ಮಹಾವಿಷ್ಣುವಿನ ಎಂಟನೇ ಅವತಾರವಾದ ಶ್ರೀಕೃಷ್ಣನ ಅವತಾರದ ಬಗ್ಗೆ ಹಾಗೂ ಒಂಬತ್ತನೇ ಅವತಾರವಾದ ಬುದ್ಧನ ಅವತಾರದ ಬಗ್ಗೆ ಇಲ್ಲಿ ತಿಳಿಯಬಹುದು.
ಮಥುರಾ ನಗರದ ಅತ್ಯಂತ ಕ್ರೂರ ರಾಜ ಕಂಸ ಹಾಗೂ ಅಧರ್ಮೀಯರನ್ನು ನಾಶಪಡಿಸಲೆಂದೇ ಮಹಾವಿಷ್ಣು ದ್ವಾಪರಯುಗದಲ್ಲಿ ಶ್ರೀಕೃಷ್ಣನ ಅವತಾರವೆತ್ತಿದ ಅಂತಾ ಪುರಾಣಗಳು ಹೇಳುತ್ತವೆ. ದ್ವಾಪರಯುಗದಲ್ಲಿ, ಉಗ್ರಸೇನನ ಮಗ ಕಂಸ, ತನ್ನ ತಂಗಿ ದೇವಕಿ ಹಾಗೂ ಆತನ ಪತಿ ವಸುದೇವನನ್ನು ಬಂಧನದಲ್ಲಿಟ್ಟಿರ್ತಾನೆ. ತಂಗಿ ದೇವಕಿಯ ಗರ್ಭದಲ್ಲಿ ಜನಿಸುವ ಎಂಟನೇ ಮಗುವಿನಿಂದ ತನಗೆ ಮೃತ್ಯುವಾಗಲಿದೆ ಅನ್ನೋದನ್ನು ತಿಳಿದ ಕಂಸ, ದೇವಕಿ ಹಾಗೂ ವಸುದೇವನನ್ನು ಕಾರಾಗೃಹದಲ್ಲಿರಿಸ್ತಾನೆ.
ನಂತರ ವಸುದೇವ ಶ್ರೀಕೃಷ್ಣನನ್ನು ಬುಟ್ಟಿಯಲ್ಲಿ ಹೊತ್ತು, ನಡುರಾತ್ರಿಯ ವೇಳೆ ಗುಟ್ಟಾಗಿ ಕಾರಾಗೃಹದಿಂದ ತಪ್ಪಿಸಿಕೊಂಡು ಮಳೆಯ ಮಧ್ಯೆಯೇ ನೆರೆಯ ರಾಜ್ಯ ಗೋಕುಲಕ್ಕೆ ತಲುಪುತ್ತಾನೆ.
ಗೋಕುಲದಲ್ಲಿ ವಸುದೇವನ ಸ್ನೇಹಿತನಾದ ನಂದಗೋಪ ಹಾಗೂ ಆತನ ಪತ್ನಿ ಯಶೋದೆಯ ಮಗುವಿದ್ದ ಜಾಗದಲ್ಲಿ ಕೃಷ್ಣನನ್ನು ಇಟ್ಟು ಆತನ ಮಗುವನ್ನು ಹೊತ್ತು ಕಾರಾಗೃಹಕ್ಕೆ ತರ್ತಾನೆ.
ಕಂಸ ಆ ಮಗುವನ್ನು ಕಂಡು ತನ್ನ ತಂಗಿ ದೇವಕಿಯ ಎಂಟನೆಯ ಮಗುವೆಂದು ಭಾವಿಸಿ ಅದನ್ನು ಕೊಲ್ಲಲು ಯತ್ನಿಸ್ತಾನೆ. ಅಷ್ಟರಲ್ಲೇ ಒಂದು ಪವಾಡ ನಡೆದುಹೋಗುತ್ತೆ. ಆ ಪವಾಡ ಏನಂದ್ರೆ, ಆ ಮಗು ಮತನಾಡುತ್ತೆ. ಕಂಸನನ್ನು ಕಂಡು, ನಿನ್ನನ್ನು ಸಂಹಾರ ಮಾಡುವವನು ಈಗಾಗಲೇ ಭೂಮಿಯ ಮೇಲೆ ಜನ್ಮ ತಾಳಿದ್ದಾನೆ ಅಂತಾ ಹೇಳಿ ಅದೃಷ್ಯವಾಗುತ್ತೆ.
ಶ್ರೀಕೃಷ್ಣನಿಂದ ಕಂಸ ಸಂಹಾರ:
ನಂತರ ಕಂಸ ಆ ಎಂಟನೆಯ ಮಗುವನ್ನು ಹುಡುಕಾಡಲು ಯತ್ನಿಸ್ತಾನೆ. ಕಂಸ ಅಕ್ಕಪಕ್ಕದ ಹಳ್ಳಿಗಳಲ್ಲಿ ಹುಟ್ಟಿದ ನವಜಾತ ಶಿಶುಗಳನ್ನು ಕೊಲ್ಲಲು ಅನೇಕ ರಾಕ್ಷಸರನ್ನು ಕಳುಹಿಸ್ತ್ತಾನೆ. ಆದ್ರೆ ಕೃಷ್ಣನನ್ನು ಕೊಲ್ಲಲಾಗುವುದಿಲ್ಲ. ಕೆಲ ವರ್ಷಗಳ ನಂತರ, ಕೃಷ್ಣ ಬೆಳೆದು ದೊಡ್ಡವನಾದ ಮೇಲೆ ತನ್ನ ಅಣ್ಣ ಬಲರಾಮನೊಂದಿಗೆ ಮರಳಿ ಮಥುರಾ ನಗರಕ್ಕೆ ಬರ್ತಾನೆ.
ಅಲ್ಲಿ ಕಂಸನ ಅಟ್ಟಹಾಸಗಳನ್ನು ಮನಗಾಣುತ್ತಾನೆ. ಮಥುರಾ ನಗರದಲ್ಲಿ ನಡೆಯುವ ಮಲ್ಲಯುದ್ಧದಲ್ಲಿ ಕಂಸ ಮತ್ತು ಚಾಣೂರರನ್ನು ಶ್ರೀಕೃಷ್ಣ ಸಂಹಾರ ಮಾಡ್ತ್ತಾನೆ. ಮಹಾಭಾರತದ ಪ್ರಕಾರ, ಭಗವಾನ್ ಶ್ರೀಕೃಷ್ಣ ಯಮುನಾ ನದಿಯ ತೀರದಲ್ಲಿದ್ದು ಎಲ್ಲರಿಗೂ ತೊಂದರೆ ನೀಡ್ತಿದ್ದ ಕಾಳಿಂಗ ಸರ್ಪವನ್ನು ವಧೆ ಮಾಡ್ತಾನೆ.
ಇನ್ನು ಮಹಾಭಾರತದ ಕುರುಕ್ಷೇತ್ರ ಯುದ್ಧದಲ್ಲಿ, ಅರ್ಜುನನ ಸಾರಥಿಯಾಗಿ ಶ್ರೀಕೃಷ್ಣ ತನ್ನ ವಿಶ್ವರೂಪವನ್ನು ತೋರಿಸಿ, ಆತನಿಗೆ ಭಗವದ್ಗೀತೆ ಬೋಧನೆ ಮಾಡಿ ಜೀವನದ ಮೌಲ್ಯಗಳನ್ನು ತಿಳಿಸ್ತಾನೆ. ದುಷ್ಟರನ್ನು ಸಂಹರಿಸಲು ಮಹತ್ವದ ಪಾತ್ರ ವಹಿಸ್ತಾನೆ.
ಹೀಗೆ ಮಹಾವಿಷ್ಣು ದ್ವಾಪರಯುಗದಲ್ಲಿ ಎಂಟನೇ ಅವತಾರವಾದ ಶ್ರೀಕೃಷ್ಣನ ರೂಪದಲ್ಲಿ ಬಂದು ದುಷ್ಟರನ್ನು ನಾಶಮಾಡಿ, ಶಿಷ್ಟರನ್ನು ರಕ್ಷಿಸ್ತಾನೆ. ಧರ್ಮಸಂಸ್ಥಾಪನೆಗೆ ನಾಂದಿ ಹಾಡ್ತಾನೆ. ಭಗವಾನ್ ಶ್ರೀಕೃಷ್ಣನ ಅವತಾರ ಮುಗಿದ ನಂತರ ಮಹಾವಿಷ್ಣು ಬುದ್ಧನಾಗಿ ಒಂಬತ್ತನೇ ಅವತಾರವೆತ್ತುತ್ತಾನೆ. ಶುದ್ಧೋದನ ಹಾಗೂ ಮಾಯಾದೇವಿಯ ಮಗನಾಗಿ ಮಹಾವಿಷ್ಣುವೇ ಬುದ್ಧನಾಗಿ ಜನಿಸಿದನೆಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.
Published On - 3:57 pm, Mon, 31 August 20