ನೇಪಥ್ಯಕ್ಕೆ ಸರಿದಿದ್ದ ಮಂದಿರಾ ನಿದ್ರೆಗೆಡಿಸುವ ಪೋಸ್ಟ್​ಗಳಿಂದ ವಾಪಸ್ಸಾಗಿದ್ದಾರೆ!

|

Updated on: Sep 28, 2020 | 7:59 PM

ಇಂಡಿಯನ್ ಪ್ರಿಮೀಯರ್ ಲೀಗ್ ಅಂದಾಕ್ಷಣ 2008 ರಿಂದ ಟೂರ್ನಿಯನ್ನು ಸತತವಾಗಿ ನೋಡುತ್ತ ಬಂದಿರುವವರಿಗೆ ಕ್ರಿಕೆಟ ಆಟಗಾರರ ಜೊತೆ 2009 ರಲ್ಲಿ ಹೋಸ್ಟ್ ಮಾಡಿದ ಮಂದಿರಾ ಬೇಡಿ ಸಹ ನೆನಪಾಗುತ್ತಾರೆ. ವಯಸ್ಸಿನಲ್ಲಿ ಅರ್ಧ ಶತಕಕ್ಕೆ ಹತ್ತಿರ ಬಂದಿರುವ ಮಂದಿರಾ ಈಗಲೂ ಗ್ಲಾಮರಸ್ ಆಗಿ ಕಾಣುತ್ತಾರೆ. 48ರ ಪ್ರಾಯದ ಬಹುಮುಖ ಪ್ರತಿಭೆಯ ಬೆಡಗಿ 2009ಕ್ಕೆ ಮೊದಲು ಎರಡು ವಿಶ್ವಕಪ್​ಗಳಿಗೆ (2003 ಮತ್ತು 2007) ಮತ್ತು ಆ ಮಧ್ಯೆ ನಡೆದ ಚಾಂಪಿಯನ್ಸ್ ಟ್ರೋಫಿ ಟೂರ್ನಮೆಂಟ್​ಗಳಿಗೆ ನಿರೂಪಕಿಯಾಗಿ ಕೆಲಸ ಮಾಡಿದ್ದಾರಾದರೂ, ಐಪಿಎಲ್-2 ನಂತರ […]

ನೇಪಥ್ಯಕ್ಕೆ ಸರಿದಿದ್ದ ಮಂದಿರಾ ನಿದ್ರೆಗೆಡಿಸುವ ಪೋಸ್ಟ್​ಗಳಿಂದ ವಾಪಸ್ಸಾಗಿದ್ದಾರೆ!
Follow us on

ಇಂಡಿಯನ್ ಪ್ರಿಮೀಯರ್ ಲೀಗ್ ಅಂದಾಕ್ಷಣ 2008 ರಿಂದ ಟೂರ್ನಿಯನ್ನು ಸತತವಾಗಿ ನೋಡುತ್ತ ಬಂದಿರುವವರಿಗೆ ಕ್ರಿಕೆಟ ಆಟಗಾರರ ಜೊತೆ 2009 ರಲ್ಲಿ ಹೋಸ್ಟ್ ಮಾಡಿದ ಮಂದಿರಾ ಬೇಡಿ ಸಹ ನೆನಪಾಗುತ್ತಾರೆ. ವಯಸ್ಸಿನಲ್ಲಿ ಅರ್ಧ ಶತಕಕ್ಕೆ ಹತ್ತಿರ ಬಂದಿರುವ ಮಂದಿರಾ ಈಗಲೂ ಗ್ಲಾಮರಸ್ ಆಗಿ ಕಾಣುತ್ತಾರೆ.

48ರ ಪ್ರಾಯದ ಬಹುಮುಖ ಪ್ರತಿಭೆಯ ಬೆಡಗಿ 2009ಕ್ಕೆ ಮೊದಲು ಎರಡು ವಿಶ್ವಕಪ್​ಗಳಿಗೆ (2003 ಮತ್ತು 2007) ಮತ್ತು ಆ ಮಧ್ಯೆ ನಡೆದ ಚಾಂಪಿಯನ್ಸ್ ಟ್ರೋಫಿ ಟೂರ್ನಮೆಂಟ್​ಗಳಿಗೆ ನಿರೂಪಕಿಯಾಗಿ ಕೆಲಸ ಮಾಡಿದ್ದಾರಾದರೂ, ಐಪಿಎಲ್-2 ನಂತರ ಮೈಕ್ ಹಿಡಿದು ಕ್ರಿಕೆಟ್ ಮೈದಾನಗಳಲ್ಲಿ ಓಡಾಡುವುದು ಕಾಣಿಸಿಲ್ಲ. ಈ ಹಿನ್ಲೆಲೆಯಲ್ಲಿ ಅವರೇನು ಮಾಡುತ್ತಿದ್ದಾರೆ ಎಂದು ಪ್ರಶ್ನೆಯೇಳುವುದು ಸಹಜವೇ.

ವೆಲ್, ಸದ್ಯಕ್ಕೆ ತಾನೇನು ಮಾಡುತ್ತಿದ್ದೇನೆ ಅಂತ ಖುದ್ದು ಮಂದಿರಾ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ಗಳನ್ನು ಹಾಕುವ ಮೂಲಕ ಬಹಿರಂಗಪಡಿಸಿದ್ದಾರೆ. ಹೌದು, ಮಂದಿರಾ ಭೂಲೋಕದ ಸ್ವರ್ಗವೆಂದು ಕರೆಸಿಕೊಳ್ಳುವ ಮಾಲ್ಡೀವ್ಸ್​ನಲ್ಲಿ ಚಿಲ್ ಮಾಡುತ್ತಿದ್ದಾರೆ. ಅಲ್ಲಿನ ಪೂಲ್​ವೊಂದರ ಪಕ್ಕ ಬಿಕಿನಿಯಲ್ಲಿ ಬಿಸಿಲಿಗೆ ಮೈಯೊಡ್ಡಿ ಕೂತಿರುವ, ಮಲಗಿರುವ ಕೆಲವು ಇಮೇಜಗಳನ್ನು ಅವರು ಶನಿವಾರದಂದು ಪೋಸ್ಟ್ ಮಾಡಿದ್ದಾರೆ. ಹಲವಾರು ನೆಟ್ಟಿಗರು ಪುನಃ ನಿದ್ರೆಗೆಡುವಂತೆ ಮಂದಿರಾ ಮಾಡಿದ್ದಾರೆಂದು ಪ್ರತ್ಯೇಕವಾಗಿ ಹೇಳುವ ಅವಶ್ಯಕತೆಯಿದೆಯೇ?

1995ರಲ್ಲಿ ಬಾಲಿವುಡ್ ಬ್ಲಾಕ್​ಬಸ್ಟರ್ ‘ದಿಲ್​ವಾಲೆ ದುಲ್ಹನಿಯಾ ಲೆ ಜಾಯೆಂಗೆ‘ ಚಿತ್ರದ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ ನಂತರ ಹಲವಾರು ಫಿಲ್ಮ್​ಗಳಲ್ಲಿ ನಟಿಸಿದರಾದರೂ ಹೇಳಿಕೊಳ್ಳುವಂಥ ಪಾತ್ರ ಅವರಿಗೆ ದಕ್ಕಲಿಲ್ಲ. ಕೆಲವು ಚಿತ್ರಗಳಲ್ಲಿ ಅವರ ಪಾತ್ರಗಳಂತೂ ‘ನಾನೂ ಈ ಸಿನಿಮಾದಲ್ಲಿದ್ದೆ’ ಅನ್ನುವಷ್ಟು ನಗಣ್ಯವಾಗಿದ್ದವು. ಆಮೇಲೆ ಕಿರುತೆರೆಯ ಹಲವಾರು ಸೀರಿಯಲ್​ಗಳಲ್ಲಿ ಮಂದಿರಾ ಕಾಣಿಸಿಕೊಂಡರು. ಅಲ್ಲೂ ಅದೃಷ್ಟ ಖುಲಾಯಿಸಲಿಲ್ಲ. ಅದಾದ ಮೇಲೆಯೇ ಅವರು ಕ್ರೀಡಾ ಚ್ಯಾನೆಲ್​ಗಳಿಗೆ ಮತ್ತು ರಿಯಾಲಿಟಿ ಶೋಗಳಿಗೆ ಹೋಸ್ಟ್ ಆಗಿ ಕೆಲಸ ಮಾಡಿದ್ದು.

ಇತ್ತೀಚಿಗೆ ಮಂದಿರಾ ಹೆಚ್ಚು ಕಡಿಮೆ ನೇಪಥ್ಯಕ್ಕೆ ಸರಿದುಬಿಟ್ಟಿದ್ದರು, ಆದರೆ ಮಾಲ್ಡೀವ್ಸ್​ನಿಂದ ಮಾಡಿರುವ ಪೋಸ್ಟ್​ಗಳಿಂದ ಮತ್ತೆ ಸುದ್ದಿ ಮಾಡುತ್ತಿದ್ದಾರೆ.