚಿಕೊಂಡಿದ್ದರು. ಹೌದು ಇದು ನಿಜ ಬಹುತೇಕ ಪ್ರಕರಣಗಳಲ್ಲಿ ಇದು ಸಾಭೀತಾಗಿದೆ. ಜೊತೆಗೆ ಕೆಲವರು ದೈವ ಸಾನಿಧ್ಯವನ್ನು ಕಂಡುಕೊಳ್ಳಲು ಸದಾ ಭಗವಂತನ ಸ್ಮರಣೆ ಮಾಡ್ತಿರ್ತಾರೆ. ಮತ್ತೆ ಕೆಲವರು ದೇವರ ಸ್ತೋತ್ರಗಳನ್ನು ಹೇಳುತ್ತಾ ಜೀವನದಲ್ಲಿ ಸಾರ್ಥಕತೆಯನ್ನು ಪಡೆದುಕೊಳ್ತಾರೆ. ಮನುಷ್ಯ ಜನ್ಮ ಸಾರ್ಥಕವಾಗಬೇಕಾದರೆ ದೇವರುಗಳ ಸ್ತ್ರೋತ್ರ ಪಠಿಸುವುದು ಸರಳ ಉಪಾಯ ಅಂತಾ ಶಾಸ್ತ್ರಗಳಲ್ಲಿ ಉಲ್ಲೇಖವಿದೆ. ಇಷ್ಟಕ್ಕೂ, ಸ್ತೋತ್ರ ಪಠಣೆ ಎಂದರೇನು? ಅಂದರೆ ಪರಮಾತ್ಮನನ್ನು ಮ೦ತ್ರದ ರೂಪದಲ್ಲಾಗಲೀ, ನಾಮ ರೂಪದಲ್ಲಾಗಲೀ ಧ್ಯಾನಿಸುವುದೇ ಸ್ತೋತ್ರ ಪಠಣೆ. ಈ ಸ್ತೋತ್ರ ಪಠಣೆ ಮಾಡೋಕೆ ಕೆಲವೊಂದು ನಿಯಮಗಳಿವೆ. ಅವುಗಳ ಬಗ್ಗೆ ಇಲ್ಲಿ ತಿಳಿಯಿರಿ.

ಸ್ತೋತ್ರ ಪಠಿಸುವ ನಿಯಮಗಳು
-ನಾವು ಸ್ತೋತ್ರವನ್ನು ಪಠಿಸುವಾಗ ಸಂಪೂರ್ಣ ವಿಧಿ- ವಿಧಾನವನ್ನು ಅನುಸರಿಸಬೇಕು.
-ಸ್ತೋತ್ರ ಪಠಣ ಮಾಡುವ ಮುನ್ನ ಅದನ್ನು ಅರಿತಿರುವವರ ಬಳಿ ಸ್ತೋತ್ರದ ಮಹತ್ವ ಹಾಗೂ ವಿಧಿ-ವಿಧಾನಗಳನ್ನು ಸರಿಯಾಗಿ ತಿಳಿದುಕೊಳ್ಳಬೇಕು. ನಂತರ ಜಪವನ್ನು ಆರಂಭಿಸಬೇಕು.
-ಎಲ್ಲೆಂದರಲ್ಲಿ, ಯಾವ ಸಮಯ ಅಂದ್ರೆ ಆ ಸಮಯದಲ್ಲಿ ಜಪ ಮಾಡುವುದು ಯೋಗ್ಯವಲ್ಲ.
-ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ, ವಿಭೂತಿ ಧರಿಸಿ, ವಿಧಿ ವಿಧಾನದ ಮೂಲಕ ಸ್ತೋತ್ರ ಪಠಿಸಬೇಕು. -ಶ್ರದ್ಧೆಯಿಂದ ಜಪ ಮಾಡಬೇಕು.
-ಜಪ ಮಾಡುವಾಗ ಮನಸ್ಸು ಪವಿತ್ರವಾಗಿರಬೇಕು.
-ನಂಬಿಕೆಯಿಂದ ಸ್ತೋತ್ರ ಪಾರಾಯಣ ಮಾಡಬೇಕು.
-ಸ್ತ್ರೋತ್ರವನ್ನು ಏರು ಧ್ವನಿಯಲ್ಲಿ ಪಠಿಸಬೇಕು.
-ತುಟಿಗಳನ್ನು ಅಲುಗಿಸುತ್ತಾ ಶಬ್ದ ಹೊರಗೆ ಕೇಳದಂತೆಯೂ ಜಪಿಸಬಹುದು.
-ಮನಸ್ಸಿನಲ್ಲಿಯೇ ಬೇಕಾದ್ರೂ ಮನನ ಮಾಡಬಹುದು.

ನಿತ್ಯ ಪೂಜೆಯ ಮೂಲ ತತ್ವವೇ ದೇವರಿಗೆ ಸ್ತೋತ್ರದ ಮೂಲಕ ವಂದನೆ ಅರ್ಪಿಸುವುದು. ಅದಕ್ಕಾಗಿ ದೇವರುಗಳನ್ನು ಮನೆಯ ದೇವರ ಮಂಟಪದಲ್ಲಿರುವ ಮೂರ್ತಿಗಳಿಗೆ ಆಹ್ವಾನಿಸಲಾಗುತ್ತೆ. ನಂತರ ಮನೆಗೆ ಬಂದ ವಿಶೇಷ ಅತಿಥಿಗಳಿಗೆ ಉಪಚಾರ ಮಾಡುವಂತೆ ಭಗವಂತನಿಗೂ ಉಪಚರಿಸಿ ಬೀಳ್ಕೊಡಲಾಗುತ್ತೆ. ಭಗವಂತನಲ್ಲಿ ನಂಬಿಕೆ ಇರಿಸಿ ಹೇಳುವ ಸ್ತೋತ್ರಗಳಿಂದ ಪರಮಾತ್ಮನು ಸಂತೃಪ್ತನಾಗಿ ಭಕ್ತರ ಕೋರಿಕೆಯನ್ನು ಶೀಘ್ರವಾಗಿ ಈಡೇರಿಸ್ತಾನೆ ಎಂಬ ನಂಬಿಕೆ ಅನಾದಿಕಾಲದಿಂದಲೂ ಇದೆ.

ಇದನ್ನೂ ಓದಿ: Ramadan 2021: ರಂಜಾನ್ ಹಬ್ಬದ ಪ್ರಾಮುಖ್ಯತೆ, ಉಪವಾಸದ ಆರಂಭ.. ಇವೆಲ್ಲದರ ಡಿಟೇಲ್ಸ್ ಇಲ್ಲಿದೆ