National Friendship Day 2022: ಉತ್ತಮ ಸ್ನೇಹಿತನ ಐದು ಗುಣಗಳು ಇಲ್ಲಿವೆ ನೋಡಿ

| Updated By: Rakesh Nayak Manchi

Updated on: Aug 07, 2022 | 1:13 PM

ಸ್ನೇಹ ಬಳಗದಲ್ಲಿ ಹೆಚ್ಚು ನಂಬಿಕಾರ್ಹವಾದ, ಬೆಂಬಲ ನೀಡುವ, ನಿಷ್ಠೆ ತೋರಿಸುವ ವ್ಯಕ್ತಿಗಳನ್ನು ಸೇರಿಸಿಕೊಳ್ಳಿ. ಇಂತಹ ವ್ಯಕ್ತಿಗಳು ನಿಮ್ಮ ಜೀವನಕ್ಕೆ ಮುಖ್ಯವಾಗಿರುತ್ತಾರೆ.

National Friendship Day 2022: ಉತ್ತಮ ಸ್ನೇಹಿತನ ಐದು ಗುಣಗಳು ಇಲ್ಲಿವೆ ನೋಡಿ
ಸಾಂಕೇತಿಕ ಚಿತ್ರ
Follow us on

ನಮ್ಮ ಸ್ನೇಹಿತರೊಂದಿಗೆ ನಾವು ಹೊಂದಿರುವ ಪ್ರೀತಿ, ವಿಶ್ವಾಸ ಮತ್ತು ಗೌರವದ ಸಂಬಂಧವನ್ನು ಗೌರವಿಸಲು ಮತ್ತು ಗೌರವಿಸುವ ನಿಟ್ಟಿನಲ್ಲಿ ಭಾರತದಲ್ಲಿ ಪ್ರತೀ ವರ್ಷ ಆಗಸ್ಟ್ ತಿಂಗಳ ಮೊದಲ ಭಾನುವಾರದಂದು ರಾಷ್ಟ್ರೀಯ ಸ್ನೇಹಿತರ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ ಆಗಸ್ಟ್ 7ರಂದು ಆಚರಿಸಲಾಗುತ್ತಿದೆ. ಎಲ್ಲಾ ಸ್ನೇಹಿತರು ಒಂದೇ ರೀತಿಯಲ್ಲಿ ಇರುವುದಿಲ್ಲ, ಪ್ರತಿಯೊಬ್ಬರೂ ಕೂಡ ಅವರದ್ದೇದ ನಡವಳಿಕೆಗಳು ಇರುತ್ತದೆ. ಬಹುಶಃ ನೀವು ಹಲವು ವರ್ಷಗಳಿಂದ ಅದ್ಭುತ ಮತ್ತು ಅದ್ಭುತವಲ್ಲದ ಸ್ನೇಹಿತರನ್ನು ಹೊಂದಿರುತ್ತೀರಿ. ಹೀಗಿದ್ದಾಗ ಓರ್ವ ಉತ್ತಮ ಸ್ನೇಹಿತನ ಗುಣಗಳು ಹೇಗಿರುತ್ತವೆ ಎಂದು ತಿಳಿದುಕೊಳ್ಳುವುದು ಹೇಗೆ? ಇಲ್ಲಿದೆ ನೋಡಿ.

  1. ಸಂಕಟದ ಸಮಯದಲ್ಲಿ ಬೆಂಬಲ: ಸಂತೋಷ ಮತ್ತು ಸಂಕಟದ ಸಮಯದಲ್ಲಿ ಬೆಂಬಲ ನೀಡುತ್ತಿದ್ದಾನೆ ಎಂದರೆ ಆತ ನಿಮ್ಮ ಬಳಿ ಇರುವ ಉತ್ತಮ ಸ್ನೇಹಿತನಾಗಿರುತ್ತಾನೆ. ಇಂತಹ ಸ್ನೇಹಿತರನ್ನೇ ನೀವು ಸಂಪಾದಿಸುವುದು ಮುಖ್ಯ. ಏಕೆಂದರೆ ಬೆಂಬಲದ ಸಂಬಂಧವು ನಿಮ್ಮ ಮಾನಸಿಕ ಯೋಗಕ್ಷೇಮದ ಮೇಲೆ ಮತ್ತಷ್ಟು ಪರಿಣಾಮ ಬೀರುತ್ತದೆ. ನೀವು ಸಮಸ್ಯೆಗಳ ವಿರುದ್ಧ ಹೋರಾಡಬೇಕಾಗಿದ್ದರೂ ಸಹ ಬೆಂಬಲ ನೀಡುವ ಸ್ನೇಹಿತರಿದ್ದರೆ ಎದೆಗುಂದದೆ ಮುನ್ನಡೆಯಲು ಸಾಧ್ಯವಾಗಲಿದೆ. ಅವರು ನಿಮ್ಮ ಆಯ್ಕೆಗಳು ಅಥವಾ ದೃಷ್ಟಿಕೋನಗಳೊಂದಿಗೆ ಸಮ್ಮತಿಸದಿದ್ದರೂ ಅವರು ನಿಮ್ಮ ಬಗ್ಗೆ ಪ್ರಾಮಾಣಿಕವಾಗಿ ಕಾಳಜಿ ವಹಿಸುತ್ತಾರೆ.
  2. ಸಮಯದ ಮೀಸಲು: ಓರ್ವ ಉತ್ತಮ ಸ್ನೇಹಿತನಾದವನು ಆತ ಯಾವುದೇ ಕೆಲಸದಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ ನಿಮ್ಮ ಬಳಿ ಮಾತನಾಡಲು ಒಂದಷ್ಟು ಸಮಯವನ್ನು ಮೀಸಲಿಡುತ್ತಾನೆ. ನಿಮಗೆ ಏನೇ ಸಮಸ್ಯೆ ಬಂದರೂ ತನ್ನೆಲ್ಲಾ ಕೆಲಸಗಳನ್ನು ಪಕ್ಕಕ್ಕಿಟ್ಟು ಸಮಸ್ಯೆ ಪರಿಹಾರಕ್ಕೆ ಸಹಾಯ ಮಾಡುತ್ತಾನೆ.
  3. ನಿಷ್ಠಾವಂತ: ಪ್ರತಿಯೊಂದು ಸಂಬಂಧವು ನಿಷ್ಠೆಯನ್ನು ಬಯಸುತ್ತದೆ. ಏಕೆಂದರೆ ಇದು ಅತ್ಯಂತ ಅಮೂಲ್ಯವಾದ ಗುಣಮಟ್ಟದ್ದಾಗಿದೆ. ಆದ್ದರಿಂದ ಸ್ನೇಹದ ವಿಷಯಕ್ಕೆ ಬಂದಾಗ ನಿಷ್ಠೆ ಎಂಬುದು ಅತೀ ಮುಖ್ಯವಾಗಿರುತ್ತದೆ. ನೀವು ಮಾಡಿದ ಸಹಾಯ, ಕಷ್ಟಕ್ಕೆ ಸ್ಪಂದಿಸಿದ ರೀತಿಗೆ ಮತ್ತು ಇಂತಹ ಅನೇಕ ವಿಚಾರಗಳಿಗೆ ನಿಷ್ಠೆಯನ್ನು ತೋರುವವರೇ ನಿಜವಾದ ಸ್ನೇಹಿತನಾಗಿರುತ್ತಾನೆ. ನಿಷ್ಠಾವಂತ ಸ್ನೇಹಿತರು ನಿಷ್ಪಕ್ಷಪಾತಿಗಳು, ನಿಮ್ಮ ಸ್ನೇಹಿತರು ನಿಷ್ಠರಾಗಿದ್ದರೆ ಅವರು ಎಲ್ಲಾ ನಂಬಿಕೆಗೆ ಅರ್ಹರಾಗಿರುತ್ತಾರೆ.
  4. ಒಳ್ಳೆಯ ಕೇಳುಗ: ತತ್ವಶಾಸ್ತ್ರದ ಪಾಠಗಳ ಬದಲಾಗಿ ನಿಮಗೆ ಬೇಕಾಗಿರುವುದು ನಿಮ್ಮ ಮಾತನ್ನು ಕೇಳುವ ಒಬ್ಬ ಸ್ನೇಹಿತ. ಉತ್ತಮ ಕೇಳುಗರಾಗಿರುವ ಸ್ನೇಹಿತರು ನಿಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಮೌಲ್ಯೀಕರಿಸಲು ನಿಮಗೆ ವೇದಿಕೆ ಕಲ್ಪಿಸುತ್ತಾರೆ. ಅಂತಹ ಸ್ನೇಹಿತರು ನಿಮ್ಮ ಭಾವನೆಗಳನ್ನು ಎಂದಿಗೂ ತಿರಸ್ಕರಿಸುವುದಿಲ್ಲ, ಎಲ್ಲಕ್ಕಿಂತ ಹೆಚ್ಚಾಗಿ ಅವರು ಸರಿಯಾದ ದೃಷ್ಟಿಕೋನವನ್ನು ಕಂಡುಹಿಡಿಯಲು ನಿಮಗೆ ಸಹಾಯ ಮಾಡುತ್ತಾರೆ.
  5. ವಿಮರ್ಶಕ: ಉತ್ತಮ ಸ್ನೇಹಿತರು ನಿಮ್ಮ ದೊಡ್ಡ ವಿಮರ್ಶಕರಾಗಿರುತ್ತಾರೆ ಮತ್ತು ಹೆಚ್ಚಿನ ಜನರು ಹೇಳದ ವಿಷಯಗಳನ್ನು ನಿಮ್ಮ ಬಳಿ ಹೇಳಲು ಸಿದ್ಧರಿರುತ್ತಾರೆ. ಅಂತಹ ಸ್ನೇಹಿತರು ಸಾಧನೆಗಳ ಮೇಲೆ ನಮ್ಮ ಬೆನ್ನು ತಟ್ಟುತ್ತಾರೆ ಮತ್ತು ನಾವು ಒಪ್ಪಿಕೊಳ್ಳಲು ಅಥವಾ ಎದುರಿಸಲು ಬಯಸದ ವಿಷಯಗಳನ್ನು ನೋಡುವಂತೆ ಕನ್ನಡಿಯನ್ನು ಹಿಡಿದಿಟ್ಟುಕೊಳ್ಳುತ್ತಾರೆ.

ಮತ್ತಷ್ಟು ವಿಶೇಷ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ