ದಶಾವತಾರದ ಮಹಿಮೆ: ಸುರರ ಒಳಿತಿಗಾಗಿ ಪರ್ವತವನ್ನೇ ಬೆನ್ನ ಮೇಲೆ ಹೊತ್ತ ಭಗವಾನ್​ ವಿಷ್ಣು!

|

Updated on: Aug 27, 2020 | 2:38 PM

ಮಹಾವಿಷ್ಣುವಿನ ದಶಾವತಾರಗಳ ಪೈಕಿ ಪ್ರತಿ ಅವತಾರದ ಹಿಂದೆಯೂ ಒಂದು ಉದ್ದೇಶವಿದೆ ಹಾಗೂ ಮಾನವಕುಲಕ್ಕೆ ಒಂದು ಸಂದೇಶವೂ ಇದೆ. ಶ್ರೀಮನ್ನಾರಾಯಣ ತಾಳಿದ ಎರಡನೇ ಅವತಾರ ಯಾವುದು? ಭಗವಾನ್​ ವಿಷ್ಣು ಎರಡನೇ ಅವತಾರ ತಾಳಿದ್ದು ಏಕೆ? ಇಲ್ಲಿದೆ ಓದಿ. ಅವತಾರ ಅಂದ್ರೆ ಧರೆಗೆ ಇಳಿದು ಬರೋದು ಎಂದರ್ಥ. ಇದು ಭಗವಂತ ಕಾಲಕ್ಕೆ ತಕ್ಕಂತೆ ಜೀವಕೋಟಿಯ ಉದ್ಧಾರಕ್ಕಾಗಿ ಕೈಗೊಳ್ಳುವ ಒಂದು ಕ್ರಿಯೆ. ಅವತಾರವು ಭಗವಂತನ ಉದ್ದೇಶಪೂರ್ವಕವಾದ ಅವರೋಹಣವನ್ನು ಉಲ್ಲೇಖಿಸುತ್ತದೆ. ಲೋಕದಲ್ಲಿ ಅಧರ್ಮ ಹೆಚ್ಚಿದಾಗ ಧರ್ಮವನ್ನು ಪುನಃಸ್ಥಾಪಿಸಲು, ಭಕ್ತರನ್ನು ಹುಟ್ಟು-ಸಾವಿನ ಜೀವನ ಚಕ್ರದಿಂದ […]

ದಶಾವತಾರದ ಮಹಿಮೆ: ಸುರರ ಒಳಿತಿಗಾಗಿ ಪರ್ವತವನ್ನೇ ಬೆನ್ನ ಮೇಲೆ ಹೊತ್ತ ಭಗವಾನ್​ ವಿಷ್ಣು!
Follow us on

ಮಹಾವಿಷ್ಣುವಿನ ದಶಾವತಾರಗಳ ಪೈಕಿ ಪ್ರತಿ ಅವತಾರದ ಹಿಂದೆಯೂ ಒಂದು ಉದ್ದೇಶವಿದೆ ಹಾಗೂ ಮಾನವಕುಲಕ್ಕೆ ಒಂದು ಸಂದೇಶವೂ ಇದೆ. ಶ್ರೀಮನ್ನಾರಾಯಣ ತಾಳಿದ ಎರಡನೇ ಅವತಾರ ಯಾವುದು? ಭಗವಾನ್​ ವಿಷ್ಣು ಎರಡನೇ ಅವತಾರ ತಾಳಿದ್ದು ಏಕೆ? ಇಲ್ಲಿದೆ ಓದಿ.

ಅವತಾರ ಅಂದ್ರೆ ಧರೆಗೆ ಇಳಿದು ಬರೋದು ಎಂದರ್ಥ. ಇದು ಭಗವಂತ ಕಾಲಕ್ಕೆ ತಕ್ಕಂತೆ ಜೀವಕೋಟಿಯ ಉದ್ಧಾರಕ್ಕಾಗಿ ಕೈಗೊಳ್ಳುವ ಒಂದು ಕ್ರಿಯೆ. ಅವತಾರವು ಭಗವಂತನ ಉದ್ದೇಶಪೂರ್ವಕವಾದ ಅವರೋಹಣವನ್ನು ಉಲ್ಲೇಖಿಸುತ್ತದೆ.

ಲೋಕದಲ್ಲಿ ಅಧರ್ಮ ಹೆಚ್ಚಿದಾಗ ಧರ್ಮವನ್ನು ಪುನಃಸ್ಥಾಪಿಸಲು, ಭಕ್ತರನ್ನು ಹುಟ್ಟು-ಸಾವಿನ ಜೀವನ ಚಕ್ರದಿಂದ ಮುಕ್ತಗೊಳಿಸಲು, ಸುಜನರನ್ನು ರಕ್ಷಿಸಿ ದುರ್ಜನರನ್ನು ದಮನಗೊಳಿಸಲು ಹಾಗೂ ಧರ್ಮಸಂಸ್ಥಾಪನೆಗಾಗಿ ಪರಮಾತ್ಮ ಕಾಲಕಾಲಕ್ಕೆ ಯಾವುದೋ ಒಂದು ರೂಪದಲ್ಲಿ ಭೂಮಿಗೆ ಇಳಿದು ಬರುತ್ತಾನೆ ಎಂದು ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳಿರುವ ಮಾತು ಅವತಾರದ ಉದ್ದೇಶವನ್ನು ಸೂಚಿಸುತ್ತೆ. ಹೀಗೆ ಶ್ರೀಮನ್ನಾರಾಯಣ ತಳೆದ ಆ ಎರಡನೇ ಅವತಾರವಾದ್ರೂ ಯಾವುದು ಅಂದ್ರೆ.. ಅದುವೇ..ಕೂರ್ಮಾವತಾರ.

ಧರ್ಮ ಸಂಸ್ಥಾಪನೆಗಾಗಿ ಶ್ರೀಮನ್ನಾರಾಯಣ ತಳೆದ ದಶಾವತಾರಗಳ ಪೈಕಿ ಎರಡನೇ ಅವತಾರವೇ ಕೂರ್ಮಾವತಾರ. ಮಹಾವಿಷ್ಣುವಿನ ಮೊದಲನೇ ಅವತಾರವಾದ ಮತ್ಸ್ಯ ಅವತಾರದಂತೆ ಕೂರ್ಮಾವತಾರವೂ ಕೂಡ ಸತ್ಯಯುಗದಲ್ಲಿ ಸಂಭವಿಸಿತ್ತು. ಕೂರ್ಮಾವತಾರದಲ್ಲಿ ಮಹಾವಿಷ್ಣುವು ಆಮೆಯ ರೂಪದಲ್ಲಿ ಅವತರಿಸಿದ ಎಂದು ಹೇಳಲಾಗುತ್ತೆ. ಅಷ್ಟಕ್ಕೂ, ಮಹಾವಿಷ್ಣು ಆಮೆಯ ರೂಪದಲ್ಲಿ ಅವತರಿಸಿದ್ದಾದ್ರೂ ಏಕೆ?
ದೇವತೆಗಳು ಹಾಗು ರಾಕ್ಷಸರು ಅಮರತ್ವಕ್ಕಾಗಿ ಅಮೃತವನ್ನು ಪಡೆಯಲು ಸಮುದ್ರಮಥನ ಮಾಡೋಕೆ ಮುಂದಾಗ್ತಾರೆ. ಆ ಸಂದರ್ಭದಲ್ಲಿ ವಾಸುಕಿಯನ್ನು ಹಗ್ಗವನ್ನಾಗಿಸಿ, ಮಂದರ ಪರ್ವತವನ್ನು ಕಡುಗೋಲಾಗಿ ಉಪಯೋಗಿಸ್ತಾರೆ. ಸಮುದ್ರ ಮಥನವನ್ನು ಆರಂಭಿಸಿದಾಗ ಮಂದರ ಪರ್ವತವು ಬಹಳ ಭಾರವಿದುದ್ದರಿಂದ ಸಮುದ್ರದಲ್ಲಿ ಕುಸಿಯಲು ಆರಂಭಿಸುತ್ತದೆ.

ಆಗ ಮಹಾವಿಷ್ಣುವು ಆಮೆಯ ರೂಪದಲ್ಲಿ ಅವತರಿಸಿ, ಮಂದರ ಪರ್ವತವನ್ನು ತನ್ನ ಬೆನ್ನ ಮೇಲೆ ಇಟ್ಟುಕೊಂಡು ಅದು ಕುಸಿಯದಂತೆ ನೋಡಿಕೊಳ್ತಾನೆ. ಈ ರೀತಿಯಾಗಿ ಕೂರ್ಮಾವತಾರದಲ್ಲಿ ಮಹಾವಿಷ್ಣುವು ದೇವತೆಗಳಿಗೆ ನೆರವಾಗಲು ಭಗವಾನ್​ ವಿಷ್ಣು ಕೂರ್ಮಾವತಾರ ತಾಳಿದ ಎಂದು ಪುರಾಣದಲ್ಲಿ ಉಲ್ಲೇಖ ಮಾಡಲಾಗಿದೆ.

ಕೂರ್ಮಾವತಾರದಲ್ಲಿ ಆವಿರ್ಭವಿಸಿದ ಮಹಾವಿಷ್ಣುವು ತನ್ನ ಈ ಅವತಾರದಲ್ಲಿ ಉದ್ಘೋಷಿಸಿದ ಮಹಾಮಂತ್ರಗಳನ್ನು ಕೂರ್ಮ ಪುರಾಣ ಎನ್ನಲಾಗುತ್ತೆ. ಇದನ್ನು ಪ್ರಪ್ರಥಮವಾಗಿ ಕೂರ್ಮವಾತಾರಿ ಮಹಾವಿಷ್ಣುವು ನಾರದರಿಗೆ ಬೋಧಿಸಿದನು. ನಂತರ ನಾರದರು ಇದನ್ನು ನೈಮಿಷಾರಣ್ಯ ವಾಸಿಗಳಿಗೆ ಬೋಧಿಸಿದ್ರು ಎನ್ನಲಾಗುತ್ತೆ.

Published On - 3:47 pm, Wed, 26 August 20