ತನ್ನಲ್ಲಿ ವಿಶಿಷ್ಟವಾಗಿ ಅಡಗಿಸಿಕೊಂಡಿರುವ user-friendly ಅಂಶಗಳು-ಆಶಯಗಳೊಂದಿಗೆ ಜಗತ್ತಿನಾದ್ಯಂತ ನೆಟ್ಟಿಗರ ಫೇವರೇಟ್ ಆಗಿರುವ ಫೇಸ್ಬುಕ್ ಕಾಲಕಾಲಕ್ಕೆ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಾ ಇರುತ್ತದೆ. ಈ ಬಾರಿಯೂ ತಾನೊಂದು ಹೊಸ ಪ್ರಯೋಗ ಮಾಡಿದ್ದು, ಖಂಡಿತ ಅದು ನಿಮ್ಮ ಮನ ಗೆಲ್ಲುವಲ್ಲಿ ಯಶಸ್ವಿಯಾಗುತ್ತದೆ ಎಂದು 16ರ ಹರೆಯದ ಫೇಸ್ಬುಕ್ ಹೇಳಿಕೊಂಡಿದೆ.
Desk Top, Lap Top, App Store, Play Store ಗಳಲ್ಲಿ Facebook ಈ ಹೊಸ ಫೀಚರ್ ಅಳವಡಿಸಿದೆ. ಏನೂ ಅಂದ್ರೆ.. ಹಗಲು ರಾತ್ರಿ ಅನ್ನದೆ ಫೇಸ್ಬುಕ್ ನಿರಂತರವಾಗಿ ಬಳಕೆಯಾಗುತ್ತಿದೆ. ಇದರಿಂದ ಕಣ್ಣಿಗೆ ಹೆಚ್ಚು ತೊಂದರೆ ಆಗಬಾರದು ಎಂದು Dark Mode ಆಪ್ಷನ್ ತಂದಿದೆ. ಇದರಿಂದ ಇಡೀ ಫೇಸ್ಬುಕ್ ಪುಟ ಕತ್ತಲೆಯಲ್ಲಿರುವಂತೆ ಕಾಣಿಸುತ್ತದೆ. ಅಂದ್ರೆ ಒಂದು ರೀತಿ Black Reverseನಲ್ಲಿರುತ್ತದೆ. ಇದರಿಂದ ಬೆಳಕು ಹೆಚ್ಚಾಗಿ ನಿಮ್ಮ ಕಣ್ಣು ಕುಕ್ಕುವುದಿಲ್ಲ. ಜೊತೆಗೆ ಬ್ಯಾಟರಿಯೂ ಬೇಗನೇ ಕಡಿಮೆಯಾಗುವುದಿಲ್ಲ.
ಈ ಹೊಸ ಫೀಚರ್ನಿಂದ ಫೇಸ್ಬುಕ್ ಪುಟಗಳಲ್ಲಿ ನೀವು ಲೀಲಾಜಾಲವಾಗಿ ವಿಹರಿಸಬಹುದು. ಮುಖ್ಯವಾಗಿ ಬ್ಯಾಟರಿ ದೀರ್ಘ ಕಾಲ ಬಾಳಿಕೆ ಬರುತ್ತದೆ. ಒಂದು ವೇಳೆ Facebook ಮೂಲಕವೇ Dark Mode ಅಳವಡಿಸಿಕೊಳ್ಳಲು ಸಾಧ್ಯವಾಗದಿದ್ದರೆ Chromeಅನ್ನೇ Dark Mode ಆಪ್ಷನ್ ಗೆ ಬದಲಾಯಿಸಿಕೊಂಡು ನೋಡಿ.
ಹೇಗೆ ಈ Dark Modeಗೆ ಶಿಫ್ಟ್ ಆಗುವುದು? ಇಲ್ಲಿದೆ ಸಚಿತ್ರ ವಿವರಣೆ:
1. Facebook ಗೆ ಲಾಗಿನ್ ಆಗಿ.
2. ಬಲ ಭಾಗದ ಮೇಲುಗಡೆ ಇರುವ down arrow ಕ್ಲಿಕ್ ಮಾಡಿ.
3. ಅಲ್ಲಿ new Facebook ಆಯ್ಕೆ ಮಾಡಿಕೊಳ್ಳಿ.
4. ಅಲ್ಲಿ dark theme option ಆಯ್ಕೆ ಮಾಡಿಕೊಳ್ಳಿ.
Published On - 5:52 pm, Mon, 11 May 20