ಮೈಸೂರು: ಮಧ್ಯವಯಸ್ಸಿನ, ಇನ್ನೂ ಬಾಳಿಬದುಕಬೇಕಿದ್ದ ಅಪ್ಪಟ ಪ್ರತಿಭೆಯೊಂದು ಕಮರಿಹೋಗಿದೆ. ಇರ್ಫಾನ್ ಖಾನ್ ಹೆಸರಿನಲ್ಲಿ, ಅವರು ನೋಡುವ ನೋಟದಲ್ಲೇ ಏನೋ ಒಂದು ರೀತಿಯ ಸೆಳೆತವಿತ್ತು. ಮಾಯೆಯಿತ್ತು. ಮಾತ್ರಿಕನಂತೆ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದರು. ಇರ್ಫಾನ್ ಖಾನ್ಗೆ ಕೇವಲ ಸಿನಿಮಾದಲ್ಲಷ್ಟೇ ಆಸಕ್ತಿಯಿರಲಿಲ್ಲ. ರಂಗಭೂಮಿಯ ನಂಟನ್ನೂ ಹೊಂದಿದ್ದರು. ಗ್ರಾಮೀಣ ಬದುಕಿಗೆ ಅವರ ಮನಸ್ಸು ಸದಾ ತುಡಿಯುತ್ತಿತ್ತು.
ಕರ್ನಾಟಕದ ಹಿರಿಯ ರಂಗಕರ್ಮಿ ಪ್ರಸನ್ನ ಹೆಗ್ಗೋಡು ಅವರ ಬಗ್ಗೆ ಇರ್ಫಾನ್ಗೆ ಅಪಾರ ಗೌರವ-ಪ್ರೀತಿಯಿತ್ತು. ರಂಗಕರ್ಮಿ ಪ್ರಸನ್ನ ಅವರ ಗುಡಿ ಕೈಗಾರಿಕೆಗಳ ಬಗ್ಗೆ ಇರ್ಫಾನ್ಗೆ ಸೆಳೆತವಿತ್ತು. ಐದಾರು ವರ್ಷಗಳ ಹಿಂದೆ ನಂಜನಗೂಡು ತಾಲೂಕಿನ ಬದನವಾಳು ಗ್ರಾಮದಲ್ಲಿ ಪ್ರಸನ್ನ ಅವರನ್ನು ಭೇಟಿಯಾಗಿ, ಗ್ರಾಮ ಸೇವ ಸಂಘದ ಪರಿಸರ ನೋಡಿ ಇರ್ಫಾನ್ ಉಲ್ಲಸಿತರಾಗಿದ್ದರು. ಈ ಸಂದರ್ಭದಲ್ಲಿ ನೇತ್ರ ರಾಜು ಅವರು ತೆಗೆದ ಒಂದಷ್ಟು ಚೇತೋಹಾರಿ ಫೋಟೋಗಳು ನಿಮಗಾಗಿ ಇಲ್ಲಿವೆ. ಈ ಚಿತ್ರಗಳೇ ನಟ ಇರ್ಫಾನ್ ಬಗ್ಗೆ ಎಲ್ಲವನ್ನೂ ಹೇಳುತ್ತಿವೆ.
(ಫೋಟೋ ಕೃಪೆ: ನೇತ್ರ ರಾಜು/ Nethra Raju )
Published On - 1:24 pm, Wed, 29 April 20