ತಂದೆ-ತಾಯಿಯನ್ನು ದೇವರ ರೂಪವೆಂದು ಪರಿಗಣಿಸಲಾಗುತ್ತದೆ. ಯಾವುದೇ ಮಕ್ಕಳಲ್ಲಿ ಹೋಗಿ ಕೇಳಿದರೂ ತಮ್ಮ ಮೊದಲ ಹೀರೋ ಪೋಷಕರ ಎಂದು ಹೇಳುತ್ತಾರೆ. ಅಷ್ಟೇ ಅಲ್ಲದೆ ಪ್ರತಿಯೊಬ್ಬರ ಜೀವನದ ಪ್ರಮುಖ ಭಾಗವಾಗಿ, ಮೊದಲ ವ್ಯಕ್ತಿಗಳಾಗಿ, ಸ್ಪೂರ್ತಿಯಾಗಿ ಕಾಣುವುದು ಕೂಡ ಪೋಷಕರೇ. ತಮ್ಮ ಜೀವನವನ್ನು ಮಕ್ಕಳಿಗಾಗಿ ಮುಡಿಪಾಗಿಟ್ಟು ಪ್ರೀತಿ, ಕಾಳಜಿಯನ್ನು ತೋರುತ್ತಾ ಮಾಡಬೇಕಾದ ಎಲ್ಲಾ ತ್ಯಾಗಗಳನ್ನು ಮಾಡುವ ಪೋಷಕರನ್ನು ಗೌರವಿಸುವ ನಿಟ್ಟಿನಲ್ಲಿ ವಿವಿಧ ದೇಶಗಳಲ್ಲಿ ರಾಷ್ಟ್ರೀಯ ಪೋಷಕರ ದಿನ (National Parents Day)ವನ್ನು ಆಚರಿಸಲಾಗುತ್ತದೆ. ಪ್ರತಿ ವರ್ಷ ಜುಲೈ ತಿಂಗಳ ನಾಲ್ಕನೇ ಭಾನುವಾರದಂದು ರಾಷ್ಟ್ರೀಯ ಪೋಷಕರ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಈ ಬಾರಿ ಜು.24ರಂದು ಪೋಷಕರ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ದಿನದಂದು ವಿಶ್ವದಾದ್ಯಂತ ಮಕ್ಕಳು ತಮ್ಮ ತಂದೆ ಮತ್ತು ತಾಯಿ ಅಥವಾ ಜವಾಬ್ದಾರಿಯುತ ಮತ್ತು ಸ್ವತಂತ್ರ ವಯಸ್ಕರಾಗಲು ಬೆಳೆಸಿದ ಯಾರನ್ನಾದರೂ ಗೌರವಿಸುತ್ತಾರೆ. ಈ ರಾಷ್ಟ್ರೀಯ ಪೋಷಕರ ದಿನದ ಇತಿಹಾಸ ಅದೆಷ್ಟೋ ಮಂದಿಗೆ ತಿಳಿದಿಲ್ಲ. ಹೀಗಾಗಿ ಈ ಸುದ್ದಿ ಮೂಲಕ ಪೋಷಕರ ದಿನದ ಇತಿಹಾಸವನ್ನು ತಿಳಿಸಲಾಗಿದೆ.
ರಾಷ್ಟ್ರೀಯ ಪೋಷಕರ ದಿನದ ಇತಿಹಾಸ
ವಿವಿಧ ದೇಶಗಳಲ್ಲಿ ರಾಷ್ಟ್ರೀಯ ಪೋಷಕರ ದಿನವನ್ನು ಆಚರಿಸಲಾಗುತ್ತಿದೆ. ಆದರೆ ಇದನ್ನು ಮೊದಲ ಬಾರಿಗೆ ಆರಂಭಿಸಿದ್ದು ಯುನೈಟೆಡ್ ಸ್ಟೇಟ್ಸ್ನಲ್ಲಿ. 199ರಲ್ಲಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರು ಪ್ರತಿ ವರ್ಷದ ಜುಲೈ ನಾಲ್ಕನೇ ಭಾನುವಾರದಂದು ಪೋಷಕರ ದಿನವನ್ನಾಗಿ ಆಚರಿಸಲಾಗುವುದು ಎಂದು ಘೋಷಣೆ ಮಾಡಿದರು. ಕಾನೂನಿನ ಮೂಲಕ ಅನುಮೋದಿಸುವ ಕಾಂಗ್ರೆಷನಲ್ ರೆಸಲ್ಯೂಶನ್ಗೆ ಸಹಿ ಹಾಕುವ ಮೂಲಕ ರಜಾದಿನವನ್ನು ಗೊತ್ತುಪಡಿಸಿದರು. ಈ ಮಸೂದೆಯನ್ನು ರಿಪಬ್ಲಿಕನ್ ಸೆನೆಟರ್ ಟ್ರೆಂಟ್ ಲೊಟ್ ಅವರು ಮಂಡಿಸಿದರು.
ಪೋಷಕರ ದಿನದ ಮಹತ್ವ
ಪಾಲಕರು ಮತ್ತು ಪೋಷಕರು ತಮ್ಮ ಮಕ್ಕಳನ್ನು ಬೆಳೆಸುವಲ್ಲಿ ಅವರ ವರ್ಷಗಳ ಕಠಿಣ ಪರಿಶ್ರಮ ಮತ್ತು ತಿದ್ದಿ ಬುದ್ದಿ ಹೇಳುವ ಅಥವಾ ಬೈದು ಬುದ್ದಿ ಹೇಳುವ ಕಾರ್ಯಗಳಿಗಾಗಿ ಎಲ್ಲಾ ಪ್ರಶಂಸೆ ಮತ್ತು ಮನ್ನಣೆಗೆ ಅರ್ಹರಾಗಿದ್ದಾರೆ. ತಮ್ಮ ಜೀವನವನ್ನೇ ಮಕ್ಕಳಿಗಾಗಿ ಮುಡಿಪಾಗಿಟ್ಟು ಮಕ್ಕಳಿಗಾಗಿ ಪಡಬಾರದ ಕಷ್ಟಬಂದು, ತನ್ನ ಎಲ್ಲಾ ತ್ಯಾಗಗಳನ್ನು ಮಾಡಿದ ಪೋಷಕರನ್ನು ಗೌರವಿಸುವ ನಿಟ್ಟಿನಲ್ಲಿ ಜು.24ರಂದು ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಕಾರ್ಯಕ್ರಮಗಳ ಮೂಲಕ ಪೋಷಕರ ಪಾತ್ರವನ್ನು ಗುರುತಿಸಲು, ಬೆಂಬಲಿಸುವ ಕಾರ್ಯವನ್ನು ಮಾಡಲಾಗುತ್ತದೆ.
ಯಾವ ದೇಶದಲ್ಲಿ ಯಾವಾಗ ಪೋಷಕರ ದಿನವನ್ನಾಗಿ ಆಚರಿಸಲಾಗುತ್ತದೆ?
ಯಾವ ರೀತಿ ಪೋಷಕರೊಂದಿಗೆ ಸಮಯ ಕಳೆಯುವುದು?
ಪೋಷಕರ ದಿನವನ್ನು ಆಚರಿಸಿ ನಿಮ್ಮ ಹೆತ್ತವರನ್ನು ಸಂತೋಷಪಡಿಸಲು ನೀವು ಹೊಟೇಲ್ಗಳಲ್ಲಿ ಅದ್ದೂರಿ ಪಾರ್ಟಿಯನ್ನು ಆಯೋಜಿಸಬೇಕಾಗಿಲ್ಲ. ರಾಷ್ಟ್ರೀಯ ಪೋಷಕರ ದಿನವನ್ನು ಆಚರಿಸಲು ನಿಮ್ಮ ಪೋಷಕರೊಂದಿಗೆ ಸ್ವಲ್ಪ ಸಮಯ ಕಳೆಯುವುದಕ್ಕಿಂತ ಉತ್ತಮವಾದ ಮಾರ್ಗವಿಲ್ಲ. ಅವರನ್ನು ಪ್ರೀತಿಸುವಂತೆ ಮಾಡುವ ಇತರ ವಿಚಾರಗಳಿವೆ ಅವುಗಳೆಂದರೆ, ಚಿಕ್ಕ ರಸ್ತೆ ಪ್ರವಾಸವನ್ನು ಯೋಜಿಸಿ, ಅವರಿಗೆ ಕೈಬರಹದ ಪತ್ರದಂತಹ ಚಿಂತನಶೀಲ ಉಡುಗೊರೆಯನ್ನು ನೀಡಿ. ಇಲ್ಲವೇ ನಿಮ್ಮ ಪ್ರಯಾಣದ ಚಿತ್ರಗಳೊಂದಿಗೆ ಅನನ್ಯ ವೀಡಿಯೊವನ್ನು ರಚಿಸಿ. ಇದರ ಹೊರತಾಗಿ ಮನೆಯಲ್ಲೇ ಸಣ್ಣ ಪಾರ್ಟಿಯನ್ನು ಆಯೋಜಿಸಿ. ನೀವು ಏನೇ ಮಾಡಿದರೂ ಪೋಷಕರು ಸಂತೋಷಗೊಳ್ಳುತ್ತಾರೆ. ಏಕೆಂದರೆ ಅವರಲ್ಲಿ ಅಂತಹ ಗುಣ ಇರುತ್ತದೆ.
ಪೋಷಕರ ದಿನಾಚರಣೆಯ ಶುಭಾಶಯ ಸಂದೇಶಗಳು
ಪೋಷಕರ ದಿನಾಚರಣೆಯ ಉಲ್ಲೇಖಗಳು
Published On - 11:28 am, Sun, 24 July 22