ಕುಟುಂಬದ ಜೊತೆ ಉಡುಪಿಗೆ ಬಂದ ಸುನೀಲ್ ಶೆಟ್ಟಿ; ಮಾರಿಗುಡಿಗೆ ಭೇಟಿ
ಸುನೀಲ್ ಶೆಟ್ಟಿ ಅವರು ಮಂಗಳೂರು ಮೂಲದವರು. ಅವರು ಆಗಾಗ ಇಲ್ಲಿಗೆ ಭೇಟಿ ನೀಡುತ್ತಾ ಇರುತ್ತಾರೆ. ಈಗ ಅವರು ಉಡುಪಿಯ ಹೊಸ ಮಾರಿಗುಡಿಗೆ ಭೇಟಿ ಕೊಟ್ಟಿದ್ದಾರೆ. ಇತ್ತೀಚಿಗಷ್ಟೇ ಬ್ರಹ್ಮಕಲಶೋತ್ಸವ ಮೂಲಕ ಕಾಪು ಹೊಸ ಮಾರಿಗುಡಿ ಹೊಸ ಮೆರುಗು ಪಡೆದುಕೊಂಡಿದೆ. ಈ ಫೋಟೋ ವೈರಲ್ ಆಗಿದೆ.
ಸುನೀಲ್ ಶೆಟ್ಟಿ (Suniel Shetty) ಅವರು ಮಂಗಳೂರು ಮೂಲದವರು. ಈಗ ಉಡುಪಿ ಜಿಲ್ಲೆಯ ಕಾಪು ತಾಲೂಕಿನಲ್ಲಿರುವ ಕಾಪು ಹೊಸ ಮಾರಿಗುಡಿಗೆ ಸುನೀಲ್ ಶೆಟ್ಟಿ ಕುಟುಂಬ ಸಮೇತ ಬಂದಿದ್ದಾರೆ. ಮಾರಿಯಮ್ಮನಿಗೆ ಸುನೀಲ್ ಶೆಟ್ಟಿ, ಅವರ ತಾಯಿ ಮತ್ತು ಕುಟುಂಬಸ್ಥರು ಪೂಜೆ ಸಲ್ಲಿಸಿದ್ದಾರೆ. ದೇವಾಲಯದ ಶಿಲ್ಪ ರಚನೆಯನ್ನು ಕಂಡು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ದೇವಾಲಯದ ವತಿಯಿಂದ ಸುನೀಲ್ ಶೆಟ್ಟಿ ಮತ್ತು ತಾಯಿಗೆ ಸನ್ಮಾನ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos

