ಕೊರೊನಾ ಸಂಕಷ್ಟ: ಶೂ ಫ್ಯಾಕ್ಟರಿ ಹೋಗಿ, ಮಾಸ್ಕ್ ಫ್ಯಾಕ್ಟರಿ ಬಂತು!

| Updated By: ಆಯೇಷಾ ಬಾನು

Updated on: May 22, 2020 | 1:25 PM

ಮಹಾಮಾರಿ ಕೊರೊನಾ ವಾಣಿಜ್ಯ ಕ್ಷೇತ್ರದಲ್ಲೂ ಗೊತ್ತಿಲ್ಲದಂತೆ ಕೈಯಾಡಿಸ್ತಾ ಇದೆ. ನಾವಿವತ್ತು ಹೇಳ್ತಾ ಇರೋದು ಪ್ರಖ್ಯಾತ ಶೂ ಕಂಪನಿಯ ಶೂ ತಯಾರಿಕಾ ಘಟಕದ ಸ್ಥಿತ್ಯಂತರದ ಕತೆ. ಶೂಸ್ ಫ್ಯಾಕ್ಟರಿ ಮಾಸ್ಕ್ ಫ್ಯಾಕ್ಟರಿಯಾಗಿದ್ದು ಹೇಗೆ? ಅಮೆರಿಕದಲ್ಲಿ ಅನೇಕ ಶೂ ಕಂಪನಿಗಳಿವೆ. ಅದ್ರಲ್ಲಿ ನ್ಯೂಬ್ಯಾಲೆನ್ಸ್ ಸಖತ್ ಫೇಮಸ್ ಹೆಸರು. ಅದು ತನ್ನ ಶೂ ತಯಾರಿಕಾ ಘಟಕವನ್ನು ಅದಾಗಲೇ ಮಾಸ್ಕ್ ತಯಾರಿ ಘಟಕವನ್ನಾಗಿ ಬದಲಾಯಿಸಿದೆ. ಹೀಗೆ ರಾಲ್ಪ್ ರಾಲೊನ್ ಅಂಡರ್ ಆರ್ಮರ್ ನಂಥ ಕಂಪನಿಗಳು ಮಾಸ್ಕ್ ತಯಾರಿಯತ್ತ ಮುಖ ಮಾಡಿವೆ. ಇಂಥದ್ದೊಂದು ನಿರ್ಧಾರದ […]

ಕೊರೊನಾ ಸಂಕಷ್ಟ: ಶೂ ಫ್ಯಾಕ್ಟರಿ ಹೋಗಿ, ಮಾಸ್ಕ್ ಫ್ಯಾಕ್ಟರಿ ಬಂತು!
Follow us on

ಮಹಾಮಾರಿ ಕೊರೊನಾ ವಾಣಿಜ್ಯ ಕ್ಷೇತ್ರದಲ್ಲೂ ಗೊತ್ತಿಲ್ಲದಂತೆ ಕೈಯಾಡಿಸ್ತಾ ಇದೆ. ನಾವಿವತ್ತು ಹೇಳ್ತಾ ಇರೋದು ಪ್ರಖ್ಯಾತ ಶೂ ಕಂಪನಿಯ ಶೂ ತಯಾರಿಕಾ ಘಟಕದ ಸ್ಥಿತ್ಯಂತರದ ಕತೆ.

ಶೂಸ್ ಫ್ಯಾಕ್ಟರಿ ಮಾಸ್ಕ್ ಫ್ಯಾಕ್ಟರಿಯಾಗಿದ್ದು ಹೇಗೆ?
ಅಮೆರಿಕದಲ್ಲಿ ಅನೇಕ ಶೂ ಕಂಪನಿಗಳಿವೆ. ಅದ್ರಲ್ಲಿ ನ್ಯೂಬ್ಯಾಲೆನ್ಸ್ ಸಖತ್ ಫೇಮಸ್ ಹೆಸರು. ಅದು ತನ್ನ ಶೂ ತಯಾರಿಕಾ ಘಟಕವನ್ನು ಅದಾಗಲೇ ಮಾಸ್ಕ್ ತಯಾರಿ ಘಟಕವನ್ನಾಗಿ ಬದಲಾಯಿಸಿದೆ. ಹೀಗೆ ರಾಲ್ಪ್ ರಾಲೊನ್ ಅಂಡರ್ ಆರ್ಮರ್ ನಂಥ ಕಂಪನಿಗಳು ಮಾಸ್ಕ್ ತಯಾರಿಯತ್ತ ಮುಖ ಮಾಡಿವೆ.

ಇಂಥದ್ದೊಂದು ನಿರ್ಧಾರದ ಹಿಂದೆ ಎರಡು ಉದ್ದೇಶಗಳಿವೆ. ಒಂದು, ತಮ್ಮ ದಿನನಿತ್ಯದ ಪ್ರಾಡಕ್ಟ್​ಗಳಿಗೆ ಕೊರೊನಾದಿಂದಾಗಿ ಬೇಡಿಕೆ ಕುಸಿದಿರುವುದು ಮತ್ತು ಮಾಸ್ಕ್​ಗಳ ಕೊರತೆಯಿಂದ ಅದರ ಬೇಡಿಕೆ ಜಾಸ್ತಿಯಾಗಿರೋದು. ಎಲ್ಲದಕ್ಕಿಂತ ಮುಖ್ಯವಾಗಿ ಕೊರೊನಾ ಕಾಲದ ಮಾನವೀಯ ತುಡಿತ ಅವರನ್ನು ಈ ಕೆಲಸಕ್ಕೆ ಪ್ರೇರೇಪಿಸಿವೆ. ಹೀಗೆ ಅನೇಕ ಫ್ಯಾಕ್ಟರಿಗಳು ಮಾಸ್ಕ್ ಮಾಡಲು ತೊಡಗಿವೆ.

ಮಾಸ್ಕ್ ಮಾದರಿ ಪ್ರೊಟೋಟೈಪ್ ರೆಡಿಯಾಗಿದ್ದು ಹೀಗೆ..!
ನ್ಯೂ ಬ್ಯಾಲೆನ್ಸ್ ಒಂದು ಶೂ ಕಂಪೆನಿ. ಅದು ಯಾವತ್ತೂ ಮಾಸ್ಕ್ ಗಳನ್ನು ಮಾಡಿದ್ದಿಲ್ಲ. ಅದರಲ್ಲಿ ಕೆಲಸ ಮಾಡುವವರು ಮತ್ತು ಅದರ ಮೇಲ್ವಿಚಾರಕರು, ನಿರ್ವಾಹಕರು ಶೂ ಮಾಡೋದ್ರಲ್ಲೇ ಎಕ್ಸ್ ಪರ್ಟ್ ಗಳು. ಹಾಗಾಗಿ, ಅವರು ಅದ್ರ ಡಿಸೈನ್ ಮತ್ತು ಗುಣಮಟ್ಟ ಹಾಗೂ ತಾವು ಮಾರುಕಟ್ಟೆಗೆ ಮುಟ್ಟಿಸಬೇಕಾದ ಸಮಯಾವಕಾಶ ಎಲ್ಲದರ ಬಗ್ಗೆ ಆಲೋಚಿಸಬೇಕಿತ್ತು.

ಪ್ರೋಟೊಟೈಪ್ ಮಾಸ್ಕ್ ಗಳನ್ನು ಮೊದಲಿಗೆ ಅದು ರೆಡಿ ಮಾಡಿತು. ಅದ್ರ ಮೂತಿ ಪಕ್ಕಾ ನ್ಯೂಬ್ಯಾಲೆನ್ಸ್ ಶೂಸ್ ಮೂತಿಯನ್ನೇ ಹೋಲುತ್ತೆ. ಬೇಕಾದ ಹಾಗೆ ಬಿಗಿಗೊಳಿಸಬಹುದಾದ ಮತ್ತು ಸಡಿಲಗೊಳಿಸಬಹುದಾದ ಉತ್ತಮ ಗುಣಮಟ್ಟದ ಸ್ಟ್ರಾಪ್ ಗಳನ್ನು ಇದಕ್ಕೆ ಬಳಸಲಾಗಿದೆ. ಹೀಗೆ ಜಸ್ಟ್ ಮೂರು ದಿನಗಳಲ್ಲಿ ತ್ರಿ ಡಿ ಮಾಡೆಲ್ ಪ್ರೊಟೊಟೈಪ್ ಗಳನ್ನು ರೆಡಿ ಮಾಡಿ ಗುಣಮಟ್ಟ ಪರೀಕ್ಷಿಸಲಾಯ್ತು..

ಫ್ಯಾಕ್ಟರಿಯಲ್ಲಿ ಸಾಮಾಜಿಕ ಅಂತರ:
ಕೊರೊನಾ ಕಾಲದ ಸೋಶಿಯಲ್ ಡಿಸ್ಟೆನ್ಸ್ ನಿಯಮಗಳಿಗೆ ಇಲ್ಲಿ ಯಾವತ್ತೂ ಕುತ್ತು ಬಂದಿಲ್ಲ. ಅಲ್ಲಿ 6 ಅಡಿಗಳ ಅಂತರವನ್ನು ಪ್ರತಿಯೊಬ್ಬರೂ ಕಾಯ್ದುಕೊಳ್ಳಲೇಬೇಕಿತ್ತು. ಜೊತೆಗೆ ಕೈಗವಸುಗಳು, ಸುರಕ್ಷತೆಗೆ ಮೇಲಂಗಿ, ಮಾಸ್ಕ್, ಹೇರ್ ಬಾನೆಟ್‌ಗಳನ್ನು ಒದಗಿಸಲಾಗಿತ್ತು.

ಇಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿತ್ತು. ಈ ಹಿಂದೆಯೂ ಕಟ್ಟಿಂಗ್ ಮೊದಲಾದ ಕೆಲಸಗಳನ್ನು ಕಂಪ್ಯೂಟರ್ ನಿಯಂತ್ರಿತ ಮೆಷಿನ್ ಮೂಲಕವೇ ಮಾಡಿಸಲಾಗುತಿತ್ತು. ಈ ಕಂಪನಿಯಲ್ಲಿ 130 ಜನ ಮಾಸ್ಕ್ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ. ನೀವು ನಂಬ್ತೀರೋ ಬಿಡ್ತೀರೋ ಈ ಶೂ ಫ್ಯಾಕ್ಟರಿ ವಾರವೊಂದಕ್ಕೆ ಒಂದು ಲಕ್ಷ ಮಾಸ್ಕ್ ತಯಾರಿಸಿ ಎಲ್ಲೆಡೆ ಪೂರೈಕೆ ಮಾಡ್ತಾ ಇದೆ.

Published On - 11:46 am, Fri, 22 May 20