AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: ವಾಟ್ ಎ ಕ್ಯಾಚ್ ಕೃನಾಲ್..! ತಬ್ಬಿ ಮುದ್ದಾಡಿದ ಕೊಹ್ಲಿ; ವಿಡಿಯೋ

IPL 2025: ವಾಟ್ ಎ ಕ್ಯಾಚ್ ಕೃನಾಲ್..! ತಬ್ಬಿ ಮುದ್ದಾಡಿದ ಕೊಹ್ಲಿ; ವಿಡಿಯೋ

ಪೃಥ್ವಿಶಂಕರ
|

Updated on: Apr 20, 2025 | 8:17 PM

Krunal Pandya catch: ಐಪಿಎಲ್ 2025 ರ 37ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಆರ್‌ಸಿಬಿ ನಡುವಿನ ಪಂದ್ಯದಲ್ಲಿ ಕೃನಾಲ್ ಪಾಂಡ್ಯ ಅವರ ಅದ್ಭುತ ಕ್ಯಾಚ್ ಎಲ್ಲರ ಗಮನ ಸೆಳೆಯಿತು. ಶ್ರೇಯಸ್ ಅಯ್ಯರ್ ಅವರನ್ನು ಔಟ್ ಮಾಡಿದ ಈ ಕ್ಯಾಚ್‌ಗೆ ವಿರಾಟ್ ಕೊಹ್ಲಿ ಅವರ ಉತ್ಸಾಹಭರಿತ ಪ್ರತಿಕ್ರಿಯೆ ಕೂಡಾ ಸುದ್ದಿಯಾಯಿತು. ಈ ಪಂದ್ಯದಲ್ಲಿ ಆರ್‌ಸಿಬಿ 7 ವಿಕೆಟ್‌ಗಳಿಂದ ಗೆಲುವು ಸಾಧಿಸಿತು.

ಐಪಿಎಲ್ 2025 ರ 37 ನೇ ಪಂದ್ಯವು ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಚಂಡೀಗಢದ ಮುಲ್ಲನ್‌ಪುರ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಆರ್​ಸಿಬಿ 7 ವಿಕೆಟ್​ಗಳಿಂದ ಗೆದ್ದು ಬೀಗಿತು. ಇದೀಗ ಪಂಜಾಬ್ ಕಿಂಗ್ಸ್ ಬ್ಯಾಟಿಂಗ್‌ ಸಮಯದಲ್ಲಿ ಶ್ರೇಯಸ್ ಅಯ್ಯರ್ ಔಟಾದಾಗ ವಿರಾಟ್ ಕೊಹ್ಲಿ ಮಾಡಿದ ಸಂಭ್ರಮಾಚರಣೆ ನೋಡಿ ಎಲ್ಲರೂ ಆಶ್ಚರ್ಯಚಕಿತರಾದರು.

ಕೃನಾಲ್ ಅದ್ಭುತ ಕ್ಯಾಚ್

ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡಕ್ಕೆ ನಾಯಕ ಶ್ರೇಯಸ್ ಅಯ್ಯರ್ ರೊಮಾರಿಯೊ ಶೆಫರ್ಡ್ ಎಸೆತದಲ್ಲಿ ದೊಡ್ಡ ಹೊಡೆತ ನೀಡಲು ಪ್ರಯತ್ನಿಸಿದಾಗ ಕ್ಯಾಚ್ ನೀಡಿ ಔಟಾದರು. ಅಯ್ಯರ್ ಚೆಂಡನ್ನು ನೇರವಾಗಿ ಗಾಳಿಯಲ್ಲಿ ಹೊಡೆದರು. ಲಾಂಗ್ ಆನ್‌ನಲ್ಲಿ ನಿಂತಿದ್ದ ಕೃನಾಲ್ ಪಾಂಡ್ಯ ಅದ್ಭುತ ರನ್ನಿಂಗ್ ಕ್ಯಾಚ್ ಪಡೆದರು. ಈ ಕ್ಯಾಚ್ ನೋಡಿ ಎಲ್ಲರೂ ಆಶ್ಚರ್ಯಚಕಿತರಾದರು. ಕೃನಾಲ್ ಕ್ಯಾಚ್ ಹಿಡಿದ ತಕ್ಷಣ, ವಿರಾಟ್ ಕೊಹ್ಲಿ ಸಂತೋಷದಲ್ಲಿ ವಿಶಿಷ್ಟ ಪ್ರತಿಕ್ರಿಯೆ ನೀಡಿದರು. ಬೌಲರ್ ರೊಮಾರಿಯೊ ಶೆಫರ್ಡ್ ಕಡೆಗೆ ಓಡಿದ ಕೊಹ್ಲಿ ಅವರನ್ನು ಅಪ್ಪಿಕೊಂಡು ಆಕ್ರಮಣಕಾರಿ ಸಂಭ್ರಮಾಚರಣೆ ಮಾಡಿದರು. ಈ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ 10 ಎಸೆತಗಳಲ್ಲಿ ಕೇವಲ 6 ರನ್ ಗಳಿಸಿ ಔಟಾದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ