Virat Kohli: ಒಂದಲ್ಲ.. ಎರಡಲ್ಲ: 4 ರನ್ ಓಡಿದ ಕೊಹ್ಲಿ: ವಿರಾಟ್ ಬೆಂಕಿ ಓಟಕ್ಕೆ ಸ್ಟೇಡಿಯಂ ಸ್ತಬ್ಧ
PBKS vs RCB, IPL 2025: ವಿರಾಟ್ ಕೊಹ್ಲಿ ಅವರ ಫಿಟ್ನೆಸ್ ಬಗ್ಗೆ ಅಥವಾ ವಿಕೆಟ್‌ಗಳ ನಡುವೆ ಅವರು ಎಷ್ಟು ವೇಗವಾಗಿ ಓಡುತ್ತಾರೆ ಎಂಬುದರ ಬಗ್ಗೆ ಹೇಳಬೇಕಾಗಿಲ್ಲ. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕಿಂಗ್ ಕೊಹ್ಲಿ ಮತ್ತೊಮ್ಮೆ ತಾನೆಷ್ಟು ಫಿಟ್ ಎಂಬುದನ್ನು ಸಾಬೀತುಪಡಿಸಿದರು. ದೇವದತ್ ಪಡಿಕ್ಕಲ್ ಜೊತೆ 4 ರನ್ ಓಡಿದ್ದು ಎಲ್ಲರ ಹುಬ್ಬೇರುವಂತೆ ಮಾಡಿತು.

ಬೆಂಗಳೂರು (ಏ, 20): ಇಂಡಿಯನ್ ಪ್ರೀಮಿಯರ್ ಲೀಗ್ 2025ರ 37ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (Punjab Kings vs Royal Challengers Bengaluru) ತಂಡದ ಭರ್ಜರಿ ಜಯ ಸಾಧಿಸಿದೆ. ಚಂಡೀಗಢದ ಮುಲ್ಲನ್‌ಪುರ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮ್ಯಾಚ್ನಲ್ಲಿ ಆರ್‌ಸಿಬಿ 7 ವಿಕೆಟ್‌ಗಳ ಗೆಲುವಿನೊಂದಿಗೆ ಸೇಡು ತೀರಿಸಿಕೊಂಡಿದೆ. ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಆಕರ್ಷಕ ಅರ್ಧಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಅದರಲ್ಲೂ ಈ ಪಂದ್ಯದಲ್ಲಿ ಎಲ್ಲರ ಗಮನ ಸೆಳೆದಿದ್ದು ಕಿಂಗ್ ಕೊಹ್ಲಿ ಬೆಂಕಿಯ ಓಟ. ಒಂದಲ್ಲ, ಎರಡಲ್ಲಿ ವಿರಾಟ್ 4 ರನ್ಗಾಗಿ ಓಡಿದ್ದು ಎಲ್ಲರ ಹುಬ್ಬೇರುವಂತೆ ಮಾಡಿತು.
ವಿರಾಟ್ ಕೊಹ್ಲಿ ಅವರ ಫಿಟ್ನೆಸ್ ಬಗ್ಗೆ ಅಥವಾ ವಿಕೆಟ್‌ಗಳ ನಡುವೆ ಅವರು ಎಷ್ಟು ವೇಗವಾಗಿ ಓಡುತ್ತಾರೆ ಎಂಬುದರ ಬಗ್ಗೆ ಹೇಳಬೇಕಾಗಿಲ್ಲ. 36 ನೇ ವಯಸ್ಸಿನಲ್ಲಿಯೂ ಸಹ, ಅವರು ಇನ್ನೂ 16 ವರ್ಷದ ಹುಡುಗನಂತೆ ಸೂಪರ್ ಫಿಟ್‌ನೆಸ್‌ನೊಂದಿಗೆ ಓಡುತ್ತಾರೆ. ಕೊಹ್ಲಿ ಕ್ರೀಸ್‌ನಲ್ಲಿದ್ದರೆ, ಇನ್ನೊಂದು ತುದಿಯಲ್ಲಿರುವ ಬ್ಯಾಟ್ಸ್‌ಮನ್ ಓಡಲು ಸಾಧ್ಯವಾಗದೆ ಸುಸ್ತಾಗಬೇಕು ಎಂದು ಅನೇಕ ಕ್ರಿಕೆಟ್ ಅಭಿಮಾನಿಗಳು ತಮಾಷೆಯಾಗಿ ಹೇಳುತ್ತಾರೆ. ಇಂದಿನ ಪಂದ್ಯದಲ್ಲಿ ಕಿಂಗ್ ಕೊಹ್ಲಿ ಆ ಸತ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದರು.
ಪಂಜಾಬ್ ಮುಖ್ಯ ಬೌಲರ್ ಅರ್ಶ್‌ದೀಪ್ ಸಿಂಗ್ ಎಸೆದ ಇನ್ನಿಂಗ್ಸ್‌ನ ಮೂರನೇ ಓವರ್‌ನ ಕೊನೆಯ ಎಸೆತದಲ್ಲಿ ಆರ್‌ಸಿಬಿ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್ ಮಿಡ್-ವಿಕೆಟ್ ಕಡೆಗೆ ಶಾಟ್ ಹೊಡೆದರು. ದುರದೃಷ್ಟವಶಾತ್ ಫೀಲ್ಡರ್ ಚೆಂಡನ್ನು ನಿಲ್ಲಿಸಲು ಬಹಳ ದೂರದಿಂದ ಓಡಿ ಬರಬೇಕಾಯಿತು. ಕೊನೆಯ ಕ್ಷಣದಲ್ಲಿ, ಅವರು ಚೆಂಡನ್ನು ಬೌಂಡರಿ ಹಗ್ಗಕ್ಕೆ ತಾಗದಂತೆ ತಮ್ಮ ಕಾಲಿನಿಂದ ತಡೆದರು, ಆದರೆ ಫೀಲ್ಡರ್ ನಿಯಂತ್ರಣ ಕಳೆದುಕೊಂಡು ಬೌಂಡರಿ ಗೆರೆಯನ್ನು ಮೀರಿ ಮುಂದೆ ಹೋದರು.
IPL 2025: ತವರಿನ ಸೋಲಿಗೆ ತವರಿನಲ್ಲೇ ಉತ್ತರ; ಪಂಜಾಬ್ ವಿರುದ್ಧ ಸೇಡು ತೀರಿಸಿಕೊಂಡ ಆರ್‌ಸಿಬಿ
ಇದನ್ನು ಕಂಡು ವಾಹ್.. ಅದ್ಭುತ ಬೌಲಿಂಗ್ ಸೇವ್ ಎಂದು ಹೇಳಿದರು. ಆದರೆ, ಪಡಿಕ್ಕಲ್ ಜೊತೆ ವಿಕೆಟ್‌ಗಳ ನಡುವೆ ವಿರಾಟ್ ಓಡುವುದನ್ನು ಕಂಡು ಇಡೀ ಸ್ಟೇಡಿಯಂ ಶಾಕ್ ಆಯಿತು. ಚಿರತೆಯಂತೆ ಓಡಿ ಒಂದೇ ಬಾರಿಗೆ ನಾಲ್ಕು ರನ್ ಗಳಿಸಿದರು. ಫೀಲ್ಡರ್ ಚೆಂಡನ್ನು ಬೌಂಡರಿಗೆ ಹೋಗದಂತೆ ತಡೆದರು, ಆದರೆ ಅದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ಪಡಿಕ್ಕಲ್ ಅವರು ಕೊಹ್ಲಿ ಜೊತೆ ಓಡಲು ಸಾಕಷ್ಟು ಕಷ್ಟಪಟ್ಟರು. ಪಡಿಕ್ಕಲ್ ಹೊರತುಪಡಿಸಿ, ಬೇರೆ ಯಾವುದೇ ಬ್ಯಾಟ್ಸ್‌ಮನ್ ಇದಕ್ಕೆ ಮೂರು ರನ್ ಗಳಿಸುತ್ತಿದ್ದರು. ಆದರೆ, ಕೊಹ್ಲಿಯ ವೇಗವು ನಾಲ್ಕನೇ ರನ್‌ಗೆ ಕಾರಣವಾಯಿತು. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
Wait did someone say, Yo-Yo Test? 🫣😁
Running four in a T20 match? That’s pure hustle from #ViratKohli & #DevduttPadikkal! 👏🏻🔥
Watch the LIVE action ➡ https://t.co/dJsow1beL1#IPLRevengeWeek 👉 #PBKSvRCB | LIVE NOW on Star Sports 2, Star Sports 2 Hindi & JioHotstar! pic.twitter.com/NwAu8rlCwb
— Star Sports (@StarSportsIndia) April 20, 2025
ಈ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಕೊಹ್ಲಿ 54 ಎಸೆತಗಳಲ್ಲಿ 7 ಫೋರ್, 1 ಸಿಕ್ಸರ್ನೊಂದಿಗೆ ಅಜೇಯ 74 ರನ್ ಚಚ್ಚಿದರು. ಇವರಿಗೆ ಸಾಥ್ ನೀಡಿದ ದೇವದತ್ ಪಡಿಕ್ಕಲ್ 35 ಎಸೆತಗಳಲ್ಲಿ 5 ಫೋರ್, 4 ಸಿಕ್ಸರ್ನೊಂದಿಗೆ 61 ರನ್ ಚಚ್ಚಿದರು. ಮೊದಲು ಬ್ಯಾಟ್ ಮಾಡಿದ ಪಂಜಾಬ್ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿತು. ಟಾರ್ಗೆಟ್ ಬೆನ್ನಟ್ಟಿದ ಆರ್‌ಸಿಬಿ 18.5 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 159 ರನ್ ಬಾರಿಸುವ ಮೂಲಕ ಜಯ ಸಾಧಿಸಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ