ತವಾಸ್ಮಿ: ರಾಮಾಯಣದ ಹಿರಿಮೆಯ ವೃದ್ಧಿಗೆ ಟೆಕ್ಕಿಗಳ ‘ಅಳಿಲು ಸೇವೆ’

|

Updated on: Nov 06, 2020 | 4:29 PM

ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ಆದರ್ಶಪ್ರಾಯ ಬದುಕನ್ನು ನಮ್ಮ ಕಣ್ಣ ಮುಂದೆ ಕಟ್ಟಿಕೊಡುವ ರಾಮಾಯಣದಲ್ಲಿ ಜೀವನದ ಹಾದಿಯಲ್ಲಿ ಎದುರಾಗುವ ಸವಾಲುಗಳು, ಕಷ್ಷಗಳು ಮತ್ತು ತೊಂದರೆಗಳನ್ನು ರಾಮಚಂದ್ರ ಹೇಗೆ ಧೃತಿಗೆಡದೆ ಎದುರಿಸುತ್ತಾನೆ ಎಂದು ವಾಲ್ಮೀಕಿ ಮಹರ್ಷಿ ತಮ್ಮ ಕೃತಿಯಲ್ಲಿ ಅದ್ಭುತವಾಗಿ ವರ್ಣಿಸಿದ್ದಾರೆ. ಜೀವನದ ಹಾದಿಯಲ್ಲಿ ಸಾರ್ಥಕತೆ ಹಾಗೂ ಪರಿಪೂರ್ಣತೆಯನ್ನು ಪಡೆಯುವ ನಿಟ್ಟಿನಲ್ಲಿ ನಾವು ಬೆಳೆಸಿಕೊಳ್ಳಬೇಕಾದ ಕೌಶಲ್ಯ, ಯಾವುದೋ ಕಾರ್ಯದಲ್ಲಿ ಸೋಲು ಅನುಭವಿಸಿದಾಗ ಅದರಿಂದ ಎದೆಗುಂದದೆ ಆತ್ಮಾವಲೋಕನ ಮತ್ತು ಆತ್ಮವಿಮರ್ಶೆ ನಡೆಸಿ ಪಾಠ ಕಲೆಯುವ ಮಾರ್ಗವನ್ನು ಸಹ ತೋರಿಸಿಕೊಟ್ಟಿದ್ದಾರೆ. ಇದೀಗ, ಅದೇ […]

ತವಾಸ್ಮಿ: ರಾಮಾಯಣದ ಹಿರಿಮೆಯ ವೃದ್ಧಿಗೆ ಟೆಕ್ಕಿಗಳ ‘ಅಳಿಲು ಸೇವೆ’
Follow us on

ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ಆದರ್ಶಪ್ರಾಯ ಬದುಕನ್ನು ನಮ್ಮ ಕಣ್ಣ ಮುಂದೆ ಕಟ್ಟಿಕೊಡುವ ರಾಮಾಯಣದಲ್ಲಿ ಜೀವನದ ಹಾದಿಯಲ್ಲಿ ಎದುರಾಗುವ ಸವಾಲುಗಳು, ಕಷ್ಷಗಳು ಮತ್ತು ತೊಂದರೆಗಳನ್ನು ರಾಮಚಂದ್ರ ಹೇಗೆ ಧೃತಿಗೆಡದೆ ಎದುರಿಸುತ್ತಾನೆ ಎಂದು ವಾಲ್ಮೀಕಿ ಮಹರ್ಷಿ ತಮ್ಮ ಕೃತಿಯಲ್ಲಿ ಅದ್ಭುತವಾಗಿ ವರ್ಣಿಸಿದ್ದಾರೆ.

ಜೀವನದ ಹಾದಿಯಲ್ಲಿ ಸಾರ್ಥಕತೆ ಹಾಗೂ ಪರಿಪೂರ್ಣತೆಯನ್ನು ಪಡೆಯುವ ನಿಟ್ಟಿನಲ್ಲಿ ನಾವು ಬೆಳೆಸಿಕೊಳ್ಳಬೇಕಾದ ಕೌಶಲ್ಯ, ಯಾವುದೋ ಕಾರ್ಯದಲ್ಲಿ ಸೋಲು ಅನುಭವಿಸಿದಾಗ ಅದರಿಂದ ಎದೆಗುಂದದೆ ಆತ್ಮಾವಲೋಕನ ಮತ್ತು ಆತ್ಮವಿಮರ್ಶೆ ನಡೆಸಿ ಪಾಠ ಕಲೆಯುವ ಮಾರ್ಗವನ್ನು ಸಹ ತೋರಿಸಿಕೊಟ್ಟಿದ್ದಾರೆ. ಇದೀಗ, ಅದೇ ವಾಲ್ಮೀಕಿ ರಾಮಾಯಣದ ತತ್ಮ ಹಾಗೂ ನೀತಿಪಾಠಗಳನ್ನು ಇಂದಿನ ಯುವ ಪೀಳಿಗೆಗೆ ಸರಳವಾಗಿ, ಸುಲಭವಾಗಿ ಗ್ರಹಿಸುವಂತೆ ಮಾಡಲು ಮಾಜಿ ಟೆಕ್ಕಿಗಳ ತಂಡವೊಂದು ಮುಂದಾಗಿದೆ.

ಹೌದು, ಟೀಂ ತವಾಸ್ಮಿ ಎಂಬ 15 ಟೆಕ್ಕಿಗಳ ತಂಡವು ತಮ್ಮ ಸಾಫ್ಟವೇರ್​ ಉದ್ಯೋಗಕ್ಕೆ ವಿದಾಯ ಹೇಳಿ ಈ ವಿನೂತನ ಪ್ರಯತ್ನಕ್ಕೆ ಕೈಹಾಕಿದ್ದಾರೆ. ರಾಮಾಯಣದಲ್ಲಿ ಕೆಲ ಮುಖ್ಯ ಸನ್ನಿವೇಶಗಳನ್ನು ಕೈಗೆತ್ತಿಕೊಂಡು ಅದರಿಂದ ನಾವು ಕಲಿಯಬೇಕಾದ ನೀತಿಪಾಠ, ಆ ಸನ್ನಿವೇಶದಲ್ಲಿ ರಾಮಚಂದ್ರ ಹೇಗೆ ವರ್ತಿಸಿದನು, ಆ ಸಂದರ್ಭದಿಂದ ನಾವು ಪಡೆಯಬಹುದಾದ ಅನುಭವ ಹಾಗೂ ಆತ್ಮವಿಮರ್ಶೆ ಮಾಡಿಕೊಳ್ಳುವ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದಾರೆ. ಟೆಕ್ಕಿಗಳ ತಂಡದ ಈ ವಿಭಿನ್ನ ಪ್ರಯತ್ನಕ್ಕೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡುರಿಂದ ಮನ್ನಣೆ ದೊರೆತಿದ್ದು ತವಾಸ್ಮಿ ಕೃತಿಯನ್ನು ಇಂದು ಲೋಕಾರ್ಪಣೆ ಮಾಡಿದರು.