ಚಂಡೀಗಢ: ಪ್ರಥಮ ಪೂಜಿತ, ಏಕದಂತ, ವಿಘ್ನ ನಿವಾರಕ ಹೀಗೆ ಹತ್ತು ಹಲವು ಹೆಸರುಗಳಿಂದ ಕರೆಸಿಕೊಳ್ಳುವ ಗೌರಿಸುತ ಗಣೇಶನ ಹಬ್ಬವನ್ನು ದೇಶಾದ್ಯಂತ ಆಚರಿಸಲಾಯಿತು. ಆದರೆ ಪ್ರತೀ ವರ್ಷದಂತೆ ಈ ವರ್ಷ ಹಬ್ಬದಲ್ಲಿ ಆ ಸಡಗರ ಸಂಭ್ರಮ ಇರಲಿಲ್ಲ. ಆದರೂ ಕೊರೊನಾ ನಿಯಮಗಳನ್ನು ಪಾಲಿಸುತ್ತ ಬಪ್ಪನ ದಿನವನ್ನು ಅದ್ದೂರಿಯಿಂದ ಆಚರಿಸಲಾಗಿದೆ.
ಕೊರೊನಾದ ಕರಿನೆರಳು ಹಬ್ಬದ ಸಂಭ್ರಮವನ್ನು ಕಡಿಮೆ ಮಾಡಿದ್ರೂ ಅನೇಕರು ಹೊಸ ಹೊಸ ರೀತಿಯಲ್ಲಿ ಹಬ್ಬವನ್ನು ಆಚರಿಸಿದ್ದಾರೆ. ಅನೇಕರು ಪರಿಸರ ಸ್ನೇಹಿ ಗಣೇಶನ ಮೊರೆ ಹೋಗಿದ್ರು. ಅದೇ ರೀತಿಯಲ್ಲಿ ಪಂಜಾಬ್ ರಾಜ್ಯದ ಲುಧಿಯಾನ ನಗರದ ರೆಸ್ಟೋರೆಂಟ್ನಲ್ಲಿ ಬರೋಬ್ಬರಿ 40 ಕೆ.ಜಿ ಚಾಕೊಲೇಟ್ ಬಳಸಿ ಗಣೇಶನ ವಿಗ್ರಹವನ್ನು ತಯಾರಿಸಲಾಗಿದೆ.
ಚಾಕೊಲೇಟ್ ಗಣೇಶನ ವಿಶೇಷತೆ
ಈ ರೆಸ್ಟೋರೆಂಟ್ನಲ್ಲಿ ಕಳೆದ 5 ವರ್ಷಗಳಿಂದ ಪ್ರತಿ ವರ್ಷವೂ ಚಾಕೊಲೇಟ್ ಬಳಸಿ ಗಣಪತಿ ವಿಗ್ರಹವನ್ನು ತಯಾರಿಸಲಾಗುತ್ತಿದೆ. 10 ಬಾಣಸಿಗರನ್ನು ಒಳಗೊಂಡ ತಂಡವು ಸತತ 10 ದಿನಗಳ ಕಾಲ ನಡೆಸಿದ ಪರಿಶ್ರಮದಿಂದ ಈ 40 ಕೆಜಿಯ ಚಾಕೊಲೇಟ್ ಗಣೇಶ ಸಜ್ಜಾಗಿದ್ದಾನೆ. ವಿಶೇಷವೆಂದರೆ, ಈ ವಿಗ್ರಹವನ್ನು ತಯಾರಿಸಿದ ರೆಸ್ಟೋರೆಂಟ್ನ ಮಾಲೀಕ ಅದನ್ನು ಬಡ ಮಕ್ಕಳಿಗೆ ವಿತರಿಸಲು ನಿರ್ಧರಿಸಿದ್ದಾರೆ.
This is our 5th consecutive year of making Chocolate Lord Ganesha. It took us 10 days, 10 chefs & 40 kgs of chocolate for the Chocolate Ganpati to be made. The intention is to inspire people to celebrate Ganesh Chaturthi in Eco-friendly ways! #GanpatiBappaMorya #GaneshUtsav pic.twitter.com/6MLST6UKKq
— Harjinder Singh Kukreja (@SinghLions) August 22, 2020