ಪುಸ್ತಕ ಓದುವ ಹವ್ಯಾಸ ಇರುವವರ ಆಯಸ್ಸು ಹೆಚ್ಚಾಗುತ್ತದಂತೆ! ಹೇಗೆ?

| Updated By: ಸಾಧು ಶ್ರೀನಾಥ್​

Updated on: Aug 10, 2020 | 1:57 PM

ಯಾರು ಪುಸ್ತಕವನ್ನು ಹೆಚ್ಚಿಗೆ ಓದುತ್ತಾರೋ ಅವರು ಹೆಚ್ಚಿಗೆ ಬಾಳುತ್ತಾರೆ. ಅಂದ್ರೆ ಅವರು ಆಯುಸ್ಸು ವೃದ್ದಿಯಾಗುತ್ತೆ ಎಂದು ಇಂಗ್ಲೆಂಡ್‌ನ ಸಂಶೋಧಕರು ಹೇಳಿದ್ದಾರೆ. ಈ ಸಂಬಂಧ ಯೇಲ್ ವಿಶ್ವವಿದ್ಯಾಲಯ ನಡೆಸಿದ ಸಂಶೋಧನೆಯಲ್ಲಿ ಪುಸ್ತಕವನ್ನು ಓದುವ ಹವ್ಯಾಸವುಳ್ಳವುರು ಹೆಚ್ಚು ವರ್ಷ ಬಾಳುತ್ತಾರೆ. ಪುಸ್ತಕ ಓದದೇ ಇರುವ ವ್ಯಕ್ತಿಗಳಿಗಿಂತ ಓದುವ ಹವ್ಯಾಸವುಳ್ಳವರ ಆಯುಸ್ಸು ಕನಿಷ್ಠ 23 ತಿಂಗಳು ಹೆಚ್ಚಿಗೆ ಎಂದು ಕಂಡು ಬಂದಿದೆ. ಈ ಸಂಬಂಧ ಯೇಲ್ ವಿಶ್ವವಿದ್ಯಾಲಯ 3,635 ಜನರ ಮೇಲೆ ಸಂಶೋಧನೆ ಮಾಡಿದೆ. ವಾರಕ್ಕೆ ಕನಿಷ್ಟ 3.5ಗಂಟೆ ಓದಿಕೊಂಡರೆ ಅಥವಾ […]

ಪುಸ್ತಕ ಓದುವ ಹವ್ಯಾಸ ಇರುವವರ ಆಯಸ್ಸು ಹೆಚ್ಚಾಗುತ್ತದಂತೆ! ಹೇಗೆ?
Follow us on

ಯಾರು ಪುಸ್ತಕವನ್ನು ಹೆಚ್ಚಿಗೆ ಓದುತ್ತಾರೋ ಅವರು ಹೆಚ್ಚಿಗೆ ಬಾಳುತ್ತಾರೆ. ಅಂದ್ರೆ ಅವರು ಆಯುಸ್ಸು ವೃದ್ದಿಯಾಗುತ್ತೆ ಎಂದು ಇಂಗ್ಲೆಂಡ್‌ನ ಸಂಶೋಧಕರು ಹೇಳಿದ್ದಾರೆ.

ಈ ಸಂಬಂಧ ಯೇಲ್ ವಿಶ್ವವಿದ್ಯಾಲಯ ನಡೆಸಿದ ಸಂಶೋಧನೆಯಲ್ಲಿ ಪುಸ್ತಕವನ್ನು ಓದುವ ಹವ್ಯಾಸವುಳ್ಳವುರು ಹೆಚ್ಚು ವರ್ಷ ಬಾಳುತ್ತಾರೆ. ಪುಸ್ತಕ ಓದದೇ ಇರುವ ವ್ಯಕ್ತಿಗಳಿಗಿಂತ ಓದುವ ಹವ್ಯಾಸವುಳ್ಳವರ ಆಯುಸ್ಸು ಕನಿಷ್ಠ 23 ತಿಂಗಳು ಹೆಚ್ಚಿಗೆ ಎಂದು ಕಂಡು ಬಂದಿದೆ. ಈ ಸಂಬಂಧ ಯೇಲ್ ವಿಶ್ವವಿದ್ಯಾಲಯ 3,635 ಜನರ ಮೇಲೆ ಸಂಶೋಧನೆ ಮಾಡಿದೆ.

ವಾರಕ್ಕೆ ಕನಿಷ್ಟ 3.5ಗಂಟೆ ಓದಿಕೊಂಡರೆ ಅಥವಾ ಓದಿದರೆ ಅಂಥವರ ಮಿದುಳಿಗೆ ವ್ಯಾಯಾಮವಾಗುತ್ತದೆ. ಇದರಿಂದ ಅದು ಉಲ್ಲಸಿತಗೊಳ್ಳುತ್ತದೆ. ಪರಿಣಾಮ ಅಂಥ ವ್ಯಕ್ತಿಗಳು ಉತ್ಸಾಹದಿಂದ ಇರುತ್ತಾರೆ. ಇದು ಅಂತಿಮವಾಗಿ ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ ಹಾಗೇನೆ ಅವರ ಆಯುಸ್ಸು ಕೂಡಾ ವೃದ್ಧಿಸುತ್ತೆ ಎಂದು ಸಂಶೋದಕರು ತಿಳಿಸಿದ್ದಾರೆ.

ಓದುವ ಹವ್ಯಾಸದಲ್ಲೂ ದಿನಪತ್ರಿಕೆಗಳು ಮತ್ತು ಪುಸ್ತಕಗಳನ್ನಾಗಿ ವಿಂಗಡಿಸಿದ್ದು, ಪುಸ್ತಕ ಓದುವುದರಿಂದ ಹೆಚ್ಚಿನ ಲಾಭವಾಗಲಿದೆ. ಇದರಿಂದ ಮಿದುಳಿಗೆ ವ್ಯಾಯಾಮದ ಜೊತೆಗೆ ಹೊಸ ಹೊಸ ವಿಷಯಗಳಿಂದ ಮನಸ್ಸು ಚೇತೋಹಾರಿಯಾಗಿರುತ್ತೆ ಎಂದು ತಿಳಿದು ಬಂದಿದೆ. ಅಷ್ಟೇ ಅಲ್ಲ ಓದುವ ಹವ್ಯಾಸ ಡಿಮೆನ್ಸಿಯಾ ಅಂಥ ರೋಗಗಳಿಂದ ದೂರುವಿರಿಸುತ್ತೆ.

ಯಾರು ವಾರವೊಂದಕ್ಕೆ ಮೂರುವರೆ ತಾಸುಗಳಿಗಿಂತ ಅಧಿಕ ಸಮಯ ಓದುತ್ತಾರೋ ಅವರ ಆಯುಸ್ಸು ಇತರರಿಗಿಂತ 23 ತಿಂಗಳು ಹೆಚ್ಚು ಬಾಳುತ್ತಾರೆ. ಕಡಿಮೆ ಓದುವವರು 17 ತಿಂಗಳಷ್ಟೇ ಹೆಚ್ಚು ಬದುಕುತ್ತಾರೆ. ಏನನ್ನು ಓದದೇ ಇರೋರು ಓದುವವರಿಗಿಂತ 23 ತಿಂಗಳೂ ಕಡಿಮೆ ಬದುಕುತ್ತಾರೆ ಎಂದು ಹಾರ್ವರ್ಡ್ ಮತ್ತು ಯೇಲ್ ವಿಶ್ವವಿದ್ಯಾಲಯಗಳ ಈ ಸಂಶೋಧನೆಯಲ್ಲಿ ಕಂಡು ಬಂದಿದೆ.

Published On - 1:56 pm, Mon, 10 August 20