Karnataka Budget 2022: ಈ ಬಾರಿಯ ಬಜೆಟ್ ಬಗ್ಗೆ ಇಲ್ಲಿದೆ ನಿಮ್ಮ ಅಭಿಪ್ರಾಯ

| Updated By: ಅಕ್ಷಯ್​ ಪಲ್ಲಮಜಲು​​

Updated on: Mar 07, 2022 | 4:31 PM

Karnataka Budget 2022: ಮಾರ್ಚ್ 4ರಂದು ನಡೆದ ಬಜೆಟ್ ಹೇಗಿತ್ತು? ಎಂದು ರಾಜ್ಯದ ಜನರ ಬಳಿ ಅಭಿಪ್ರಾಯಗಳನ್ನು  ಟಿವಿ9 ಕನ್ನಡ ಡಿಜಿಟಲ್  ಕೇಳಿತ್ತು

Karnataka Budget 2022: ಈ ಬಾರಿಯ ಬಜೆಟ್ ಬಗ್ಗೆ ಇಲ್ಲಿದೆ ನಿಮ್ಮ ಅಭಿಪ್ರಾಯ
ಸಾಮಾಜಿಕ ಜಾಲತಾಣದಲ್ಲಿ ಮಹಾಜಭಿಪ್ರಾಯ
Follow us on

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಮಾರ್ಚ್ 4ರಂದು ಚೊಚ್ಚಲ ಬಜೆಟ್‌ ಮಂಡಿಸಿದ್ದಾರೆ. ಹಲವು ಯೋಜನೆಗಳ ಬಗ್ಗೆ ಮತ್ತು ಕೆಲವೊಂದು ಹೊಸ ಯೋಜನೆಗಳನ್ನು ಈ ಬಜೆಟ್ ನಲ್ಲಿ ತಂದಿದ್ದಾರೆ. ಜೊತೆಗೆ ಸರ್ಕಾರದ ಹಳೆಯ ಯೋಜನೆಗಳಿಗೆ ಜೀವ ನೀಡುವ ಕೆಲಸಗಳು ನಡೆಯುತ್ತದೆ ಎಂದು ಹೇಳಿದ್ದಾರೆ. ಬಜೆಟ್ ಬಗ್ಗೆ ರಾಜ್ಯದಲ್ಲಿ ಕೆಲವೊಂದು ಪರ- ವಿರೋಧಗಳು ಚರ್ಚೆಯಾಗುತ್ತಿದೆ. ವಿರೋಧ ಪಕ್ಷಗಳು ಕೂಡ ಬಜೆಟ್ ಬಗ್ಗೆ ಅಪಸ್ವರವನ್ನು ವ್ಯಕ್ತಪಡಿಸಿದೆ. ಸಿಎಂ ಬೊಮ್ಮಾಯಿ ಅವರ ಚೊಚ್ಚಲ ಬಜೆಟ್ ಇದಾಗಿದ್ದು ಅನೇಕ ವಲಯಗಳಿಗೆ  ಕೋಟಿ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದಾರೆ. ಇದರ ನಡುವೆ ಕೆಲವೊಂದು ಜಿಲ್ಲೆಗಳಿಗೆ,  ಇಲಾಖೆಗೆ ಬಜೆಟ್ ನಲ್ಲಿ  ಯಾವುದೇ  ಹಣ ಬಿಡುಗಡೆಯಾಗಿಲ್ಲ ಎಂದು ಜನಾಭಿಪ್ರಾಯ ವ್ಯಕ್ತವಾಗಿದೆ.  ಮಾರ್ಚ್ 4ರಂದು ನಡೆದ ಬಜೆಟ್ ಹೇಗಿತ್ತು? ಎಂದು ರಾಜ್ಯದ ಜನರ ಬಳಿ ಅಭಿಪ್ರಾಯಗಳನ್ನು  ಟಿವಿ9 ಕನ್ನಡ ಡಿಜಿಟಲ್  ಕೇಳಿತ್ತು, ಅದಕ್ಕೆ ಒಂದಿಷ್ಟು ಜನ ಈ ಬಾರಿಯ ಬಜೆಟ್  ಚೆನ್ನಾಗಿತ್ತು, ಇನ್ನೊಂದಿಷ್ಟು ಜನರು ನಮ್ಮ ಜಿಲ್ಲೆಗೆ ಈ ಕಾರ್ಯಕ್ರಮಗಳು ಬೇಕಿತ್ತು ಎಂದು ಆಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.

ಸಿಎಂ ಬೊಮ್ಮಾಯಿ ಮಂಡಿಸಿದ ಬಜೆಟ್ ಉತ್ತಮವಾಗಿತ್ತು 

ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಮಿ ಮಾರ್ಚ್ 4ರಂದು ಮಂಡಿಸಿದ ಬಜೆಟ್ ಉತ್ತಮವಾಗಿತ್ತು. ಅನೇಕ ಹೊಸ ಯೋಜನೆಗಳನ್ನು ತಂದಿದ್ದಾರೆ. ಹಳೆಯ ಯೋಜನೆಗಳಿಗೆ ಜೀವ ನೀಡುವ ಭರವಸೆಯನ್ನು ಸಿಎಂ ನೀಡಿದ್ದಾರೆ.  ಈ ಬಾರಿ ಬಜೆಟ್ ನಲ್ಲಿ ರೈತರಿಗೆ ಹೆಚ್ಚಿನ ಅನುದಾನವನ್ನು ನೀಡಿದ್ದಾರೆ. ಜೊತೆಗೆ ಯುವ ಶಕ್ತಿಗೆ ಉತ್ತೇಜನ ನೀಡಿದ್ದಾರೆ. ಮೇಕೆದಾಟು ಮತ್ತು ಎತ್ತಿನಹೊಳೆಗೆ ಹೆಚ್ಚಿನ ಒತ್ತು ನೀಡಿದ್ದಾರೆ.  ಮಹಿಳಾ ಮತ್ತು ಮಕ್ಕಳ ಇಲಾಖೆಗೂ ಹೆಚ್ಚಿನ ಹಣ ಬಿಡುಗಡೆ ಮಾಡಿದ್ದಾರೆ. ಉದ್ಯೋಗ ಸೃಷ್ಟಿ ಮಾಡುವ ಬಗ್ಗೆಯು ಒತ್ತು ನೀಡದ್ದಾರೆ. ಒಟ್ಟಾರೆಯಾಗಿ ಈ ಬಾರಿಯ ಬಜೆಟ್ ಜನಪರವಾಗಿತ್ತು ಮತ್ತು ಈ ಬಾರಿ ಯಾವುದೇ ತೆರಿಗೆ ಹೆಚ್ಚಿಸುವ ಯೋಚನೆ ಇಲ್ಲ ಎಂದಿರುವುದು ನಮಗೆ ಸಂತೋಷ ತಂದಿದೆ ಎಂದು ಟಿವಿ9 ಕನ್ನಡ ಡಿಜಿಟಲ್ ಗೆ ತಮ್ಮ  ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಈ ಬಾರಿ ಬಜೆಟ್ ನಿಂದ ಯಾವುದೇ ಪ್ರಯೋಜನ ಇಲ್ಲ 

ಸಿಎಂ ಬೊಮ್ಮಾಯಿ ಮಂಡಿಸಿದ ಈ ಬಾರಿ ಬಜೆಟ್ ಯಾವುದೇ ಪ್ರಯೋಜನ ಸಾಮಾನ್ಯರಿಗೆ ಇಲ್ಲ ಎಂದು ಅಭಿಪ್ರಾಯ ವ್ಯಕ್ತವಾಗಿದೆ. ಸರ್ಕಾರ ಅನೇಕ ಕ್ಷೇತ್ರಗಳನ್ನು ಕಡೆಗಣನೆ ಮಾಡಿದೆ.  ಹಳೆಯ ಯೋಜನೆಗಳನ್ನು ಇನ್ನು ಸರಿಯಾಗಿ ನೀಡಿಲ್ಲ. ಬಡವರಿಗೆ ಸರಿಯಾದ ಯೋಜನೆ ಸಿಕ್ಕಿಲ್ಲ, ರೈತರಿಗೆ ಬೆಂಬಲ ಬೆಲೆಯನ್ನು ನೀಡಿಲ್ಲ. ಮಹಿಳೆಯರು ಹಾಗೂ ಯುವಕರಿಗೆ ಯಾವುದೇ ಉದ್ಯೋಗ ಸೃಷ್ಟಿ ಬಗ್ಗೆ ಈ ಯೋಜನೆಯಲ್ಲಿ ಇಲ್ಲ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಬಜೆಟ್ ಬಗ್ಗೆ ಜನಭಿಪ್ರಾಯ

  1. ರಾಜ್ಯ ಕೃಷಿ ಉದ್ಯೋಗಕಾಂಕ್ಷಿಗಳಿಗೆ ನಿರಾಸೆ ಮೂಡಿಸಿದೆ. ಬಜೆಟ್ ಕೃಷಿ ಇಲಾಖೆಯಲ್ಲಿ ಸಾವಿರಾರು ಹುದ್ದೆಗಳು ಖಾಲಿ ಇದ್ದು, ನೇಮಕಾತಿ ಮಾಡುವ ಭರವಸೆಯನ್ನು ಬಜೆಟ್ ಅಲ್ಲಿ ಘೊಷಣೆ ಮಾಡದೇ ಮುಖ್ಯಮಂತ್ರಿಗಳು  ನಿರಾಸೆ ಮೂಡಿಸಿದ್ದಾರೆ, ಕೃಷಿ ಮತ್ತು ತೋಟಗಾರಿಕೆ ವಿವಿಯಿಂದ ಸರಿಸುಮಾರ 5000 ಹೆಚ್ಚು ವಿದ್ಯಾರ್ಥಿಗಳು ಡಿಪ್ಲೊಮಾ ಕೃಷಿ ಪದವಿದರರು, ಉದ್ಯೋಗ ನೀರಿಕ್ಷೆಯಲ್ಲಿದ್ದರು. ಬಜೆಟ್ ಅಲ್ಲಿ ಘೋಷಣೆ ಮಾಡುವ ಭರವಸೆಯನ್ನು ಸಹ ಕೃಷಿ ಸಚಿವರು ವ್ಯಕ್ತಪಡಿಸಿದ್ದರು. ಡಿಪ್ಲೊಮಾ ಕೃಷಿ ವಿದ್ಯಾರ್ಥಿಗಳನ್ನು ರೈತಮಿತ್ರ ಹುದ್ದೆಗಳಿಗೆ, ನೇಮಕಾತಿ ಸೇರಿದಂತೆ, ಬಜೆಟ್ ಘೋಷಣೆ ಮಾಡದಿರುವುದು ರಾಜ್ಯದ ರೈತರ ಮಕ್ಕಳಾದ ಕೃಷಿ ವಿದ್ಯಾರ್ಥಿಗಳಿಗೆ ನಿರಾಸೆ ಮೂಡಿಸಿದೆ. ಬಿಜಾಪುರ ಜಿಲ್ಲೆಯ ವಾಣಿಜ್ಯ ಬೆಳೆಯಾಗಿ ನಿಂಬೆಹಣ್ಣು ಪ್ರಮುಖವಾದದ್ದು, ಬೆಳೆಗಾರರಿಗೆ ಪೂರಕವಾದ ಬಜೆಟ್ ಇಲ್ಲವಾಗಿದೆ. ಪ್ರತಿ ತಾಲ್ಲೂಕಿಗೆ ಒಂದು ಕೃಷಿ ಸಂಸ್ಕರಣ ಘಟಕಕ್ಕೆ ಆದ್ಯತೆ ನೀಡಿಲ್ಲ, ರಾಜ್ಯದ ಜನಸಂಖ್ಯೆ ಹೆಚ್ಚಾದಂತೆ ನೀರಿನ ಸಮಸ್ಯೆ ಎದುರಾಗುತ್ತಿದ್ದು, ಮಳೆಯಾಶ್ರೀತವಾಗಿ ಕೃಷಿ ಮಾಡಲು ಕೃಷಿ ಹೊಂಡಗಳ ಘೋಷಣೆ ಮತ್ತಷ್ಟು ರೈತರನ್ನು ಆತಂಕಕ್ಕೆ ದೂಡಿದೆ. ಒಟ್ಟಾರೆಯಾಗಿ,ರೈತರ ಹಾಗೂ ರೈತರ ಮಕ್ಕಳ ವಿರೋಧಿ ಬಜೆಟ್ ಮಂಡನೆ ಎಂದರೆ ತಪ್ಪಾಗಲಾರದು. ಆರೋಗ್ಯ ದೃಷಿಯಿಂದ, ಬಿಜಾಪುರ ಜಿಲ್ಲೆಗೆ ಮೆಡಿಕಲ್ ಘೊಷಣೆ ಇಲ್ಲದಾಯಗಿದೆ . ರೈತರಿಗೆ ಸಾವಯವ, ಸಮಗ್ರಕೃಷಿ ಪದ್ದತಿಗಳ ಯೋಜನೆಗಳತ್ತ ಹೆಚ್ಚಿನ ಒಲವು ನೀಡಲ್ಲ.                                                                                                     – ಮಂಜುನಾಥ. ವ. ಬುದ್ನಿ ಪ್ರಧಾನಕಾರ್ಯದರ್ಶಿ, ಕರ್ನಾಟಕ ರಾಜ್ಯ ಡಿಪ್ಲೊಮಾ ಕೃಷಿ ಪದವಿದರರ ಸಂಘ ಧಾರವಾಡ
  2. ಕಳೆದ ವರ್ಷ ಬಿ.ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿರುವ ಕಾಲದಲ್ಲಿ ಕಳಸ- ಬಂದೂರಿ ಯೋಜನೆಯ ಅನುಷ್ಠಾನಕ್ಕೆ 1650ಕೋಟಿ ರೂ ಮೀಸಲು ಇಟ್ಟಿದ್ದರು, ಈ ವರ್ಷ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು  1000 ಕೋಟಿ ನೀಡಿದ್ದಾರೆ. ಈ ಯೋಜನೆಯ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಜಾರಿಗೆ ಬಾರದ ಈ ಯೋಜನೆಗೆ ಹಣವನ್ನು ನೀಡುವುದು ಏಕೆ ? ಇಷ್ಟೊಂದು ಹಣವನ್ನು ಬಿಡುಗಡೆ ಮಾಡಿದರು ನೀರು ಮಾತ್ರ ನರಗುಂದ ರೈತರಿಗೆ ಸಿಗುತ್ತಿಲ್ಲ. ಪ್ರತಿ ವರ್ಷ ಕೋಟ್ಯಂತರ ಹಣವನ್ನು ಪೋಲು ಮಾಡುವುದರ ಉದ್ದೇಶ ಏನು? ಹಾಗಾದರೆ 2650 ಕೋಟಿ ರೂಪಾಯಿ ಏನು ಆಯಿತು, ಎಲ್ಲಿ ಹೋಯಿತು….?                                                                                          – ರಮೇಶ ಎಸ್ ಕುಂದರಗಿ, ನರಗುಂದ
  3. ಗ್ರಾಮ ಪಂಚಾಯತಿ ಸದಸ್ಯರಿಗೆ ಈವಾಗ ಗೌರವ ಧನ 1000 ರೂಪಾಯಿ ಇದೇ ಅದು ಯಾವದಕ್ಕೂ ಸಾಕಗುತ್ತಿಲ್ಲ.  ಅದಕ್ಕೆ ತಿಂಗಳಿಗೆ 10000ಸಾವಿರ ಕೊಡಬೇಕಿತ್ತು  ಮತ್ತು ಮಾಜಿ ಸದಸ್ಯರಿಗೆ 5000 ಸಾವಿರ ಕೊಡಬೇಕು  ಎಂಬುದು ಸರ್ಕಾರದ ಮುಂದೆ ಬೇಡಿಕೆ ಇತ್ತು. ಶಾಸಕರು ಮತ್ತು ಸಚಿವರ ವೇತನ ಮಾತ್ರ ಏರಿಕೆಯಾಗಿದೆ. ಆದರೆ ನಮ್ಮ ಸರ್ಕಾರಕ್ಕೆ  ಗ್ರಾಮ ಪಂಚಾಯತ್ ಸದಸ್ಯರ ಗೌರವ ಧನ ನೆನಪಿಗೆ ಬರಲಿಲ್ಲ ಎಂಬ ನೋವಿದೆ.                                                                                                              -ಯಮನೂರಪ್ಪ
  4. ಮೈಸೂರ್ ಟು ಹಾಸನ್ ಹೆಚ್ಚುವರಿ ರೈಲು ಯಾಕೆ ಇಲ್ಲ, ಮೈಸೂರ್ ಟು ಬೆಂಗಳೂರು ಹೆಚ್ಚುವರಿ ರೈಲು ಇದೆ, ಆದರೆ ಮೈಸೂರ್ ಟು ಬೆಳಗೊಳ, ಕೃಷ್ಣರಾಜನಗರ, ಮಂದಗೆರೆ, ಹೊಳೆನರಸೀಪುರ, ಹಾಸನ, ಅರಸಿನಕೆರೆ, ಈ ಭಾಗಕ್ಕೆ ಯಾಕೆ ರೈಲು ಇಲ್ಲ ಹಾಗೂ ರೈಲ್ವೆ ಟಿಕೆಟ್ ದರವನ್ನು ಕಡಿಮೆಯಾಗಿಲ್ಲ ಕೊರಾನಾ ಟೈಮಲ್ಲಿ ಸ್ಪೆಷಲ್ ಟ್ರೈನ್ ಅಂತ ಬಿಟ್ಟು ಟಿಕೆಟ್ ದರವನ್ನು ಜಾಸ್ತಿ ಮಾಡಿದ್ದಾರೆ ಆದರೆ ಈಗ ನೋರ್ಮಲ್ ಟ್ರೈನ್ ಹೋಗುತ್ತಿದೆ ಇನ್ನೂ ರೈಲ್ವೆ ಟಿಕೆಟ್ ದರ ಕಡಿಮೆಯಾಗಿಲ್ಲ.                                        – ಶ್ರೀನಿವಾಸ ಗೌಡ

ಸೋಶಿಯಲ್ ಮಿಡಿಯಾದಲ್ಲಿ ಜನಭಿಪ್ರಾಯ

facebook – 2000ಕ್ಕೂ ಹೆಚ್ಚು

instagram – 200ಕ್ಕೂ ಹೆಚ್ಚು

twitter – 100ಕ್ಕೂ ಹೆಚ್ಚು

koo   – 100ಕ್ಕೂ ಹೆಚ್ಚು

Published On - 8:41 am, Sun, 6 March 22