ಆರೋಗ್ಯಕರ ಲೈಂಗಿಕ ಸಂಬಂಧ ಮತ್ತು ದೈಹಿಕ ಅನ್ಯೋನ್ಯತೆಯು ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಸಂಬಂಧವನ್ನು ಹೆಚ್ಚಿಸುವುದಲ್ಲದೆ ನಿಮ್ಮ ಸಾಮಾನ್ಯ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮವನ್ನು ಸುಧಾರಿಸಲಿದೆ. ಇಂದು (ಆಗಸ್ಟ್ 8) ಅಂತಾರಾಷ್ಟ್ರೀಯ ಮಹಿಳಾ ಪರಾಕಾಷ್ಠೆಯ ದಿನ (International Female Orgasm Day). ಪುರುಷರು ತಮ್ಮ ಸಂಗಾತಿಯರನ್ನು ತೃಪ್ತಿಪಡಿಸಲು ಪ್ರೋತ್ಸಾಹಿಸಲು ಬ್ರೆಜಿಲ್‌ನಲ್ಲಿ ರಜಾದಿನವಾಗಿ ಪ್ರಾರಂಭಿಸಲಾದ ಈ ದಿನವನ್ನು ಇಂದು ಪ್ರಪಂಚದಾದ್ಯಂತ ಆಚರಿಸಲಾಗುತ್ತಿದೆ. ಸ್ತ್ರೀ ಲೈಂಗಿಕತೆಯ ಬಗ್ಗೆ ಜಾಗೃತಿ ಮೂಡಿಸಲು ಉದ್ದೇಶ ಇದರದ್ದಾಗಿದೆ. ಅಲ್ಲದೆ ಮಹಿಳೆಯರು ತಮ್ಮ ದೇಹದ ಬಗ್ಗೆ ಹೆಚ್ಚಿನ ಅರಿವನ್ನು ಪಡೆಯಲು ಮತ್ತು ಲೈಂಗಿಕ ಆನಂದದ ಹಕ್ಕನ್ನು ಪಡೆಯಲು ಪ್ರೋತ್ಸಾಹಿಸುವ ದಿನವೂ ಇದಾಗಿದೆ.
ಹೆಣ್ಣಿನ ಪರಾಕಾಷ್ಠೆಯನ್ನು ಗೊಂದಲದ ರಹಸ್ಯವಾಗಿ ಪರಿಗಣಿಸಲಾಗಿದೆ. ಲೈಂಗಿಕತೆ, ಪ್ರೀತಿ ಮತ್ತು ಬಯಕೆಯ ಕುರಿತು ಮಲ್ಟಿಮೀಡಿಯಾ ಯೋಜನೆಯಾದ ಏಜೆಂಟ್ಸ್ ಆಫ್ ಇಷ್ಕ್ (AOI), ಈ ವಿದ್ಯಮಾನದ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಸಮೀಕ್ಷೆಯನ್ನು ನಡೆಸಲು ನಿರ್ಧರಿಸಿದೆ. ಒಳ್ಳೆಯ ಸುದ್ದಿ ಏನೆಂದರೆ, ಸಂಶೋದನೆಯೊಂದರಲ್ಲಿ 82% ಜನರು ತಾವು ಪರಾಕಾಷ್ಠೆಯನ್ನು ಹೊಂದಿದ್ದೇವೆ ಎಂದು ಹೇಳಿದರೆ, 13% ರಷ್ಟು ಖಚಿತವಾಗಿಲ್ಲ ಮತ್ತು 5% ಅವರು ತಾವು ಹೊಂದಿಲ್ಲ ಎಂದು ಹೇಳಿದ್ದಾರೆ. “ಆ ಅಂಕಿಅಂಶವು ಆಸಕ್ತಿದಾಯಕವಾಗಿದೆ. ಏಕೆಂದರೆ ನಮಗೆ ನಿರಂತರವಾಗಿ ಪರಾಕಾಷ್ಠೆಯ ಅಂತರವನ್ನು ಕಡಿಮೆ ಮಾಡುವ ಬಗ್ಗೆ ಹೇಳಲಾಗುತ್ತದೆ. ಸಂಖ್ಯಾತ್ಮಕವಾಗಿ ನೀವು ಅಂತರವನ್ನು ಕಡಿಮೆ ಮಾಡಬಹುದು ಆದರೆ ಗುಣಾತ್ಮಕವಾಗಿ ಏನು? ವೈವಿಧ್ಯತೆ ಮತ್ತು ಒಳಗೊಳ್ಳುವಿಕೆ ಜೀವನದ ಅತ್ಯಂತ ನಿಕಟ ಭಾಗಗಳಿಗೂ ಅನ್ವಯಿಸುತ್ತದೆ” ಎಂದು AOI ಸಂಸ್ಥಾಪಕ ಪರೋಮಿತಾ ವೋಹ್ರಾ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಸ್ತ್ರೀ ಪರಾಕಾಷ್ಠೆಯ ದಿನದ ಸಂದರ್ಭದಲ್ಲಿ ನೀವು ತಿಳಿದುಕೊಳ್ಳಬೇಕಾದ ಅಂಶಗಳು ಇಲ್ಲಿವೆ:
ದೈಹಿಕ ಸಂತೋಷ ಮತ್ತು ತೃಪ್ತಿಯನ್ನು ಹೊರತುಪಡಿಸಿ ಆರೋಗ್ಯಕರ ಲೈಂಗಿಕ ಜೀವನದ ಪ್ರಯೋಜನಗಳನ್ನು ನೋಡೋಣ:
ಲೈಂಗಿಕ ಆರೋಗ್ಯ ತಜ್ಞ Yvonne K. ಫುಲ್‌ಬ್ರೈಟ್ ಪ್ರಕಾರ, ಲೈಂಗಿಕವಾಗಿ ಹೆಚ್ಚು ಸಕ್ರಿಯವಾಗಿರುವ ಜನರು ತಮ್ಮ ಜೀವನದಲ್ಲಿ ಅನಾರೋಗ್ಯದ ದಿನಗಳನ್ನು ಕಡಿಮೆ ಮಾಡುತ್ತಾರೆ. ಆಗಾಗ್ಗೆ ಲೈಂಗಿಕತೆಯನ್ನು ಅಭ್ಯಾಸ ಮಾಡದ ಜನರಿಗೆ ಹೋಲಿಸಿದರೆ, ನಿಯಮಿತವಾಗಿ ಲೈಂಗಿಕತೆಯನ್ನು ಹೊಂದಿರುವ ಜನರು ಸೂಕ್ಷ್ಮಜೀವಿಗಳು ಮತ್ತು ವೈರಸ್‌ಗಳ ವಿರುದ್ಧ ಹೆಚ್ಚಿನ ಮಟ್ಟದ ಪ್ರತಿಕಾಯಗಳನ್ನು ಅಭಿವೃದ್ಧಿಪಡಿಸುತ್ತಾರೆ ಎಂದು ಸಂಶೋಧನೆಗಳು ತೋರಿಸಿವೆ.
ಲೈಂಗಿಕ ಚಟುವಟಿಕೆಯನ್ನು ವ್ಯಾಯಾಮದ ಒಂದು ರೂಪವೆಂದು ಪರಿಗಣಿಸಲಾಗುತ್ತದೆ. ಲೈಂಗಿಕ ಸಂಭೋಗದ ಸಮಯದಲ್ಲಿ ಅಥವಾ ಫೋರ್‌ಪ್ಲೇ ಸಮಯದಲ್ಲಿ ಪುರುಷರು ಮತ್ತು ಮಹಿಳೆಯರು ಸ್ನಾಯುಗಳ ಹಿಗ್ಗುವಿಕೆ, ಕೀಲುಗಳ ಬಾಗುವಿಕೆ ಮತ್ತು ಹಾರ್ಮೋನುಗಳ ಏರಿಳಿತವನ್ನು ಅನುಭವಿಸುತ್ತಾರೆ. ಇದೆಲ್ಲವೂ ಹೃದಯರಕ್ತನಾಳದ ಫಿಟ್ನೆಸ್ ಅನ್ನು ಉತ್ತೇಜಿಸುತ್ತದೆ. ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾದ ಸಂಶೋಧನಾ ಪ್ರಬಂಧದಲ್ಲಿ ಇದನ್ನು ಎತ್ತಿ ತೋರಿಸಲಾಗಿದೆ.
ಮತ್ತಷ್ಟು ವಿಶೇಷ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:51 am, Mon, 8 August 22