ಕುಲಭೂಷಣರನ್ನು ಭಾರತೀಯ ವಕೀಲ ಪ್ರತಿನಿಧಿಸುವುದು ಭಾರತದ ಬಯಕೆ: ಎಮ್​ಈಎ

|

Updated on: Aug 20, 2020 | 8:22 PM

ಕುಲಭೂಷಣ ಜಾಧವ್ ಅವರಿಗೆ ಪಾಕಿಸ್ತಾನದ ವಿಧಿಸಿರುವ ಮರಣದಂಡನೆ ಶಿಕ್ಷೆ ವಿರುದ್ಧ ಪುನರ್​ಪರಿಶೀಲನಾ ಮನವಿಯನ್ನು ಅವರ ಪರವಾಗಿ ಒಬ್ಬ ಭಾರತೀಯ ವಕೀಲ ಸಲ್ಲಿಸುವುದನ್ನು ಭಾರತ ಬಯಸುತ್ತದೆ, ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಗುರುವಾರದಂದು ಹೇಳಿದರು ದೆಹಲಿಯಲ್ಲಿ ಸುದ್ದಿಸಂಸ್ಥೆಯೊಂದಿಗೆ ಸಚಿವಾಲಯದ ಸಾಪ್ತಾಹಿಕ ವಿವರಗಳ ಕುರಿತು ಮಾತಾಡಿದ ಶ್ರೀವಾಸ್ತವ, ‘‘ಪಾಕಿಸ್ತಾನದ ರಾಜತಾಂತ್ರಿಕ ಮೂಲಗಳೊಂದಿಗೆ ನಾವು ಸಂಪರ್ಕದಲ್ಲಿದ್ದೇವೆ. ಕುಲಭೂಷಣ ಜಾಧವ್ ಅವರ ಪ್ರಕರಣದಲ್ಲಿ ಅಂತರರಾಷ್ಟ್ರೀಯ ನ್ಯಾಯಾಲಯದೆದುರು ಮುಕ್ತ ಹಾಗೂ ನ್ಯಾಯಯುತ ವಿಚಾರಣೆ ನಡೆಯುವ ಬಗ್ಗೆ ನಮಗೆ ಭರವಸೆ ಇದೆ. ಜಾಧವ್ […]

ಕುಲಭೂಷಣರನ್ನು ಭಾರತೀಯ ವಕೀಲ ಪ್ರತಿನಿಧಿಸುವುದು ಭಾರತದ ಬಯಕೆ: ಎಮ್​ಈಎ
Follow us on

ಕುಲಭೂಷಣ ಜಾಧವ್ ಅವರಿಗೆ ಪಾಕಿಸ್ತಾನದ ವಿಧಿಸಿರುವ ಮರಣದಂಡನೆ ಶಿಕ್ಷೆ ವಿರುದ್ಧ ಪುನರ್​ಪರಿಶೀಲನಾ ಮನವಿಯನ್ನು ಅವರ ಪರವಾಗಿ ಒಬ್ಬ ಭಾರತೀಯ ವಕೀಲ ಸಲ್ಲಿಸುವುದನ್ನು ಭಾರತ ಬಯಸುತ್ತದೆ, ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಗುರುವಾರದಂದು ಹೇಳಿದರು

ದೆಹಲಿಯಲ್ಲಿ ಸುದ್ದಿಸಂಸ್ಥೆಯೊಂದಿಗೆ ಸಚಿವಾಲಯದ ಸಾಪ್ತಾಹಿಕ ವಿವರಗಳ ಕುರಿತು ಮಾತಾಡಿದ ಶ್ರೀವಾಸ್ತವ, ‘‘ಪಾಕಿಸ್ತಾನದ ರಾಜತಾಂತ್ರಿಕ ಮೂಲಗಳೊಂದಿಗೆ ನಾವು ಸಂಪರ್ಕದಲ್ಲಿದ್ದೇವೆ. ಕುಲಭೂಷಣ ಜಾಧವ್ ಅವರ ಪ್ರಕರಣದಲ್ಲಿ ಅಂತರರಾಷ್ಟ್ರೀಯ ನ್ಯಾಯಾಲಯದೆದುರು ಮುಕ್ತ ಹಾಗೂ ನ್ಯಾಯಯುತ ವಿಚಾರಣೆ ನಡೆಯುವ ಬಗ್ಗೆ ನಮಗೆ ಭರವಸೆ ಇದೆ. ಜಾಧವ್ ಅವರನ್ನು ಒಬ್ಬ ಭರತೀಯ ವಕೀಲ ಪ್ರತಿನಿಧಿಸಲು ಅವಕಾಶ ನೀಡಬೇಕೆಂದು ನಾವು ಕೇಳಿದ್ದೇವೆ,’’ ಎಂದರು

‘‘ಆದರೆ, ಪಾಕಿಸ್ತಾನ ಪ್ರಮುಖ ಅಂಶಗಳ ಕಡೆ ಗಮನ ಹರಿಸುವುದು ಅತಿ ಮುಖ್ಯವಾದ ವಿಷಯವಾಗಿದೆ. ಸಂಬಂಧಪಟ್ಟ ಕಾಗದ ಪತ್ರಗಳನ್ನು ಪ್ರಸ್ತುತಪಡಿಸುವುದು ಹಾಗೂ ಜಾಧವ್​ಗೆ ನಿರಂತರ ರಾಜತಾಂತ್ರಿಕ ನೆರವು ಒದಗಿಸುವುದು ಪ್ರಮುಖ ಅಂಶಗಳ ಭಾಗವಾಗಿವೆ’ ಎಂದು ಸಹ ಅನುರಾಗ್ ಶ್ರೀವಾಸ್ತವ ಹೇಳಿದರು.