AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

International Cat Day 2022: ಇಂದು ಅಂತಾರಾಷ್ಟ್ರೀಯ ಬೆಕ್ಕು ದಿನ; ಇಲ್ಲಿವೆ ಕೆಲವು ಕುತೂಹಲಕಾರಿ ಸಂಗತಿಗಳು

International Cat Day: ಬದುಕಿರುವಷ್ಟು ದಿನ ಇಲಿಗಳ ಪಾಲಿಗೆ ಕಂಟಕವಾಗಿ, ಮನೆಯ ಸದಸ್ಯನಾಗಿ, ಕ್ಯಾಟ್​ ಲವ್ವರ್​ಗಳ ಮುದ್ದಿನ ಪ್ರಾಣಿಯಾಗಿರುವ ಬೆಕ್ಕನ್ನು ಗೌರವಿಸುವ, ಶ್ಲಾಘಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಆ.8ರಂದು ಅಂತಾರಾಷ್ಟ್ರೀಯ ಬೆಕ್ಕು ದಿನವನ್ನು ಆಚರಿಸಲಾಗುತ್ತದೆ.

International Cat Day 2022: ಇಂದು ಅಂತಾರಾಷ್ಟ್ರೀಯ ಬೆಕ್ಕು ದಿನ; ಇಲ್ಲಿವೆ ಕೆಲವು ಕುತೂಹಲಕಾರಿ ಸಂಗತಿಗಳು
ಬೆಕ್ಕಿನ ಸಾಂಕೇತಿಕ ಚಿತ್ರ
TV9 Web
| Edited By: |

Updated on:Aug 08, 2022 | 11:26 AM

Share

ಇಲಿಗಳನ್ನು ಹಿಡಿಯುವಲ್ಲಿ ಪಂಟರ್ ಎನಿಸಿಕೊಂಡಿರುವ ಬೆಕ್ಕು, ಇಲಿಗಳ ಕಾಟ ಇರುವ ಮನೆಮಂದಿಯ ಪಾಲಿನ ಹೀರೋ ಆಗಿದೆ. ಇದು ಚಿಕ್ಕದಾದರೂ ಅತ್ಯಂತ ಬುದ್ಧಿಶಾಲಿಯಾದ ಪ್ರಾಣಿಯಾಗಿದೆ. ಬದುಕಿರುವಷ್ಟು ದಿನ ಇಲಿಗಳ ಪಾಲಿಗೆ ಕಂಟಕವಾಗಿ, ಮನೆಯ ಸದಸ್ಯನಾಗಿ, ಕ್ಯಾಟ್​ ಲವ್ವರ್​ಗಳ ಮುದ್ದಿನ ಪ್ರಾಣಿಯಾಗಿ ಇರುತ್ತದೆ. ಇವುಗಳು ಮಾಡುವ ಕೆಲವೊಂದು ಚೇಷ್ಟೆಗಳಿಂದಲೇ ಜನರನ್ನು ಮನರಂಜಿಸುತ್ತದೆ. ಇದೇ ಕಾರಣಕ್ಕೆ ಮಕ್ಕಳಿಗೆ ಮತ್ತು ಯುವಜನತೆಗೆ ಅದರಲ್ಲೂ ಯುವತಿಯರಿಗೆ ಬೆಕ್ಕು ಅಂದರೆ ಬಲು ಇಷ್ಟ. ಇಷ್ಟೇ ಅಲ್ಲದೆ ಬೆಕ್ಕು ಮನುಷ್ಯನ ಮಾನಸಿಕ ಆರೋಗ್ಯವನ್ನು ಉತ್ತೇಜಿಸುವುದರೊಂದಿಗೆ ಒತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ. ಇಂತಹ ಪುಟ್ಟ ಮಾನವ ಸ್ನೇಹಿ ಬೆಕ್ಕನ್ನು ಶ್ಲಾಘಿಸಲು, ಗೌರವಿಸಲು ಪ್ರತಿ ವರ್ಷ ಆ.8ರಂದು ಅಂತಾರಾಷ್ಟ್ರೀಯ ಬೆಕ್ಕು ದಿನ (International Cat Day)ವನ್ನಾಗಿ ಆಚರಿಸಲಾಗುತ್ತದೆ. ಈ ಬಾರಿ ‘ಬೆಕ್ಕು ಸ್ನೇಹಿ ಸಂಪನ್ಮೂಲಗಳು’ ಎಂಬ ಥೀಮ್​ನೊಂದಿಗೆ ಬೆಕ್ಕು ದಿನವನ್ನು ಆಚರಿಸಲಾಗುತ್ತಿದೆ.

ಸಾವಿರಾರು ವರ್ಷಗಳ ಹಿಂದೆ ಬೆಕ್ಕುಗಳನ್ನು ಬೇಟೆಗಾರರು ಮಾತ್ರ ಸಾಕುತ್ತಿದ್ದರು. ಕ್ರಮೇಣ ಬೆಕ್ಕುಗಳನ್ನು ಹೆಚ್ಚಿನ ಮನೆಗಳಲ್ಲಿ ಸಾಕಲು ಪ್ರಾರಂಭವಾಯಿತು. ಆ ಮೂಲಕ ಮನುಷ್ಯನ ಜೀವನದಲ್ಲಿ ನಾಯಿ ಹೇಗೆ ಒಂದು ಭಾಗವಾಗಿದೆಯೋ ಅದೇ ರೀತಿಯಲ್ಲಿ ಬೆಕ್ಕು ಕೂಡ ಕೆಲವರ ಜೀವನದ ಒಂದು ಭಾಗವಾಗಿದೆ.

ಬಲವಾದ ಹೊಂದಿಕೊಳ್ಳುವ ದೇಹ ಹೊಂದಿರುವ ಬೆಕ್ಕುಗಳಲ್ಲಿ ತ್ವರಿತ ದಾಳಿ, ತೀಕ್ಷ್ಣವಾದ ಹಿಂತೆಗೆದುಕೊಳ್ಳುವ ಉಗುರುಗಳು ಮತ್ತು ಇಲಿಗಳು ಮತ್ತು ಇತರ ಸಣ್ಣ ಬೇಟೆಯನ್ನು ಹಿಡಿಯಲು ಹೊಂದಿಕೊಳ್ಳುವ ಹಲ್ಲುಗಳನ್ನು ಒಳಗೊಂಡಿದ್ದು, ಅವುಗಳ ಇಂದ್ರಿಯಗಳು ಇತರ ಸಾಕುಪ್ರಾಣಿಗಳಿಗಿಂತ ವಿಭಿನ್ನ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಮಾತ್ರವಲ್ಲದೆ, ಬೆಕ್ಕುಗಳು ಉತ್ತಮ ಶ್ರವಣವನ್ನು ಹೊಂದಿವೆ. ಆದರೆ ನಾಯಿಗಳಿಗಿಂತ ಕಡಿಮೆ ಸೂಕ್ಷ್ಮ ದೃಷ್ಟಿಯನ್ನು ಹೊಂದಿವೆ. ಬೆಕ್ಕುಗಳು ಉತ್ತಮವಾದ ಘ್ರಾಣೇಂದ್ರಿಯಗಳನ್ನು ಸಹ ಹೊಂದಿವೆ. ಮೌನವಾಗಿ ಚಲಿಸುವ ಅವುಗಳು ಪಕ್ಷಿಗಳನ್ನು ಬೇಟೆಯಾಡುವಷ್ಟರ ಮಟ್ಟಿಗೆ ಸಾಮರ್ಥ್ಯವನ್ನು ಹೊಂದಿದೆ. ಇವುಗಳಲ್ಲದೆ ಇನ್ನೂ ಕೆಲವೊಂದು ಕುತೂಹಲಕಾರಿ ಸಂಗತಿಗಳು ಬೆಕ್ಕಿನಲ್ಲಿವೆ ಅವುಗಳು ಈ ಕೆಳಗಿನಂತಿವೆ:

  • ಬೆಕ್ಕುಗಳು ಮನುಷ್ಯರೊಂದಿಗೆ ನಿಕಟ ಸಂಬಂಧ ಹೊಂದಿರುವ ಪ್ರಾಣಿಗಳು, ಅವುಗಳನ್ನು ಸುಮಾರು 5000 ವರ್ಷಗಳ ಹಿಂದಿನಿಂದ ಸಾಕುತ್ತಿದ್ದರು.
  • ಬೆಕ್ಕುಗಳು ಮನುಷ್ಯರಿಗಿಂತ ಉತ್ತಮವಾಗಿ ಬಣ್ಣಗಳನ್ನು ನೋಡಬಲ್ಲವು, ಆದರೆ ಮನುಷ್ಯರಂತೆ ಅವು ಅತಿಗೆಂಪು ಬೆಳಕನ್ನು ನೋಡುವುದಿಲ್ಲ.
  • ಸಮೀಕ್ಷೆಯ ಪ್ರಕಾರ, ಬೆಕ್ಕುಗಳು ತನ್ನ ಜೀವನದ ಶೇ.50 ಕ್ಕಿಂತ ಹೆಚ್ಚು ನಿದ್ರಿಸುತ್ತದೆ.
  • ಬೆಕ್ಕುಗಳು ತಮ್ಮ ಎತ್ತರಕ್ಕಿಂತ 6 ಪಟ್ಟು ಹೆಚ್ಚು ಮೇಲಕ್ಕೆ ನೆಗೆಯುತ್ತವೆ.
  • ವಿಶ್ವದಲ್ಲಿ 500 ಮಿಲಿಯನ್‌ಗಿಂತಲೂ ಹೆಚ್ಚು ಸಾಕು ಬೆಕ್ಕುಗಳಿವೆ

ಮತ್ತಷ್ಟು ವಿಶೇಷ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:25 am, Mon, 8 August 22