Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಶ್ಲೀಲ ಭಾಷೆ ನಮ್ಮ ಸಂಸ್ಕೃತಿ ಅಲ್ಲವೇ ಅಲ್ಲ: ದಿಲಿಪ್ ಜೋಷಿ | Abusive language is not our culture: Dilip Joshi

‘ತಾರಕ್ ಮೆಹ್ತಾ ಕಾ ಉಲ್ಟಾ ಚಷ್ಮಾ’ ಹೆಸರಿನ ಹಾಸ್ಯ ಟಿವಿ ಧಾರಾವಾಹಿ ಮೂಲಕ ಮನೆಮಾತಾಗುವ ಮೊದಲೇ ಸಾಕಷ್ಟು ಜನಪ್ರಿಯರಾಗಿದ್ದ ಚಲನಚಿತ್ರ ಮತ್ತು ಕಿರುತೆರೆಯ ಹಾಸ್ಯನಟ ದಿಲಿಪ್ ಜೋಷಿ, ಓವರ್ ದಿ ಟಾಪ್ ಮಿಡಿಯಾ ಸರ್ವಿಸ್ ಪ್ಲಾಟ್​ಫಾರ್ಮ್​ಗಳಲ್ಲಿ ಬಳಸುತ್ತಿರುವ ಭಾಷೆಯ ಬಗ್ಗೆ ತೀವ್ರ ಆಕ್ಷೇಪ ಮತ್ತು ಬೇಸರ ವ್ಯಕ್ತಪಡಿಸಿದ್ದಾರೆ. ಯೂ ಟ್ಯೂಬ್ ಪಾಡ್​ಕಾಸ್ಟ್​ ಒಂದರಲ್ಲಿ ಮಾತಾಡಿರುವ ಜೋಷಿ, ಓಟಿಟಿ ಪ್ಲಾಟ್​ಫಾರ್ಮ್​ಗಳಲ್ಲಿ ಬಳಕೆಯಾಗುತ್ತಿರುವ ಭಾಷೆ ನಮ್ಮ ಸಂಸ್ಕೃತಿಯನ್ನು ಬಿಂಬಿಸುವುದಿಲ್ಲ ಮತ್ತು ಒಗ್ಗುವುದೂ ಇಲ್ಲ ಎಂದು ಹೇಳಿದ್ದಾರೆ. ‘‘ಓಟಿಟಿ ಪ್ಲಾಟ್​ಫಾರ್ಮ್​ಗಳು ನಿಜಕ್ಕೂ […]

ಅಶ್ಲೀಲ ಭಾಷೆ ನಮ್ಮ ಸಂಸ್ಕೃತಿ ಅಲ್ಲವೇ ಅಲ್ಲ: ದಿಲಿಪ್ ಜೋಷಿ | Abusive language is not our culture: Dilip Joshi
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: Nov 06, 2020 | 8:56 PM

ತಾರಕ್ ಮೆಹ್ತಾ ಕಾ ಉಲ್ಟಾ ಚಷ್ಮಾ’ ಹೆಸರಿನ ಹಾಸ್ಯ ಟಿವಿ ಧಾರಾವಾಹಿ ಮೂಲಕ ಮನೆಮಾತಾಗುವ ಮೊದಲೇ ಸಾಕಷ್ಟು ಜನಪ್ರಿಯರಾಗಿದ್ದ ಚಲನಚಿತ್ರ ಮತ್ತು ಕಿರುತೆರೆಯ ಹಾಸ್ಯನಟ ದಿಲಿಪ್ ಜೋಷಿ, ಓವರ್ ದಿ ಟಾಪ್ ಮಿಡಿಯಾ ಸರ್ವಿಸ್ ಪ್ಲಾಟ್​ಫಾರ್ಮ್​ಗಳಲ್ಲಿ ಬಳಸುತ್ತಿರುವ ಭಾಷೆಯ ಬಗ್ಗೆ ತೀವ್ರ ಆಕ್ಷೇಪ ಮತ್ತು ಬೇಸರ ವ್ಯಕ್ತಪಡಿಸಿದ್ದಾರೆ.

ಯೂ ಟ್ಯೂಬ್ ಪಾಡ್​ಕಾಸ್ಟ್​ ಒಂದರಲ್ಲಿ ಮಾತಾಡಿರುವ ಜೋಷಿ, ಓಟಿಟಿ ಪ್ಲಾಟ್​ಫಾರ್ಮ್​ಗಳಲ್ಲಿ ಬಳಕೆಯಾಗುತ್ತಿರುವ ಭಾಷೆ ನಮ್ಮ ಸಂಸ್ಕೃತಿಯನ್ನು ಬಿಂಬಿಸುವುದಿಲ್ಲ ಮತ್ತು ಒಗ್ಗುವುದೂ ಇಲ್ಲ ಎಂದು ಹೇಳಿದ್ದಾರೆ.

‘‘ಓಟಿಟಿ ಪ್ಲಾಟ್​ಫಾರ್ಮ್​ಗಳು ನಿಜಕ್ಕೂ ಅದ್ಭುತವಾಗಿವೆ, ಅದರಲ್ಲಿ ಸಂದೇಹವೇ ಬೇಡ. ವೆಬ್ ಸಿರೀಸ್​ಗಳಲ್ಲಿ ಕಾಣಿಸಿಕೊಳ್ಳುವ ಕಲಾವಿದರ ನಟನೆ ತುಂಬಾ ಇಂಪ್ರೆಸಿವ್ ಆಗಿದೆ. ಆದರೆ ಇಲ್ಲಿ ಬಳಸಲಾಗುತ್ತಿರುವ ಭಾಷೆ ಹೇವರಿಕೆ ಹುಟ್ಟಿಸುತ್ತದೆ. ಅಶ್ಲೀಲ ಭಾಷೆ ನಮ್ಮ ಸಂಸ್ಕೃತಿ ಅಲ್ಲವೇ ಅಲ್ಲ,’’ ಅಂತ ಜೋಷಿ ಹೇಳಿದ್ದಾರೆ.

ರಾಜ್ ಕಪೂರ್, ಹೃಷಿಕೇಶ್ ಮುಖರ್ಜಿ, ಶ್ಯಾಮ್ ಬೆನಗಲ್ ಮೊದಲಾದವರ ಚಿತ್ರಗಳನ್ನು ಬಹಳ ಇಷ್ಟಪಡುವ ಜೋಷಿ ಸೀರಿಯಲ್​ಗಳಲ್ಲಿ ನೈಜ್ಯತೆ ತರಲು ಅಶ್ಲೀಲ ಭಾಷೆಯನ್ನು ಬಳಸುವ ಅಗತ್ಯವಿಲ್ಲ ಎಂದು ಹೇಳುತ್ತಾರೆ.

‘‘ಸೀರಿಯಲ್​ಗಳಲ್ಲಿ ನೈಜ್ಯತೆ ತರಲು ಅಶ್ಲೀಲ ಭಾಷೆಯನ್ನು ಬಳಸುವುದು ಅನಿವಾರ್ಯ ಅಂತ ಕೆಲ ನಿರ್ಮಾಪಕರು ಹೇಳುತ್ತಾರೆ. ಅದರೆ ಅದು ಸಮಜಾಯಿಷಿ ಅನಿಸಲಾರದು. ಹಾಗಾದರೆ, ಟಾಯ್ಲೆಟ್​ಗೆ ಹೊಗುವುದನ್ನು, ಸ್ನಾನ ಮಾಡುವುದನ್ನು ಯಾಕೆ ತೋರಿಸಬಾರದು, ನೈಜ್ಯತೆ ಹೆಸರಲ್ಲಿ ಅದನ್ನೂ ತೋರಿಸಿ. ವೀಕ್ಷಕರಿಗೆ ನೀವು ಏನು ಉಣಬಡಿಸುತ್ತೀರಿ ಎನ್ನುವುದು ಮುಖ್ಯ. ಅವರು ಟಿವಿ ತೆರೆಯ ಮೇಲೆ ನೋಡುವುದು ಮನಸ್ಸಿನಲ್ಲಿ ಉಳಿದುಬಿಡುತ್ತದೆ. ನಾವು ಯಾವ ಬಗೆಯ ಸಮಾಜವನ್ನು ನಿರ್ಮಿಸ ಹೊರಟಿದ್ದೇವೆ? ಹೊಲಸು ಭಾಷೆಯನ್ನಾಡುವ ಸಮಾಜವನ್ನೇ? ಕೆಲವರು ಬದಲಾವಣೆ ಮುಖ್ಯ ಮತ್ತು ಅನಿವಾರ್ಯ ಅನ್ನುತ್ತಾರೆ. ಅವರ ಪ್ರಕಾರ ಕೆಟ್ಟ ಭಾಷೆಯನ್ನು ಮಾತಾಡುವುದು ಬದಲಾವಣೆಯ ಸಂಕೇತವೇ? ವಿಷಯ ಯಾವುದೇ ಆಗಿದ್ದರೂ ಅದಕ್ಕೊಂದು ಮಿತಿ ಇರುತ್ತದೆ, ಮಿತಿ ದಾಟಿದರೆ ಎಲ್ಲವೂ ಅಪಾಯವೇ,’’ ಎಂದು ಜೋಷಿ ಹೇಳುತ್ತಾರೆ.

ಪಾಶ್ಚಾತ್ಯ ಮತ್ತು ಪೂರ್ವ ಸಂಸ್ಕೃತಿಗಳ ನಡುವೆ ಬಹಳ ವ್ಯತ್ಯಾಸವಿದೆ, ಕುರಡು ಅನುಕರಣೆ ಒಳ್ಳೆಯದಲ್ಲ ಎಂಬ ಸಲಹೆಯನ್ನು ಸಹ ಜೋಷಿ ನೀಡುತ್ತಾರೆ.

‘‘ಪಾಶ್ಚಾತ್ಯ ದೇಶಗಳಲ್ಲಿ ‘F’ ಶಬ್ದದ ಬಳಕೆ ಸಾಮಾನ್ಯ ಮತ್ತು ಅಲ್ಲಿನ ಜನಕ್ಕೆ ಅದು ಅಶ್ಲೀಲವೆನಿಸದು. ಆದರೆ ನಮ್ಮ ಸಂಸ್ಕೃತಿಯಲ್ಲಿ ಅಂಥ ಪದಗಳಿಗೆ ಆಸ್ಪದವಿಲ್ಲ. ನಮ್ಮ ತಂದೆತಾಯಿಗಳೊಂದಿಗೆ ನಾವು ಹಾಗೆ ಮಾತಾಡುವುದು ಸಾಧ್ಯವೇ? ನಮ್ಮ ಸಂಸ್ಕೃತಿ, ಸಂಪ್ರದಾಯ, ಆಚಾರವಿಚಾರ ಬೇರೆಯವರಿಗೆ ಮಾದರಿಯಾಗಿವೆ, ಪಾಶ್ಚಾತ್ಯ ರಾಷ್ಟ್ರಗಳು ನಮ್ಮನ್ನು ಅನುಕರಿಸುತ್ತಿವೆ. ಪರಿಸ್ಥಿತಿ ಹಾಗಿರಬೇಕಾದರೆ, ನಮ್ಮದಲ್ಲದ ಸಂಸ್ಕೃತಿಯನ್ನು ನಾವು ಆಲಂಗಿಸುವುದು ಸರಿಯೇ?’’ ಎಂದು ಜೋಷಿ ಪ್ರಶ್ನಿಸಿದ್ದಾರೆ.

ಜನಿವಾರ ತೆಗೆಸಿದ ವಿವಾದ: ಸಚಿವರು, ಶಾಸಕರಿಗೆ ಮಂತ್ರಾಲಯ ಶ್ರೀ ಎಚ್ಚರಿಕೆ
ಜನಿವಾರ ತೆಗೆಸಿದ ವಿವಾದ: ಸಚಿವರು, ಶಾಸಕರಿಗೆ ಮಂತ್ರಾಲಯ ಶ್ರೀ ಎಚ್ಚರಿಕೆ
ಮಾರಿಗುಡಿ ದೇವಾಲಯದಲ್ಲಿ ಆದ ವಿಶಿಷ್ಟ ಅನುಭವದ ಬಗ್ಗೆ ಸುನಿಲ್ ಶೆಟ್ಟಿ ಮಾತು
ಮಾರಿಗುಡಿ ದೇವಾಲಯದಲ್ಲಿ ಆದ ವಿಶಿಷ್ಟ ಅನುಭವದ ಬಗ್ಗೆ ಸುನಿಲ್ ಶೆಟ್ಟಿ ಮಾತು
ಜನಿವಾರ ವಿವಾದ: ಬೀದರ್ ವಿದ್ಯಾರ್ಥಿಗೆ ಫ್ರೀ ಇಂಜಿನಿಯರಿಂಗ್ ಸೀಟ್ ಭಾಗ್ಯ
ಜನಿವಾರ ವಿವಾದ: ಬೀದರ್ ವಿದ್ಯಾರ್ಥಿಗೆ ಫ್ರೀ ಇಂಜಿನಿಯರಿಂಗ್ ಸೀಟ್ ಭಾಗ್ಯ
ಧರ್ಮಸ್ಥಳ ಮಂಜುನಾಥ, ವೀರೇಂದ್ರ ಹೆಗ್ಗಡೆಯವರ ಆಶಿರ್ವಾದ ಪಡೆದ ಡಿಕೆಶಿ
ಧರ್ಮಸ್ಥಳ ಮಂಜುನಾಥ, ವೀರೇಂದ್ರ ಹೆಗ್ಗಡೆಯವರ ಆಶಿರ್ವಾದ ಪಡೆದ ಡಿಕೆಶಿ
ಮುತ್ತಪ್ಪ ರೈ ಪುತ್ರನ ಮೇಲೆ ಗುಂಡಿನ ದಾಳಿ ಬಗ್ಗೆ ಗೃಹ ಸಚಿವ ಹೇಳಿದ್ದಿಷ್ಟು
ಮುತ್ತಪ್ಪ ರೈ ಪುತ್ರನ ಮೇಲೆ ಗುಂಡಿನ ದಾಳಿ ಬಗ್ಗೆ ಗೃಹ ಸಚಿವ ಹೇಳಿದ್ದಿಷ್ಟು
Babar Azam: 0, 1, 2... ಬಂದ ಬಾಬರ್, ಹೋದ ಬಾಬರ್
Babar Azam: 0, 1, 2... ಬಂದ ಬಾಬರ್, ಹೋದ ಬಾಬರ್
ಕುಟುಂಬದ ಜೊತೆ ಉಡುಪಿಗೆ ಬಂದ ಸುನೀಲ್ ಶೆಟ್ಟಿ; ಮಾರಿಗುಡಿಗೆ ಭೇಟಿ
ಕುಟುಂಬದ ಜೊತೆ ಉಡುಪಿಗೆ ಬಂದ ಸುನೀಲ್ ಶೆಟ್ಟಿ; ಮಾರಿಗುಡಿಗೆ ಭೇಟಿ
ಜೀಪ್​ ಅಡ್ಡಗಟ್ಟಿದ ಹುಲಿರಾಯ: ಆತಂಕದಿಂದ ಚಿರಾಡಿದ ಪ್ರವಾಸಿಗರು!
ಜೀಪ್​ ಅಡ್ಡಗಟ್ಟಿದ ಹುಲಿರಾಯ: ಆತಂಕದಿಂದ ಚಿರಾಡಿದ ಪ್ರವಾಸಿಗರು!
ಕಾರಿನ ಮೇಲೆ ಕಾಡಾನೆ ದಾಳಿ ಯತ್ನ, ಎದೆ ಝಲ್​ ಎನ್ನಿಸುವ ವಿಡಿಯೋ ವೈರಲ್
ಕಾರಿನ ಮೇಲೆ ಕಾಡಾನೆ ದಾಳಿ ಯತ್ನ, ಎದೆ ಝಲ್​ ಎನ್ನಿಸುವ ವಿಡಿಯೋ ವೈರಲ್
ಮದುವೆ ಯಾಕಾಗಬೇಕು? ರವಿಚಂದ್ರನ್ ಮಾತಿಗೆ ಚಪ್ಪಾಳೆಯ ಸುರಿಮಳೆ
ಮದುವೆ ಯಾಕಾಗಬೇಕು? ರವಿಚಂದ್ರನ್ ಮಾತಿಗೆ ಚಪ್ಪಾಳೆಯ ಸುರಿಮಳೆ